ಇರಾನ್ ಯುದ್ಧ: ಭಾರತ ಕಲಿಯಬೇಕಿರುವ ಪಾಠವೇನು?

Date:

ಇರಾನ್ ಜೊತೆಗಿನ ಯುದ್ಧ ತೀವ್ರಗೊಳ್ಳುತ್ತಿರುವ ಸಮಯದಲ್ಲೇ, ಇರಾಕ್ ವಾಯುಪ್ರದೇಶದಲ್ಲಿ ಅಮೆರಿಕ ವಾಯುಪಡೆಯ ‘KC-135’ ಟ್ಯಾಂಕರ್ ವಿಮಾನ ಪತನಗೊಂಡಿದೆ. ಕೊಲ್ಲಿ ರಾಷ್ಟ್ರಗಳ ವಾಯುಪ್ರದೇಶದಲ್ಲಿ ಯುದ್ಧದ ಬೆಂಬಲಕ್ಕಾಗಿ ಯುದ್ಧ ವಿಮಾನಗಳಿಗೆ ‘ಆಕಾಶದಲ್ಲೇ ಇಂಧನ ತುಂಬಿಸುವ’ ಮಿಷನ್‌ಗಳ ಸಂದರ್ಭದಲ್ಲಿ ಸಂಭವಿಸಿದ ವಿಮಾನಗಳ ಡಿಕ್ಕಿಯಿಂದಾಗಿ ಟ್ಯಾಂಕರ್ ವಿಮಾನ ಪತನಗೊಂಡಿದೆ. ಇದನ್ನು ಅಮೆರಿಕದ ಪಾಲಿಗೆ ಕರಾಳ ಮೈಲಿಗಲ್ಲು ಎಂದೇ ಹೇಳಲಾಗುತ್ತಿದೆ.

ಯಾಕೆಂದರೆ, ಇದು ಶತ್ರುಗಳ ದಾಳಿಯಿಂದ ಅಥವಾ ಅಚಾತುರ್ಯದ ಗುಂಡಿನ ದಾಳಿಯಿಂದ ಸಂಭವಿಸಿದ್ದಲ್ಲ. ಬದಲಾಗಿ, ತಮ್ಮದೇ ವಿಮಾನಗಳಿಗೆ ಇಂಧನ ತುಂಬಿಸುವಾಗ ನಡೆದಿರುವ ಘಟನೆ ಎಂದು ಪೆಂಟಗನ್ ಸ್ಪಷ್ಟಪಡಿಸಿದೆ. ಆದರೂ, ಈ ಘಟನೆಯು ಆಕಾಶದಲ್ಲಿ ಇಂಧನ ತುಂಬಿಸುವ ಪ್ರಕ್ರಿಯೆಯಲ್ಲಿರುವ ಅಪಾಯಗಳನ್ನು ಎತ್ತಿ ತೋರಿಸಿದೆ.

ಆದರೆ, ಈ ಅಪಘಾತದಿಂದ ಭಾರತ ಕಲಿಯಬೇಕಾದ ಒಂದು ಪಾಠವಿದೆ. ಈ ತಿಂಗಳ ಆರಂಭದಲ್ಲಿ ಕುವೈತ್ ಮೇಲೆ ನಡೆದ ‘ಫ್ರೆಂಡ್ಲಿ ಫೈರ್’ ಘಟನೆಯಲ್ಲಿ ಅಮೆರಿಕದ ಮೂರು ‘F-15 ಸ್ಟ್ರೈಕ್ ಈಗಲ್’ ಜೆಟ್‌ಗಳು ಪತನಗೊಂಡುವ. ಅದನ್ನು ಅಮೆರಿಕ ತಕ್ಷಣವೇ ಒಪ್ಪಿಕೊಂಡಿತ್ತು. ಈಗ, ‘ಕೆಸಿ-135’ ವಿಮಾನದ ನಷ್ಟವನ್ನೂ ಅಮೆರಿಕ ಮುಚ್ಚುಮರೆಯಿಲ್ಲದೆ ಒಪ್ಪಿಕೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಮೆರಿಕದ ಮಿಲಿಟರಿ ಪರಂಪರಾಗತವಾಗಿ ಪಾರದರ್ಶಕವಾಗೇನೂ ಇಲ್ಲ; ‘ಮಾಹಿತಿ ಯುದ್ಧ’ ಮತ್ತು ‘ಮೈಂಡ್ ಗೇಮ್‌’ಗಳನ್ನು ಕಂಡುಹಿಡಿದಿದ್ದೇ ಈ ಅಮೆರಿಕ. ನಷ್ಟದ ಅಂಕಿಅಂಶಗಳ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಳ್ಳುವ ಅಧ್ಯಕ್ಷರು ಅಧಿಕಾರದಲ್ಲಿದ್ದರೂ ಸಹ, ಯುದ್ಧಭೂಮಿಯ ನಷ್ಟಗಳನ್ನು ಬಹಿರಂಗವಾಗಿ ಒಪ್ಪಿಕೊಳ್ಳುವುದು ಅಮೆರಿಕದ ಧೋರಣೆ. ಈ ಧೋರಣೆಯು ತನ್ನ ಆತ್ಮವಿಶ್ವಾಸವನ್ನು ತೋರುತ್ತದೆ ಎಂಬುದು ಅಮೆರಿಕ ನಿಲುವು. ದೊಡ್ಡ ಮಟ್ಟದ ಕಾರ್ಯಾಚರಣೆಗಳಲ್ಲಿ ಸಾವು-ನೋವು ಮತ್ತು ಯಂತ್ರಗಳ ನಷ್ಟ ಸಹಜವೆಂದು ಅಮೆರಿಕ ಹೇಳುತ್ತದೆ. ತಾವು ಅದಕ್ಕೆ ಸಿದ್ಧರಿರುವುದಾಗಿಯೂ ಮುಜುಗರವಿಲ್ಲದೆ ಹೇಳಿಕೊಳ್ಳುತ್ತದೆ.

ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಭಾರತದ ಧೋರಣೆ ಇದೆ. ‘ಆಪರೇಷನ್ ಸಿಂಧೂರ್’ ನಂತರದ ಭಾರತದ ಮೌನವು ಅದನ್ನು ಎತ್ತಿತೋರಿಸಿದೆ. ತಿಂಗಳುಗಳು ಕಳೆದರೂ, ಉಭಯ ಕಡೆಯ ವಿಮಾನಗಳ ನಷ್ಟದ ಬಗ್ಗೆ ಕೇವಲ ವದಂತಿಗಳು ಮಾತ್ರ ಕೇಳಿಬರುತ್ತಿವೆ. ಭಾಷಣಗಳಲ್ಲಿನ ಚುಟುಕು ಮಾತುಗಳನ್ನು ಹೊರತುಪಡಿಸಿದರೆ, ವಿಮಾನ ನಷ್ಟದ ಯಾವುದೇ ಅಧಿಕೃತ ಹೇಳಿಕೆಗಳಿಲ್ಲ. ಈ ವಿಷಯದಲ್ಲಿ ಸ್ಪಷ್ಟತೆ ಇಲ್ಲದಿರುವುದು ಆತಂಕಕಾರಿ.

ಈ ಲೇಖನ ಓದಿದ್ದೀರಾ?: ಇಸ್ರೇಲ್-ಅಮೆರಿಕಕ್ಕೆ ಪ್ರತಿರೋಧವೊಡ್ಡಿ ಯುದ್ಧದಲ್ಲಿ ಇರಾನ್ ಮೇಲುಗೈ ಸಾಧಿಸುತ್ತಿದೆಯೇ?

80 ವರ್ಷಗಳಿಂದ ಯುದ್ಧಗಳನ್ನು ಮಾಡಿರುವ ಭಾರತದಂತಹ ರಾಷ್ಟ್ರಕ್ಕೆ ಪಾರದರ್ಶಕತೆ ಎಂಬುದು ಕೇವಲ ಪ್ರಾಮಾಣಿಕತೆಯಲ್ಲ; ಅದು ಶತ್ರು ರಾಷ್ಟ್ರಗಳಿಗೆ ಸುಳ್ಳು ಪ್ರಚಾರ ಮಾಡಲು ಅವಕಾಶ ನೀಡದಂತೆ ತಡೆಯುವ ಅಸ್ತ್ರವೂ ಹೌದು. ಪಾಕಿಸ್ತಾನ ಅಥವಾ ಚೀನಾದಂತಹ ದೇಶಗಳು ಭಾರತದ ನಷ್ಟದ ಬಗ್ಗೆ ಸುಳ್ಳು ಅಂಕಿಅಂಶಗಳನ್ನು ನೀಡಿ ಜನರ ದಿಕ್ಕು ತಪ್ಪಿಸುವುದನ್ನು ತಡೆಯಲು ಈ ಪಾರದರ್ಶಕತೆ ಸಹಕಾರಿ. ಆದರೆ, ಭಾರತವು ಪಾರದರ್ಶಕತೆಯನ್ನು ಪ್ರದರ್ಶಿಸಲು ಹಿಂಜರಿಯುತ್ತಿದೆ.

ಅಮೆರಿಕ ತನ್ನ ವಿಮಾನಗಳ ನಷ್ಟವನ್ನು ಮುಕ್ತವಾಗಿ ಒಪ್ಪಿಕೊಳ್ಳುವ ಮೂಲಕ ಇರಾನ್ ಸುಳ್ಳು ಅಂಕಿಅಂಶಗಳನ್ನು ಸೃಷ್ಟಿಸದಂತೆ ಮಾಡಿದೆ. ಈಗ ಇರಾನ್ ಕೇವಲ ‘ವಿಮಾನಗಳನ್ನು ಹೇಗೆ ಹೊಡೆದುರುಳಿಸಲಾಯಿತು’ ಎಂಬ ಬಗ್ಗೆ ಮಾತ್ರ ಚರ್ಚಿಸಬಹುದಷ್ಟೇ. ಆದರೆ, ನಷ್ಟದ ಸಂಖ್ಯೆಯ ಬಗ್ಗೆ ಮತ್ತೊಂದು ರೀತಿಯ ಅಂಕಿಅಂಶಗಳನ್ನು ನೀಡಲಾಗುವುದಿಲ್ಲ.

ಪ್ರಸ್ತುತ ನಡೆಯುತ್ತಿರುವ ಯುದ್ಧದಲ್ಲಿ ಎರಡು ವಾರ ಕಳೆದರೂ ಅಮೆರಿಕ ತನ್ನ ಗುರಿಗಳನ್ನು ತಲುಪಲು ಸಾಧ್ಯವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ, ಭಾರತವು ‘ಆಪರೇಷನ್ ಸಿಂಧೂರ್’ನಲ್ಲಿ ಕೇವಲ 88 ಗಂಟೆಗಳಲ್ಲಿ ತನ್ನ ನಿರ್ದಿಷ್ಟ ಗುರಿಗಳನ್ನು ಸಾಧಿಸಿತ್ತು. ಆ ಸಮಯದಲ್ಲಿ, ಒಂದು ವೇಳೆ ಭಾರತದ ವಿಮಾನ ಅಥವಾ ಉಪಕರಣಗಳ ನಷ್ಟವಾಗಿದ್ದರೆ, ಅದನ್ನು ಹಿಂಜರಿಕೆ ಬಿಟ್ಟು ಒಪ್ಪಿಕೊಳ್ಳಬಹುದಿತ್ತು. ಭಾರತದ ಯುದ್ಧತಂತ್ರದ ಪಕ್ವತೆಯನ್ನು ಜಗತ್ತಿಗೆ ತೋರಿಸಲು ಅದು ಸರಿಯಾದ ಸಮಯವೂ ಆಗಿತ್ತು. ಆದರೆ, ಮೋದಿ ಸರ್ಕಾರ ಹಾಗೆ ಮಾಡಲಿಲ್ಲ.

ಇರಾನ್‌ಅನ್ನು ಯಕಶ್ಚಿತವೆಂಬಂತೆ ಭಾವಿಸಿ, ಕಳಪೆ ಯೋಜನೆಯೊಂದಿಗೆ ದಾಳಿ ಮಾಡಿದ ಅಮೆರಿಕ ಅನೇಕ ತಪ್ಪುಗಳನ್ನು ಮಾಡಿರಬಹುದು. ಆದರೆ, ಮಿಲಿಟರಿ ಸಂದೇಶ ರವಾನಿಸುವ ಮತ್ತು ಪಾರದರ್ಶಕತೆ ಕಾಪಾಡುವ ವಿಷಯದಲ್ಲಿ ಭಾರತವು ಅಮೆರಿಕದಿಂದ ಪಾಠ ಕಲಿಯಬೇಕಾಗುತ್ತದೆ.

ಮಾಹಿತಿ ಮೂಲ: ಎನ್‌ಡಿಟಿವಿ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....