ತಾರತಮ್ಯ ನಿಷೇಧ; ಮಾನವೀಯತೆಯೇ ಧರ್ಮ: ನಿರ್ಣಯ ಅಂಗೀಕರಿಸಿದ ಮಹಾರಾಷ್ಟ್ರದ ‘ಜಾತಿ ಮುಕ್ತ’ ಗ್ರಾಮ!

Date:

ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಸೌಂದಲ ಗ್ರಾಮವು ತನ್ನನ್ನು ಜಾತಿ ಮುಕ್ತ ಗ್ರಾಮ ಎಂದು ಘೋಷಿಸಿಕೊಂಡಿದೆ. ಗ್ರಾಮದಲ್ಲಿ ಜಾತಿ ಆಧಾರಿತ ತಾರತಮ್ಯ ಅಥವಾ ಜನರನ್ನು ಜಾತಿ ಆಧಾರದಲ್ಲಿ ಗುರುತಿಸುವುದು ಇದೀಗ ಈ ಗ್ರಾಮದಲ್ಲಿ ನಿಷೇಧವಾಗಿದೆ. ಸಂವಿಧಾನ ಮತ್ತು ಅದರ ಪೀಠಿಕೆಯನ್ನು ನೆನಪಿಸಿಕೊಂಡು ಇತ್ತೀಚೆಗೆ ನಡೆದ ಸೌಂದಲ ಗ್ರಾಮಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ.

“ಇಂದಿನಿಂದ, ಸೌಂದಲ ಗ್ರಾಮದಲ್ಲಿ ಯಾರೂ ಜಾತಿಯನ್ನು ಅನುಸರಿಸುವುದಿಲ್ಲ ಅಥವಾ ಯಾವುದೇ ರೀತಿಯ ಜಾತಿ ಪದ್ಧತಿಗಳಲ್ಲಿ ತೊಡಗುವುದಿಲ್ಲ. ನಾವು ಮಾನವೀಯತೆಯನ್ನು ಧರ್ಮವಾಗಿ ಅನುಸರಿಸುತ್ತೇವೆ. ಗ್ರಾಮಸ್ಥರು ಅನುಸರಿಸಬೇಕಾದ ಏಕೈಕ ಧರ್ಮ ಮಾನವೀಯತೆ” ಎಂದು ನಿರ್ಣಯದಲ್ಲಿ ಬರೆಯಲಾಗಿದೆ.

ಇದನ್ನು ಓದಿದ್ದೀರಾ? ಸಾಮಾಜಿಕ ಬಹಿಷ್ಕಾರ ಹಾಕಿದ್ರೆ ಕಂಬಿ ಎಣಿಸೋದು ಪಕ್ಕಾ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ನಿರ್ಣಯವನ್ನು ಸರಪಂಚ್ ಶರದ್ ಅರ್ಗಡೆ ಪ್ರಸ್ತಾಪಿಸಿದ್ದು, ಗ್ರಾಮದ ನಿವಾಸಿ ಬಾಬಾಸಾಹೇಬ್ ಭೋಡಕ್ ಅನುಮೋದಿಸಿದರು. ಹಾಗೆಯೇ ಜಾತಿ ಮುಕ್ತ ಸಮಾಜವನ್ನು ಸ್ಥಾಪಿಸಲು ಬಿ.ಆರ್. ಅಂಬೇಡ್ಕರ್, ಜ್ಯೋತಿಭಾ ಫುಲೆ, ಶಾಹು ಮಹಾರಾಜ್, ಛತ್ರಪತಿ ಶಿವಾನಿ ಮಹಾರಾಜ್ ಮತ್ತು ಮಹಾತ್ಮ ಗಾಂಧಿ ಅವರಿಂದ ಈ ಗ್ರಾಮ ಸ್ಫೂರ್ತಿ ಪಡೆದಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

“ನನ್ನ ಜಾತಿ ಮಾನವೀಯತೆ. ಇನ್ನು ಮುಂದೆ ಸರ್ಕಾರ ಮತ್ತು ಸಮುದಾಯ ಸೇವೆಗಳು ಎಲ್ಲಾ ಜನರಿಗೆ ಮುಕ್ತವಾಗಿರುತ್ತವೆ. ಜಾತಿ ಆಧಾರದಲ್ಲಿ ತಾರತಮ್ಯ ಮಾಡುವಂತಿಲ್ಲ. ಶಾಲೆಗಳು, ಸಮುದಾಯ ಭವನ, ದೇವಾಲಯಗಳು, ಬಾವಿ ಮತ್ತು ಸ್ಮಶಾನ ಎಲ್ಲರಿಗೂ ಮುಕ್ತವಾಗಿರುತ್ತದೆ. ಸಮಾಜವನ್ನು ವಿಭಜಿಸುವ ಯಾವುದೇ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಯಾರೂ ಬರೆಯುವಂತಿಲ್ಲ. ಯಾರಾದರೂ ಈ ನಿರ್ಣಯ ಪಾಲಿಸದಿದ್ದರೆ, ಗ್ರಾಮ ಪಂಚಾಯತ್ ಕ್ರಮ ಕೈಗೊಳ್ಳುತ್ತದೆ. ಇನ್ನು ಮುಂದೆ, ಈ ಗ್ರಾಮವು ಜಾತಿ ಮುಕ್ತವಾಗಿದೆ” ಎಂದು ನಿರ್ಣಯವನ್ನು ಗ್ರಾಮ ಸಭೆಯಲ್ಲಿ ಓದಲಾಗಿದೆ.

ನಿರ್ಣಯವನ್ನು ಬಹುಮತದ ಮೂಲಕ ಅಂಗೀಕರಿಸಲಾಗಿದ್ದು, ಸಂವಿಧಾನದ ನೀತಿಗಳನ್ನು ಉಲ್ಲಂಘಿಸಿದರೆ ದಂಡ ತೆರಬೇಕಾಗಿತ್ತದೆ ಎಂದು ನಿರ್ಣಯದಲ್ಲಿ ಬರೆಯಲಾಗಿದೆ. ಪ್ರತಿಯೊಬ್ಬರೂ ಹೊಸ ನಿಯಮವನ್ನು ಅನುಸರಿಸಬೇಕು ಎಂದು ಸರಪಂಚ್ ತಾಕೀತು ಮಾಡಿದ್ದಾರೆ. ಹಾಗೆಯೇ “ಈ ನಿಯಮಗಳು ಯಾವುದೇ ರೀತಿಯಲ್ಲಿ ಕಾನೂನು ಮತ್ತು ಸಂವಿಧಾನ ವಿರೋಧಿಯಾಗಿಲ್ಲ” ಎಂದೂ ಸರಪಂಚ್ ಶರದ್ ಅರ್ಗಡೆ ಹೇಳಿದ್ದಾರೆ.

ಇದನ್ನು ಓದಿದ್ದೀರಾ? ತೆಲಂಗಾಣ | ಅಂತರ್ಜಾತಿ ವಿವಾಹದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ

ಇತ್ತೀಚೆಗೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ಪಂಚೇವಾ ಗ್ರಾಮ ಪಂಚಾಯತ್ ಗ್ರಾಮದ ಯುವತಿಯರು ಪ್ರೇಮ ವಿವಾಹವಾದರೆ ಅಥವಾ ಮನೆ ತೊರೆದು ಹೋಗಿ ವಿವಾಹವಾದರೆ ಯುವತಿಯ ಕುಟುಂಬಕ್ಕೆ ಮತ್ತು ಅವರಿಗೆ ಬೆಂಬಲ ನೀಡುವವರಿಗೆ ಸಾಮಾಜಿಕ ಹಾಗೂ ಆರ್ಥಿಕ ಬಹಿಷ್ಕಾರ ಹಾಕಲಾಗುವುದು ಎಂದು ಘೋಷಿಸಿತ್ತು.

ಒಂದೇ ಗ್ರಾಮದ ಯುವಕ-ಯುವತಿಯರು ಪರಸ್ಪರ ವಿವಾಹವಾದರೆ ಅವರನ್ನು ಗ್ರಾಮದಿಂದ ಹೊರಹಾಕಲು ಮತ್ತು ಅವರ ಕುಟುಂಬಗಳಿಗೆ ಬಹಿಷ್ಕಾರ ಹಾಕಲು ಪಂಜಾಬ್‌ನ ಅಜ್ನಾಲಾ ಪ್ರದೇಶದ ಗ್ರಾಮ ನಿರ್ಣಯ ಅಂಗೀಕರಿಸಿತ್ತು. ಸಂವಿಧಾನ ವಿರೋಧಿ ನಿರ್ಣಯಗಳು ಸುದ್ದಿಯಾಗುತ್ತಿರುವ ನಡುವೆಯೇ ಸೌಂದಲ ಗ್ರಾಮವು ಅಸ್ಪೃಶ್ಯತೆಯನ್ನು ಪಾಲಿಸಲ್ಲ ಎಂದು ಸಕಾರಾತ್ಮಕ ನಿರ್ಣಯ ಕೈಗೊಂಡ ಗ್ರಾಮವಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...