ಕನ್ವರ್ ಯಾತ್ರೆ ಯುದ್ದಕ್ಕೂ ಇರುವ ಅಂಗಡಿ ಮಾಲೀಕರು ತಮ್ಮ ಹೆಸರುಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಹೊರಡಿಸಿರುವ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ನ್ಯಾಯಮೂರ್ತಿ ಹೃಷಿಕೇಶ್ ರಾಯ್ ನೇತೃತ್ವದ ಪೀಠ ಜುಲೈ 22 ರಂದು(ಸೋಮವಾರ) ಈ ಅರ್ಜಿಯನ್ನು ವಿಚಾರಣೆಗೊಳಪಡಿಸಲಿದೆ.
ಮುಜಾಫರ್‌ನಗರದಲ್ಲಿ ಅಂಗಡಿ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸಬೇಕೆಂದು ಆದೇಶಿಸಲಾಗಿತ್ತು. ನಂತರದಲ್ಲಿ ಉತ್ತರ ಪ್ರದೇಶ ಸರ್ಕಾರ ಜು.19ರಂದು ಈ ವಿವಾದಾತ್ಮಕ ಆದೇಶವನ್ನು ರಾಜ್ಯದಾದ್ಯಂತ ವಿಸ್ತರಿಸಿತು.
ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೂಡ ಇದೇ ರೀತಿಯ ಸೂಚನೆಗಳನ್ನು ರಾಜ್ಯದಲ್ಲಿ ಹೊರಡಿಸಿದ್ದರು.
ಈ ಸುದ್ದಿ ಓದಿದ್ದೀರಾ? ಕನ್ವರ್ ಯಾತ್ರೆ ಬಳಿಕ ರೈತರ ಬೃಹತ್ ಪ್ರತಿಭಟನೆ; ಕೇಂದ್ರಕ್ಕೆ ರಾಕೇಶ್ ಟಿಕಾಯತ್ ಎಚ್ಚರಿಕೆ
ಉತ್ತರ ಭಾರತದ ಪ್ರಖ್ಯಾತ ಕನ್ವರ್ ಯಾತ್ರೆ ಆರಂಭವಾಗಿದ್ದು, ಉತ್ತರ ಪ್ರದೇಶದಲ್ಲಿ ಜಾರಿಗೆ ತಂದಿರುವ ”ನಾಮಫಲಕ ಪ್ರದರ್ಶನ” ನಿಯಮವನ್ನು ಇದೀಗ ಮಧ್ಯ ಪ್ರದೇಶದಲ್ಲೂ ಜಾರಿಗೆ ತರಲಾಗಿದೆ.
ಮಧ್ಯ ಪ್ರದೇಶದ ಪುರಾತನ ನಗರ ಬಿಜೆಪಿ ಆಡಳಿತವಿರುವ ಉಜ್ಜಯಿನಿ ಮುನ್ಸಿಪಲ್ ಕಾರ್ಪೊರೇಶನ್ ಅಂಗಡಿ ಮಾಲೀಕರಿಗೆ ತಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಗಳನ್ನು ಕನ್ವರ್ ಯಾತ್ರೆಯ ಮಾರ್ಗದುದ್ದಕ್ಕೂ ತಿನಿಸುಗಳ ಮಾರಾಟ ಮಾಡುವ ತಮ್ಮ ಅಂಗಡಿಗಳ ಹೊರಗೆ ಪ್ರದರ್ಶಿಸುವಂತೆ ಸೂಚಿಸಿದೆ.
ಅಲ್ಲದೆ ಈ ನಿಯಮ ಉಲ್ಲಂಘಿಸುವವರರ ವಿರುದ್ಧ ಮೊದಲ ಬಾರಿಗೆ 2,000 ರೂಪಾಯಿ ದಂಡ ಮತ್ತು ಎರಡನೇ ಬಾರಿಗೆ ಈ ಆದೇಶವನ್ನು ಉಲ್ಲಂಘಿಸಿದರೆ 5,000 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಎಂದು ಉಜ್ಜಯಿನಿ ಮೇಯರ್ ಮುಖೇಶ್ ತತ್ವಾಲ್ ಶನಿವಾರ ಹೇಳಿದ್ದರು.
ಬಿಜೆಪಿ ರಾಜ್ಯಗಳ ಆದೇಶದ ವಿರುದ್ಧ ವಿಪಕ್ಷ ನಾಯಕರು ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸಿದ್ದರು.





