ಪಾರ್ಟಿಗೆ ಕಡಿಮೆ ಮದ್ಯ ತಂದ ಎಂಬ ಕ್ಷುಲ್ಲಕ ಕಾರಣಕ್ಕೆ ತನ್ನ ಸ್ನೇಹಿತನನ್ನೇ ವ್ಯಕ್ತಿಯೋರ್ವ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಭಾನುವಾರ ರಾತ್ರಿ ಬಾಬಾ ಬುದ್ಧಜಿ ನಗರದಲ್ಲಿ ಈ ಘಟನೆ ನಡೆದಿದೆ ಎಂದು ಸೋಮವಾರ ಸಂಜೆ ಪಚ್ಪಾವೊಲಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಜೈಪುರ್-ಮುಂಬಯಿ ಎಕ್ಸ್‌ಪ್ರೆಸ್‌ನಲ್ಲಿ ನಡೆದ ಘಟನೆಗೆ ದ್ವೇಷ ರಾಜಕಾರಣವೇ ಕಾರಣ: ವೆಲ್ಫೇರ್ ಪಾರ್ಟಿ
ವೈಶಾಲಿ ನಗರದ ತಾಜ್ ನಗರದ ನಿವಾಸಿ ರಮೇಶ್ ಅಲಿಯಾಸ್ ವೈದ್ಯ ಮುಕುಂದರಾವ್ ಮಸ್ರಾಮ್ (40) ಅವರು ಕೊಲೆಯಾದ ವ್ಯಕ್ತಿ. ಸ್ನೇಹಿತ ಶಂಕರ್ ಶ್ರೀಪಾದ್ ಭೈಸಾರೆ (48) ಕೊಲೆ ಮಾಡಿದಾತ.
“ರಮೇಶ್ ಅಲಿಯಾಸ್ ವೈದ್ಯ ಮುಕುಂದರಾವ್ ಮಸ್ರಾಮ್‌ಗೆ ಶಂಕರ್ ಶ್ರೀಪಾದ್ ಭೈಸಾರೆ ಅಧಿಕ ಮೊತ್ತ ನೀಡಿ ಮದ್ಯ ತರಲು ಹೇಳಿದ್ದ. ಆದರೆ ಮಸ್ರಾಮ್ ನೀಡಿದ್ದಷ್ಟು ಹಣದ ಮದ್ಯ ತಂದಿಲ್ಲ. ಕಡಿಮೆ ಮದ್ಯ ತಂದಿದ್ದ. ಇದರಿಂದ ಕೋಪಗೊಂಡ ಭೈಸಾರೆ ತನ್ನ ಸ್ನೇಹಿತನನ್ನು ಥಳಿಸಿ ಕೊಂದಿದ್ದಾನೆ. ಇನ್ನಿಬ್ಬರು ಕೂಡಾ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಮೂವರನ್ನು ಬಂಧಿಸಲಾಗಿದೆ.





