‘ಮನರೇಗಾʼದಿಂದ ಗಾಂಧೀ ಹೆಸರು ಬಿಟ್ಟದ್ಯಾಕೆ? ʼಪೂಜ್ಯ ಬಾಪುʼವೆಂದರೆ ಗಾಂಧೀ ಬಾಪುವೋ, ಆಸಾರಾಮ ಬಾಪುವೋ?

Date:

ಮೋದಿಯವರು ದೇಶದ ಹೊರಗೆ ಹೋದಾಗ ಮಹಾತ್ಮಾ ಗಾಂಧೀಜಿ ಮತ್ತು ಬುದ್ಧನ ನಾಡಿನಿಂದ ಬಂದಿರುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ ದೇಶದ ಒಳಗೆ ಅವರ ನಡೆನುಡಿಗಳು ಈ ಮಾತುಗಳನ್ನು ಸಮರ್ಥಿಸುವಂತೆ ಇರುವುದಿಲ್ಲ.

ಮೋದಿ ಸರ್ಕಾರ ಮನರೇಗಾ ಯೋಜನೆಯ ಹೆಸರನ್ನು ʼಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್‌ ಖಾತ್ರಿ ಯೋಜನೆ(Pujya Bapu Gramin Rozgar Yojana)ʼ ಎಂದು ಬದಲಾಯಿಸಲು ಮಸೂದೆ ಅಂಗೀಕಾರ ಮಾಡಿದ್ದು, ಗಾಂಧೀಜಿಯವರನ್ನು ಗೌರವಿಸುವ ನಿಟ್ಟಿನಲ್ಲಿ ಮನರೇಗಾ ಹೆಸರನ್ನು ಬದಲಾವಣೆ ಮಾಡಲಾಗಿದೆ ಎಂದು ಹೇಳಿಕೊಂಡಿದೆ. ಆದರೆ ಕಾಂಗ್ರೆಸ್‌ ಮತ್ತಿತರೆ ವಿರೋಧ ಪಕ್ಷಗಳು ಈ ಹೆಸರು ಬದಲಾವಣೆಯ ಹಿಂದೆ ರಾಜಕೀಯ ದುರುದ್ದೇಶ ಇದೆಯೆಂದು ಆರೋಪಿಸಿವೆ.

ಮನರೇಗಾ ಹೆಸರಲ್ಲಿ ಸೇರಿರುವ ʼಪೂಜ್ಯ ಬಾಪೂʼ, ಗಾಂಧೀ ಬಾಪುವೇ, ಅಥವಾ ಮೋದಿ ಒಂದು ಕಾಲಕ್ಕೆ ಪರಮ ಭಕ್ತಿ ತೋರಿದ್ದ, ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ಜೈಲು ಸೇರಿದ ʼಆಸಾರಾಮ ಬಾಪುʼವೇ ಎಂಬುದು ಸ್ಪಷ್ಟವಾಗಬೇಕಿದೆ ಎಂಬುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಎಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ.

ಗುಜರಾತಿನ ಆಸಾರಾಮ ಬಾಪೂ ಅವರಲ್ಲಿ ಭಕ್ತಿಭಾವ ಇಟ್ಟುಕೊಂಡಿದ್ದವರು ಮೋದಿ. ಅವರ ಪರಮಾಪ್ತರು. ಮಹಾತ್ಮಾ ಗಾಂಧೀಜಿಯ ಹಂತಕ ಗೋಡ್ಸೆಯ ಕೃತ್ಯವನ್ನು ಸಮರ್ಥಿಸುವವರು ಆಳುವ ಪಕ್ಷದಲ್ಲಿ ಯಥೇಚ್ಛ ಸಂಖ್ಯೆಯಲ್ಲಿದ್ದಾರೆ. ಗಾಂಧೀ ವಿಚಾರಧಾರೆಯನ್ನು ಆರೆಸ್ಸೆಸ್ ಕಟುವಾಗಿ ಟೀಕಿಸುತ್ತಲೇ ಬಂದಿದೆ. ಮೋದಿಯವರು ದೇಶದ ಹೊರಗೆ ಹೋದಾಗ ಮಹಾತ್ಮಾ ಗಾಂಧೀಜಿ ಮತ್ತು ಬುದ್ಧನ ನಾಡಿನಿಂದ ಬಂದಿರುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ ದೇಶದ ಒಳಗೆ ಅವರ ನಡೆನುಡಿಗಳು ಈ ಮಾತುಗಳನ್ನು ಸಮರ್ಥಿಸುವಂತೆ ಇರುವುದಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಹಾತ್ಮ ಗಾಂಧಿ ಹೆಸರನ್ನು ತೆಗೆದುಹಾಕಿ ಗಾಂಧೀಜಿಯನ್ನು ಗ್ರಾಮಗಳಿಂದ ಅಳಿಸಿ ಹಾಕುವ ಕೆಟ್ಟ ಕೃತ್ಯವಿದು. ʼಪೂಜ್ಯ ಬಾಪುʼ ಎಂಬುದು ಮಹಾತ್ಮ ಗಾಂಧೀಜಿಯೋ ಅಥವಾ ಆಸಾರಾಮ್ ಬಾಪುವೋ ಎಂಬ ಮೀಮ್‌ಗಳು ಮತ್ತು ವ್ಯಂಗ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮೋದಿ ಸರ್ಕಾರ ʼಹೆಸರು ಬದಲಾವಣೆಗಳ ಮಾಸ್ಟರ್ʼ ಎಂಬ ಟೀಕೆಗಳೂ ಕಂಡುಬಂದಿವೆ.

“ರಾಜ್ಯದ ಗ್ರಾಮೀಣ ಭಾಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮನರೇಗಾ) ಅಡಿಯಲ್ಲಿ ದುಡಿಯುವ ಮಹಿಳಾ ಕಾರ್ಮಿಕರ ಮಕ್ಕಳ ಆರೈಕೆಗಾಗಿ, ಕರ್ನಾಟಕ ಸರ್ಕಾರ 2023ರಲ್ಲಿ ಕೂಸಿನ ಮನೆ ಯೋಜನೆಯನ್ನು ಜಾರಿಗೊಳಿತ್ತು. ಈ ಯೋಜನೆ ಕಾರ್ಮಿಕರ ಮಕ್ಕಳ ಆರೈಕೆದಾರರಿಗೆ(ಕೇರ್‌ ಟೇಕರ್‌ಗಳಿಗೆ) ನೀಡುತ್ತಿದ್ದ ಗೌರವಧನವನ್ನು ನಿಲ್ಲಿಸುವುದಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದೆ. ಈಗ ಹೆಸರು ಬದಲಾವಣೆ ಮಾಡುತ್ತಿದೆ. ಇರುವ ಕಾಯಿದೆಯನ್ನು ಮತ್ತಷ್ಟು ಬಲಪಡಿಸಿ, ಕಾರ್ಮಿಕರಿಗೆ ಸಮರ್ಪಕವಾದ ಕೆಲಸಗಳು ಮತ್ತು ವೇತನ ತಲುತ್ತಿದೆಯೋ ಎಂಬುದರ ಕುರಿತು ಗಮನಹರಿಸದ ಮೋದೀಜಿ ಹೆಸರು ಬದಲಾವಣೆಯ ಕುರಿತು ವ್ಯರ್ಥ ಚರ್ಚೆ ಮಾಡುತ್ತಿರುವುದು ಸಮಂಜಸವಲ್ಲ” ಎಂಬುದು ಗ್ರಾಮೀಣ ಕೂಲಿಕಾರರ ಅಭಿಪ್ರಾಯ.

“2020-21ರಲ್ಲಿ, 11.2 ಕೋಟಿ ಮಂದಿ ಈ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ 2024-25ರಲ್ಲಿ ಈ ಸಂಖ್ಯೆ 7.9 ಕೋಟಿಗೆ ಇಳಿಕೆಯಾಗಿದೆ. ಪ್ರತಿ ವರ್ಷ ಸುಮಾರು 1 ಕೋಟಿ ಜನರಿಗೆ ಉದ್ಯೋಗ ನೀಡದೆ ಮನರೇಗಾ ಕಾರ್ಮಿಕರನ್ನು ಕೆಲಸ ನಿರಾಕರಿಸಲಾಗಿದೆ. ಇಂತಹ ಷಡ್ಯಂತ್ರಗಳನ್ನು ಕೈಬಿಟ್ಟು ಕಾರ್ಮಿಕರಿಗೆ ಸಂಪೂರ್ಣ ಕೆಲಸ ಮತ್ತು ಹೆಚ್ಚಿನ ಬಜೆಟ್‌ ನೀಡುವ ಕಡೆ ಆಲೋಚಿಬೇಕಿದೆ” ಎಂದು ಗದಗ ಜಿಲ್ಲೆಯ ಮನರೇಗಾ ಕಾರ್ಮಿಕರು ಈ ದಿನ.ಕಾಮ್‌ಗೆ ತಿಳಿಸಿದರು.

ಹೋರಾಟಗಾರ್ತಿ, ಸಿಪಿಐಎಂ ಮುಖಂಡೆ ಕೆ ನೀಲಾ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಬಿಜೆಪಿಗರು ಹೆಸರು ಬದಲಾವಣೆ ಮಾಡುವುದರಲ್ಲಿ ನಿಸ್ಸೀಮರು. ಹೀಗೆ ಹೇಳಿಕೊಂಡೇ ಅವರು ಅಧಿಕಾರಕ್ಕೆ ಬರುತ್ತಾರೆ. ಈಗ ʼಪೂಜ್ಯ ಬಾಪುʼ ಎಂದು ಹೇಳುವುದರಲ್ಲಿಯೂ ಅವರ ಆರ್‌ಎಸ್‌ಎಸ್‌ ಅಜೆಂಡಾ ಇದೆ. ಮಹಾತ್ಮ ಅಂದರೆ ಅದರಲ್ಲಿ ಯಾವುದೇ ದೈವಿಕ ಶಕ್ತಿ, ಧಾರ್ಮಿಕತೆಯ ಭಾವ ಮೂಡುವುದಿಲ್ಲ. ಅದೇ ಪೂಜ್ಯ ಅಂದ್ರೆ ಪುಣ್ಯ, ಒಂದು ಧಾರ್ಮಿಕ ಸಂಸ್ಕೃತಿ, ದೈವಿಕ ಎನ್ನುವಂತಹ ಅರ್ಥ ಬರುತ್ತದೆ. ಇವುಗಳಿಂದ ಜನರನ್ನು ಯಾಮಾರಿಸುವುದಷ್ಟೇ ಇದರ ಹುನ್ನಾರ. ಆರ್‌ಎಸ್‌ಎಸ್‌ ಮತ್ತು ಬಿಜೆಪಿಗರಷ್ಟು ಸಂಸ್ಕೃತಿ ನಿಪುಣರು ಮತ್ತೊಬ್ಬರಿಲ್ಲ. ಅವರು ಒಂದೊಂದು ಶಬ್ದದಲ್ಲಿಯೂ ಧಾರ್ಮಿಕತೆಯನ್ನು ಹುಡುಕುತ್ತಾರೆ. ಮಹಾತ್ಮ ಅನ್ನುವುದರಲ್ಲಿ ಏನಿದೆ, ಪೂಜ್ಯ ಅಂದರೆ ದೇವರ ಮಟ್ಟಕ್ಕೆ ಏರಿಸುವುದು ಅಂತ ಹೇಳಿಕೊಂಡೇ ಷಡ್ಯಂತ್ರಗಳನ್ನು ನಡೆಸುತ್ತಾರೆ. ಇಂತಹ ಬದಲಾವಣೆಗಳಿಂದ ಜನರನ್ನು ಭಾವನಾತ್ಮಕವಾಗಿ ದಿಕ್ಕುತಪ್ಪಿಸುವ ಕೆಲಸ ಮಾಡುತ್ತ, ಇದರಿಂದ ಇಡೀ ಕಾಯಿದೆಯನ್ನೇ ಮುಳುಗಿಸುವ ಕುತಂತ್ರ ನಡೆಸುತ್ತಿದ್ದಾರೆ. ಇದರತ್ತ ತಿರುಗಿ ನೋಡಬಾರದು, ಪ್ರಶ್ನಿಸಬಾರದು ಎನ್ನುವುದಕ್ಕಾಗಿ 125 ದಿನಗಳ ಕೆಲಸ ನೀಡುವುದಾಗಿ ಹೇಳಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಗುತ್ತಿದೆ ಅಷ್ಟೇ” ಎಂದು ಹೇಳಿದರು.

“ಹೆಸರು ಬದಲಾವಣೆ ಮಾಡುವುದರಿಂದ ಗ್ರಾಮೀಣ ಜನರ ಬದುಕು ಸುಧಾರಿಸುವುದಿಲ್ಲ. 200 ದಿನಗಳ ಕೆಲಸ ಕೊಡಬೇಕು, 700 ರೂ. ಕೂಲಿ ಕೊಡಬೇಕು. ತಾಂತ್ರಿಕ ಯೋಜನೆಗಳನ್ನೆಲ್ಲ ವಾಪಸ್‌ ಪಡೆಯಬೇಕು. ಅಂತ ನಾವು ಈಗಾಗಲೇ ಬಹಳಷ್ಟು ಹೋರಾಟಗಳನ್ನು ಮಾಡಿದ್ದೇವೆ. ಆದರೆ ಇವರು ಅಳಿಯ ಅಲ್ಲ, ಮಗಳ ಗಂಡ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಒಂದು ಕಡೆ ಕೊಟ್ಟಂಗೆ ಮಾಡಿ ಇನ್ನೊಂದು ಕಡೆ ಮನರೇಗಾವನ್ನು ಕತ್ತು ಹಿಸುಕಿ ಕೊಲ್ಲುವ ಷಡ್ಯಂತ್ರವೇ ಹೊರತು ಬೇರೇನಿಲ್ಲ. ಒಟ್ಟಾರೆಯಾಗಿ ಮನರೇಗಾ ಯೋಜನೆಯ ಕತ್ತು ಹಿಸುಕುವುದಕ್ಕಾಗಿಯೇ ಬಿಜೆಪಿ ಸರ್ಕಾರ ಬಂದಿದೆ” ಎಂದು ಬಲವಾಗಿ ಖಂಡಿಸಿದರು.

“ಈಗಿರುವ ಸಮಸ್ಯೆಗಳಿಗೆ ಯಾವ ರೀತಿಯ ಪರಿಹಾರ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಆಲೋಚನೆ ಮಾಡಬೇಕೇ ಹೊರತು ಹೆಸರು ಬದಲಾಯಿಸಿ ಎಲ್ಲ ನಾ ಮಾಡಿದೆ ಎಂದು ಹೇಳಿಕೊಂಡು ತಿರುಗುವುದರಿಂದ ಯಾವುದೇ ಪ್ರಯೋಜನವಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯೋಜನೆಯ ಹೆಸರನ್ನು ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್‌ ಎಂಬುದಾಗಿ ಬದಲಾಯಿಸುವುದಲ್ಲದೆ 125 ದಿನಗಳ ಕೆಲಸ ನೀಡುವುದಾಗಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ, ʼMGNREGAವನ್ನು ಟೀಕಿಸಿದ್ದ ಮೋದಿ ಈಗ ಹೆಸರು ಬದಲಿಸಿ ಕ್ರೆಡಿಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆʼ ಎಂದು ಕಾಂಗ್ರೆಸ್ ಆರೋಪಿಸಿದೆ.

2005ರ ಆಗಸ್ಟ್ 25ರಂದು ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ ಸಂಸತ್ತು ಅಂಗೀಕರಿಸಿದ ಮೂಲ ಮಸೂದೆಯನ್ನು ʼರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆʼ ಎಂದು ಕರೆಯಲಾಗಿತ್ತು. ಆದರೆ ʼಮಹಾತ್ಮ ಗಾಂಧಿʼ ಎಂಬ ಪ್ರತ್ಯಯವನ್ನು 2009ರಲ್ಲಿ ಸೇರಿಸಿದ ತರುವಾಯ ಮನರೇಗಾ ಆಯಿತು. ಈಗ ಮೋದಿ ಸರ್ಕಾರ ಮಹಾತ್ಮಾ ಗಾಂಧೀ ಪ್ರತ್ಯಯವನ್ನು ತೆಗೆದು ಹಾಕಿದೆ.

ಪ್ರಮುಖ ಗ್ರಾಮೀಣ ಉದ್ಯೋಗ ಯೋಜನೆಯು ಪ್ರತಿ ಹಣಕಾಸು ವರ್ಷದಲ್ಲಿ ಕೌಶಲ್ಯರಹಿತ ದೈಹಿಕ ಕೆಲಸ ಮಾಡುವ ಗ್ರಾಮೀಣ ಕೂಲಿ ಕಾರ್ಮಿಕರ ಪ್ರತಿ ಕುಟುಂಬಕ್ಕೆ 100 ದಿನಗಳವರೆಗೆ ಉದ್ಯೋಗವನ್ನು ಖಾತರಿಪಡಿಸುತ್ತದೆ. ಈಗ ಇದನ್ನು 125 ದಿನಗಳಿಗೆ ಹೆಚ್ಚಿಸಲು ಸರ್ಕಾರ ಯೋಜಿಸಿದ್ದು, ತಿದ್ದುಪಡಿ ಮಾಡಿದ ಮಸೂದೆಯು ಸಮಿತಿಯ ಶಿಫಾರಸನ್ನು ಗಣನೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇದರಿಂದ ರಾಜ್ಯಗಳ ಆರ್ಥಿಕ ಸೂಚ್ಯಂಕಗಳ ಆಧಾರದ ಮೇಲೆ ಈ ಯೋಜನೆಯನ್ನು ಹೊರಗಿಡುವ ಷರತ್ತುಗಳನ್ನು ಹುಟ್ಟುಹಾಕುವ ಹುನ್ನಾರ ನಡೆಯುತ್ತಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.

“ಈ ಹಿಂದೆ ಮನರೇಗಾವನ್ನು ʼಗುಂಡಿ ಅಗೆದು ಗುಂಡಿ ತುಂಬಿಸುವ ಯೋಜನೆʼ ಎಂದು ವ್ಯಂಗ್ಯವಾಡಿದ್ದ ಮೋದಿ ಸರ್ಕಾರ, ವಾರ್ಷಿಕ ಗ್ಯಾರಂಟಿ ಉದ್ಯೋಗದ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸಿದೆ. ಜತೆಗೆ ʼಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್ ಯೋಜನೆʼ ಎಂದು ಮರುನಾಮಕರಣ ಮಾಡಿದೆ. ಇದರಿಂದ ಕಚೇರಿಗಳು, ಸ್ಟೇಷನರಿ, ಬೋರ್ಡ್‌ಗಳ ಬದಲಾವಣೆಗೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಇದು ಅನಾವಶ್ಯಕ ಖರ್ಚು-ವೆಚ್ಚದ ಕ್ರಮ” ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿಯೇ ಬರೋಬ್ಬರಿ 22.68 ಲಕ್ಷ ಕಾರ್ಮಿಕರನ್ನು ಮನರೇಗಾದಿಂದ ಕೈಬಿಡಲಾಗಿದೆ. ಮನರೇಗಾ ದಾಖಲೆಗಳಿಂದ ಅವರ ಹೆಸರುಗಳನ್ನು ಅಳಿಸಿಹಾಕಲಾಗಿದೆ ಎಂಬ ಆತಂಕಕಾರಿ ದತ್ತಾಂಶವನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ನೀಡಲಾಗಿದೆ. ಈ ಅಂಕಿಅಂಶಗಳು ಆಘಾತಕಾರಿಯಾಗಿವೆ.

ಇದನ್ನೂ ಓದಿದ್ದೀರಾ? ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ, ಪರ-ವಿರೋಧ ಚರ್ಚೆ: ಸಮಸ್ಯೆಗೆ ಪ್ರತ್ಯೇಕ ರಾಜ್ಯ ಪರಿಹಾರವೇ?

ಮನರೇಗಾ ಕಾರ್ಮಿಕರು ಈಗಾಗಲೇ ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ ಈ ಕಾಯಿದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಪ್ರತಿ ಬಜೆಟ್‌ನಲ್ಲಿಯೂ ಹೆಚ್ಚೆಚ್ಚು ಅನುದಾನವನ್ನು ಹಂಚಿಕೆ ಮಾಡಿ, ಗ್ರಾಮೀಣ ನಿರುದ್ಯೋಗವನ್ನು ನಿವಾರಿಸುವ ಪ್ರಯತ್ನ ಮಾಡಬೇಕೇ ಹೊರತು, ಹೆಸರು ಬದಲಾವಣೆಯಂತಹ ವ್ಯರ್ಥ ಕಸರತ್ತಿನಲ್ಲಿ ತೊಡಗಿ ಕಾರ್ಮಿಕರ ಅನ್ನ ಕಸಿದು ಅವರ ಮೂಗಿಗೆ ತುಪ್ಪ ಸವರುವ ಹುನ್ನಾರ ಸರಿಯಲ್ಲ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪುದುಚೆರಿ ಚುನಾವಣೆ | ‘ಇಂಡಿಯಾ’ ಗೊಂದಲ ನಿವಾರಣೆ: ಕಾಂಗ್ರೆಸ್ 16, ಡಿಎಂಕೆ 14 ಕ್ಷೇತ್ರಗಳಲ್ಲಿ ಸ್ಪರ್ಧೆ

ಪುದುಚೆರಿಯ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳ...

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...