ಅರಬ್ಬಿ ಸಮುದ್ರದಲ್ಲಿ ಕಡಲುಗಳ್ಳರ ದಾಳಿಯಿಂದ 23 ಪಾಕಿಸ್ತಾನಿ ಪ್ರಜೆಗಳನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಕಡಲುಗಳ್ಳರ ವಿರುದ್ಧ ಭಾರತೀಯ ನೌಕಾಪಡೆಯು ಸುಮಾರು 12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದು, ಇರಾನ್ ಮೀನುಗಾರಿಕಾ ಹಡಗು ಮತ್ತು 23 ಪಾಕಿಸ್ತಾನಿ ಪ್ರಜೆಗಳ ಸಿಬ್ಬಂದಿಯನ್ನು ರಕ್ಷಿಸಿದೆ.
“ಮಾರ್ಚ್ 28 ರಂದು ತಡರಾತ್ರಿ ಇರಾನಿನ ಮೀನುಗಾರಿಕಾ ನೌಕೆ ”ಅಲ್-ಕಂಬಾರ್ 786’ನಲ್ಲಿ ಕಡಲ್ಗಳ್ಳತನ ನಡೆಯುವ ಸಾಧ್ಯತೆ ಬಗ್ಗೆ ಮಾಹಿತಿ ಆಧಾರದಲ್ಲಿ ಎರಡು ಭಾರತೀಯ ನೌಕಾಪಡೆಯ ಹಡಗುಗಳು ಕಡಲ ಭದ್ರತಾ ಕಾರ್ಯಾಚರಣೆಯನ್ನು ಅರಬ್ಬಿ ಸಮುದ್ರದಲ್ಲಿ ನಡೆಸಿದೆ. ಈ ಸಂದರ್ಭದಲ್ಲಿ ಅಪಹರಣಕ್ಕೊಳಗಾದ ಮೀನುಗಾರಿಕಾ ಹಡಗನ್ನು ರಕ್ಷಿಸಲಾಗಿದೆ” ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಸೊಮಾಲಿ ಕಡಲ್ಗಳ್ಳರಿಂದ 19 ಪಾಕ್ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾ ಪಡೆ
“ಸುಮಾರು 12 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಅಪಹರಿಸಲಾದ ಮೀನುಗಾರಿಕಾ ಹಡಗಿನಲ್ಲಿದ್ದ ಕಡಲ್ಗಳ್ಳರು ಶರಣಾಗುವಂತೆ ಮಾಡಲಾಗಿದೆ. 23 ಪಾಕಿಸ್ತಾನಿ ಪ್ರಜೆಗಳನ್ನು ಒಳಗೊಂಡಿರುವ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಬಳಿಕ ಹಡಗಿನ ಪರಿಶೀಲನೆ ನಡೆಸಿ, ಶುಚಿಗೊಳಿಸಲಾಗಿದೆ. ಸಾಮಾನ್ಯ ಮೀನುಗಾರಿಕೆ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುವ ಸ್ಥಿತಿಯಲ್ಲಿ ಹಡಗು ಇದೆಯೇ ಎಂದು ಪರಿಶೀಲಿಸಲಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
#IndianNavy Responds to Piracy Attack in the #ArabianSea.
Inputs received on a potential piracy incident onboard Iranian Fishing Vessel 'Al-Kambar' late evening on #28Mar 24, approx 90 nm South West of Socotra.
Two Indian Naval ships, mission deployed in the #ArabianSea for… pic.twitter.com/PdEZiCAu3t— SpokespersonNavy (@indiannavy) March 29, 2024
ಮಾರ್ಚ್ 29 ರಂದು, ಐಎನ್‌ಎಸ್ ಸುಮೇಧಾ ಮೀನುಗಾರಿಕಾ ಹಡಗು ಅಲ್-ಕಂಬಾರ್ ಅನ್ನು ಮುಂಜಾನೆ ತಡೆಯಲಾಗಿದೆ. ಒಂಬತ್ತು ಶಸ್ತ್ರಸಜ್ಜಿತ ಕಡಲ್ಗಳ್ಳರು ಹಡಗಿಗೆ ದಾಳಿ ಮಾಡಿದ್ದಾರೆ. ಇನ್ನು ಈ ತಿಂಗಳ ಆರಂಭದಲ್ಲಿ ಭಾರತೀಯ ನೌಕಾಪಡೆಯು ಕಡಲ್ಗಳ್ಳರ ದಾಳಿಗೆ ಒಳಗಾದ ರುಯೆನ್ ಎಂಬ ಹಡಗನ್ನು ತಡೆದಿದ್ದರು. ಸುಮಾರು 40 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ 35 ಕಡಲ್ಗಳ್ಳರು ಶರಣಾಗುವಂತೆ ಮಾಡಿದ್ದರು.





