ಸುಮಾರು 15 ವರ್ಷದ ಬಾಲಕಿ ಮೇಲೆ ದುರುಳರು ಮೂರು ದಿನ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಗುಜರಾತ್‌ನ ಮೆಹ್‌ಸಾನ ಜಿಲ್ಲೆಯ ವಿಸ್‌ನಗರದಲ್ಲಿ ನಡೆದಿದೆ. ಅಕ್ಟೋಬರ್ 4ರಂದು ಬಾಲಕಿಯ ಅಪಹರಣ ನಡೆದಿದ್ದು ಅಂದಿನಿಂದ ಅ.6ರವರೆಗೂ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ನಡೆದಿದೆ.
ಮೊದಲು ವಿಜಯ್ ಠಾಕೂರ್ ಮತ್ತು ಪವನ್ ಠಾಕೂರ್ ಬಲವಂತವಾಗಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ರಾಜ್ ಠಾಕೂರ್ ಎಂಬಾತನ ಜೊತೆ ಸೇರಿ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಆಕೆಯನ್ನು ಸಿಟಿ ಟವರ್ ಬಳಿ ಬಿಟ್ಟಿದ್ದು, ಅಲ್ಲಿ ಸೋಹಮ್ ಠಾಕೂರ್ ಆಕೆಯನ್ನು ಮತ್ತೆ ಪವನ್ ಠಾಕೂರ್ ಕಚೇರಿಗೆ ಕರೆದೊಯ್ದು ಮತ್ತೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | 18 ವರ್ಷದ ಯುವತಿ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ
ಅದಾದ ಬಳಿಕ ಪ್ರಕಾಶ್ ಮೋದಿ ಮತ್ತು ಮತ್ತೋರ್ವರು ಆಕೆಯನ್ನು ಶಾಲೆಯ ಬಳಿಯಿಂದ ಮನೆಗೆ ಬಿಡುವುದಾಗಿ ಹೇಳಿ ಕರೆದೊಯ್ದು ಅಕ್ಟೋಬರ್ 6ರವರೆಗೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ.
ಸಂತ್ರಸ್ತ ಬಾಲಕಿಯ ಕುಟುಂಬವು ಆಕೆಗಾಗಿ ಹುಡುಕಾಡಿದ್ದಾರೆ. ಆದರೆ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆಯೇ ಎಂಬುದು ಖಚಿತವಾಗಿಲ್ಲ. ಸೋಮವಾರ ಬಾಲಕಿ ಮನೆಗೆ ಮರಳಿದ್ದು, ಭಯದಿಂದ ತನಗಾದ ದೌರ್ಜನ್ಯದ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ. ಮಂಗಳವಾರ ರಾತ್ರಿ ಈ ಎಲ್ಲಾ ವಿಚಾರವನ್ನು ಕುಟುಂಬಸ್ಥರಿಗೆ ಬಾಲಕಿ ತಿಳಿಸಿದ್ದಾಳೆ.
ಈ ಸಂಬಂಧ ವಿಸ್‌ನಗರ ಪೊಲೀಸರು ಅಪಹರಣ, ಅತ್ಯಾಚಾರ, ಪೊಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೆಯೇ ವಿಜಯ್ ಅಶೋಕ್‌ಜಿ ಠಾಕೂರ್, ಪವನ್‌ಜಿ ದಿವಾನ್‌ಜಿ ಠಾಕೂರ್, ರಾಜ್ ಠಾಕೂರ್, ಸೋಹಮ್‌ಜಿ ಸುರೇಶ್‌ಜಿ ಠಾಕೂರ್, ಮಕ್ವಾನ ದೇವಾಂಗ್ ಮತ್ತು ಮೋದಿ ಪ್ರಕಾಶ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಬಾಲಕಿಯ ಮನೆಯ ಸಮೀಪದಲ್ಲಿ ಪೊಲೀಸರು ಪಟ್ರೋಲಿಂಗ್ ಹೆಚ್ಚಿಸಿದ್ದಾರೆ ಎನ್ನಲಾಗಿದೆ.
ಗಮನಿಸಿ: ಅತ್ಯಾಚಾರವು ಒಂದು ಗಂಭೀರ ಸಾಮಾಜಿಕ ದುಷ್ಕೃತ್ಯ. ಈ ಕ್ರೂರ ಕೃತ್ಯವು ಸಮಾಜದ ನೈತಿಕತೆ ಮತ್ತು ಮಾನವೀಯತೆಯನ್ನು ಕುಂದಿಸುತ್ತದೆ. ಅತ್ಯಾಚಾರವನ್ನು ತಡೆಯುವುದು ಮತ್ತು ಅತ್ಯಾಚಾರ ಮುಕ್ತ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಹಿಳೆಯರು ಭಯಮುಕ್ತವಾಗಿ ಬದುಕಲು ಹೆಣ್ಣುಮಕ್ಕಳ ಸುರಕ್ಷತೆ, ಗೌರವ ಮತ್ತು ನ್ಯಾಯವನ್ನು ಕಾಪಾಡಲು ನಾವು ಒಗ್ಗೂಡಿ ಹೋರಾಡಬೇಕು.ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಕುಟುಂಬಗಳಲ್ಲಿ, ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಜೊತೆ ಗೌರವ ಮತ್ತು ಸಂವೇದನೆಯಿಂದ ನಡೆದುಕೊಳ್ಳಬೇಕು. ಮಹಿಳೆಯರ ರಕ್ಷಣೆಯ ಹೊಣೆ ನಮ್ಮೆಲ್ಲರದ್ದಾಗಿದೆ.





