ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂಬ ವದಂತಿ ಹರಡುತ್ತಿದ್ದಂತೆ ಆತಂಕಕ್ಕೆ ಒಳಗಾದ ಮೂವರು ಪ್ರಯಾಣಿಕರು ರೈಲಿನಿಂದ ಹೊರ ಜಿಗಿದಿದ್ದು, ಮತ್ತೊಂದು ರೈಲಿನಡಿ ಸಿಲುಕಿ ಸಾವನ್ನಪ್ಪಿದ ಘಟನೆ ಜಾರ್ಖಂಡ್‌ನ ಕುಮಾಂಡಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ರಾಂಚಿ ಸಸಾರಾಮ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿಗೆ (ರೈಲು ಸಂಖ್ಯೆ 18635) ಬೆಂಕಿ ಹೊತ್ತಿಕೊಂಡಿದೆ ಎಂಬ ಸುಳ್ಳು ಸುದ್ದಿ ಹರಡಿದೆ. ಇದರಿಂದ ಆತಂಕಕ್ಕೆ ಒಳಗಾದ ಪ್ರಯಾಣಿಕರು ರೈಲಿನಿಂದ ಹೊರಕ್ಕೆ ಜಿಗಿದಿದ್ದಾರೆ.
ಈ ವೇಳೆ ಇನ್ನೊಂದು ಹಳಿಯಲ್ಲಿ ಸಾಗುತ್ತಿದ್ದ ಗೂಡ್ಸ್ ರೈಲು ಡಿಕ್ಕಿ ಹೊಡೆದು ಮೂವರು ಮೃತಪಟ್ಟಿದ್ದಾರೆ.
Breaking: At least 3 dead, several others injured after passengers of Ranchi-Sasaram Intercity Express jumped from the train following rumours of fire in engine and hit by a goods train comming from opposite direction in Jharkhand @NewIndianXpress @TheMornStandard @santwana99
— Mukesh Ranjan (@Mukesh_TNIE) June 14, 2024
ಇದನ್ನು ಓದಿದ್ದೀರಾ? ಕಾಂಗ್ರೆಸ್ ನಾಯಕರಿಗೊಂದು ಬಹಿರಂಗ ಪತ್ರ
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಲತೆಹಾರ್‌ನ ಜಿಲ್ಲಾಧಿಕಾರಿ ಗರಿಮಾ ಸಿಂಗ್, “ಮೂವರು ಸಾವನ್ನಪ್ಪಿದ್ದು ನಾಲ್ವರು ಗಾಯಗೊಂಡಿದ್ದಾರೆ. ಮೂವರ ಮೃತದೇಹ ಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ” ಎಂದು ತಿಳಿಸಿದ್ದಾರೆ.
ನಿನ್ನೆ ಸುಮಾರು 8 ಗಂಟೆ ವೇಳೆಗೆ ಈ ಘಟನೆಯು ನಡೆದಿದ್ದು ಈ ವದಂತಿ ಬಗ್ಗೆ ತನಿಖೆ ಆರಂಭವಾಗಿದೆ.





