ಕೇರಳದಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಯ ಪ್ರಚಾರ ಕಾರ್ಯವನ್ನು ಬಿಜೆಪಿ ನೇತೃತ್ವ ಎನ್‌ಡಿಎ ಆರಂಭಿಸಿದೆ. ಕೋಮು ವಿಭಜನೆ ಉತ್ತೇಜಿಸುವ ಭಾಷಣದ ಮೂಲಕವೇ ಬಿಜೆಪಿ ಪ್ರಚಾರ ಶುರು ಮಾಡಿದೆ.
ಗುರುವಾಯೂರಿನಲ್ಲಿ ಎನ್‌ಡಿಎ ಅಭ್ಯರ್ಥಿ ಮತ್ತು ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷರಾಗಿರುವ ಬಿ ಗೋಪಾಲಕೃಷ್ಣನ್, ತಮ್ಮ ಭಾಷಣದ ವಿಡಿಯೋದಲ್ಲಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಗೋಪಾಲಕೃಷ್ಣನ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಇದನ್ನು ಓದಿದ್ದೀರಾ? ಕೇರಳ ಚುನಾವಣೆಗೂ ಮುನ್ನ ಪಕ್ಷಗಳ ಸಂಕಟ: ಬಂಡಾಯ- ಪಕ್ಷಾಂತರ- ಉಚ್ಚಾಟನೆ ಸಂಕಷ್ಟ
“ಗುರುವಾಯೂರಿನಲ್ಲಿ ಐದು ದಶಕಗಳಿಗೂ ಅಧಿಕ ಕಾಲದಿಂದ ಹಿಂದೂ ಶಾಸಕರನ್ನು ಆಯ್ಕೆ ಮಾಡಲಾಗಿಲ್ಲ” ಎಂದು ಗೋಪಾಲಕೃಷ್ಣನ್ ಹೇಳಿರುವುದು ವಿಡಿಯೋದಲ್ಲಿ ಕಾಣಬಹುದು.
ಎಡ ಪ್ರಜಾಸತ್ತಾತ್ಮಕ ರಂಗ ಮತ್ತು ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ ಎರಡೂ ಕ್ಷೇತ್ರದಲ್ಲಿ ಹಿಂದೂ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದನ್ನು ಪ್ರಜ್ಞಾಪೂರ್ವಕವಾಗಿ ತಪ್ಪಿಸಿದೆ ಎಂದು ಆರೋಪಿಸಿದ್ದಾರೆ.
ಇನ್ನು ಗುರುವಾಯೂರಪ್ಪನ ಭೂಮಿಯನ್ನು ಮರಳಿ ಪಡೆಯುವ ಜವಾಬ್ದಾರಿ ನಮ್ಮದು ಎಂದು ಘೋಷಿಸಿಕೊಂಡರು. ದೇವರ ನಾಡನ್ನು ಹೆಸರಿಸದ ಶಕ್ತಿಗಳು ವರ್ಷಗಳಿಂದ ನಿಯಂತ್ರಿಸುತ್ತಿದೆ ಎಂದರು. ಪ್ರಚಾರದ ವೇಳೆ ಧರ್ಮವನ್ನು ನಡುವೆ ತಂದಿದ್ದಕ್ಕೆ ಸದ್ಯ ಇತರೆ ಪಕ್ಷಗಳ ವಾಗ್ದಾಳಿಗೆ ಬಿಜೆಪಿ ಗುರಿಯಾಗಿದೆ.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಕ್ರೈಸ್ತ ಸಮುದಾಯದ ಮತಗಳು ‘ಗೇಮ್ ಚೇಂಜರ್’ ಆಗಬಹುದೇ?
ಕೋಮು ವಿಭಜನೆ ಹೇಳಿಕೆಗೆ ಸಿಪಿಐಎಂ ಖಂಡನೆ
ಬಿಜೆಪಿ ನಾಯಕರ ಹೇಳಿಕೆಯನ್ನು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ನಾಯಕರು ಖಂಡಿಸಿದ್ದಾರೆ. ಇದು ಕೋಮು ವಿಭಜನೆಯ ಹೇಳಿಕೆ. ಗುರುವಾಯೂರ್‌ನ ದೀರ್ಘಕಾಲೀನ ಜಾತ್ಯತೀತ ರಚನೆಗೆ ನೇರ ಸವಾಲು ಎಂದು ದೂರಿದ್ದಾರೆ.
“ಸಾಮಾಜಿಕ ಒಗ್ಗಟ್ಟಿಗೆ ಹೆಸರುವಾಸಿಯಾದ ಕ್ಷೇತ್ರದಲ್ಲಿ ಮತದಾರರನ್ನು ಧ್ರುವೀಕರಿಸಲು ಮತ್ತು ಕೋಮು ಸಾಮರಸ್ಯವನ್ನು ಹಾಳುಮಾಡಲು ಉದ್ದೇಶಪೂರ್ವಕ ಪ್ರಯತ್ನಿಸಲಾಗುತ್ತಿದೆ” ಎಂದು ಆರೋಪಿಸಿದೆ.
ಇನ್ನು ಇಂತಹ ಹೇಳಿಕೆಗಳು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ. ಮುಕ್ತ ಮತ್ತು ನ್ಯಾಯಯುತ ಚುನಾವಣಾ ಪ್ರಕ್ರಿಯೆಯನ್ನು ಹಳಿತಪ್ಪಿಸುವ ಅಪಾಯವಿದೆ ಎಂದು ಸ್ಥಳೀಯ ನಾಯಕರುಗಳು ದೂರಿದ್ದಾರೆ. ಬಿಜೆಪಿ ಅಭ್ಯರ್ಥಿಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಸಿಪಿಐಎಂ ನಾಯಕರು ಘೋಷಿಸಿದ್ದಾರೆ.





