ತನ್ನ ನೆರೆಮನೆಯವರಿಂದ ಜೀವ ಬೆದರಿಕೆಯಿದೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ಹೆಲ್ಮೆಟ್‌ಗೆ ಕ್ಯಾಮೆರಾ ಅಳವಡಿಸಿ ಓಡಾಡುತ್ತಿರುವ ಘಟನೆ ಇಂದೋರ್‌ನ ಹೀರಾ ನಗರ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿದ್ದು, ಸದ್ಯ ಈ ವ್ಯಕ್ತಿಯ ವಿಡಿಯೋ ವೈರಲ್ ಆಗುತ್ತಿದೆ.
ಸತೀಶ್ ಚೌಹಾಣ್ ಎಂಬ ವ್ಯಕ್ತಿ ತನ್ನ ಹೆಲ್ಮೆಟ್‌ಗೆ ಕ್ಯಾಮೆರಾ ಅಳವಡಿಸಿಕೊಂಡಿದ್ದಾರೆ. ಆಸ್ತಿ ವಿವಾದದ ಕುರಿತು ನೆರೆಮನೆಯವರಿಂದ ಜೀವ ಬೆದರಿಕೆಯಿದೆ ಮತ್ತು ನಿರಂತರ ಕಿರುಕುಳವಿದೆ. ಆದ್ದರಿಂದ ತನ್ನನ್ನು ಮತ್ತು ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ಈ ರೀತಿ ವ್ಯವಸ್ಥೆ ಮಾಡಿಕೊಂಡಿದ್ದೇನೆ ಎಂದು ಸತೀಶ್ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಶೌಚಾಲಯದಲ್ಲೇ ಕುಳಿತು ಹೈಕೋರ್ಟ್ ಕಲಾಪದಲ್ಲಿ ಭಾಗವಹಿಸಿದ ಯುವಕ: ವಿಡಿಯೋ ವೈರಲ್
ಸದ್ಯ ಸತೀಶ್ ಕ್ಯಾಮೆರಾ ಅಳವಡಿಸಿದ ಹೆಲ್ಮೆಟ್ ಧರಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸತೀಶ್, “ನನ್ನ ನೆರೆಮನೆಯವರು ಆಸ್ತಿಯನ್ನು ದೋಚಲು ಪ್ರಯತ್ನಿಸುತ್ತಿದ್ದಾರೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
पहली नज़र में ये तस्वीर हंसा सकती है, फिर सुनिये इंदौर में ये शख्स दरअसल व्यवस्था से मजबूर होकर हेलमेट में सीसीटीवी लगाकर घूमते हैं pic.twitter.com/OfNJMCiwfv
— Anurag Dwary (@Anurag_Dwary) July 13, 2025
“ಪರಿಸ್ಥಿತಿ ಹದಗೆಟ್ಟಿದೆ. ಅದಕ್ಕೆ ಯಾವುದೇ ಸಂದರ್ಭ ಎದುರಾದರೂ ಅದು ಯಾವಾಗಲೂ ರೆಕಾರ್ಡ್ ಆಗುವಂತೆ ನನ್ನ ಹೆಲ್ಮೆಟ್‌ನಲ್ಲಿ ಕ್ಯಾಮೆರಾ ಅಳವಡಿಸಬೇಕಾಯಿತು. ನಮಗೆ ಏನಾದರೂ ಸಂಭವಿಸಿದರೆ ದೃಶ್ಯಗಳು ಸಾಕ್ಷಿಯಾಗುತ್ತದೆ” ಎಂದು ಸತೀಶ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಇನ್ನು “ಬಲಿರಾಮ್ ಚೌಹಾಣ್ ಮತ್ತು ಮುನ್ನಾ ಚೌಹಾಣ್ ವಿರುದ್ಧ ಪೊಲೀಸರಿಗೆ ಹಲವು ಲಿಖಿತ ದೂರುಗಳನ್ನು ಸಲ್ಲಿಸಿದ್ದೇನೆ. ಆದರೆ ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ” ಎಂದು ಸತೀಶ್ ಹೇಳಿಕೊಂಡಿದ್ದಾರೆ.
ಸದ್ಯ ನಮ್ಮ ಸುರಕ್ಷತೆ ಮಾಡಬೇಕಾದವರಿಂದ ಸಹಾಯ ದೊರೆಯದೆ ಇದ್ದಾಗ ನಾಗರಿಕರು ತಮ್ಮ ಸುರಕ್ಷತೆಗೆ ತಾವೇ ವ್ಯವಸ್ಥೆ ಮಾಡಿಕೊಳ್ಳುತ್ತಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡಿದೆ.
ಇದನ್ನು ಓದಿದ್ದೀರಾ? ಮಂಗಳೂರು | ರಥೋತ್ಸವದ ವೇಳೆ ಮುರಿದು ಬಿದ್ದ ಬಪ್ಪನಾಡು ದೇವಸ್ಥಾನದ ರಥ ! ವಿಡಿಯೋ ವೈರಲ್
ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಗೆ ಸಂಬಂಧಿಸಿದಂತೆ ಎರಡೂ ಕಡೆಯವರು ಈ ಹಿಂದೆ ಘರ್ಷಣೆ ನಡೆಸಿದ್ದರು. ಇದರಿಂದಾಗಿ ತೀವ್ರ ವಾಗ್ವಾದ ನಡೆದಿದೆ. ನಾವು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದೆವು. ಆದರೆ ಇದೀಗ ಕ್ಯಾಮೆರಾ ಇರುವ ಹೆಲ್ಮೆಟ್ ಧರಿಸಿಕೊಂಡಿದ್ದಾರೆ ಎಂಬ ವಿಡಿಯೋ ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಸತೀಶ್ ತನ್ನ ಮನೆಯ ಹೊರಗೆ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದು ಇದು ಇನ್ನಷ್ಟು ವಾಗ್ವಾದ, ಗಲಾಟೆಗೆ ಕಾರಣವಾಗಿದೆ. ಈ ಸಿಸಿಟಿವಿಯಲ್ಲಿ ನೆರೆಮನೆಯವರ ಸ್ನಾನಗೃಹದ ದೃಶ್ಯ ಸೆರೆಯಾಗಿದೆ ಎಂದು ಆರೋಪಿಸಲಾಗಿದೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು, ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.





