ಉದ್ಯೋಗ ಕಡಿತಕ್ಕೆ AI ಕಾರಣವಾಗುತ್ತಿದೆಯೇ? ಗೋಲ್ಡ್‌ಮನ್‌ ಸ್ಯಾಚ್ಸ್‌ ವರದಿ ಹೇಳುವುದೇನು?

Date:

ಜಾಗತಿಕವಾಗಿ AI ತಂತ್ರಜ್ಞಾನ ಬೆಳೆದಂತೆಲ್ಲ ಅದರ ಪರಿಣಾಮಗಳ ಕುರಿತು ಅಧ್ಯಯನಗಳು ವೇಗ ಪಡೆದುಕೊಂಡಿವೆ. ಈ ಕುರಿತು ಗೋಲ್ಡ್‌ಮನ್‌ ಸ್ಯಾಚ್ಸ್‌ ಸಂಸ್ಥೆ ನಡೆಸಿದ ಇತ್ತೀಚಿನ ಆರ್ಥಿಕ ವಿಶ್ಲೇಷಣೆಯೊಂದು ಉದ್ಯೋಗ ಕಡಿತಕ್ಕೆ AI ಕಾರಣವಾಗುತ್ತಿದೆಯೇ ಎಂಬುದರ ಮೇಲೆ ಬೆಳಕು ಚೆಲ್ಲಿದ್ದು, ವರದಿಯು ಮಿಶ್ರ ಚಿತ್ರಣ ನೀಡಿದೆ.

ಗೋಲ್ಡ್‌ಮನ್‌ ಸ್ಯಾಚ್ಸ್‌ನ ಹಿರಿಯ ಅರ್ಥಶಾಸ್ತ್ರಜ್ಞ ರೊನ್ನಿ ವಾಕರ್ ಅವರ ನೇತೃತ್ವದಲ್ಲಿ ನಡೆದ ಈ ಅಧ್ಯಯನದ ವರದಿಯು, ಅಮೆರಿಕದ S&P 500 ಕಂಪನಿಗಳ 3ನೇ ತ್ರೈಮಾಸಿಕದ ಲಾಭದ ವರದಿಗಳು ಮತ್ತು ನಿರ್ವಹಣಾ ತಂಡಗಳ ಹೇಳಿಕೆಗಳ ಆಧಾರದಲ್ಲಿ ತಯಾರಾಗಿದೆ. ಈ ವಿಶ್ಲೇಷಣೆಯಲ್ಲಿ, ಒಟ್ಟಾರೆ ಆರ್ಥಿಕ ಮಟ್ಟದಲ್ಲಿ AI ಬಳಕೆ ಮತ್ತು ಉದ್ಯೋಗ ಮಾರುಕಟ್ಟೆ ಫಲಿತಾಂಶಗಳ ನಡುವೆ ನೇರ ಸಂಬಂಧ ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಲಾಗಿದೆ.

ಆದರೆ, ತಮ್ಮ ಉದ್ಯೋಗಿಗಳು ಅಥವಾ ಉದ್ಯೋಗ ಕಡಿತದ ಸಂದರ್ಭದಲ್ಲಿ AI ಕುರಿತು ಮಾತನಾಡಿರುವ ಕಂಪನಿಗಳು, ಈ ವರ್ಷ ಖಾಲಿ ಸ್ಥಾನಗಳನ್ನು ಹೆಚ್ಚು ಪ್ರಮಾಣದಲ್ಲಿ ಕಡಿತಗೊಳಿಸಿರುವುದು ಕಂಡುಬಂದಿದೆ ಎಂದು ವಾಕರ್‌ ಹೇಳಿದ್ದಾರೆ ಎಂಬ ಪ್ರಮುಖ ಅಂಶವನ್ನು ವರದಿ ಉಲ್ಲೇಖಿಸಿದೆ.  

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗೋಲ್ಡ್‌ಮನ್ ಸ್ಯಾಚ್ಸ್ ವರದಿಯ Layoff (ಕಂಪನಿ ತನ್ನ ಉದ್ಯೋಗಿಗಳನ್ನು ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ ಹೊರಗಿಡುವುದು) ಟ್ರ್ಯಾಕರ್‌ನ ಬಹುತೇಕ ಅಂಶಗಳು ಇತ್ತೀಚಿನ ತಿಂಗಳಲ್ಲಿ ಗಣನೀಯವಾಗಿ ಏರಿಕೆಯಾಗಿವೆ. ಕಂಪನಿಗಳ ನಿರ್ವಹಣಾ ತಂಡಗಳು, AIಯನ್ನು ಕೇವಲ ಕಾರ್ಯಕ್ಷಮತೆ ಹೆಚ್ಚಿಸುವ ಸಾಧನವಾಗಿ ಮಾತ್ರವಲ್ಲದೆ, ಭವಿಷ್ಯದ ಮಾನವ ಸಂಪನ್ಮೂಲ ತಂತ್ರದ ಪ್ರಮುಖ ಭಾಗವಾಗಿ ನೋಡುತ್ತಿರುವುದರಿಂದ, ಹೊಸ ನೇಮಕಾತಿಗಳನ್ನು ಕಡಿಮೆ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ವರದಿ ತಿಳಿಸಿದೆ.

ಈ ವಿಶ್ಲೇಷಣೆ, ಗೋಲ್ಡ್‌ಮನ್ ಸ್ಯಾಚ್ಸ್‌ನ ಇನ್ನೀರ್ವ ಅರ್ಥಶಾಸ್ತ್ರಜ್ಞರಾದ ಡೇವಿಡ್ ಮೆರಿಕಲ್ ಮತ್ತು ಪಿಯರ್‌ಫ್ರಾನ್ಸೆಸ್ಕೊ ಮೇಯಿ ಅವರು ಕಳೆದ ಅಕ್ಟೋಬರ್‌ನಲ್ಲಿ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಹೋಲಿಕೆಯಾಗುತ್ತದೆ. ಕೋವಿಡ್ ನಂತರದ ಆರ್ಥಿಕ ಪರಿಸ್ಥಿತಿಯಲ್ಲಿ “ಉದ್ಯೋಗವಿಲ್ಲದ ಬೆಳವಣಿಗೆ” (Jobless Growth) ಹೊಸ ಸಾಮಾನ್ಯ ಸ್ಥಿತಿಯಾಗಬಹುದು ಎಂದು ಅವರು ಎಚ್ಚರಿಸಿದ್ದರು.

ಇದನ್ನೂ ಓದಿ: 2025ರಲ್ಲಿ AI ಪ್ರಭಾವ; ತಂತ್ರಜ್ಞಾನದಡಿ ಕಲಿಕೆ-ಆರೈಕೆ!

ವಾಕರ್ ಅವರ ವರದಿ ಪ್ರಕಾರ, ಟ್ಯಾರಿಫ್‌ಗಳು ಮತ್ತು ವೆಚ್ಚ ಕಡಿತದ ಬಗ್ಗೆ ಹೆಚ್ಚು ಮಾತನಾಡಿದ ಕಂಪನಿಗಳು ಸಹ ಈ ವರ್ಷ ಖಾಲಿ ಹುದ್ದೆಗಳನ್ನು ಹೆಚ್ಚು ಕಡಿತಗೊಳಿಸಿವೆ. ಕೆಲವು ಕಂಪನಿಗಳು ವೆಚ್ಚ ನಿಯಂತ್ರಣಕ್ಕಾಗಿ ಕಡಿಮೆ ನೇಮಕಾತಿ, ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತ ಅಥವಾ AI ಆಧಾರಿತ ಉತ್ಪಾದಕತೆ ಹೆಚ್ಚಿಸುವ ತಂತ್ರಗಳನ್ನು ಅಳವಡಿಸಿಕೊಳ್ಳುವುದಾಗಿ ಹೇಳಿವೆ. ವಿಶೇಷವಾಗಿ 2022ರ ನವೆಂಬರ್ ನಂತರ ತಂತ್ರಜ್ಞಾನ ಕ್ಷೇತ್ರದಲ್ಲಿ AI ಕುರಿತು ಉದ್ಯೋಗ ಸಂಖ್ಯೆಯ ಚರ್ಚೆಗಳು ಹೆಚ್ಚಾಗಿರುವುದು ಗಮನಾರ್ಹವಾಗಿದೆ.

ಆದರೆ, AI ನೇರವಾಗಿ ಉದ್ಯೋಗ ಕಡಿತಕ್ಕೆ ಕಾರಣವಾಗುತ್ತಿದೆ ಎಂಬುದಕ್ಕೆ ಇನ್ನೂ ಸ್ಪಷ್ಟ ಸಾಕ್ಷ್ಯ ಲಭ್ಯವಿಲ್ಲ ಎಂದೂ ಗೋಲ್ಡ್‌ಮನ್ ಸ್ಯಾಚ್ಸ್ ಮತ್ತೊಂದು ಅಧ್ಯಯನದಲ್ಲಿ ತಿಳಿಸಿದೆ. 2025ರ ಅಕ್ಟೋಬರ್‌ನಲ್ಲಿ ಅರ್ಥಶಾಸ್ತ್ರಜ್ಞರಾದ ಮನುವೇಲ್ ಅಬೆಕಾಸಿಸ್ ಮತ್ತು ಪಿಯರ್‌ಫ್ರಾನ್ಸೆಸ್ಕೊ ಮೇಯಿ ಪ್ರಕಟಿಸಿದ ವರದಿ ಪ್ರಕಾರ, ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಕಡಿತ ಹೆಚ್ಚಾಗಿದ್ದರೂ, ಅದಕ್ಕೆ AIಯೇ ನೇರ ಕಾರಣ ಎಂದು ಬಹುತೇಕ ಕಂಪನಿಗಳು ಸ್ಪಷ್ಟವಾಗಿ ಹೇಳಿಲ್ಲ.‌ ಬಹುತೇಕ ಸಂಸ್ಥೆಗಳು ಪುನರ್‌ಸಂರಚನೆ, ವೆಚ್ಚ ಕಡಿತ ಮತ್ತು ಕಾರ್ಯಕ್ಷಮತೆ ಹೆಚ್ಚಿಸುವ ಅಗತ್ಯವನ್ನೇ ಉದ್ಯೋಗ ಕಡಿತಕ್ಕೆ ಕಾರಣವಾಗಿ ಉಲ್ಲೇಖಿಸುತ್ತಿವೆ. AI ಇದರಲ್ಲಿ ಒಂದು ಸಾಧನವಾಗಿದೆಯಷ್ಟೇ, ಆದರೆ ಏಕೈಕ ಕಾರಣವಲ್ಲ ಎಂಬುದು ವರದಿಯ ಸಾರಾಂಶವಾಗಿದೆ ಎಂದು TOI ವರದಿ ಮಾಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...