ಸಾಲಕ್ಕಾಗಿ ಕಿಡ್ನಿ ಮಾರಬೇಕಾಯಿತು : ಮಹಾರಾಷ್ಟ್ರದ ರೈತನ ಆಘಾತಕಾರಿ ಕತೆ

Date:

ಕೃಷಿ ಮಾಡಿ, ಹೈನುಗಾರಿಕೆ ಉದ್ಯಮದಿಂದ ನೂರಾರು ಹಸುಗಳನ್ನು ಸಾಕಿ ಬದುಕು ನಡೆಸಲು ಕನಸು ಕಂಡಿದ್ದ 29 ವರ್ಷದ ಯುವ ರೈತ ರೋಶನ್ ಕುಡೆ ಇಂದು ಸಾಲಗಾರನಾಗಿ ಬದುಕನ್ನೇ ನಾಶ ಪಡಿಸಿಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಹೈನುಗಾರಿಕೆಗಾಗಿ 50,000 ರೂ. ಹಣವನ್ನು 40% ಬಡ್ಡಿಗೆ ತೆಗೆದುಕೊಂಡು, ಸಾಲ ತೀರಿಸಲು ಕಿಡ್ನಿ ಮಾರುವ ಹಂತಕ್ಕೆ ಬಂದಿದ್ದಾರೆ.

ಮಹಾರಾಷ್ಟ್ರದ ಚಂದ್ರಾಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆದಾದ ನಂತರ ಆ ಸಾಲ ತೀರಿಸಲು ದಿನಕ್ಕೆ 10,000 ಬಡ್ಡಿಯಂತೆ ಒಂದು ಲಕ್ಷ ಪಡೆದಿದ್ದು, ಈ 74 ಲಕ್ಷ ರೂ.ಗೆ ಹಿಗ್ಗಿದೆ. ಇದರ ಪರಿಣಾಮವಾಗಿ ರೈತನೊಬ್ಬ ಕಾಂಬೋಡಿಯಾಗೆ ತೆರಳಿ ತನ್ನ ಕಿಡ್ನಿಯನ್ನು ಮಾರಾಟ ಮಾಡಿ ಬಂದಿದ್ದಾರೆ. ಈ ಘಟನೆ ಯುವ ರೈತ ಕುಡೆ ಅವರ ಕುಟುಂಬವನ್ನು ದುಖಃಕ್ಕೆ ನೂಕಿದೆ.

ರೋಶನ್ ಕುಡೆ ಹೈನುಗಾರಿಕೆ ಉದ್ಯಮವನ್ನು ಆರಂಭಿಸಲು ನಿರ್ಧರಿಸಿ ಖಾಸಗಿ ವ್ಯಕ್ತಿಯ ಬಳಿ ಸಾಲವನ್ನು ಪಡೆದಿದ್ದಾರೆ. ಹೈನುಗಾರಿಕೆ ಉದ್ಯಮಕ್ಕಾಗಿ ಹಸುಗಳನ್ನು ಖರೀದಿಸಿದ್ದಾರೆ. ಆದರೆ ಜಾನುವಾರುಗಳು ಕಾಯಿಲೆಯಿಂದ ಸಾವನ್ನಪ್ಪಿವೆ. ಜೊತೆಗೆ ಅವರ ಮಾಲಿಕ್ಷತ್ವ ಭೂಮಿಯಲ್ಲಿಯೂ ಸಹ ಫಸಲು ವಿಫಲಗೊಂಡು ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಇವೆಲ್ಲವನ್ನು ನಿಭಾಯಿಸಲು ಮಾಡಿದ ಸಾಲ ಮತ್ತು ಅದಕ್ಕೆ ಬಡ್ಡಿ ಕಟ್ಟಲಾಗದೆ ಪರಿಪಾಟಲು ಪಟ್ಟಿದ್ದಾರೆ. ಇದರಿಂದಾಗಿ ಅವರ ಸುತ್ತ ಸಾಲದ ಕುಣಿಕೆ ಬಿಗಿದುಕೊಂಡಿದ್ದು, ಸಾಲಗಾರರು ಕುಡೆ ಹಾಗೂ ಅವರ ಕುಟುಂಬಕ್ಕೆ ಕಿರುಕುಳ ನೀಡಲು ಆರಂಭಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿ : ಸಿಂದಗಿಯಲ್ಲಿ ರೈತ ಸಂಘ ಪ್ರತಿಭಟನೆ; ಸರ್ಕಾರಿ ಭೂಮಿ ಫಾರೆಸ್ಟಿಗೆ ಹಸ್ತಾಂತರಿಸದಂತೆ ಮನವಿ

ಹೀಗಾಗಿ ಕುಡೆ ತಮ್ಮ ಜಮೀನು, ಟ್ಯಾಕ್ಟರ್ ಮತ್ತು ಬೆಲೆಬಾಳುವ ಗೃಹಪಯೋಗಿ ವಸ್ತುಗಳನ್ನು ಸಾಲ ತೀರಿಸಲು ಮಾರಾಟ ಮಾಡಿದ್ದಾರೆ. ಆದರೆ, ಅದಷ್ಟೇ ಸಾಲ ತೀರಿಸಲು ಸಾಕಾಗಲಿಲ್ಲ. ಸಾಲ ತೀರಿಸಲು ಬೇರೆ ಮಾರ್ಗಕ್ಕಾಗಿ ಹುಡುಕುತ್ತಿರುವಾಗ, ಸಾಲ ಕೊಟ್ಟವರೇ ಕಿಡ್ನಿ ಮಾರಿ ಸಾಲ ತೀರಿಸು ಎಂದು ಹೇಳಿದ್ದಾರೆ. ಇದಕ್ಕಾಗಿ ಇಂಟರ್ ನೆಟ್ ನಲ್ಲಿ ಕಿಡ್ನಿ ಮಾರುವ ಏಜೆಂಟರನ್ನು ಹುಡುಕಿದ್ದಾರೆ. ಏಜೆಂಟರ್‌ಗಳ ಮೂಲಕ ಕೋಲ್ಕತ್ತಾಗೆ ತೆರಳಿರುವ ಕುಡೆ ವೈದ್ಯಕೀಯ ಪರೀಕ್ಷೆಗಳ ನಂತರ ಕಾಂಬೋಡಿಯಾಗೆ ತೆರಳಿದ್ದು, ಅಲ್ಲಿ 8 ಲಕ್ಷ ರೂ ಗೆ ತಮ್ಮ ಕಿಡ್ನಿಯನ್ನು ಮಾಡಿದ್ದಾರೆ.

kule alleged that he was subject

ಸಾಲ ಕೊಟ್ಟವರು ಕಿಶೋರ್ ಬವಾಂಕುಲೆ, ಪ್ರದೀಪ್ ಬವಾಂಕುಲೆ, ಸಂಜಯ್ ಬಲ್ಲಾರ್ ಪುರೆ ಹಾಗೂ ಲಕ್ಷ್ಮಣ್ ಬೋರ್ಕರ್ ಎಂದು ಗುರುತಿಸಲಾಗಿದ್ದು, ಅವರೆಲ್ಲರೂ ಬ್ರಹ್ಮಪುರಿ ಪಟ್ಟಣದ ನಿವಾಸಿಗಳಾಗಿದ್ದಾರೆ.

ಈ ಸಂಬಂಧ ಪೊಲೀಸರಿಗೆ ಕೂಡೆ ದೂರಿ ನೀಡಿದ್ದಾರೆ. ಸಾಲಗಾರರ ಕಿರುಕುಳ ತಾಳಲಾರದೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಾಕಷ್ಟು ಕುಗ್ಗಿದ್ದಾರೆ. ಬುಧವಾರ (ಡಿಸೆಂಬರ್ 17, 2025) ಚಂದ್ರಾಪುರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರೈತ ರೋಶನ್ ಕುಡೆ ಅವರ ಆರೋಗ್ಯ ತಪಾಸಣೆ ನಡೆಸಲಾಯಿತು, ನಂತರ ಅವರ ಒಂದು ಕಿಡ್ನಿ (ಮೂತ್ರಪಿಂಡ) ಕಾಣೆಯಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

29 ವರ್ಷದ ಯುವರೈತ ಕುಡೆ “40% ಬಡ್ಡಿ” ದರದಲ್ಲಿ ಇಬ್ಬರು ಸಾಲಗಾರರಿಂದ ₹50,000 ಸಾಲ ಪಡೆದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಅಕ್ರಮ ಬಡ್ಡಿ ದಂದೆಯ ಜಾಲದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಕುಡೆ ಅವರಿಗೆ ಸಾಲ ಕೊಟ್ಟಿದ್ದ ನಾಲ್ಕು ಜನರನ್ನು ಬಂಧಿಸಲಾಗಿದೆ. ಕುಡೆ ಅವರ ಹಣಕಾಸಿ ವಹಿವಾಟುಗಳನ್ನು ಪರಿಶೀಲಿಸಲಾಗಿದೆ ಮತ್ತು ಅವರು ಹಲವಾರು ಖಾಸಗಿ ವ್ಯಕ್ತಿಗಳಿಂದ ಸಾಲವನ್ನು ಪಡೆದಿದ್ದಾರೆ ಎಂಬುದು ಕಂಡು ಬಂದಿದೆ ಎಂದುಎಂದು ಚಂದ್ರಾಪುರ ಪೊಲೀಸ್ ವರಿಷ್ಠಾಧಿಕಾರಿ ಸುದರ್ಶನ್ ಮುಮ್ಮಕ ಬುಧವಾರ (ಡಿಸೆಂಬರ್ 17, 2025) ತಿಳಿಸಿದ್ದಾರೆ.

ಇದರ ಮೂಲಕ ದೇಶದಲ್ಲಿ ನಡೆಯುತ್ತಿರುವ ವ್ಯಾಪಕವಾದ ಅಕ್ರಮ ಅಂಗಾಂಗ ಕಳ್ಳಸಾಗಣೆ ಮತ್ತು ಬಡ್ಡಿ ಸಾಲ ಜಾಲವನ್ನು ಕೆಡವಲು ಪೊಲೀಸ್ ತನಿಖೆ ಸಕ್ರಿಯವಾಗಿ ಕಾರ್ಯನಿರ್ವಹಿಸಿಬೇಕು. ಇದು ಕೇವಲ ಯುವರೈತ ಒಬ್ಬನ ಕಥೆಯಲ್ಲ. ಕುಡೆ ರೀತಿಯ ನೂರಾರು ರೈತರು ತಮ್ಮ ಭೂಮಿಯಲ್ಲಿ ಬೆಳೆದ ಬೆಳೆ ಕೈಕೊಟ್ಟಿದ್ದಕ್ಕಾಗಿ, ಬದುಕು ನಡೆಸಲು ಸಾಲ ಮಾಡಿ, ಸಾಲ ತೀರಿಸಲು ಆಗದಿದ್ದಾಗ ಬದುಕೇ ಸುಟ್ಟು ಹೋಗುತ್ತದೆ. ಹೊಲದಲ್ಲಿ ಬೆಳೆ ನಾಶವಾದ ರೀತಿಯಲ್ಲಿ ಬದುಕೇ ನಾಶವಾಗುತ್ತದೆ. 29 ವರ್ಷದ ಯುವ ರೈತನ ಧಾರುಣ ಕತೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...