ಬಿಜೆಪಿ ಆಡಳಿತದ ಅದ್ಭುತ: ಸಮರ್ಪಕ ರಸ್ತೆ ಕೊರತೆ; ಬೈಕ್ ಸಂಚಾರಕ್ಕೆ ರೈಲ್ವೇ ಹಳಿಯೇ ಆಧಾರ

Date:

15 ತಿಂಗಳನ್ನು (2018ರ ಡಿಸೆಂಬರ್ – 2020ರ ಮಾರ್ಚ್‌) ಹೊರತುಪಡಿಸಿ ಕಳೆದ 22 ವರ್ಷಗಳಿಂದ ಬಿಜೆಪಿಯೇ ಅಧಿಕಾರದಲ್ಲಿರುವ ಮಧ್ಯಪ್ರದೇಶದಲ್ಲಿ ಜನರ ಬದುಕು ಹೇಳತೀರಲಾಗಿದೆ. ಸರಿಯಾದ ರಸ್ತೆಗಳಿಲ್ಲದೆ ಬೈಕ್‌ ಸವಾರರು ಚಂಬಲ್ ಕಾಲುವೆಯ ಮೇಲೆ ನಿರ್ಮಿಸಲಾದ ರೈಲ್ವೇ ಹಳಿಗಳ ಮೇಲೆ ಕಾಲುವೆಯನ್ನು ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ತಾರು ಬೈಕ್‌ ಸವಾರರು ಕಾಲುವೆ ಮೇಲಿರುವ ರೈಲ್ವೇ ಹಳಿಗಳಲ್ಲಿ ತಮ್ಮ ಬೈಕ್‌ಗಳನ್ನು ತಳ್ಳಿಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯಲ್ಲಿ ಚಂಬಲ್ ಕಾಲುವೆಯ ಮೇಲೆ ನ್ಯಾರೋ ಗೇಜ್ ರೈಲ್ವೇ ಹಳಿಗಳನ್ನು ನಿರ್ಮಿಸಲಾಗಿದೆ. ಆದರೆ, ಇದೇ ರೈಲ್ವೇ ಹಳಿಯು ಶಿಯೋಪುರ ಮತ್ತು ಸಲಾಪುರ ನಡುವೆ ಪ್ರಯಾಣಿಸುವ ಹಲವಾರು ಗ್ರಾಮಗಳ ಬೈಕ್‌ ಸವಾರರಿಗೆ ಕಿರಿದಾದ ರಸ್ತೆಯ ರೀತಿಯಲ್ಲಿ ನೆರವಾಗುತ್ತಿದೆ.

ಕಾಲುವೆಯಿಂದ ಕೆಲವು ಕಿ.ಮೀ ದೂರದಲ್ಲಿ ಶಿಯೋಪುರ-ಮಾಧೋಪುರ್ ಹೆದ್ದಾರಿಯಿದೆ. ಆ ಹೆದ್ದಾರಿಯನ್ನು ಹೊರತುಪಡಿಸಿದರೆ ಸಲಾಪುರ ಪ್ರದೇಶದಲ್ಲಿ ಕಾಲುವೆ ಮೇಲೆ ಬೇರಾವುದೇ ರಸ್ತೆ ಅಥವಾ ಸೇತುವೆ ಇಲ್ಲ ಎಂದು ಹೇಳಲಾಗಿದೆ. ಇತ್ತೀಚೆಗೆ, ಹೆದ್ದಾರಿಯಲ್ಲಿ ಸಂಪೂರ್ಣ ಸಂಚಾರ ದಟ್ಟಣೆ ಉಂಟಾಗಿದ್ದರಿಂದ, ಸ್ಥಳೀಯ ಗ್ರಾಮಗಳ ಗ್ರಾಮಸ್ಥರು ಕಾಲುವೆ ದಾಟಲು ರೈಲ್ವೇ ಹಳಿಯನ್ನೇ ಆಶ್ರಯಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವೈರಲ್ ಆಗಿರುವ ವಿಡಿಯೋದಲ್ಲಿ; ದ್ವಿಚಕ್ರ ವಾಹನ ಸವಾರರು ಚಂಬಲ್ ಕಾಲುವೆಯ ಮೇಲಿನ ರೈಲ್ವೆ ಹಳಿಯಲ್ಲಿ ತಮ್ಮ ಬೈಕ್‌ಗಳನ್ನು ನಿಧಾನವಾಗಿ ಚಲಾಯಿಸುತ್ತಿರುವುದು ಕಾಣಿಸುತ್ತದೆ. ರೈಲ್ವೇ ಹಳಿಗಳ ಮೇಲೆ ಕಾಲುವೆ ಕಾಟುವುದು ಅತ್ಯಂತ ಅಪಾಯಕಾರಿಯಾಗಿದೆ. ಯಾವುದೇ ಸುರಕ್ಷತಾ ವ್ಯವಸ್ಥೆ ಹಳಿಗಳ ಬದಿಯಲ್ಲಿಲ್ಲ. ಆದರೂ, ಜನರು ಆ ಹಳಿಗಳ ಮೇಲೆಯೇ ಬೈಕ್ ಚಲಾಯಿಸಿಕೊಂಡು ಕಾಲುವೆ ದಾಟುತಿದ್ದಾರೆ. ಇದು ಅವರ ಬಹುತೇಕ ದೈನಂದಿನ ಪರಿಪಾಠವಾಗಿಹೋಗಿದೆ.

“ಈ ಪ್ರದೇಶದಲ್ಲಿ ಸೂಕ್ತ ರಸ್ತೆಗಳು ಮತ್ತು ಸೇತುವೆಗಳು ಇಲ್ಲದ ಕಾರಣ, ಜನರು ಚಂಬಲ್ ಕಾಲುವೆಯನ್ನು ದಾಟಲು ಈ ರೈಲ್ವೇ ಹಳಿಯನ್ನೇ ಆಶ್ರಯಿಸಿದ್ದಾರೆ” ಎಂದು ಸ್ಥಳೀಯರು ಹೇಳಿದ್ದಾರೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನೆಟ್ಟಿಗರು, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಇದೇ ಬಿಜೆಪಿಯ ಅಮೃತಕಾಲ. ರಸ್ತೆ ಮತ್ತು ಸೇತುವೆಯಂತಹ ಮೂಲ ಸೌಕರ್ಯಗಳನ್ನೇ ಒದಗಿಸದ ಬಿಜೆಪಿ ಸರ್ಕಾರ ‘ಜುಮ್ಲಾ’ ಸುಳ್ಳು ಆಶ್ವಾಸನೆ ನೀಡುತ್ತಲೇ ಅಧಿಕಾರ ನಡೆಸುತ್ತಿದೆ’ ಎಂದು ಕಿಡಿಕಾರಿದ್ದಾರೆ.

ರೈಲ್ವೇ ಹಳಿಯ ಮೇಲೆ ಬೈಕ್‌ ಚಲಾಯಿಸುವುದು ಕಾನೂನುಬಾಹಿರವಾಗಿದೆ. ಆದರೆ, ರಸ್ತೆಗಳೇ ಇಲ್ಲದೆ ಜನರು ಅಪಾಯಕಾರಿ ಹಳಿಗಳ ಮೇಲೆ ಚಲಿಸುವಂತಾಗಿದೆ. ಆದಾಗ್ಯೂ, ಶಿಯೋಪುರ ಜಿಲ್ಲಾಡಳಿತ ಅಥವಾ ರೈಲ್ವೆ ಇಲಾಖೆ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...