‘ಭಾರತೀಯರು ಒಳ್ಳೆಯ ನಟರು; ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಎಂದೆವು ನಿಲ್ಲಿಸಿದರು, ಈಗ ಖರೀದಿಸಿ ಎಂದೆವು ಖರೀದಿಸುತ್ತಾರೆ’: ಅಮೆರಿಕ

Date:

ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಯುದ್ಧವು ಪಶ್ಚಿಮ ಏಷ್ಯಾವನ್ನು ಉದ್ವಿಗ್ನ ಪರಿಸ್ಥಿತಿಗೆ ದೂಡಿದೆ. ಜಾಗತಿಕ ವ್ಯಾಪಾರ ವಹಿವಾಟುಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಅದರಲ್ಲೂ, ತೈಲ ಮಾರುಕಟ್ಟೆ ಅಸ್ತವ್ಯಸ್ತಗೊಂಡಿದೆ. ಈ ನಡುವೆ, ಭಾರತವು ರಷ್ಯಾದಿಂದ ಒಂದು ತಿಂಗಳ ಅವಧಿಗೆ ತೈಲ ಖರೀದಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸಮ್ಮತಿ ಸೂಚಿಸಿದ್ದಾರೆ. ಭಾರತದ ವಹಿವಾಟನ್ನು ಟ್ರಂಪ್ ನಿರ್ಧರಿಸುತ್ತಿರುವುದು ಮೋದಿ ಸರ್ಕಾರವನ್ನು ಜಾಗತಿಕ ಮಟ್ಟದಲ್ಲಿ ಅಪಹಾಸ್ಯಕ್ಕೀಡು ಮಾಡಿದೆ. ಇದೀಗ, ಅಮೆರಿಕ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಭಾರತವನ್ನು ಅಪಹಾಸ್ಯ ಮಾಡಿದ್ದು, ‘ಭಾರತೀಯರು ಒಳ್ಳೆಯ ನಟರು. ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಎಂದೆವು ನಿಲ್ಲಿಸಿದರು, ಈಗ ಖರೀದಿಸಿ ಎಂದೆವು ಖರೀದಿಸುತ್ತಾರೆ’ ಎಂದು ಹೇಳಿದ್ದಾರೆ.

ಶುಕ್ರವಾರ, ಸ್ಕಾಟ್ ಬೆಸೆಂಟ್ ಅವರು ಫಾಕ್ಸ್‌ ಬಿಸಿನೆಸ್‌ಗೆ ಸಂದರ್ಶನ ನೀಡಿದ್ದು, ಅದರಲ್ಲಿ; “ವಿಶ್ವದಲ್ಲಿ ತೈಲ ಪೂರೈಕೆ ಉತ್ತಮವಾಗಿದೆ. ಈಗಾಗಲೇ ಹಡಗುಗಳಲ್ಲಿರುವ ರಷ್ಯಾದ ತೈಲವನ್ನು ನಮ್ಮ ಮಿತ್ರರಾಷ್ಟ್ರವಾದ ಭಾರತ ಖರೀದಿಸಲು ಅಮೆರಿಕ ಹಣಕಾಸು ಇಲಾಖೆಯು ನಿನ್ನೆ ಒಪ್ಪಿಗೆ ನೀಡಿದೆ. ಭಾರತೀಯರು ಒಳ್ಳೆಯ ನಟರು. ಈ ಶರತ್ಕಾಲದಲ್ಲಿ ನಿರ್ಬಂಧಿತ ರಷ್ಯಾದ ತೈಲ ಖರೀದಿಸುವುದನ್ನು ನಿಲ್ಲಿಸುವಂತೆ ನಾವು ಅವರಿಗೆ ಕೇಳಿದ್ದೆವು. ಅವರು ಹಾಗೆಯೇ ಮಾಡಿದರು. ಅವರು ಅದರ ಬದಲಿಗೆ ಅಮೆರಿಕದ ತೈಲ ಬಳಸಲಿದ್ದರು. ಆದರೆ, ವಿಶ್ವದಾದ್ಯಂತ ಉಂಟಾಗಿರುವ ತೈಲದ ತಾತ್ಕಾಲಿಕ ಕೊರತೆಯನ್ನು ನೀಗಿಸಲು, ರಷ್ಯಾದ ತೈಲ ಖರೀದಿಸಲು ನಾವು ಅವರಿಗೆ ಅನುಮತಿ ನೀಡಿದ್ದೇವೆ” ಎಂದು ಹೇಳಿದ್ದಾರೆ.

“ಸಮುದ್ರದ ಮೇಲೆ (ಹಡಗು) ನೂರಾರು ಮಿಲಿಯನ್ ಬ್ಯಾರೆಲ್‌ಗಳಷ್ಟು ನಿರ್ಬಂಧಿತ ರಷ್ಯಾದ ಕಚ್ಚಾ ತೈಲವಿದೆ. ಅವುಗಳ ಮೇಲಿನ ನಿರ್ಬಂಧ ತೆರವುಗೊಳಿಸುವ ಮೂಲಕ ಅಮೆರಿಕ ಹಣಕಾಸು ಇಲಾಖೆಯು ತೈಲ ಪೂರೈಕೆಗೆ ಅವಕಾಶ ನೀಡಬಹುದು. ನಾವು ಆ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಈ ಸಂಘರ್ಷದ ಸಮಯದಲ್ಲಿ ಮಾರುಕಟ್ಟೆಯನ್ನು ನಿಭಾಯಿಸಲು ನಾನಾ ಕ್ರಮಗಳನ್ನು ಘೋಷಿಸುತ್ತಲೇ ಇರುತ್ತೇವೆ” ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಲೇಖನ ಓದಿದ್ದೀರಾ?: ಅಮೆರಿಕದ ಇಬ್ಬಗೆ ಅಣ್ವಸ್ತ್ರ ರಾಜಕಾರಣ: ಇರಾನ್ ಬಗ್ಗೆ ಆತಂಕ, ಪಾಕಿಸ್ತಾನದ ಕುರಿತು ಮೌನ!

ಗಮನಾರ್ಹವಾಗಿ, ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿದ್ದಕ್ಕಾಗಿ ಟ್ರಂಪ್ ಭಾರತದ ಮೇಲೆ 25% ದಂಡನಾತ್ಮಕ ಸುಂಕ ಹೇರಿದ್ದರು. ಆದಾಗ್ಯೂ, ರಷ್ಯಾದಿಂದ ತೈಲ ಖರೀಸುವುದನ್ನು ಭಾರತ ಮುಂದುವರೆಸಿತ್ತು. ಆದರೆ, ಇತ್ತೀಚೆಗೆ ಎಪ್ಸ್ಟೀನ್‌ ಫೈಲ್ ಹೊರಬಂದ ಬಳಿಕ ಪರಿಸ್ಥಿತಿಗಳು ಬದಲಾಗಿವೆ. ಎಪ್ಸ್ಟೀನ್‌ ಫೈಲ್‌ನಲ್ಲಿ ಮೋದಿ ಅವರ 2017ರ ಇಸ್ರೇಲ್ ಭೇಟಿ ಸೇರಿದಂತೆ ನಾನಾ ವಿಚಾರಗಳಿವೆ ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ, ಮೋದಿ ಅವರು ಟ್ರಂಪ್‌ಗೆ ಹೆದರುತ್ತಿದ್ದಾರೆ ಎಂಬ ಆರೋಪಗಳೂ ದಟ್ಟವಾಗಿವೆ. ಈ ಆರೋಪಗಳಿಗೆ ಪೂರಕ ಎನ್ನುವಂತೆ, ಪ್ರಧಾನಿ ಮೋದಿ ಅವರು ದಿಢೀರನೆ ಟ್ರಂಪ್‌ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡರು. ಈ ಬೆನ್ನಲ್ಲೇ, ರಷ್ಯಾದ ತೈಲ ಖರೀದಿಯನ್ನೂ ಭಾರತ ನಿಲ್ಲಿಸಿತು. ಇದೀಗ, ಏಪ್ರಿಲ್ 4ರವರೆಗೆ ರಷ್ಯಾದ ತೈಲ ಖರೀದಿ ಮಾಡಲು ಭಾರತಕ್ಕೆ ಅಮೆರಿಕ ಅನುಮತಿ ನೀಡಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...