‘LPG ಇಂದ ಉದ್ಯಮಕ್ಕೆ ಹೊಡೆತ’ ಎಂದ ಸುಪ್ರೀಂ; ಕೋರ್ಟ್‌ಅನ್ನು ಹಾಸ್ಯಮಯಗೊಳಿಸಿದ ಎಜಿ ಪ್ರತಿಕ್ರಿಯೆ

Date:

ಗಲ್ಫ್ ಪ್ರದೇಶದಲ್ಲಿನ ಯುದ್ಧದ ಕಾರಣದಿಂದಾಗಿ ಅಡುಗೆ ಅನಿಲದ (LPG) ಕೊರತೆಯ ಬಗ್ಗೆ ಆತಂಕಗಳು ಉಂಟಾಗಿವೆ. ಇದೇ ಸಮಯದಲ್ಲಿ, ‘ಉದ್ಯಮ’ ಎಂಬ ಪದಕ್ಕೆ 1978ರಲ್ಲಿ ನ್ಯಾಯಾಲಯ ನೀಡಿದ್ದ ವ್ಯಾಖ್ಯಾನವನ್ನು ಪರಿಶೀಲಿಸುತ್ತಿದ್ದ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಪೀಠವು, ‘LPG ಉದ್ಯಮಕ್ಕೆ ಹೊಡೆತ ನೀಡಿದೆ’ ಎಂಬುದನ್ನು ಗಮನಿಸಿದೆ. ಆದರೆ, ನ್ಯಾಯಾಲಯದ ಈ ಹೇಳಿಕೆ ಕೋರ್ಟ್‌ ಅವರಣದಲ್ಲಿದ್ದವರನ್ನು ಅಚ್ಚರಿಗೊಳಿಸಿದೆ. ಯಾಕೆಂದರೆ, ನ್ಯಾಯಾಲಯವು ‘ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣ’ (ಎಲ್‌ಪಿಜಿ) ಕುರಿತು ಮಾತನಾಡಿದ್ದರೆ, ಅಲ್ಲಿದ್ದವರು ಅಡುಗೆ ಅನಿಲದ (ಎಲ್‌ಪಿಜಿ) ಎಂದು ಅರ್ಥೈಸಿಕೊಂಡಿದ್ದಾರೆ.

ಸುಮಾರು 50 ವರ್ಷಗಳಷ್ಟು ಹಳೆಯದಾದ ‘ಉದ್ಯಮ’ ಎಂಬ ಪದದ ವಿಸ್ತಾರವಾದ ವ್ಯಾಖ್ಯಾನವು ಈಗಿನ ಕಾಲಕ್ಕೆ ಹೇಗೆ ಅಪ್ರಸ್ತುತವಾಗಿದೆ ಎಂದು ಅಟಾರ್ನಿ ಜನರಲ್ (AG) ಆರ್. ವೆಂಕಟರಮಣಿ ನ್ಯಾಯಾಲಯದಲ್ಲಿ ವಿವರಿಸುತ್ತಿದ್ದರು. ಈ ವೇಳೆ, ಪೀಠದ ಭಾಗವಾಗಿದ್ದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, “LPG ಉದ್ಯಮಗಳಿಗೆ ಗಣನೀಯ ಹೊಡೆತ ನೀಡಿದೆ’ ಎಂದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಎಜಿ, “ದೇಶದಲ್ಲಿ ಇಂದು ಅಡುಗೆ ಅನಿಲದ (LPG) ಕೊರತೆಯಿಲ್ಲ” ಎಂದು ಹೇಳಿದರು. ಅವರ ಹೇಳಿಕೆಯು ನ್ಯಾಯಾಲಯವನ್ನು ಹಾಸ್ಯಮಯಗೊಳಿಸಿತು.

ಎಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗರತ್ನ, ತಾವು ‘LPG’ ಎಂದರೆ ಉದಾರೀಕರಣ (Liberalisation), ಖಾಸಗೀಕರಣ (Privatisation) ಮತ್ತು ಜಾಗತೀಕರಣ (Globalisation) ಎಂಬುದನ್ನು ಉಲ್ಲೇಖಿಸಿದ್ದಾಗಿ ವಿವರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“1970ರ ದಶಕದ ನಂತರ ಈ ಮೂರೂ (LPG) ರಂಗಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನ್ಯಾಯಾಲಯವು ಈ ಬೆಳವಣಿಗೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. 1978ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪೀಠವು ನೀಡಿದ ಉದ್ಯಮದ ವ್ಯಾಖ್ಯಾನವನ್ನು ಮರುಪರಿಶೀಲಿಸಲು ಪ್ರಯತ್ನಿಸುತ್ತದೆ” ಎಂದು ಪೀಠವು ಹೇಳಿದೆ.

ತಮ್ಮ ವಾದವನ್ನು ಮುಂದಿಟ್ಟ ಎಜಿ, “ಸಮಾಜವಾದವು ರಾಜಕೀಯ ಮತ್ತು ಆರ್ಥಿಕತೆಯ ಪ್ರಮುಖ ಲಕ್ಷಣವಾಗಿದ್ದ 50 ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಉದ್ಯಮದ ವ್ಯಾಖ್ಯಾನವನ್ನು ನೀಡಿತ್ತು. 1990ರ ದಶಕದಿಂದ ಮಾರುಕಟ್ಟೆಗಳು ಗಣನೀಯವಾಗಿ ಮುಕ್ತವಾಗಿವೆ,” ಎಂದು ವಿವರಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...