ಇಂಡಿಗೋ ಬಿಕ್ಕಟ್ಟು: ಸಂಕಷ್ಟಕ್ಕೆ ಒಳಗಾದ ಪ್ರಯಾಣಿಕ ಹೇಳುವುದೇನು?

Date:

ಪೈಲಟ್‌ ಇಲ್ಲದ ಕಾರಣವನ್ನು ನೀಡಿ ಇಂಡಿಗೋ ಸಂಸ್ಥೆ 500ಕ್ಕೂ ಅಧಿಕ ವಿಮಾನಗಳನ್ನು ರದ್ದುಗೊಳಿಸಿದೆ. ಈ ಬಗ್ಗೆ ಖಚಿತವಾದ ಮಾಹಿತಿಯನ್ನೂ ಸಂಸ್ಥೆ ನೀಡದ ಕಾರಣದಿಂದಾಗಿ ಲಕ್ಷಾಂತರ ಮಂದಿ ವಿಮಾನ ನಿಲ್ದಾಣಗಳಲ್ಲಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಮಾನ ರದ್ದಾಗಿದ್ದರಿಂದ ಸಂಕಷ್ಟಕ್ಕೆ ಒಳಗಾದ ಪ್ರಯಾಣಿಕರೊಬ್ಬರು ‘ಟೈಮ್ಸ್ ಆಫ್ ಇಂಡಿಯಾ’ದ ಬಳಿ ತಮ್ಮ ಈ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

ಇಂಡಿಗೋ ವಿಮಾನದ ಸಮಸ್ಯೆ ಬಗ್ಗೆ ತಿಳಿದ ಬಳಿಕ ಬೇರೆ ವಿಮಾನಯಾನ ಸಂಸ್ಥೆಯಲ್ಲಿ ಟಿಕೆಟ್ ಸಿಗದ ಕಾರಣ, ಟಿಕೆಟ್ ಅತಿ ದುಬಾರಿಯಾದ ಕಾರಣದಿಂದಾಗಿ ತಾವು ಪಟ್ಟ ಪಾಡಿನ ಬಗ್ಗೆ ಬರೆದುಕೊಂಡಿದ್ದಾರೆ. ಹಾಗೆಯೇ ಇಂಡಿಗೋದಿಂದ ಬಂದ ಸಂದೇಶವು ಯಾವುದೇ ಅಡಚಣೆ ಬಗ್ಗೆ ಸುಳಿವೂ ನೀಡಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಇಂಡಿಗೋ ವಿಮಾನ ಸಂಚಾರ ಅಸ್ತವ್ಯಸ್ತ- ಧೂಮಪರದೆಯ ಹಿಂದಿನ ಅಸಲು ಕಾರಣವೇನು? ಏರ್‌ಬಸ್ ತಂತ್ರಾಂಶ ದೋಷವೇ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬೆಳಿಗ್ಗೆ 11 ಗಂಟೆ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ಹೊರಟ ಪ್ರಯಾಣಿಕರು, ಮಧ್ಯಾಹ್ನ 12.30ರ ಸುಮಾರಿಗೆ T1 ತಲುಪಿದ್ದರು. ಬೆಂಗಳೂರಿಗೆ ಮಧ್ಯಾಹ್ನ 2.15ಕ್ಕೆ ಹಾರಲಿದ್ದ ಇಂಡಿಗೋ ವಿಮಾನ 6E 176, ನಿಗದಿಯಂತೆ ಹಾರಾಟ ನಡೆಸಲಿದೆ ಎಂದು ಮಾಹಿತಿ ನೀಡಲಾಗಿತ್ತು. ಅದರಿಂದಾಗಿ ಪ್ರಯಾಣಿಕರು ಆರಾಮವಾಗಿಯೇ ಇದ್ದರು. ಗೇಟ್ ಸಂಖ್ಯೆ, 38 ಅನ್ನು ಸಹ ಉಲ್ಲೇಖಿಸಲಾಗಿತ್ತು. ಆದರೆ ಅಲ್ಲಿ ತಲುಪಿದಾಗ ಪರಿಸ್ಥಿತಿಯೇ ಬೇರೆಯಾಗಿತ್ತು ಎಂಬುದನ್ನು ಪ್ರಯಾಣಿಕರು ಬರೆದುಕೊಂಡಿದ್ದಾರೆ.

“ನಾವು ಬೆಂಗಳೂರಿಗೆ ಬೆಳಿಗ್ಗೆ 10.30 ಕ್ಕೆ ಹಾರುವ ವಿಮಾನ, 6E 173 ನಲ್ಲಿರಬೇಕಿತ್ತು. ಆದರೆ ಈಗಾಗಲೇ ತಡವಾಗಿದೆ. ಯಾವುದೇ ಮಾಹಿತಿ ಇಲ್ಲ. ನಾವು ಇಂಡಿಗೋ ಸಿಬ್ಬಂದಿಯನ್ನು ಗುರುತಿಸಿ ಅವರನ್ನು ಕೇಳಲು ಪ್ರಯತ್ನಿಸಿದೆವು. ಆದರೆ ಅವರು ಸಂಪೂರ್ಣವಾಗಿ ಮಾಹಿತಿ ನೀಡಲಿಲ್ಲ” ಎಂಬ ಮತ್ತೋರ್ವ ಪ್ರಯಾಣಿಕರ ಮಾತನ್ನು ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಉಲ್ಲೇಖಿಸಲಾಗಿದೆ. ವಿಮಾನ ಇಷ್ಟೊಂದು ತಡವಾಗಿದ್ದರೂ ಮಾಹಿತಿ ಫಲಕದಲ್ಲಿ ಮಾತ್ರ ವಿಮಾನ ಸಮಯಕ್ಕೆ ಸರಿಯಾಗಿ ಬರಲಿದೆ ಎಂದು ಹಾಕಲಾಗಿತ್ತು ಎಂದೂ ಹೇಳಲಾಗಿದೆ.

ಇನ್ನು ಸಿಬ್ಬಂದಿ ಬಳಿ ಕೇಳಿದಾಗ, “ವಿಮಾನ ಸಿದ್ಧವಾಗಿದೆ, ಆದರೆ ಅದನ್ನು ಹಾರಿಸಲು ನಮ್ಮಲ್ಲಿ ಪೈಲಟ್ ಇಲ್ಲ” ಎಂದು ಹೇಳಿದ್ದಾರೆ. “ನಿಮಗೆ ಪೈಲಟ್ ಯಾವಾಗ ಲಭ್ಯವಾಗುತ್ತಾರೆ? ವಿಮಾನ ವಿಳಂಬವಾಗಿದೆಯೇ ಅಥವಾ ರದ್ದಾಗಿದೆಯೇ?” ಎಂಬ ಪ್ರಶ್ನೆಯನ್ನು ಪ್ರಯಾಣಿಕರು ಎತ್ತಿದ್ದು, ಈ ವೇಳೆ ಉತ್ತರವೇ ಸಿಕ್ಕಿಲ್ಲ ಎಂದು ಹೇಳಲಾಗಿದೆ.

ಇದನ್ನು ಓದಿದ್ದೀರಾ? ಇಂಡಿಗೋ ಸಂಚಾರ ಅಸ್ತವ್ಯಸ್ತ: ಸುಪ್ರೀಂನಲ್ಲಿ ಪಿಐಎಲ್‌ ಸಲ್ಲಿಕೆ; ಇಂದು 400ಕ್ಕೂ ಅಧಿಕ ವಿಮಾನಗಳು ರದ್ದು

“ಮಧ್ಯಾಹ್ನ 1.45 ಆದರೂ ಬೋರ್ಡಿಂಗ್ ಆಗಿರಲಿಲ್ಲ. ಮಾಹಿತಿ ಫಲಕದಲ್ಲಿ ಇನ್ನೂ ವಿಮಾನವು ಮಧ್ಯಾಹ್ನ 2.15 ಕ್ಕೆ ಹೊರಡುತ್ತದೆ ಎಂದು ಉಲ್ಲೇಖಿಸಲಾಗಿತ್ತು. ಆದರೆ ಬೋರ್ಡಿಂಗ್ ಕೂಡಾ ಮಾಡಿರಲಿಲ್ಲ. ನಮ್ಮ ವಿಮಾನದ ಬದಲಾಗಿ ಚೆನ್ನೈಗೆ ಬಹಳ ಹಿಂದೆಯೇ ವಿಳಂಬವಾಗಿದ್ದ ವಿಮಾನ ಟೇಕ್‌ ಆಫ್ ಆಗುತ್ತಿತ್ತು” ಎಂದು ಪ್ರಯಾಣಿಕರು ತಿಳಿಸಿದ್ದಾರೆ.

“ಬೆಳಿಗ್ಗೆಯಿಂದ ಕಾದ ಪ್ರಯಾಣಿಕರು ಮಧ್ಯಾಹ್ನ 3 ಗಂಟೆ ವೇಳೆಗೆ ಆಕ್ರೋಶಭರಿತವಾಗಿ ಇಂಡಿಗೋ ಸಿಬ್ಬಂದಿ ಜತೆ ವಾಗ್ವಾದಕ್ಕೆ ಇಳಿದಿದ್ದರು. ಈ ವೇಳೆ “ಸಂಜೆ 5 ಗಂಟೆಗೆ ವಿಮಾನ ಹೊರಡಲಿದೆ” ಸಿಬ್ಬಂದಿ ಹೇಳಿದರು. 6E 176 ವಿಮಾನ ಸಂಜೆ 6.30 ಕ್ಕೆ ಹೊರಡುತ್ತದೆ ಎಂದೂ ತಿಳಿಸಿದರು. ಅದಾದ ಬಳಿಕ ಸಂಜೆ 7.10ಕ್ಕೆ ವಿಮಾನ ಹೊರಡುತ್ತದೆ ಎಂದು ಹೇಳಿದರು. ಬಳಿಕ ರಾತ್ರಿ 8.20ಕ್ಕೆ ಹೊರಡುತ್ತದೆ ಎಂದು ತಿಳಿಸಿದರು. ಇವೆಲ್ಲವೂ ಆದ ಬಳಿಕ ನಾನು ಟಿಕೆಟ್ ರದ್ದುಗೊಳಿಸಿದೆ” ಎಂದು ಪ್ರಯಾಣಿಕ ಹೇಳಿಕೊಂಡಿದ್ದಾರೆ.

“ಅಷ್ಟಾದರೂ ನಮ್ಮ ಕಷ್ಟ ಮುಗಿದಿರಲಿಲ್ಲ. ವಿಮಾನ ನಿಲ್ದಾಣದಿಂದ ಹೊರಬರಲು ಪ್ರಯತ್ನಿಸುತ್ತಿದ್ದಂತೆ, ಭದ್ರತಾ ತಪಾಸಣಾ ಕೇಂದ್ರದಲ್ಲಿ ಉದ್ದನೆಯ ಸರತಿ ಸಾಲು ಕಂಡುಬಂದಿತ್ತು. ವಿಮಾನಗಳು ರದ್ದಾಗಿರುವ ಅಥವಾ ಟಿಕೆಟ್‌ಗಳನ್ನು ರದ್ದುಗೊಳಿಸಲು ಬಯಸುವ ಎಲ್ಲ ಪ್ರಯಾಣಿಕರು ಆ ಸಾಲಲ್ಲಿ ನಿಲ್ಲಬೇಕಾಗಿತ್ತು. ತಮ್ಮ ಕಾರ್ಡ್‌ಗಳು ಮತ್ತು ಐಡಿಯನ್ನು ಇಂಡಿಗೋ ಸಿಬ್ಬಂದಿಗೆ ತೋರಿಸಬೇಕಾಗಿತ್ತು. ಬ್ಯಾಗೇಜ್‌ಗೆ ಹಾಕಿದ ಸಾಮಾನುಗಳನ್ನು ಮರಳಿ ಪಡೆಯಲು ಕಾಯಬೇಕಾಗಿತ್ತು. ಸಿಬ್ಬಂದಿ, ಪ್ರಯಾಣಿಕರು ಎಲ್ಲರೂ ಸುಸ್ತಾಗಿದ್ದರು” ಎನ್ನುತ್ತಾರೆ ಪ್ರಯಾಣಿಕರು.

ವರದಿ: ಟೈಮ್ಸ್ ಆಫ್ ಇಂಡಿಯಾ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...