ಪತ್ರಕರ್ತೆ ಜತೀಂದರ್ ಕೌರ್ ತುರ್‌ಗೆ ಚಮೇಲಿ ದೇವಿ ಜೈನ್ ಪ್ರಶಸ್ತಿ

Date:

ದಿ ಮೀಡಿಯಾ ಫೌಂಡೇಷನ್ ವರ್ಷದ ಅದ್ವಿತೀಯ ಮಹಿಳಾ ಪತ್ರಿಕೋದ್ಯೋಗಿಗೆ ನೀಡುವ ‘ಚಮೇಲಿ ದೇವಿ ಜೈನ್ ಪ್ರಶಸ್ತಿ’ಗೆ ಈ ಸಲ ‘ದಿ ಕಾರವಾನ್’ ಮಾಸಪತ್ರಿಕೆಗೆ ವರದಿ ಮಾಡುವ ಜತೀಂದರ್ ಕೌರ್ ತುರ್ ಅವರನ್ನು ಆರಿಸಲಾಗಿದೆ.

ಕಳೆದ ವರ್ಷವೂ ಈ ಪ್ರಶಸ್ತಿ  ‘ದಿ ಕಾರವಾನ್’ ಪತ್ರಿಕೆಗೆ ಮಣಿಪುರ ಸಂಘರ್ಷವನ್ನು ವರದಿ ಮಾಡಿದ್ದ ಗ್ರೀಶ್ಮ ಕುಠಾರ್ ಅವರ ಪಾಲಾಗಿತ್ತು.

ಜಮ್ಮುವಿನ ರಜೌರಿ ಮತ್ತು ಪೂಂಛ್ ಜಿಲ್ಲೆಗಳ 26 ಗುಜ್ಜರ್ ಪುರುಷರನ್ನು ಭಾರತೀಯ ಸೇನೆಯು 2023ರ ಡಿಸೆಂಬರ್‌ನಲ್ಲಿ ವಶಕ್ಕೆ ಪಡೆದು ತೀವ್ರ ಚಿತ್ರಹಿಂಸೆಗೆ ಗುರಿಪಡಿಸಿದ್ದ ಕುರಿತು ಜತೀಂದರ್ ದಣಿವರಿಯದೆ ವರದಿ ಮಾಡಿದ್ದರು. ‘ದಿ ಕಾರವಾನ್’ನ 2024ರ ಫೆಬ್ರವರಿ ಸಂಚಿಕೆಗೆ ಮೊದಲ ಸಲ ಈ ವಿಷಯ ಕುರಿತು ಜತೀಂದರ್ ವರದಿ ಬರೆದಿದ್ದರು. ಈ ಬರೆಹವನ್ನು ವೆಬ್‌ಸೈಟ್‌ನಿಂದ ತೆಗೆದು ಹಾಕುವಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯ ದಿ ಕಾರವಾನ್‌ಗೆ ನಿರ್ದೇಶನ ನೀಡಿತ್ತು. ಈ ನಿರ್ದೇಶನವನ್ನು ಕಾರವಾನ್ ತಕ್ಷಣವೇ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜತೀಂದರ್ ವರದಿಯಲ್ಲಿ ಏನು ತಪ್ಪುಗಳಿದ್ದವು ಎಂದು ವಿಚಾರಣೆಯಲ್ಲಿ ಒಮ್ಮೆಯೂ ನಿರ್ದಿಷ್ಟವಾಗಿ ಹೇಳಲಿಲ್ಲ ವಾರ್ತಾ ಮತ್ತು ಪ್ರಸಾರ ಮಂತ್ರಾಲಯ. ಒಂದು ವರ್ಷದ ನಂತರ 2025ರ ಫೆಬ್ರವರಿಯಲ್ಲಿ ಗುಜ್ಜರ್ ಪುರುಷರ ಬಂಧನ-ಚಿತ್ರಹಿಂಸೆ ಕುರಿತು ಸೇನೆಯ ತನಿಖೆಯ ಕುರಿತು ಜತೀಂದರ್ ವರದಿ ಮಾಡಿದರು. ದಾಖಲೆ ದಸ್ತಾವೇಜುಗಳ ಪುರಾವೆಗಳು ಮತ್ತು ಯೋಧರ ಸಾಕ್ಷ್ಯ ಹೇಳಿಕೆಗಳು ಮತ್ತು ಜತೀಂದರ್ ಬಗೆದು ತೆಗೆದ ದಾಖಲೆ-ದಸ್ತಾವೇಜು ಪುರಾವೆಗಳು ಈಕೆ 2024ರಲ್ಲಿ ಇದೇ ವಿಷಯ ಕುರಿತು ಬರೆದಿದ್ದ ವರದಿಯನ್ನು ಪುಷ್ಟೀಕರಿಸಿದವು. ಚಿತ್ರಹಿಂಸೆ ಮತ್ತು ಹತ್ಯೆಗಳ ಮೇಲೆ ಬೆಳಕು ಚೆಲ್ಲಿದವು.

ಈ ಚಿತ್ರಹಿಂಸೆಗೆ ಬಲಿಯಾದವರ ಕುಟುಂಬಗಳನ್ನೂ ಜತೀಂದರ್ ಮಾತನಾಡಿಸಿದರು. ನ್ಯಾಯ ಸಿಗುವ ಎಲ್ಲ ಆಸೆಯನ್ನೂ ತೊರೆದಿದ್ದವು ಈ ಕುಟುಂಬಗಳು. ಯಾವ್ಯಾವ ವ್ಯಕ್ತಿಗಳನ್ನು ಚಿತ್ರಹಿಂಸೆಗೆ ಗುರಿಪಡಿಸಲಾಯಿತು, ಯಾವ್ಯಾವ ಅಧಿಕಾರಿಗಳ ಆಣತಿಯ ಮೇರೆಗೆ ಯಾರ್‍ಯಾರು ಚಿತ್ರಹಿಂಸೆ ಮಾಡಿದರು ಎಂಬ ಸೂಕ್ಷ್ಮ ವಿವರಗಳು ಸೇನೆಯ ಉನ್ನತ ಅಧಿಕಾರಿಗಳಿಗೆ ತಿಳಿದಿತ್ತು. ವಶಕ್ಕೆ ತೆಗೆದುಕೊಂಡು ಚಿತ್ರಹಿಂಸೆಗೆ ಗುರಿಪಡಿಸಲಾದ ಬಹುತೇಕರು ಭಯೋತ್ಪಾದಕರ ಜೊತೆ ಯಾವುದೇ ಸಂಪರ್ಕ ಹೊಂದಿರದ ನಾಗರಿಕರಾಗಿದ್ದರು.

ಕಮಲಾ ಮಂಕೇಕರ್ ಪ್ರಶಸ್ತಿ (ಜೆಂಡರ್) ಮತ್ತು ವಿಶ್ವನಾಥ್-ಡೆಲ್ಲಿ ಪ್ರೆಸ್ ಪ್ರಶಸ್ತಿ (ನಿರ್ಭೀತ ಪತ್ರಿಕೋದ್ಯಮ) ಈ ವರ್ಷದಿಂದ ಆರಂಭಿಸಿರುವ ಹೊಸ ಪ್ರಶಸ್ತಿಗಳು. ‘ಬೆಹನ್ ಬಾಕ್ಸ್’ನ ಪ್ರಿಯಾಂಕ ತುಪೆ ಮತ್ತು ಸ್ಕ್ರೋಲ್ ನ ರೋಕಿಬಝ್ ಝಮನ್ ಅವರಿಗೆ ಈ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...