A320 ಸಾಫ್ಟ್‌ವೇರ್‌ನಲ್ಲಿ ದೋಷ ಉಂಟಾದ ಕಾರಣದಿಂದಾಗಿ ಸುಮಾರು 200ಕ್ಕೂ ಅಧಿಕ ಇಂಡಿಗೋ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಸಾಧ್ಯತೆಯಿದೆ. ಕೆಲವು ವಿಮಾನಗಳು ವಿಳಂಬವಾದರೆ, ಕೆಲವು ವಿಮಾನಗಳು ರದ್ದಾಗಬಹುದು ಎಂದು ವರದಿಯಾಗಿದೆ.
ತೀವ್ರವಾದ ಸೌರ ವಿಕಿರಣವು A320 ಸರಣಿಗಳ ವಿಮಾನಗಳ ಹಾರಾಟದ ನಿಯಂತ್ರಣಗಳಿಗೆ ನಿರ್ಣಾಯಕವಾದ ಡೇಟಾವನ್ನು ಭ್ರಷ್ಟಗೊಳಿಸಬಹುದು, ಹಾಗೆಯೇ ಸಮಸ್ಯೆಯನ್ನು ಸರಿಪಡಿಸಲು ಅಗತ್ಯವಿರುವ ಸಾಫ್ಟ್‌ವೇರ್ ಬದಲಾವಣೆಗಳು ಕಾರ್ಯಾಚರಣೆಯ ಅಡಚಣೆಗೆ ಕಾರಣವಾಗಬಹುದು ಎಂದು ಏರ್‌ಬಸ್ ಹೇಳಿದೆ.
ಇದನ್ನು ಓದಿದ್ದೀರಾ? ಇಂಡಿಗೋ, ಏರ್ ಇಂಡಿಯಾ ಸೇರಿ ಮತ್ತೆ 85 ವಿಮಾನಗಳಿಗೆ ಬಾಂಬ್ ಬೆದರಿಕೆ
ಇನ್ನು A320 ಸರಣಿಯ ವಿಮಾನಗಳಲ್ಲಿ ಹಲವು ಸಾಫ್ಟ್‌ವೇರ್ ಬದಲಾವಣೆಗಳು ಅಥವಾ ಹಾರ್ಡ್‌ವೇರ್ ಮರುಜೋಡಣೆ ಇರುವ ಕಾರಣದಿಂದಾಗಿ ವಿಮಾನಗಳ ಕಾರ್ಯಾಚರಣೆಯಲ್ಲಿ ಅಡಚಣೆ ಉಂಟಾಗಬಹುದು. ಭಾರತೀಯ ನಿರ್ವಾಹಕರು ಸುಮಾರು 560 A320 ಸರಣಿಯ ವಿಮಾನಗಳನ್ನು ಹೊಂದಿದ್ದಾರೆ. ಅವುಗಳಲ್ಲಿ 200-250 ವಿಮಾನಗಳಿಗೆ ಸಾಫ್ಟ್‌ವೇರ್ ಬದಲಾವಣೆಗಳು ಅಥವಾ ಹಾರ್ಡ್‌ವೇರ್ ಮರುಜೋಡಣೆ ಅಗತ್ಯವಿರುತ್ತದೆ ಎಂದೂ ಹೇಳಲಾಗಿದೆ.
ಇನ್ನು ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ವಿಮಾನ ಹಾರಾಟದಲ್ಲಿಯೂ ವ್ಯತ್ಯಯವಾಗಲಿದೆ. “ಏರ್‌ಬಸ್ ಅಧಿಸೂಚನೆಯ ಪ್ರಕಾರ ನಾವು ವಿಮಾನಯಾನ ಸರಾಗವಾಗಿ ಆರಂಭಿಸುವ ನಿಟ್ಟಿನಲ್ಲಿ ಏರ್‌ಬಸ್‌ನೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಅಗತ್ಯ ತಪಾಸಣೆಗಳನ್ನು ನಡೆಸುತ್ತಿದ್ದರೂ, ಅಡಚಣೆಗಳನ್ನು ತಪ್ಪಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ 31 A320 ಸರಣಿಯ ವಿಮಾನಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಏರ್ ಇಂಡಿಯಾ, “ನಮ್ಮ ಕೆಲವು ವಿಮಾನಗಳ ಸಾಫ್ಟ್‌ವೇರ್/ಹಾರ್ಡ್‌ವೇರ್ ಮರುಜೋಡಣೆ ಮಾಡಬೇಕಾಗುತ್ತದೆ. ಇದು ದೀರ್ಘಾವಧಿಯ ಸಮಯ. ಇದರಿಂದಾಗಿ ನಿಗದಿತ ಕಾರ್ಯಾಚರಣೆಗಳಲ್ಲಿ ವಿಳಂಬವಾಗಬಹುದು” ಎಂದು ಎರ್‌ಲೈನ್ ಹೇಳಿದೆ.
ಆದರೆ ಮೂರು ವಿಮಾನಯಾನ ಸಂಸ್ಥೆಗಳು ಎಷ್ಟು ವಿಮಾನಗಳ ಮೇಲೆ A320 ಸಾಫ್ಟ್‌ವೇರ್ ದೋಷದ ಪರಿಣಾಮ ಬೀರಬಹುದು ಎಂಬುದನ್ನು ಬಹಿರಂಗಪಡಿಸಿಲ್ಲ.





