ಕಾಸರಗೋಡು | ಕಬ್ಬಿನ ಜ್ಯೂಸ್ ಅಂಗಡಿಯಲ್ಲಿ ತೆರೆದುಕೊಂಡ ಪುಸ್ತಕ ಭಂಡಾರ

Date:

ಗಡಿನಾಡು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಸುರೇಂದ್ರ ಕೋಟ್ಯಾನ್ ಅವರು ಸಾಮಾನ್ಯ ವ್ಯಾಪಾರಿಗಳಿಗಿಂತ ತೀರಾ ಭಿನ್ನವಾದ ವ್ಯಕ್ತಿ. ಹಾಗಂತ ಅವರದ್ದೇನು ದೊಡ್ಡ ಮಟ್ಟಿನ ವ್ಯಾಪಾರ ವಹಿವಾಟು ಮಳಿಗೆಯೂ ಅಲ್ಲ. ಮಂಜೇಶ್ವರ ಉದ್ಯಾವರದ ಹೆದ್ದಾರಿ ಬಳಿ ಕಬ್ಬಿನ ಅರಸು ಮಂಜಿಸ್ಣಾರ್ ದೈವದ ಮಾಡಾ ಹಾಗೂ ಉದ್ಯಾವಾರ ದೊಡ್ಡ ಮಸೀದಿಯ ಬಳಿ ಮಾಡಾ ಟ್ರಸ್ಟ್‌ಗೆ ಸೇರಿದ ಕಟ್ಟಡದಲ್ಲಿ ಜ್ಯೂಸ್ ಹಾಗೂ ಎಳನೀರು ಮಾರಾಟದ ಪುಟ್ಟ ಅಂಗಡಿಯಷ್ಟೇ.

ಸುರೇಂದ್ರ ಕೋಟ್ಯಾನ್ ಅವರು ತನ್ನ ದುಡಿಮೆಯ ಸಂಪಾದನೆಯಲ್ಲಿ ದೊಡ್ಡ ಪಾಲನ್ನು ಪುಸ್ತಕ ಖರೀದಿಸಲು ವಿನಿಯೋಗಿಸುತ್ತಾರೆ ಅನ್ನೋದೇ ಅವರ ವೈಶಿಷ್ಟ್ಯ. ವ್ಯಾಪಾರಿಗಳು ತಮ್ಮ ಲಾಭವನ್ನು ವ್ಯಾಪಾರ ವಿಸ್ತರಣೆಗೆ ಬಳಸುವುದು ಸಾಮಾನ್ಯ ವಿಚಾರ. ಆದರೆ ಸುರೇಂದ್ರ ಕೋಟ್ಯಾನ್ ಅವರು ಜ್ಞಾನ ವಿಸ್ತರಣೆಗಾಗಿ ತನ್ನ ದುಡಿಮೆಯ ಬಹುಪಾಲು ದುಡ್ಡನ್ನು ಖರ್ಚು ಮಾಡುತ್ತಿದ್ದಾರೆ.

ಕೋಟ್ಯಾನ್‌ ಪುಸ್ತಕ ಭಂಡಾರ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತನ್ನ ವ್ಯಾಪಾರದ ನಡುವೆಯೂ ಒಂದಿಷ್ಟು ಬಿಡುವು ಮಾಡಿಕೊಂಡು ಊರಿನ ಆಸುಪಾಸಿನಲ್ಲಿ, ಪಕ್ಕದ ಜಿಲ್ಲೆಯಲ್ಲಿ ನಡೆಯುವ ಪುಸ್ತಕ ಬಿಡುಗಡೆ, ಪುಸ್ತಕ ಮೇಳ, ಸಾಹಿತ್ಯ ಸಮ್ಮೇಳನಕ್ಕೆ ಸುರೇಂದ್ರ ಕೋಟ್ಯಾನ್ ಹಾಜರಾಗುತ್ತಾರೆ, ಪುಸ್ತಕ ಖರೀದಿಸುತ್ತಾರೆ. ಈ ರೀತಿಯ ಹವ್ಯಾಸವನ್ನು ಕಳೆದ 35 ವರ್ಷಗಳಿಂದ ಪಾಲಿಸಿಕೊಂಡು ಬಂದ ಸುರೇಂದ್ರ ಅವರ ಮನೆಯಲ್ಲಿ ಬರೋಬ್ಬರಿ ಹತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವಾಗಿದೆ. ಪುಸ್ತಕಗಳ ಮೌಲ್ಯ ಲೆಕ್ಕ ಹಾಕಿದರೆ 10 ಲಕ್ಷ ರೂಪಾಯಿಗೂ ಹೆಚ್ಚಾಗಬಹುದು.

ಸುರೇಂದ್ರರು ತಾನು ಖರೀದಿಸಿದ ಪುಸ್ತಕವನ್ನು ತನ್ನ ಓದಿಗಾಗಿ ಮಾತ್ರ ಬಳಸಿಕೊಳ್ಳಲಿಲ್ಲ, ಜ್ಞಾನದಾಹಿಗಳಿಗೆಲ್ಲ ಅವರ ಮನೆ ತೆರೆದ ಪುಸ್ತಕಾಲಯವಾಗಿತ್ತು. ಪ್ರತಿ ಭಾನುವಾರ ಊರಿನ ಪುಸ್ತಕ ಪ್ರೇಮಿಗಳು, ಸಾಹಿತ್ಯಾಸಕ್ತರು ಅವರ ಮನೆಯಂಗಳದಲ್ಲಿ ಸೇರಿ ಹೊಸ ಕೃತಿಗಳನ್ನು ಓದುವ, ವಿಮರ್ಶೆ ಮಾಡುವ, ಚರ್ಚಿಸುವ ಹವ್ಯಾಸ ರೂಢಿಸಿಕೊಂಡಿದ್ದರು.

ಕೋಟ್ಯಾನ್‌ ಪುಸ್ತಕ ಭಂಡಾರ

ನೂರಾರು ಮಂದಿ ಸುರೇಂದ್ರ ಅವರ ಪುಸ್ತಕದ ಮನೆಗೆ ಭೇಟಿ ಕೊಡುತ್ತಿದ್ದರು. ಹತ್ತಾರು ಪಿಎಚ್‌ಡಿ ವಿದ್ಯಾರ್ಥಿಗಳು ಸುರೇಂದ್ರ ಅವರ ಮನೆಗೆ ಬಂದು ಹಳೆಯ, ಅಪೂರ್ವ ಪುಸ್ತಕಗಳನ್ನು ಜಾಲಾಡಿ ತಮ್ಮ ಅಧ್ಯಯನಕ್ಕಾಗಿ ಸುರೇಂದ್ರ ಅವರ ಮನೆ ಗ್ರಂಥಾಲಯವನ್ನು ಬಳಸಿಕೊಂಡಿದ್ದಾರೆ. ತನ್ನ ಮನೆ ಹಾಗೂ ಕಬ್ಬಿನ ಜ್ಯೂಸ್ ಅಂಗಡಿಗೂ ಅರ್ಧ ಕಿಲೋಮೀಟರ್‌ಗೂ ಹೆಚ್ಚು ದೂರವಿರುವುದರಿಂದ ಸುರೇಂದ್ರ ಅವರನ್ನು ಪುಸ್ತಕ ಪ್ರೇಮಿಗಳು ಮನೆ ಕಡೆಗೆ ಹುಡುಕಿಕೊಂಡು ಬರುವಾಗ ಎರಡೂ ಕಡೆಗೂ ಓಡಾಡುವುದು ತುಸು ತ್ರಾಸ ಅನಿಸಿದಾಗ ಸುರೇಂದ್ರ ಅವರು ಮನೆ ಪುಸ್ತಕ ಭಂಡಾರವನ್ನು ತನ್ನ ಕಬ್ಬಿನ ಜ್ಯೂಸ್ ಅಂಗಡಿಗೆ ಸ್ಥಳಾಂತರಿಸಲು ತೀರ್ಮಾನಿಸಿದರು.

ಕೋಟ್ಯಾನ್‌ ಪುಸ್ತಕ ಭಂಡಾರ

ಆರಂಭದಲ್ಲಿ ಸಣ್ಣ ಪುಟ್ಟ ಅಡೆತಡೆ, ತೊಡಕುಗಳು ಎದುರಾದರೂ ಊರಿನ ಸಾಹಿತ್ಯ ಆಸಕ್ತರು, ಪುಸ್ತಕ ಪ್ರೇಮಿಗಳು, ಶಿಕ್ಷಣ ಪ್ರೇಮಿಗಳು ಸುರೇಂದ್ರ ಕೋಟ್ಯಾನ್ ಅವರಿಗೆ ಸಹಾಯ, ಸಹಕಾರ ನೀಡಿ ಬೆಂಗಾವಲಾಗಿ ನಿಂತರು. ಜ್ಯೂಸ್ ಅಂಗಡಿಯ ಪುಟ್ಟ ಕೋಣೆಯಲ್ಲಿ ಜನವರಿ 14ರ ಭಾನುವಾರ ಗ್ರಂಥಾಲಯ ತೆರೆದುಕೊಂಡಿತು.

ಕೋಟ್ಯಾನ್‌ ಪುಸ್ತಕ ಭಂಡಾರ

ಸುರೇಂದ್ರ ಕೋಟ್ಯಾನ್‌ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾನೇನು ಹೆಚ್ಚು ಶಾಲೆಗೆ ಹೋದವನಲ್ಲ. ಪ್ರಾಥಮಿಕ ಶಾಲೆ ದಾಟಿ ನನಗೆ ಮುಂದೆ ಓದಲಾಗಲಿಲ್ಲ. ನನ್ನೂರಿನ ಮಕ್ಕಳಿಗೆ ಓದಲು ಅನುಕೂಲವಾಗಲಿ ಎಂಬ ಆಶಯದಿಂದ ಪುಸ್ತಕ ಸಂಗ್ರಹ ಆರಂಭಿಸಿದ್ದೆ. ಸಣ್ಣದೊಂದು ಗ್ರಂಥಾಲಯ ತೆರೆಯಬೇಕೆಂಬ ಕನಸಿತ್ತು. ಅದೀಗ ಸಾರ್ಥಕವಾಗಿದೆ” ಎಂದು ವಿನೀತರಾಗಿ ಹೇಳಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಗುಂಪುಗಾರಿಕೆ ಸೃಷ್ಟಿಸುವ ಮುದ್ದಹನುಮೇಗೌಡರಿಗೆ ಪಕ್ಷನಿಷ್ಠೆಯಿಲ್ಲ: ನಾರಾಯಣಗೌಡ

ಕಬ್ಬಿನ ಜ್ಯೂಸ್ ಅಂಗಡಿಯ ಗ್ರಂಥಾಲಯವನ್ನು ಉದ್ಘಾಟಿಸಲು ಬಂದವರು ಕಿತ್ತಳೆ ಹಣ್ಣು ಮಾರಾಟ ಮಾಡಿ ಊರಿನಲ್ಲಿ ಶಾಲೆ ತೆರೆದ ಅಕ್ಷರ ಸಂತ ಹರೇಕಳ ಹಾಜಬ್ಬ. ಈ ಅಪೂರ್ವ ಮುಖಾಮುಖಿಯನ್ನು ಕಣ್ತುಂಬಿಸಿಕೊಂಡ ಊರ ಜನರ ಬಾಯಲ್ಲಿ ಬಂದ, “ಅಕ್ಷರ ಸಂತ ಹಾಗೂ ಪುಸ್ತಕ ಬಂಧುವಿನ ಸಂಗಮ” ಎಂಬ ಉದ್ಘಾರದ ಮಾತು ಉದ್ಯಾವರ ಮಾಡ ಎಂಬ ಸಾಮರಸ್ಯದ ಸಂಗಮ ಭೂಮಿಗೊಂದು ಸಂಕ್ರಾತಿಯ ಹೊಸ ಬೆಳಕು ಚಿಮ್ಮಿಸಿದಂತಾಗಿತ್ತು.

ಕಬ್ಬಿನ ಹಾಲಿನ ಜ್ಯೂಸ್ ಅಂಗಡಿಯ ಫಲಕದಲ್ಲಿ ನಾರಾಯಣ ಗುರುಗಳ ವಿಶ್ವಮಾನ್ಯ ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು ‘ ಎಂಬ ಸಂದೇಶಕ್ಕೆ ಜೊಡಣೆಯಾಗಿ ಜ್ಞಾನವೇ ಬೆಳಕು, ಜ್ಞಾನವೇ ದೇವರ ಮೂಲ ಎಂಬ ನುಡಿ ಜ್ಞಾನದಾಹಿಗಳನ್ನು ಈ ಪುಟ್ಟ ಗ್ರಂಥಾಲಯಕ್ಕೆ ಕೈ ಬೀಸಿ ಕರೆಯುತ್ತಿದೆ.‌

?s=150&d=mp&r=g
ತಾರಾನಾಥ್ ಗಟ್ಟಿ ಕಾಪಿಕಾಡ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...