ವಾಟ್ಸಾಪ್‌ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್‌’ ಸುರಕ್ಷತೆ ಕೇವಲ ನಾಟಕವೇ? ಮೆಟಾ ವಿರುದ್ಧ ಗಂಭೀರ ಆರೋಪ

Date:

ವಿಶ್ವದಾದ್ಯಂತ ಕೋಟ್ಯಂತರ ಜನರು ನಂಬಿ ಬಳಸುತ್ತಿರುವ ವಾಟ್ಸಾಪ್‌ನ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್’ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ವಾಟ್ಸಾಪ್‌ನಲ್ಲಿನ ಅತ್ಯಂತ ಖಾಸಗಿ ಸಂದೇಶಗಳನ್ನು ಮಾತೃಸಂಸ್ಥೆಯಾದ ಮೆಟಾ ಓದಬಲ್ಲದು ಎಂದು ಆರೋಪಿಸಿ ಅಂತಾರಾಷ್ಟ್ರೀಯ ಬಳಕೆದಾರರ ಗುಂಪೊಂದು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ತಂತ್ರಜ್ಞಾನ ವಲಯದಲ್ಲಿ ಸಂಚಲನ ಮೂಡಿಸಿದೆ.

ಜನವರಿ 23 ರಂದು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಮೆಕ್ಸಿಕೋ ಮೂಲದ ಅರ್ಜಿದಾರರು ಸಲ್ಲಿಸಿರುವ 51 ಪುಟಗಳ ಈ ದಾವೆಯಲ್ಲಿ, ವಾಟ್ಸಾಪ್‌ನ ಗೌಪ್ಯತಾ ವೈಶಿಷ್ಟ್ಯವು ಕೇವಲ ಒಂದು “ಶ್ಯಾಮ್” (Sham) ಅಥವಾ ನಾಟಕ ಎಂದು ಆರೋಪಿಸಲಾಗಿದೆ. ಮೆಟಾ ಸಂಸ್ಥೆಯ ಉದ್ಯೋಗಿಗಳು ಕೇವಲ ಒಂದು ‘ಟಾಸ್ಕ್’ (Task) ಮೂಲಕ ಎಂಜಿನಿಯರಿಂಗ್ ತಂಡಕ್ಕೆ ಮನವಿ ಸಲ್ಲಿಸಿ, ಯಾವುದೇ ಕಠಿಣ ಪರಿಶೀಲನೆಯಿಲ್ಲದೆ ಬಳಕೆದಾರರ ಸಂದೇಶಗಳನ್ನು ನೋಡಲು ಅನುಮತಿ ಪಡೆಯುತ್ತಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಬಳಕೆದಾರರ ‘ಯೂನಿಕ್ ಐಡಿ’ (Unique ID) ಬಳಸಿಕೊಂಡು ವಿಶೇಷ ವಿಜೆಟ್ ಮೂಲಕ ನೈಜ ಸಮಯದಲ್ಲಿ ಸಂದೇಶಗಳನ್ನು ವೀಕ್ಷಿಸಬಹುದು, ಅಷ್ಟೇ ಅಲ್ಲದೆ ಬಳಕೆದಾರರು ಡಿಲೀಟ್ ಮಾಡಿದ್ದಾರೆ ಎಂದು ಭಾವಿಸುವ ಸಂದೇಶಗಳನ್ನೂ ಸಹ ಸಂಸ್ಥೆಯು ಯಾವುದೇ ಸಮಯದ ಮಿತಿಯಿಲ್ಲದೆ ನೋಡಬಹುದಾಗಿದೆ ಎಂಬ ಗಂಭೀರ ಆರೋಪವನ್ನು ಅರ್ಜಿದಾರರು ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಗುಣಮಟ್ಟ ಕುರಿತು ಮಾತಾಡಲು ಮೋದೀಜಿಗೆ ನೈತಿಕ ಹಕ್ಕು ಇಲ್ಲವೇ ಇಲ್ಲ!

ಆದರೆ, ಈ ಎಲ್ಲ ಆರೋಪಗಳನ್ನು ಮೆಟಾ ಸಂಸ್ಥೆಯು “ಸಂಪೂರ್ಣ ಸುಳ್ಳು ಮತ್ತು ಅಸಂಬದ್ಧ” ಎಂದು ತಳ್ಳಿಹಾಕಿದೆ. ವಾಟ್ಸಾಪ್‌ನ ಎನ್‌ಕ್ರಿಪ್ಷನ್ ವ್ಯವಸ್ಥೆಯು ಸಂದೇಶಗಳನ್ನು ಕಳುಹಿಸಿದವರು ಮತ್ತು ಸ್ವೀಕರಿಸಿದವರು ಮಾತ್ರ ಓದಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸ್ವತಃ ವಾಟ್ಸಾಪ್ ಅಥವಾ ಮೆಟಾ ಕೂಡ ಈ ಸಂದೇಶಗಳನ್ನು ಡಿಕ್ರಿಪ್ಟ್ (Decrypt) ಮಾಡಲು ಸಾಧ್ಯವಿಲ್ಲ, ಏಕೆಂದರೆ ಎನ್‌ಕ್ರಿಪ್ಷನ್ ಕೀಗಳು (Keys) ಕೇವಲ ಬಳಕೆದಾರರ ಸಾಧನಗಳಲ್ಲಿ ಮಾತ್ರ ಇರುತ್ತವೆ ಎಂದು ಸಂಸ್ಥೆ ಸ್ಪಷ್ಟನೆ ನೀಡಿದೆ. ಸದ್ಯಕ್ಕೆ ದಾಖಲಾಗಿರುವ ದಾವೆಯಲ್ಲಿ ಮೆಟಾ ಎಂಜಿನಿಯರ್‌ಗಳು ಎನ್‌ಕ್ರಿಪ್ಷನ್ ಅನ್ನು ಹೇಗೆ ಭೇದಿಸುತ್ತಾರೆ ಎಂಬುದಕ್ಕೆ ಯಾವುದೇ ದೃಢವಾದ ತಾಂತ್ರಿಕ ಸಾಕ್ಷ್ಯಗಳನ್ನು ಒದಗಿಸಲಾಗಿಲ್ಲ ಎಂದು ವರದಿಗಳು ತಿಳಿಸಿವೆ.

ಈ ಬೆಳವಣಿಗೆಯ ನಡುವೆ, ಎಕ್ಸ್ (X) ಮಾಲೀಕ ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, “ವಾಟ್ಸಾಪ್ ಸುರಕ್ಷಿತವಲ್ಲ ಮತ್ತು ಸಿಗ್ನಲ್ ಆ್ಯಪ್ ಕೂಡ ಸಂಶಯಾಸ್ಪದವಾಗಿದೆ,” ಎಂದು ಟೀಕಿಸಿದ್ದಾರೆ. ಬದಲಿಗೆ, ಕಳೆದ ವರ್ಷದ ನವೆಂಬರ್‌ನಲ್ಲಿ ತಮ್ಮ xAI ಸಂಸ್ಥೆ ಬಿಡುಗಡೆ ಮಾಡಿರುವ ಗೌಪ್ಯತಾ-ಕೇಂದ್ರಿತ ‘ಎಕ್ಸ್ ಚಾಟ್’ (X Chat) ಬಳಸುವಂತೆ ಬಳಕೆದಾರರಿಗೆ ಕರೆ ನೀಡಿದ್ದಾರೆ. ಗೌಪ್ಯತೆಯೇ ವಾಟ್ಸಾಪ್‌ನ ಪ್ರಮುಖ ಬಂಡವಾಳವಾಗಿರುವುದರಿಂದ, ನ್ಯಾಯಾಲಯದಲ್ಲಿ ಈ ಆರೋಪಗಳು ಸಾಬೀತಾದರೆ ಸಂಸ್ಥೆಯು ಭಾರಿ ದಂಡದ ಜೊತೆಗೆ ಬಳಕೆದಾರರ ವಿಶ್ವಾಸವನ್ನೂ ಕಳೆದುಕೊಳ್ಳುವ ಸಾಧ್ಯತೆಯಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...