ಜನವರಿ 15ರಂದು ನಡೆಯಲಿರುವ ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಗೆ ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟ ‘ಮಹಾಯುತಿ’ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.
ಮಹಿಳೆಯರಿಗೆ ಬಡ್ಡಿರಹಿತ ಸಾಲ, ನಗರದ ಸ್ವಚ್ಛತಾ ಕಾರ್ಮಿಕರಿಗೆ ಮನೆ, ನಗರ ಮೂಲಸೌಕರ್ಯ, ಸಾರ್ವಜನಿಕ ಸಾರಿಗೆ, ರಕ್ಷಣೆ, ಕೊಳಗೇರಿ ಜನರಿಗೆ ಪುನರ್‌ವಸತಿ, ಪರಿಸರ ರಕ್ಷಣೆ, ಆಡಳಿತ ಮತ್ತು ಪಾರದರ್ಶಕತೆಗೆ ಒತ್ತುಕೊಡಲಾಗುತ್ತದೆ ಎಂದು ಭರವಸೆ ನೀಡಿದೆ.
ಪ್ರಣಾಳಿಕೆಯಲ್ಲಿ ಪ್ರಮುಖ ಭರವಸೆಗಳು ಹೀಗಿವೆ;
- ನಗರ ಮೂಲಸೌಕರ್ಯ ಮತ್ತು ಅಗತ್ಯ ಸೇವೆಗಳು
ಎಲ್ಲ ವಾರ್ಡ್‌ಗಳಲ್ಲಿ ದಿನನಿತ್ಯ ಸಾಕಷ್ಟು ನೀರು ಸರಬರಾಜು
ಮಳೆಗಾಲದಲ್ಲಿ ಪ್ರವಾಹವನ್ನು ತಡೆಗಟ್ಟಲು ಒಳಚರಂಡಿಗಳ ಆಧುನೀಕರಣ
ಉತ್ತಮ ಗುಣಮಟ್ಟದ ರಸ್ತೆ, ತ್ವರಿತ ರಸ್ತೆ ಗುಂಡಿ ಮುಚ್ಚುವಿಕೆ ಮತ್ತು ದುರಸ್ತಿಗೆ ಬದ್ಧತೆ.
- ಸಾರ್ವಜನಿಕ ಸಾರಿಗೆ ಮತ್ತು ಚಲನಶೀಲತೆ
ಮೆಟ್ರೋ ಜಾಲ ವಿಸ್ತರಣೆ ಮತ್ತು ಕೊನೆಯ ಮೈಲಿ ಸಂಪರ್ಕಕ್ಕೆ ಒತ್ತು
ರಸ್ತೆಗಳ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಸಂಚಾರ ನಿರ್ವಹಣೆಯಲ್ಲಿ ಸುಧಾರಣೆ
ಅತ್ಯುತ್ತಮ ಬಸ್ ಸೇವೆಗಳು
- ಆರೋಗ್ಯ ಸೇವೆ
BMC ನಡೆಸುವ ಆಸ್ಪತ್ರೆಗಳಲ್ಲಿ ಉತ್ತಮ ಮೂಲಸೌಕರ್ಯ, ವೈದ್ಯಕೀಯ ಸೌಲಭ್ಯಗಳು ಹಾಗೂ ಔಷಧಾಲಯಗಳ ಬಲರ್ವಧನೆ
ಮುಂಬೈನ ಎಲ್ಲ ನಿವಾಸಿಗಳಿಗೆ, ವಿಶೇಷವಾಗಿ ನಗರದ ಬಡವರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ
- ವಸತಿ ಮತ್ತು ಕೊಳೆಗೇರಿ ಪುನರ್ವಸತಿ
ಕೊಳೆಗೇರಿ ಪುನರಾಭಿವೃದ್ಧಿ ಮತ್ತು ವಸತಿ ಯೋಜನೆಗಳ ವೇಗವರ್ಧನೆ
ಕೊಳೆಗೇರಿ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ಘನತೆಯಿಂದ ಬದುಕಲು ವಸತಿ ವ್ಯವಸ್ಥೆ
SRA ಯೋಜನೆಗಳ ತ್ವರಿತ ಮತ್ತು ಪಾರದರ್ಶಕ ಅನುಷ್ಠಾನ
- ಸ್ವಚ್ಛತೆ ಮತ್ತು ಪರಿಸರ ರಕ್ಷಣೆ
ಘನತ್ಯಾಜ್ಯ ನಿರ್ವಹಣೆ, ತ್ಯಾಜ್ಯ ಪ್ರತ್ಯೇಕತೆ ಮತ್ತು ವೈಜ್ಞಾನಿಕ ವಿಲೇವಾರಿಗೆ ಗಮನ
ನಗರದಾದ್ಯಂತ ಸ್ವಚ್ಛತೆ, ನೈರ್ಮಲ್ಯ ಸುಧಾರಿಸಲು ಕ್ರಮಗಳು
ಮುಂಬೈನ ಪರಿಸರ, ಸಾರ್ವಜನಿಕ ಸ್ಥಳಗಳು ಹಾಗೂ ಕರಾವಳಿ ಪ್ರದೇಶದ ರಕ್ಷಣೆ ಮತ್ತು ಪುನರುಜ್ಜೀವನ.
- ಆಡಳಿತ ಮತ್ತು ಪಾರದರ್ಶಕತೆ
BMCಯಲ್ಲಿ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತದ ಭರವಸೆ
ನಾಗರಿಕ ಸೇವೆಗಳನ್ನು ವೇಗವಾಗಿ ಮತ್ತು ನಾಗರಿಕ ಸ್ನೇಹಿಯನ್ನಾಗಿ ಮಾಡಲು ತಂತ್ರಜ್ಞಾನ ಮತ್ತು ಇ-ಆಡಳಿತದ ಬಳಕೆ.
ವಾರ್ಡ್ ಸಭೆಗಳ ಮೂಲಕ ನಿರ್ಧಾರ ತೆಗೆದುಕೊಳ್ಳುವಿಕೆ
ಈ ಲೇಖನ ಓದಿದ್ದೀರಾ?: I-PAC ಕಚೇರಿಯ ಮೇಲಿನ ಇ.ಡಿ ದಾಳಿ, ವಾಟರ್‌ಗೇಟ್ ಹಗರಣವನ್ನು ನೆನಪಿಸುತ್ತದೆಯೇ?
“ಪ್ರಣಾಳಿಕೆಯು ಜನರ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ. ಮುಂದಿನ ಐದು ವರ್ಷಗಳಲ್ಲಿ ನಾವು ಮುಂಬೈಯನ್ನು ಅಂತರರಾಷ್ಟ್ರೀಯ ಮಟ್ಟದ ನಗರವನ್ನಾಗಿ ಮಾಡಬೇಕು. ನಗರವನ್ನು ತೊರೆದ ಮುಂಬೈ ಜನರನ್ನು ನಾವು ಮರಳಿ ಕರೆತರಲು ಬಯಸುತ್ತೇವೆ” ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ಮುಂಬೈನ ಮರಾಠಿಗರು ನಗರವನ್ನು ತೊರೆಯುವ ಅಗತ್ಯವಿಲ್ಲ. ಅವರ ಸಮಸ್ಯೆಗಳನ್ನು ಪರಿಹರಿಸಲು ಮಹಾಯುತಿ ಕೆಲಸ ಮಾಡುತ್ತದೆ” ಎಂದು ಹೇಳಿದ್ದಾರೆ.




