ಮಹಾರಾಷ್ಟ್ರದಲ್ಲಿ 60 ಲಕ್ಷ ರೂ. ಮೌಲ್ಯದ 28 ಟನ್ ಗೋಮಾಂಸ ವಶ: ರಫ್ತು ಜಾಲದ ಹಿಂದೆ ನಿತಿನ್ ಗಡ್ಕರಿ ಪುತ್ರನ ನಂಟು?

Date:

ಗೋಹತ್ಯೆ ನಿಷೇಧದ ಕಟ್ಟುನಿಟ್ಟಿನ ಕಾನೂನುಗಳ ನಡುವೆಯೂ ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದ ಗೋಮಾಂಸ ಸಾಗಾಟ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಅಕ್ರಮ ರಫ್ತು ಜಾಲದ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪುತ್ರನ ಕಂಪನಿಯ ಕೈವಾಡವಿದೆ ಎಂದು ‘ಕ್ಯಾರವಾನ್‘ ವರದಿ ಮಾಡಿದೆ.

ಹೈದರಾಬಾದ್‌ನಿಂದ ಮುಂಬೈಗೆ ಸಾಗಿಸುತ್ತಿದ್ದ ಬರೋಬ್ಬರಿ 28 ಟನ್ (ಅಂದಾಜು 60 ಲಕ್ಷ ರೂ. ಮೌಲ್ಯದ) ಗೋಮಾಂಸವನ್ನು ಲೊನಾವಾಲಾ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

​2022ರ ಮಾರ್ಚ್ 10ರಂದು ಮುಂಜಾನೆ 3.30ರ ಸುಮಾರಿಗೆ ಬಂದ ಅನಾಮಧೇಯ ಕರೆಯ ಮೇರೆಗೆ, ಸಿನ್ಹಗಡ್ ಕಾಲೇಜು ಬಳಿ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ‘NL 01 AB 5853’ ನೋಂದಣಿಯ ಟ್ರಕ್ ಅನ್ನು ಅಡ್ಡಗಟ್ಟಿದ ಪೊಲೀಸರು, ಚಾಲಕ ಮಾಗ್ನು ಅಶ್ರಫಿ ಪಾಸ್ವಾನ್ (35) ಮತ್ತು ಕ್ಲೀನರ್ ಶುಭಂ ಶರ್ಮಾ (25) ಎಂಬುವವರನ್ನು ಬಂಧಿಸಿದ್ದಾರೆ. ವಾಹನದಲ್ಲಿ 20 ಕೆ.ಜಿ.ಯ 1,400 ಕಾರ್ಟನ್‌ಗಳಲ್ಲಿ ಸಂಸ್ಕರಿಸಿದ ಗೋಮಾಂಸವಿತ್ತು. ಆದರೆ, ಸಾಗಾಟಕ್ಕೆ ಯಾವುದೇ ಅಧಿಕೃತ ದಾಖಲೆಗಳಿರಲಿಲ್ಲ. ಕೇವಲ ‘ರೇಹಾನ್ ಅಹ್ಮದ್ ಖುರೇಷಿ’ ಎಂಬಾತನ ಸೂಚನೆ ಮೇರೆಗೆ ಸಾಗಿಸುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಅಮೆರಿಕದ ಇಬ್ಬಗೆ ಅಣ್ವಸ್ತ್ರ ರಾಜಕಾರಣ: ಇರಾನ್ ಬಗ್ಗೆ ಆತಂಕ, ಪಾಕಿಸ್ತಾನದ ಕುರಿತು ಮೌನ!

​ಪ್ರಕರಣದ ಬೆನ್ನಲ್ಲೇ, ಮುಂಬೈ ಮೂಲದ ‘ರೆಂಬಲ್ ಆಗ್ರೋ ಅಂಡ್ ಫುಡ್ಸ್’ ಕಂಪನಿಯು, ಇದು ಹಸುವಿನ ಮಾಂಸವಲ್ಲ, ವಿಯೆಟ್ನಾಂಗೆ ರಫ್ತು ಮಾಡಲು ಉತ್ತರ ಪ್ರದೇಶದ ಅಲಿಗಢದಲ್ಲಿ ಖರೀದಿಸಿದ ಅಧಿಕೃತ ಎಮ್ಮೆ ಮಾಂಸ ಎಂದು ಹೇಳಿ ಪುಣೆಯ ವಾಡ್ಗಾಂವ್ ಮಾವಲ್ ನ್ಯಾಯಾಲಯದ ಮೊರೆಹೋಗಿತ್ತು. ಆದರೆ, ಕಂಪನಿ ಒದಗಿಸಿದ ದಾಖಲೆಗಳಲ್ಲಿನ ಗೊಂದಲ, ಹೈದರಾಬಾದ್‌ನ ಪಶುಸಂಗೋಪನಾ ಇಲಾಖೆಯ ಅನುಮತಿ ಇಲ್ಲದಿರುವುದು ಮತ್ತು ಇ-ವೇ ಬಿಲ್ ಅನ್ನು ನಾಗ್ಪುರ ಮೂಲದ ‘ಚೌಧರಿ ಎಂಟರ್‌ಪ್ರೈಸಸ್’ ಸೃಷ್ಟಿಸಿರುವುದನ್ನು ಗಮನಿಸಿದ ನ್ಯಾಯಾಧೀಶರು, ಮಾಂಸವು ಎಮ್ಮೆಯದ್ದೇ ಎಂಬುದಕ್ಕೆ ಪೂರಕ ದಾಖಲೆಗಳಿಲ್ಲದ ಕಾರಣ ಅದನ್ನು ಕೋಲ್ಡ್ ಸ್ಟೋರೇಜ್‌ನಲ್ಲಿಡಲು ಆದೇಶಿಸಿದ್ದಾರೆ.

​ಪ್ರಮುಖ ವಿಷಯವೇನಂದರೆ, ಈ ಗೋಮಾಂಸ ರಫ್ತು ಜಾಲವು ನಿತಿನ್ ಗಡ್ಕರಿ ಅವರ ಪುತ್ರ ನಿಖಿಲ್ ಗಡ್ಕರಿ ಅವರಿಗೆ ಸಂಬಂಧಿಸಿದ ‘ಸಿಯಾನ್ ಆಗ್ರೋ’ (Cian Agro) ಹಾಗೂ ರೆಂಬಲ್ ಕಂಪನಿಗಳೊಂದಿಗೆ ನೇರ ನಂಟು ಹೊಂದಿದೆ ಎಂದು ಕ್ಯಾರವಾನ್ ವರದಿ ತಿಳಿಸಿದೆ.

ಈ ಪ್ರಕರಣದಲ್ಲಿ ಪ್ರಮುಖವಾಗಿದ್ದ ರೆಂಬಲ್ ಆಗ್ರೋ ಕಂಪನಿಯು ಈಗ ವೆನಾಡ್ ಫುಡ್ ಇಂಡಸ್ಟ್ರೀಸ್ ಎಂಬ ಹೆಸರಿನಿಂದ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕುಟುಂಬದ ವ್ಯವಹಾರ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕವಿದೆ ಎಂದು ದಾಖಲೆಗಳು ಸೂಚಿಸುತ್ತವೆ.

ನಿಖಿಲ್ ಗಡ್ಕರಿ ನಿರ್ವಹಿಸುವ ಸಿಯಾನ್ ಆಗ್ರೋ ಸಂಸ್ಥೆಯೊಂದಿಗೆ ರೆಂಬಲ್ ಆರ್ಥಿಕ ಸಂಬಂಧ ಹೊಂದಿದೆ ಎಂದು ತಿಳಿದು ಬಂದಿದೆ. ರೆಂಬಲ್ ನಿರ್ದೇಶಕರು ಮತ್ತು ಷೇರುದಾರರಿಗೆ ಗಡ್ಕರಿ ಸಂಬಂಧಿತ ಸಂಸ್ಥೆಗಳು ಹಣಕಾಸು ನೆರವು ಒದಗಿಸಿದ್ದರು. ಗಡ್ಕರಿಯವರ ಪತ್ನಿ ಕಾಂಚನ್ ಅಧ್ಯಕ್ಷತೆಯಲ್ಲಿರುವ ಸಮೃದ್ಧಿ ಸಹಕಾರಿ ಬ್ಯಾಂಕಿನಿಂದಲೂ ರೆಂಬಲ್ ಸಾಲ ಪಡೆದಿದೆ. ರೆಂಬಲ್‌ನ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ಕುಮಾರ್ ಪಿಳ್ಳೈ ಹಿಂದೆ ಗಡ್ಕರಿ ಸಂಸ್ಥೆಯೊಂದನ್ನು ಅದೇ ವಿಳಾಸದಲ್ಲಿ ನಿರ್ವಹಿಸಿದ್ದವರಾಗಿದ್ದಾರೆ ಎಂದು ಕ್ಯಾರವಾನ್ ವರದಿ ತಿಳಿಸಿದೆ.

ಗೋರಕ್ಷಣೆಯ ಕಾಯ್ದೆಗಳಿದ್ದರೂ ಇಂತಹ ದೈತ್ಯ ಸಂಸ್ಥೆಗಳು ಲಾಭಕೋರತನಕ್ಕೆ ಇಳಿದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...