ಚಿನ್ನದ ಅಂಗಡಿಯಲ್ಲಿ ಕೇವಲ 20 ರೂ.ಗೆ ಮಂಗಳಸೂತ್ರ ಪಡೆದ ದಂಪತಿ; ಹೇಗೆ?

Date:

3,000 ರೂ. ಬೆಲೆ ಬಾಳುವ ಮಂಗಳಸೂತ್ರವನ್ನು ಕೇವಲ 20 ರೂ.ಗೆ ವೃದ್ಧ ದಂಪತಿಗಳು ಖರೀದಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ದಂಪತಿಗಳಿಗೆ ಕೇವಲ 20 ರೂ.ಗೆ ತಾಳಿ ಮಾರಾಟ ಮಾಡಿದ ಅಂಗಡಿ ಮಾಲೀಕನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

93 ವರ್ಷದ ವೃದ್ಧಿ ದಂಪತಿಗಳು ತಾಳಿ ಖರೀದಿಗಾಗಿ ಚಿನ್ನದ ಅಂಗಡಿಗೆ ಬಂದಾಗ, ಗೋಪಿಕಾ ಜ್ಯುವೆಲ್ಲರ್ಸ್‌ನ ಮಾಲೀಕ ನಿಲೇಶ್ ಖಿವಂಶರ ಅವರು ತಾಳಿಯನ್ನು ಉಡುಗೊರೆಯಾಗಿ ದಂಪತಿಗಳಿಗೆ ನೀಡಿದ್ದಾರೆ. ಆದರೆ, ದಂಪತಿಗಳು ಉಚಿತವಾಗಿ ತಾಳಿ ಪಡೆಯಲು ನಿರಾಕಿಸಿದ ಕಾರಣ, 20 ರೂ. ಪಡೆದು ಮಂಗಳಸೂತ್ರವನ್ನು ಕೊಟ್ಟಿದ್ದಾರೆ.

ದಂಪತಿಗಳಿಗೆ 20 ರೂ.ಗೆ ತಾಳಿಯನ್ನು ಮಾರಾಟ ಮಾಡಿದ ಬಗ್ಗೆ ವಿವರಿಸಿರುವ ಅಂಗಡಿ ಮಾಲೀಕ ನಿಲೇಶ್ ಖಿವಂಶರ, “ಅವರು (ವೃದ್ಧ ದಂಪತಿ) ಸ್ವಾಭಿಮಾನಿ ಜನರು. ಉಚಿತವಾಗಿ ಏನನ್ನೂ ಪಡೆಯಲು ಬಯಸಲಿಲ್ಲ. ಹಣ ಪಾವತಿ ಮಾಡುವುದಾಗಿ ಹಠ ಹಿಡಿದಿದ್ದರು” ಎಂದು ಹೇಳಿವುದಾಗಿ ‘ಎಎನ್‌ಐ’ ವರದಿ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ದಂಪತಿಗಳು ಆಭರಣಗಳನ್ನು ಹುಡುಕುತ್ತಾ ಹಲವು ಅಂಗಡಿಗಳನ್ನು ಸುತ್ತಾಡಿ ನಮ್ಮ ಅಂಗಡಿಗೆ ಬಂದರು. ಅವರು ಹಲವಾರು ಆಭರಣಗಳನ್ನು ನೋಡಿ, ಖರೀದಿಸದೆ ವಾಪಸ್ ಹೊರಟರು. ಅವರು ತಮ್ಮ ಪತ್ನಿಗೆ ಮಂಗಳಸೂತ್ರ ಖರೀದಿಸಲು ಹುಟುಕುತ್ತಿರುವುದು ತಿಳಿದು, ನಾವು ಅವರಿಗೆ 3,000 ರೂ. ಮೌಲ್ಯದ ಚಿನ್ನ ಲೇಪಿತ ತಾಳಿ ಸರವನ್ನು ಉಡುಗೊರೆಯಾಗಿ ಕೊಟ್ಟೆವು. ಆದರೆ, ಅವರು ಉಡುಗೊರೆಯಾಗಿ ಪಡೆಯಲು ನಿರಾಕರಿಸಿದರು, ಹಣ ಪಾವತಿ ಮಾಡುವುದಾಗಿ ಹೇಳಿದರು” ಎಂದು ತಿಳಿಸಿದ್ದಾರೆ.

“ವೃದ್ಧ ವ್ಯಕ್ತಿ ಮೊದಲು ನೋಟು-ನಾಣ್ಯಗಳನ್ನು ಒಳಗೊಂಡ 1,100 ರೂ. ಕೊಟ್ಟರು. ಬಳಿಕ, ವೃದ್ಧ ಮಹಿಳೆ ತಮ್ಮ ಚೀಲದಿಂದ ರೂ. 10 ಮತ್ತು ರೂ. 20 ನೋಟುಗಳನ್ನು ತೆಗೆದರು. ನಾವು ಹಣ ಪಾವತಿಸುವುದು ಬೇಡವೆಂದು ಹೇಳಿದೆವು. ಆದರೆ, ಅವರು ಹಣ ಪಾವತಿಲು ಹಠ ಹಿಡಿದರು. ಕೊನೆಗೆ, ಪತಿ ಮತ್ತು ಪತ್ನಿ ಇಬ್ಬರಿಂದಲೂ ತಲಾ 10 ರೂ.ಗಳನ್ನು ಆಶೀರ್ವಾದವಾಗಿ ಸ್ವೀಕರಿಸಿದೆ. ಅವರ ಸ್ವಾಭಿಮಾನ ಮತ್ತು ಬದುಕಿನ ಉತ್ಸಾಹವು ನಮ್ಮನ್ನು ಉತ್ಸುಕಗೊಳಿಸಿದೆ” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...