ಮಹಿಳಾ ಪ್ರೀಮಿಯರ್ ಲೀಗ್ 2026ರ (WPL 2026) ಮುಗಿದಿದ್ದು, ಈ ಬಾರಿಯೂ ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಆಗಿದೆ. ಫೈನಲ್‌ನ ವಿಜೇತರು 6 ಕೋಟಿ ರೂ.ಗಳ ಬಹುಮಾನವನ್ನು ಪಡೆದಿದ್ದು, ಕಳೆದ ವರ್ಷದಷ್ಟೇ ಬಹುಮಾನ ಮೊತ್ತವನ್ನು ನೀಡಲಾಗಿದೆ.
2025ರ ಫೈನಲ್‌ನಲ್ಲಿ ಪ್ರಶಸ್ತಿ ಗೆದ್ದ ನಂತರ ಮುಂಬೈ ಇಂಡಿಯನ್ಸ್‌ಗೆ ನೀಡಲಾದ ಬಹುಮಾನದ ಹಣವೂ ಆರು ಕೋಟಿ ರೂಪಾಯಿ ಆಗಿತ್ತು. ಹಾಗೆಯೇ ಅದಕ್ಕೂ ಹಿಂದೆ ಆರ್‌ಸಿಬಿ ಗೆದ್ದಾಗಲೂ ಅಷ್ಟೇ ಮೊತ್ತವನ್ನು ನೀಡಲಾಗಿತ್ತು.
ಇದನ್ನು ಓದಿದ್ದೀರಾ? ಜನಪ್ರಿಯವಾಗುತ್ತಿರುವ ವಿಮೆನ್ ಪ್ರೀಮಿಯರ್ ಲೀಗ್: ದೇಶದ ಉದ್ದಕ್ಕೂ ಮಹಿಳಾ ಕ್ರಿಕೆಟ್ ಪಸರಿಸಲಿ!
ಗುರುವಾರ ನಡೆದ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಆರು ವಿಕೆಟ್‌ಗಳಿಂದ ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಎರಡನೇ ಬಾರಿಗೆ WPL ಪ್ರಶಸ್ತಿಯನ್ನು ಗೆದ್ದು ಈ ಬಹುಮಾನವನ್ನು ಪಡೆದುಕೊಂಡಿದೆ.
ಇನ್ನು ರನ್ನರ್-ಅಪ್ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕನೇ ಬಾರಿಗೆ ಫೈನಲ್ ತಲುಪಿದ್ದರೂ ಕೊನೆಯ ಹಂತದಲ್ಲಿ ವಿಫಲವಾಗಿದೆ. ರನ್ನರ್ ಅಪ್ ತಂಡಕ್ಕೂ ಬಹುಮಾನವಿದ್ದು, 3 ಕೋಟಿ ರೂಪಾಯಿ ಪಡೆದಿದೆ.
ಇನ್ನು ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದ ಸ್ಮೃತಿ ಮಂಧಾನ (ಆರ್‌ಸಿಬಿ – 377 ರನ್) ₹5 ಲಕ್ಷ, ಹೆಚ್ಚು ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಗಳಿಸಿಕೊಂಡ ಸೋಫಿ ಡಿವೈನ್ (ಗುಜರಾತ್ ಜೈಂಟ್ಸ್ – 17 ವಿಕೆಟ್) ₹5 ಲಕ್ಷ, ತಂಡದ ಯಶಸ್ಸಿಗೆ ಅತಿ ಹೆಚ್ಚು ಕೊಡುಗೆ ನೀಡ ‘ಮೋಸ್ಟ್ ವ್ಯಾಲ್ಯೂಯಬಲ್ ಪ್ಲೇಯರ್ (MVP)’ ಎನಿಸಿಕೊಂಡ ಸೋಫಿ ಡಿವೈನ್ (ಗುಜರಾತ್ ಜೈಂಟ್ಸ್ ) ₹5 ಲಕ್ಷ, ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್ (ಉದಯೋನ್ಮುಖ ಆಟಗಾರ್ತಿ) ನಂದಿನಿ ಶರ್ಮಾ (ಡೆಲ್ಲಿ ಕ್ಯಾಪಿಟಲ್ಸ್) ₹5 ಲಕ್ಷ, ಫೈನಲ್ ಪಂದ್ಯದ ಶ್ರೇಷ್ಠ ಆಟಗಾರ್ತಿ ಸ್ಮೃತಿ ಮಂಧಾನ ₹2.5 ಲಕ್ಷ, ಟೂರ್ನಿಯಲ್ಲಿ ಹೆಚ್ಚು ಸಿಕ್ಸರ್ ಬಾರಿಸಿ ಮುಂಬೈ ಇಂಡಿಯನ್ಸ್ ತಂಡದ ಹರ್ಮನ್‌ಪ್ರೀತ್ ಕೌರ್ ₹5 ಲಕ್ಷ ಪಡೆಯಲಿದ್ದಾರೆ.





