ವಾಣಿಜ್ಯ ಎಲ್‌ಪಿಜಿ ಪೂರೈಕೆಯಲ್ಲಿನ ಅಡಚಣೆಯಿಂದಾಗಿ ಮುಂಬೈನಲ್ಲಿ ಸುಮಾರು 20 ರಷ್ಟು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಬಂದ್ ಆಗಿವೆ ಎಂದು ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘ AHAR ತಿಳಿಸಿದೆ.
ಅನಿಲ ಪೂರೈಕೆ ಪರಿಸ್ಥಿತಿ ಸುಧಾರಿಸದಿದ್ದರೆ ಮುಂದಿನ ಎರಡು ದಿನಗಳಲ್ಲಿ ನಗರದ ಶೇ.50ರಷ್ಟು ಹೋಟೆಲ್‌ಗಳು ಮುಚ್ಚುವ ಸಾಧ್ಯತೆಗಳಿವೆ ಎಂದು ಸಂಘ ಎಚ್ಚರಿಸಿದೆ. AHAR ಪ್ರಕಾರ, ಕಾರ್ಯನಿರ್ವಹಿಸುತ್ತಿರುವ ರೆಸ್ಟೋರೆಂಟ್‌ಗಳ ಸಂಖ್ಯೆಯು ಪ್ರಸ್ತುತ ಎಷ್ಟು ಎಲ್‌ಪಿಜಿ ದಾಸ್ತಾನು ಹೊಂದಿವೆ ಎಂಬುದರ ಆಧಾರದ ಮೇಲೆ ಅವಲಂಬಿತವಾಗಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಮುಂಬರುವ ದಿನಗಳಲ್ಲಿ ಮುಂಬೈನ ಅರ್ಧದಷ್ಟು ಹೋಟೆಲ್‌ಗಳು ಮುಚ್ಚುವ ಸಾಧ್ಯತೆಗಳಿವೆ ಎಂದು ಸಂಘ ಹೇಳಿದೆ.
ಇದನ್ನು ಓದಿದ್ದೀರಾ? ಮಹಿಳಾ ದಿನಾಚರಣೆ ವಿಶೇಷ: ಕಳೆದೆರಡು ದಶಕಗಳಲ್ಲಿ ಕ್ರೀಡಾಂಗಣವನ್ನಾಳಿದ 10 ಭಾರತೀಯ ಮಹಿಳೆಯರು
ಹೋಟೆಲ್‌ಗಳನ್ನು ಸಾಮೂಹಿಕವಾಗಿ ಮುಚ್ಚುವ ಬಗ್ಗೆ ಸಂಘವು ಯಾವುದೇ ಅಧಿಕೃತ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು AHAR ಸ್ಪಷ್ಟಪಡಿಸಿದೆ. ರೆಸ್ಟೋರೆಂಟ್‌ಗಳನ್ನು ತೆರೆದಿಡುವ ಅಥವಾ ತಾತ್ಕಾಲಿಕವಾಗಿ ಮುಚ್ಚುವ ನಿರ್ಧಾರವನ್ನು ವೈಯಕ್ತಿಕವಾಗಿ ಹೋಟೆಲ್ ಮಾಲೀಕರು ಹಾಗೂ ಆ ಸಂಸ್ಥೆಗಳಲ್ಲಿ ಅನಿಲ ಪೂರೈಕೆಯ ಲಭ್ಯತೆಯ ಮೇಲೆ ಆಧರಿಸಿರುತ್ತದೆ.
ಅನಿಲ ಅಲಭ್ಯತೆಯ ಕುರಿತಾದ ಮಾಹಿತಿಯಿಂದಾಗಿ ಹಲವಾರು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಈಗಾಗಲೇ ಮೆನು ಐಟಂಗಳನ್ನು ಕಡಿತಗೊಳಿಸಲು ಅಥವಾ ಕಾರ್ಯಾಚರಣೆಯನ್ನು ಸೀಮಿತಗೊಳಿಸಲು ನಿರ್ಧರಿಸಿವೆ ಎಂದು ತಿಳಿದುಬಂದಿವೆ.
ಇರಾನ್-ಇಸ್ರೇಲ್-ಅಮೆರಿಕ ಯುದ್ಧ ಮತ್ತು ಮಧ್ಯಪ್ರಾಚ್ಯದ ಪ್ರಮುಖ ಇಂಧನ ಸಾಗಣೆ ಮಾರ್ಗಗಳಲ್ಲಿ ಉಂಟಾದ ಅಡಚಣೆಯಿಂದಾಗಿ ಕಳೆದ ಶನಿವಾರವಷ್ಟೇ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗಿತ್ತು. ಗೃಹಬಳಕೆಯ ಅಡುಗೆ ಅನಿಲದ ದರವನ್ನು 60 ರೂ. ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು 115 ರೂ. ಏರಿಕೆ ಮಾಡಲಾಗಿತ್ತು. ಇದೀಗ, ಎಲ್‌ಪಿಜಿ ಕೊರತೆ ಎದುರಾಗಿದೆ.





