ಮನರೇಗಾ | 100 ದಿನದ ಉದ್ಯೋಗವನ್ನೇ ಕೊಡದ ಕೇಂದ್ರ ಸರ್ಕಾರ 125 ದಿನ ಕೆಲಸ ಕೊಡುತ್ತದೆಯೇ?

Date:

ಗ್ರಾಮೀಣ ಕಾರ್ಮಿಕರ ಹಿತವನ್ನು ರಕ್ಷಿಸುವ ನಿಟ್ಟಿನಲ್ಲಿ ಸುಧಾರಣೆಗಳ ಅಗತ್ಯವಿದೆ. ಆದರೆ ಅದು ಕಾಯಿದೆಯ ಮೂಲ ಉದ್ದೇಶವನ್ನು ಕಾಪಾಡುವಂತಿರಬೇಕೇ ಹೊರತು ಕತ್ತು ಹಿಸುಕುವಂತಾಗಬಾರದು.

ಮನರೇಗಾ(ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಕಾಯಿದೆ ಗ್ರಾಮೀಣ ಕುಟುಂಬಗಳಿಗೆ ವಾರ್ಷಿಕ 100 ದಿನಗಳ ಉದ್ಯೋಗದ ಖಾತರಿ ನೀಡುವ, ಭಾರತದ ಅತಿದೊಡ್ಡ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಆದರೆ ಕಳೆದ ವರ್ಷಗಳಲ್ಲಿ ಇದರ ಕಾರ್ಯಕ್ಷಮತೆಯು ಪ್ರಶ್ನಾರ್ಹವಾಗಿದೆ. ಹೀಗಿರುವಾಗಲೇ ಮೋದಿಯವರು ವಿಬಿ ಜಿ ರಾಮ್‌ ಜಿ ಎಂಬ ಮಸೂದೆಗೆ ಬದಲಾಯಿಸಿದ್ದು, 125 ದಿನಗಳ ಉದ್ಯೋಗ ನೀಡುವುದಾಗಿ ಹೇಳಿದ್ದಾರೆ. ಅದರಲ್ಲೂ ಹಲವಾರು ಷರತ್ತುಗಳು ಅನ್ವಯವಾಗಿವೆ.

ಈಗ ಮನರೇಗಾ ಅಡಿ 100 ದಿನಗಳ ಕೆಲಸ ನೀಡಬೇಕಾಗಿದ್ದ ಅಂಕಿ ಅಂಶಗಳನ್ನು ಗಮನಿಸಿದರೆ, ಕಳೆದ ಐದು ವರ್ಷಗಳಲ್ಲಿ ಸರಾಸರಿ ಪ್ರತಿ ಕುಟುಂಬಕ್ಕೆ ಕೇವಲ 50 ದಿನಗಳ ಉದ್ಯೋಗ ಒದಗಿಸಿರುವುದು ಕಂಡುಬರುತ್ತದೆ(2024-25ರಲ್ಲಿ 50.24 ದಿನಗಳು). 100 ದಿನಗಳನ್ನು ಪೂರ್ಣಗೊಳಿಸಿದ ಕುಟುಂಬಗಳ ಸಂಖ್ಯೆಯೂ ಕಡಿಮೆಯಾಗಿದೆ. ಇದು ಸರ್ಕಾರವೇ ನೀಡಿರುವ ಅಂಕಿಅಂಶ. ಇದಕ್ಕೆ ಬಜೆಟ್ ಕಡಿತ, ವೇತನ ವಿಳಂಬ ಮತ್ತು ಡಿಜಿಟಲ್ ಅಟೆಂಡೆನ್ಸ್‌ನಂತಹ ಸಮಸ್ಯೆಗಳನ್ನು ಕಾರಣ ಕೊಡುತ್ತ ಜನರಿಂದ ಉದ್ಯೋಗ ಕಿತ್ತುಕೊಂಡಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.

ಅಲ್ಲದೆ, ಸರ್ಕಾರವು ಹಣಕಾಸಿನ ಮಾದರಿಯನ್ನು ತಿರುಚುವ ಸಾಧ್ಯತೆಯಿದೆ. ಪ್ರಸ್ತುತ, ಮನರೇಗಾ ಯೋಜನೆಯ ವೇತನ ಅಂಶದ ಶೇ.100ರಷ್ಟನ್ನು ಕೇಂದ್ರವು ಹೊಂದಿದೆ. ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಡುವಿನ ದೀರ್ಘಕಾಲದ ಬಿಕ್ಕಟ್ಟಿನಂತಹ ಸಂದರ್ಭಗಳನ್ನು ತಪ್ಪಿಸಲು ಸರ್ಕಾರವು ಹೆಚ್ಚಿನ ಪರಿಶೀಲನೆಗಳನ್ನು ನಡೆಸಬಹುದು. ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ರಾಜ್ಯ ಸರ್ಕಾರ ನಿರಂತರವಾಗಿ ಪಾಲಿಸದ ಕಾರಣ, ಮಾರ್ಚ್ 2022ರಲ್ಲಿ ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆ ಮಾಡುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಿತ್ತು. ಕಲ್ಕತ್ತಾ ಹೈಕೋರ್ಟ್ ʼವಿಶೇಷ ಷರತ್ತುಗಳ ಕಡ್ಡಾಯ ಅನುಸರಣೆಗೆ ಒಳಪಟ್ಟಿರುತ್ತದೆʼ ಎಂಬ ಆದೇಶ ನೀಡಿದ ಬಳಿಕ ಕೇಂದ್ರವು 2025ರ ಡಿಸೆಂಬರ್ 6ರಂದು ಪಶ್ಚಿಮ ಬಂಗಾಳದ ಯೋಜನೆಯನ್ನು ಪುನರಾರಂಭಿಸಲು ಆದೇಶಗಳನ್ನು ಹೊರಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗದಗ ಜಿಲ್ಲೆಯ ಗ್ರಾಮೀಣ ಕೂಲಿಕಾರ್ಮಿಕರ ಸಂಘದ ಗಂಗಮ್ಮ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು(MGNREGA) ಹಾಳುಮಾಡಲು ಮೋದಿ ಸರ್ಕಾರ ಹೆಚ್ಚೆಚ್ಚು ಕುತಂತ್ರದ ತಂತ್ರಗಳನ್ನು ಆವಿಷ್ಕರಿಸುತ್ತಲೇ ಇದೆ. ಪ್ರಸ್ತುತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಈ ಯೋಜನೆಯಡಿ ವೆಚ್ಚವನ್ನು ವಾರ್ಷಿಕ ಬಜೆಟ್ ಹಂಚಿಕೆಯ ಶೇ.60ಕ್ಕೆ ಮಿತಿಗೊಳಿಸುವಂತೆ ಹಣಕಾಸು ಸಚಿವಾಲಯವು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಆದೇಶಿಸಿತ್ತು. ಈವರೆಗೆ ಖರ್ಚಿನ ಮೇಲೆ ಅಂತಹ ಮಿತಿ ಇರಲಿಲ್ಲ. ಏಕೆಂದರೆ ಯೋಜನೆಯು ಬೇಡಿಕೆಯ ಮೇಲೆ ಆಧಾರಿತವಾಗಿರಬೇಕು ಮತ್ತು ಒಂದು ಅವಧಿಗೆ ಖರ್ಚು ಮಿತಿಯನ್ನು ಹಾಕುವುದರಿಂದ ಇದಕ್ಕೆ ಅಡ್ಡಿಯಾಗುತ್ತದೆ ಎಂಬುದು ಸೇರಿದಂತೆ ಇಂತಹ ಇನ್ನೂ ಹೆಚ್ಚಿನ ಅಂಶಗಳು ಇವೆ” ಎಂದು ಹೇಳಿದರು.

“ಹಣಕಾಸು ವರ್ಷದ ಆರಂಭಿಕ ತಿಂಗಳುಗಳು(ಏಪ್ರಿಲ್‌ನಲ್ಲಿ ಪ್ರಾರಂಭವಾಗುವ) ಎರಡು ಕಾರಣಗಳಿಂದಾಗಿ ಈ ಯೋಜನೆಯಡಿಯಲ್ಲಿ ಹೆಚ್ಚಿನ ಖರ್ಚು ಕಂಡುಬರುತ್ತದೆ. ಒಂದು, ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳು ಬೇಸಿಗೆಯ ತಿಂಗಳುಗಳಾಗಿದ್ದು, ದೇಶಾದ್ಯಂತ ಕೃಷಿ ಚಟುವಟಿಕೆಗಳು ಅತ್ಯಂತ ಕಡಿಮೆ ಇರುತ್ತವೆ. ಈ ಕಡಿಮೆ ಅವಧಿಯಲ್ಲಿ ಬಡ ಕಾರ್ಮಿಕ ಕುಟುಂಬಗಳಿಗೆ ಆದಾಯದ ಅಗತ್ಯವಿರುತ್ತದೆ. ಆದ್ದರಿಂದ, ಈ ತಿಂಗಳುಗಳಲ್ಲಿ MGNREGA ಕೆಲಸಕ್ಕೆ ಬೇಡಿಕೆ ಹೆಚ್ಚಾಗುತ್ತದೆ” ಎಂಬುದನ್ನು ತಿಳಿಸಿದರು.

2024-25ರ ಹಣಕಾಸು ವರ್ಷದ ಉದಾಹರಣೆಯನ್ನು ನೋಡಿದರೆ ಇಡೀ ವರ್ಷದಲ್ಲಿ MGNREGA ಅಡಿ ಕೆಲಸ ಪಡೆದ ಒಟ್ಟು ಕುಟುಂಬಗಳ ಸಂಖ್ಯೆ 21.35 ಕೋಟಿ. ಇವುಗಳಲ್ಲಿ ಸುಮಾರು 6.54 ಕೋಟಿ ಜನರು ಮೊದಲ ತ್ರೈಮಾಸಿಕದಲ್ಲಿಯೇ, ಅಂದರೆ ಏಪ್ರಿಲ್, ಮೇ ಮತ್ತು ಜೂನ್‌ನಲ್ಲಿ ಕೆಲಸ ಮಾಡಿದ್ದಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇಡೀ ವರ್ಷದ ಸುಮಾರು 31 ಪ್ರತಿಶತದಷ್ಟು ಕೆಲಸವನ್ನು ಮೊದಲ ಮೂರು ತಿಂಗಳಲ್ಲಿಯೇ ಮಾಡಲಾಗಿದೆ. ನಂತರದ ತ್ರೈಮಾಸಿಕಗಳಲ್ಲಿ, ಕೆಲಸದ ಪಾಲು: 20 ಪ್ರತಿಶತ(ಜುಲೈ-ಸೆಪ್ಟೆಂಬರ್); 24 ಪ್ರತಿಶತ(ಅಕ್ಟೋಬರ್ ನಿಂದ ಡಿಸೆಂಬರ್) ಮತ್ತು 25 ಪ್ರತಿಶತ(ಜನವರಿಯಿಂದ ಮಾರ್ಚ್)ದಷ್ಟು ಕೆಲಸ ನಡೆದಿದೆ. ಇದರಿಂದ ಮೊದಲ ತ್ರೈಮಾಸಿಕದಲ್ಲಿ ಹೆಚ್ಚಿನ ಖರ್ಚಾಗುವುದು ಸ್ಪಷ್ಟವಾಗಿದೆ. ಹಾಗಾಗಿ, ಇದರಿಂದ ಹಣಕಾಸು ಸಚಿವಾಲಯದ ನವ-ಉದಾರವಾದಿ ಅಧಿಕಾರಿಗಳು ಕೆರಳುವುದನ್ನು ಕಾಣಬಹುದು.

ಯಾಕೆಂದರೆ, ಹೆಚ್ಚಿನ ವರ್ಷಗಳಲ್ಲಿ ಹಿಂದಿನ ವರ್ಷದಿಂದ ಬಾಕಿ ಉಳಿದಿರುವ ಪಾವತಿಗಳನ್ನು ಮುಂದಿನ ವರ್ಷಕ್ಕೆ ಕೊಂಡೊಯ್ಯುವುದೇ ಇದರ ಮುಖ್ಯ ಕಾರಣ. ಕೇಂದ್ರ ಸರ್ಕಾರದಿಂದ ಹೊಸ ಅನುದಾನ ಬಂದ ನಂತರ, ಹೊಸ ಹಣಕಾಸು ವರ್ಷದ ಮೊದಲ ತಿಂಗಳುಗಳಲ್ಲಿ ಈ ಬಾಕಿ ಪಾವತಿಗಳನ್ನು ತೀರಿಸಬೇಕಾಗುತ್ತದೆ. ಹಣಕಾಸು ಸಚಿವಾಲಯ(ಮತ್ತು ಬಹುಶಃ ಅದಕ್ಕೆ ದಿಕ್ಕು ಕೊಡುವ ಪ್ರಧಾನಮಂತ್ರಿ ಕಚೇರಿ) ವರ್ಷದ ಮೊದಲಾರ್ಧದಲ್ಲಿ ಖರ್ಚಿಗೆ ಮಿತಿ ಹಾಕಿ, ಈ ಬಾಕಿ ತೆಗೆದುಕೊಂಡು ಹೋಗುವ ಅಭ್ಯಾಸವನ್ನು ನಿಲ್ಲಿಸಬಹುದೆಂದು ಯೋಚಿಸಿದೆ. ಆದರೆ ನಿಜವಾಗಿ ಇದು ಪ್ರತಿ ವರ್ಷ ಕೆಲಸಗಳನ್ನು ಕಡಿಮೆ ಮಾಡಿ ಅಥವಾ ತಡವಾಗಿ ಮಾಡಿ, ಮುಂದಿನ ವರ್ಷಕ್ಕೆ ಬಾಕಿ ಪಾವತಿಗಳು ಉಳಿಯದಂತೆ ನೋಡಿಕೊಳ್ಳುವಂತೆ ಮಾಡುತ್ತದೆ.

ಸಿಪಿಐಎಂ ಮುಖಂಡೆ ಕೆ ನೀಲಾ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಪ್ರತಿ ಬಾರಿಯ ಮನರೇಗಾ ಬಜೆಟ್‌ ದರದಲ್ಲಿ ಹಂಚಿಕೆ ಕಡಿತವಾಗುತ್ತ ಬಂದಿರುವುದನ್ನು ಕಾಣಬಹುದು. ಕಳೆದ ಬಜೆಟ್‌ನಲ್ಲಿಯೂ ಕೇವಲ 86 ಸಾವಿರ ಕೋಟಿ ಬಜೆಟ್‌ ಘೋಷಣೆ ಮಾಡಿದ್ದರೂ ಕೂಡ ಹಂಚಿಕೆ ಮಾಡಿರುವುದು 49,000 ಕೋಟಿ ರೂಪಾಯಿಯ ಆಸುಪಾಸು” ಎಂದು ಹೇಳಿದರು.

“ಕೋವಿಡ್‌ ಸಂದರ್ಭದಲ್ಲಿ ಬೆಂಗಳೂರಿನಂತಹ ನಗರಗಳಲ್ಲಿದ್ದ ಎಲ್ಲ ಜನ ಹಳ್ಳಿಗಳ ಕಡೆ ಬಂದರು. ಅವರಲ್ಲಿ ಶೇ.40-50ರಷ್ಟು ಜನ ಮತ್ತೆ ಹಿಂದಿರುಗಿ ಹೋಗಲಿಲ್ಲ. ಅವರೆಲ್ಲರೂ ಮನರೇಗಾ ಅಡಿ ಕೆಲಸ ಮಾಡಲು ಆರಂಭಿಸಿದರು. ಹಾಗಾಗಿ ಮನರೇಗಾಕ್ಕೆ ಒಟ್ಟು ಬಜೆಟ್‌ 2.5 ಲಕ್ಷ ಕೋಟಿಯಷ್ಟಾದರೂ ಹಣ ಬೇಕಾಗುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಹಿಂದಿನ ಬಜೆಟ್‌ಗಿಂತಲೂ ಕಡಿಮೆ 86 ಸಾವಿರ ಕೋಟಿ ಘೋಷಣೆ ಮಾಡಿ ಅದರಲ್ಲೂ ಅರ್ಧದಷ್ಟು ಹಣ ಬಿಡುಗಡೆ ಮಾಡಿದರೆ ಕೂಲಿ ಕಾರ್ಮಿಕರ ಪಾಡೇನು” ಎಂದು ಕಳವಳ ವ್ಯಕ್ತಪಡಿಸಿದರು.

“ಬಜೆಟ್‌ ಕೊರತೆ ಮಾತ್ರವಲ್ಲ, ತಾಂತ್ರಿಕತೆಯ ಯೋಜನೆಗಳನ್ನು ಹೇರಿದರು. ಅದರಲ್ಲಿ ಇ-ಕೆವೈಸಿ ಮಾಡಿಸಿ ಅಂತ ಹೇಳಿದರು. ಇದರಲ್ಲಿ 20 ಜನರ ಒಂದು ತಂಡ ಕೆಲಸ ಮಾಡುತ್ತಿದ್ದರೆ ಈ ಪೈಕಿ ಒಬ್ಬರ ಇ-ಕೆವೈಸಿ ಮ್ಯಾಚ್‌ ಆಗದಿದ್ದರೂ ಉಳಿದ ಯಾರಿಗೂ ವೇತನ ಬರುವುದಿಲ್ಲ. ಇದರಿಂದ ಜನರು ನಿರಾಸೆಗೆ ಒಳಗಾಗಿ ಕೆಲಸಗಳನ್ನು ಬಿಟ್ಟು ಹೋಗುತ್ತಾರೆ. ಮೊದಲು ಅಳತೆ ಪ್ರಮಾಣದಲ್ಲಿ ಕೆಲಸ ಮಾಡಲಾಗುತ್ತಿತ್ತು. ಈ ಕೆಲಸ ಮುಗಿದ ಕೂಡಲೇ ಕಾರ್ಮಿಕರು ಮತ್ತೆ ಬೇರೇನಾದರೂ ಕೆಲಸ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಎನ್‌ಎಂಎಂಎಸ್‌(ನ್ಯಾಷನಲ್‌ ಮೊಬೈಲ್‌ ಮಾನಿಟರಿಂಗ್‌ ಸಿಸ್ಟಮ್)‌ ಜಾರಿಗೆ ತಂದರು. ಇದರಿಂದ ಮೊದಲು ಕೆಲಸ ಆರಂಭಿಸುವಾಗಲೂ ಫೋಟೋ ತೆಗೆದು ಹಾಕಬೇಕು, ಕೆಲಸ ಮುಗಿಸಿದಾಗಲೂ ಫೋಟೋ ತೆಗೆದು ಹಾಕಬೇಕು. ಇದರ ನಡುವೆ ನಾಲ್ಕು ಗಂಟೆಗಳ ಅಂತರ ಇರುತ್ತದೆ. ಅದರ ನಂತರವೇ ಆ app ಓಪನ್‌ ಆಗುತ್ತದೆ, ಅದಕ್ಕೂ ಮೊದಲು ಓಪನ್‌ ಆಗುವುದಿಲ್ಲ” ಎಂದು ತಿಳಿಸಿದರು.

“ಕೆಲಸ ಮಾಡುವ ಸ್ಥಳಕ್ಕೆ ಊರಿನಿಂದ ನಡೆದುಕೊಂಡು ಬರಬೇಕು. ಬಂದ ಬಳಿಕ 10 ಜನರಂತೆ ಒಂದು ತಂಡ ಸಾಲಾಗಿ ನಿಂತು ಫೋಟೋ ತೆಗೀಬೇಕು. ಇದರಂತೆ 100 ಜನ ಇದ್ದರೆ ಅದರ 10 ತಂಡಗಳ ಫೋಟೋ ತೆಗೆಯುವಷ್ಟರಲ್ಲಿ ಒಂದೂವರೆ ತಾಸು, ಅವರು ಕೆಲಸದ ಸ್ಥಳಕ್ಕೆ ಬರುವುದಕ್ಕೆ ಅರ್ಧ-ಮುಕ್ಕಾಲು ತಾಸು, ಮತ್ತೆ ಹೋಗುವಾಗ ಫೋಟೋ ತೆಗೆದು ಹಾಕೋದಕ್ಕೆ ಒಂದೂವರೆ ತಾಸು ಇದಕ್ಕೇ 4 ತಾಸು ಆಗುತ್ತೆ. ಇನ್ನು ನಾಲ್ಕು ತಾಸು ತಾಸು ಕೆಲಸ ಮಾಡುವುದು ಒಟ್ಟಾರೆ ಇಡೀ ದಿನ ಕಾರ್ಮಿಕರನ್ನು ಕೆಲಸದ ಸ್ಥಳದಲ್ಲಿಯೇ ಹಿಡಿದಿಡಲಾಗುತ್ತಿದೆ. ಊಟ ಇರುವುದಿಲ್ಲ, ನೆರಳು ಇರುವುದಿಲ್ಲ, ಕುಡಿಯಲು ನೀರಿರುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಕೆಲಸಗಾರರು ಎದುರಿಸುತ್ತಿದ್ದಾರೆ” ಎಂದು ದೂರಿದರು.

“ಬಿಜೆಪಿ ಕೇಂದ್ರ ಸರ್ಕಾರ ಮನರೇಗಾ ಉದ್ಯೋಗ ಖಾತ್ರಿಯನ್ನು ಮಣ್ಣುಮುಕ್ಕಿಸುವುದಕ್ಕಾಗಿಯೇ ಈ ಫೋಟೋ ಸಿಸ್ಟಮ್‌ ಹುನ್ನಾರ ನಡೆಸಿದೆ. ಎಲ್ಲೆಡೆ ನೆಟ್‌ವರ್ಕ್‌ ಇರುವುದಿಲ್ಲ. ಗುಡ್ಡಗಾಡು ಪ್ರದೇಶ, ಅರಣ್ಯ ಪ್ರದೇಶಗಳಲ್ಲಿ ಸೇರಿದಂತೆ ಅನೇಕ ಕಡೆ ನೆಟ್‌ವರ್ಕ್‌ ಇರುವುದಿಲ್ಲ. ಹಾಗಾಗಿ ಬಿಜೆಪಿ ಸರ್ಕಾರ ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆಯಿತು. ಬಿಎಸ್‌ಎನ್‌ಎಲ್‌ ನೆಟ್‌ವರ್ಕ್ ಇಲ್ಲದಂತೆ ಮಾಡಿದರು. ಈಗ ಜಿಯೋ ನೆಟ್‌ವರ್ಕ್‌ ಬಳಸಿಕೊಳ್ಳಬೇಕು. ಇದರಿಂದ ಅವರ ಸ್ನೇಹಿತರಿಗೂ ಅನುಕೂಲ ಆಯ್ತು, ಕಾರ್ಮಿಕರೂ ಎಂಟು ತಾಸು ಕೆಲಸದಲ್ಲಿಯೇ ಇರಬೇಕು. ಇಂತಹ ಹುನ್ನಾರ ನಡೆಸಿ ಕೆಲಸಗಾರರು ಕಡಿಮೆಯಾಗುವಂತೆ ಮಾಡುತ್ತಿದ್ದಾರೆ. ಇನ್ನು 125 ದಿನಗಳ ಕೆಲಸ ಪೂರೈಸುವುದು ಸಾಧ್ಯವೇ? ಇದು ಕೇವಲ ಮೂಗಿಗೆ ತುಪ್ಪ ಸವರಿ ಕಿರುನಾಲಿಗೆ ಕೀಳುವ ಕುತಂತ್ರ ಅಷ್ಟೇ” ಎಂದರು.

ಇದನ್ನೂ ಓದಿದ್ದೀರಾ? ಮನರೇಗಾ ಬದಲಿಗೆ ವಿಬಿ-ಜಿ ರಾಮ್‌ ಜಿ ಮಸೂದೆ: ಉದ್ಯೋಗ ಖಾತ್ರಿ ಯೋಜನೆಯ ಬದಲಾವಣೆಗಳೇನು?

ಸರ್ಕಾರವು ಮನರೇಗಾವನ್ನು ರದ್ದುಗೊಳಿಸಿ ಹೊಸ VB-G RAM G ಬಿಲ್ ಪರಿಚಯಿಸುತ್ತಿದೆ. ಇದರಡಿ 125 ದಿನಗಳ ಉದ್ಯೋಗ ಭರವಸೆ, ಹೆಚ್ಚಿನ ತಾಂತ್ರಿಕತೆ ಮತ್ತು ರಾಜ್ಯಗಳೊಂದಿಗೆ ಹಣ ಹಂಚಿಕೆ(60:40) ನಿಯಮಗಳಿವೆ. ಸರ್ಕಾರ ಇದನ್ನು ಯೋಜನೆಯ ಆಧುನಿಕೀಕರಣ ಮತ್ತು ಸುಧಾರಣೆಯೆಂದು ಕರೆಯುತ್ತದೆ. ಆದರೆ ವಿರೋಧ ಪಕ್ಷಗಳು ಮತ್ತು ಕಾರ್ಯಕರ್ತರು ಇದು ಯೋಜನೆಯ ಹಕ್ಕು-ಆಧಾರಿತ ಸ್ವರೂಪವನ್ನು ದುರ್ಬಲಗೊಳಿಸುತ್ತದೆ, ರಾಜ್ಯಗಳ ಮೇಲೆ ಹೆಚ್ಚಿನ ಹೊರೆ ಹಾಕುತ್ತದೆ ಮತ್ತು ಕೇಂದ್ರೀಕೃತ ನಿಯಂತ್ರಣವನ್ನು ಹೇರಲಾಗುತ್ತಿದೆಯೆಂದು ಟೀಕಿಸುತ್ತಾರೆ.

ಒಟ್ಟಾರೆಯಾಗಿ, ಮನರೇಗಾ ಗ್ರಾಮೀಣ ಭಾರತದಲ್ಲಿ ಉದ್ಯೋಗ ಮತ್ತು ಆದಾಯ ಭದ್ರತೆಗೆ ನಿರ್ಣಾಯಕ ಪಾತ್ರ ವಹಿಸಿದೆ. ಆದರೆ ಬಜೆಟ್, ತಾಂತ್ರಿಕತೆ ಮತ್ತು ಆಡಳಿತ ಸಮಸ್ಯೆಗಳು ಇದರ ಸಂಪೂರ್ಣ ಸಾಮರ್ಥ್ಯವನ್ನು ತಲುಪದಂತೆ ತಡೆಯುತ್ತಿವೆ. ಹೊಸ ಬದಲಾವಣೆಗಳು ಯೋಜನೆಯನ್ನು ಬಲಪಡಿಸುತ್ತವೆಯೇ ಅಥವಾ ದುರ್ಬಲಗೊಳಿಸುತ್ತವೆಯೇ ಎಂಬುದು ಭವಿಷ್ಯದ ಚರ್ಚೆಯ ವಿಷಯ. ಗ್ರಾಮೀಣ ಕಾರ್ಮಿಕರ ಹಿತವನ್ನು ರಕ್ಷಿಸುವ ನಿಟ್ಟಿನಲ್ಲಿ ಸುಧಾರಣೆಗಳ ಅಗತ್ಯವಿದೆ. ಆದರೆ ಅದು ಕಾಯಿದೆಯ ಮೂಲ ಉದ್ದೇಶವನ್ನು ಕಾಪಾಡುವಂತಿರಬೇಕೇ ಹೊರತು ಕತ್ತು ಹಿಸುಕುವಂತಾಗಬಾರದು.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪುದುಚೆರಿ ಚುನಾವಣೆ | ‘ಇಂಡಿಯಾ’ ಗೊಂದಲ ನಿವಾರಣೆ: ಕಾಂಗ್ರೆಸ್ 16, ಡಿಎಂಕೆ 14 ಕ್ಷೇತ್ರಗಳಲ್ಲಿ ಸ್ಪರ್ಧೆ

ಪುದುಚೆರಿಯ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳ...

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...