ಮಧ್ಯಪ್ರದೇಶ | ಸರ್ಕಾರಿ ಉದ್ಯೋಗಕ್ಕಾಗಿ ಸಾಲುಗಟ್ಟಿ ನಿಂತಿದ್ದಾರೆ ಲಕ್ಷಾಂತರ ವೈದ್ಯ, ಎಂಜಿನಿಯರ್‌, ಎಂಬಿಎ ಪದವೀಧರರು

Date:

ಮಧ್ಯಪ್ರದೇಶದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಸುಮಾರು 25 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ, 4,811 ಎಂಬಿಬಿಎಸ್ ವೈದ್ಯಕೀಯ, 86,000 ಎಂಜಿನಿಯರ್‌ ಹಾಗೂ 18,800 ಎಂಬಿಎ ಪದವೀಧರರು ಸೇರಿದ್ದಾರೆ. ಆದರೆ, ಅಧಿಕೃತ ದಾಖಲೆಗಳಲ್ಲಿ ಅವರನ್ನು ನಿರುದ್ಯೋಗಿಗಳು ಎಂದು ಕರೆಯಲಾಗಿಲ್ಲ. ಬದಲಾಗಿ, ‘ಯುವ ಆಕಾಂಕ್ಷಿಗಳು’ ಅಥವಾ ಮಹತ್ವಾಕಾಂಕ್ಷೆಯುಳ್ಳ ಯುವಜನರು’ ಎಂದು ಕರೆಯಲಾಗುತ್ತಿದೆ.

ಪ್ರಸ್ತುತ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಕಾಂಗ್ರೆಸ್‌ ಶಾಸಕ ಮತ್ತು ಮಾಜಿ ಗೃಹ ಸಚಿವ ಬಾಲಾ ಬಚ್ಚನ್ ಅವರು ರೋಜ್‌ಗಾರ್‌ ಪೋರ್ಟಲ್‌ನಲ್ಲಿ ಮನರೇಗಾ ಮತ್ತು ಸ್ವಯಂ ಉದ್ಯೋಗಕ್ಕಾಗಿ ನೋಂದಾಯಿಸಿಕೊಂಡಿರುವ 10ನೇ ತರಗತಿ ಪಾಸಾದವರಿಂದ ಸ್ನಾತಕೋತ್ತರ ಪದವೀಧರರವರೆಗಿನ ಉದ್ಯೋಗಾಕಾಂಕ್ಷಿ ಯುವಜನರ ವಿವರಗಳನ್ನು ಕೇಳಿದ್ದರು. ಅವರ ಪ್ರಶ್ನೆಗೆ ಆಡಳಿತಾರೂಢ ಬಿಜೆಪಿ ಸರ್ಕಾರ ಉತ್ತರ ನೀಡಿದೆ.

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಖಾತೆಯ ಸಚಿವ ಗೌತಮ್ ಟೆಟ್ವಾಲ್ ಅವರು ನೀಡಿದ ಉತ್ತರದಲ್ಲಿ, “2ರ ಜೂನ್ 30ವರೆಗೆ ‘ಮಧ್ಯಪ್ರದೇಶ ರೋಜ್‌ಗರ್ ಪೋರ್ಟಲ್‌’ನಲ್ಲಿ 25,68,321 ಅರ್ಜಿದಾರರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ, 8 ಲಕ್ಷದಷ್ಟು ಮಂದಿ ಪದವೀಧರರಾಗಿದ್ದಾರೆ. ಅಲ್ಲದೆ, ಸ್ನಾತಕೋತ್ತರ ಪದವೀಧರರ (ಎಂಬಿಬಿಎಸ್‌, ಎಂಜಿನಿಯರ್ ಹಾಗೂ ಎಂಬಿಎ) ಸಂಖ್ಯೆ 2.38 ಇದೆ” ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಉದ್ಯೋಗಾಕಾಂಕ್ಷಿಗಳಲ್ಲಿ ಲಿಂಗವಾರು ವಿಂಗಡಣೆಯು ಬಹುತೇಕ ಸಮಾನವಾಗಿದೆ: 13.91 ಲಕ್ಷ ಯುವಕರು ಮತ್ತು 11.76 ಲಕ್ಷ ಯುವತಿಯರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಆದರೆ, ಜಾತಿವಾರು ನೋಡಿದಾಗ, ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದವರ ಸಂಖ್ಯೆ ಅಧಿಕವಾಗಿದೆ. ನೋಂದಾಯಿತ 25 ಲಕ್ಷಕ್ಕೂ ಹೆಚ್ಚು ಜನರಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಒಬಿಸಿ ವರ್ಗಕ್ಕೆ ಸೇರಿದವರಾಗಿದ್ದಾರೆ.

ಆದರೆ, ಸರ್ಕಾರವು ಇವರನ್ನು ನಿರುದ್ಯೋಗಗಳಲ್ಲ. ಕೇವಲ ಆಕಾಂಕ್ಷಿಗಳು ಎಂದು ವಿವರಣೆ ನೀಡಿದೆ. ಅದನ್ನು ಸಮರ್ಥಿಸಿಕೊಂಡಿರುವ ಸಚಿವರು, “ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವ ವ್ಯಕ್ತಿಯು ಈಗಾಗಲೇ ಉದ್ಯೋಗವನ್ನು ಹೊಂದಿರಬಹುದು. ಆದಾಗ್ಯೂ, ಅವರು ಇನ್ನೂ ಒಳ್ಳೆಯ ಕೆಲಸವನ್ನು ಹುಡುಕುತ್ತಿರಬಹುದು. ಆದ್ದರಿಂದ, ಅವರನ್ನು ನಿರುದ್ಯೋಗಿಗಳು ಎನ್ನಲು ಸಾಧ್ಯವಿಲ್ಲ” ಎಂದಿದ್ದಾರೆ.

ಈ ಲೇಖನ ಓದಿದ್ದೀರಾ?: ಶೇ. 50 ಸುಂಕ ವಿಧಿಸಿದ ಡೊನಾಲ್ಡ್‌ ಟ್ರಂಪ್‌: ಭಾರತದ ಮೇಲಾಗುವ ಪರಿಣಾಮವೇನು?

ಸರ್ಕಾರದ ನಿರುದ್ಯೋಗ ವರದಿ ಪ್ರಕಾರ, ಮಧ್ಯಪ್ರದೇಶದಲ್ಲಿ 2018ರಲ್ಲಿ 26.82 ಲಕ್ಷ ನಿರುದ್ಯೋಗಿಗಳಿದ್ದರು. ಈ ಸಂಖ್ಯೆಯು 2023ರಲ್ಲಿ 33.13 ಲಕ್ಷಕ್ಕೆ ಏರಿತು. 2025ರ ಜೂನ್ ವೇಳೆಗೆ 25.68 ಲಕ್ಷಕ್ಕೆ ಇಳಿಯಿತು. ಇನ್ನು, 2018-2025ರ ನಡುವೆ ರೋಜ್‌ಗಾರ್ ಪೋರ್ಟಲ್‌ನಲ್ಲಿ 62.75 ಲಕ್ಷ ಯುವಜನರು ನೋಂದಾಯಿಸಿಕೊಂಡಿದ್ದಾರೆ. ಪ್ರತಿ ವರ್ಷ ಲಕ್ಷಕ್ಕೂ ಹೆಚ್ಚು ಮಂದಿ ಈ ಗುಂಪನ್ನು ಸೇರುತ್ತಿದ್ದಾರೆ.

ಈ ಬೃಹತ್ ಸಂಖ್ಯೆಯ ಆಕಾಂಕ್ಷಿಗಳ ಪೈಕಿ ಸರ್ಕಾರವು ಕೇವಲ 52,000 ಯುವಜನರಿಗೆ ಮಾತ್ರ ಕೆಲಸದ ಆಫರ್ ಲೆಟರ್‌ಗಳನ್ನು ನೀಡಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...