ಗರ್ಬಾ ನೃತ್ಯಕ್ಕೆ ಮೋದಿ ರಚಿತ ಹಾಡು; ಕೇಳುವವರ್‍ಯಾರು ಮಣಿಪುರದ ಪಾಡು!

Date:

ಪ್ರಧಾನಿ ನರೇಂದ್ರ ಮೋದಿಯವರು ನವರಾತ್ರಿ ಗರ್ಬಾ ನೃತ್ಯಕ್ಕಾಗಿ ಸಾಹಿತ್ಯ ಬರೆದಿರುವುದು ಭಾರೀ ಪ್ರಚಾರ ಪಡೆದುಕೊಳ್ಳುತ್ತಿದೆ. ಆದರೆ ಪ್ರಧಾನಿಯವರ ಆದ್ಯತೆ ಯಾವುದೆಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಮೇ 3ರಂದು ಮಣಿಪುರದಲ್ಲಿ ಆರಂಭವಾದ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಜನಾಂಗೀಯ ಕಲಹಕ್ಕೆ ಮದ್ದು ಅರೆಯಲು ಮೋದಿಯವರಿಗೆ ಸಾಧ್ಯವಾಗಿಲ್ಲ. ಆದರೆ ಗರ್ಬಾ ನೃತ್ಯಕ್ಕೆ ಭಾರೀ ಆಸಕ್ತಿ ತೋರಿಸಿರುವುದು ಯೋಚಿಸುವಂತಾಗಿದೆ.

ಶನಿವಾರ ಎಕ್ಸ್‌‌ (ಟ್ವಿಟರ್‌) ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ ಮೋದಿ, “ವರ್ಷಗಳ ಹಿಂದೆ ನಾನು ಬರೆದ ಗರ್ಬಾದ ಈ ಹಾಡಿಗೆ ಸುಂದರ ಸಂಯೋಜನೆ ಮಾಡಿರುವ ಧ್ವನಿ ಭಾನುಶಾಲಿ, ತನಿಷ್ಕ್ ಬಾಗ್ಚಿ ಮತ್ತು ಜುಸ್ಟ್ ಮ್ಯೂಸಿಕ್ ತಂಡಕ್ಕೆ ಧನ್ಯವಾದಗಳು. ಇದು ಹಲವು ನೆನಪುಗಳನ್ನು ತರುತ್ತದೆ” ಎಂದಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

’ಮಾಡಿ’ ಎಂಬ ಈ ಹಾಡು ಭಾನುವಾರ ಬಿಡುಗಡೆಯಾಗಿದೆ. ಇದನ್ನು ದಿವ್ಯಾ ಕುಮಾರ್ ಹಾಡಿದ್ದಾರೆ ಮತ್ತು ಮೀಟ್ ಬ್ರೋಸ್ ಸಂಯೋಜಿಸಿದ್ದಾರೆ.

ಇತ್ತ ಕಳೆದ ಐದು ತಿಂಗಳಿಂದ ಮಣಿಪುರ ರಾಜ್ಯದಲ್ಲಿ ಶಾಂತಿ ಎಂಬುದು ಮರೀಚಿಕೆಯಾಗಿದೆ. ಹಿಂಸಾಚಾರ ತಣ್ಣಗಾಗಿದ್ದರೂ ಕುಕಿ ಮತ್ತು ಮೈತೇಯಿಗಳ ನಡುವಿನ ಬಿರುಕು ಮಾತ್ರ ಹಾಗೆಯೇ ಉಳಿದಿದೆ. ಬಫರ್‌ ಜೋನ್‌ಗಳು ತೆರವಾಗಿಲ್ಲ. ಕಾಡು ಮತ್ತು ಕಣಿವೆಯ ನಡುವೆ ಮಾತುಕತೆಗಳು ದೂರವೇ ಉಳಿದಿವೆ.

ಮಣಿಪುರದಲ್ಲಿನ ಸದ್ಯದ ಪರಿಸ್ಥಿತಿಗೆ ಸಂಬಂಧಿಸಿದಂತೆ ’ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ ಮೈತೇಯಿ ಸಮುದಾಯದ ಹೋರಾಟಗಾರ ರಾಮ್‌ ವಾಂಕ್‌ಕೈರಪ್ಪಮ್, “ಜಾಗತಿಕ ಭೌಗೋಳಿಕ ರಾಜಕೀಯದ ಬಗ್ಗೆ ಭಾರೀ ಕಾಳಜಿ ಮೋದಿಯವರಿಗಿದೆ. ಹೀಗಾಗಿ ಇಸ್ರೇಲ್‌- ಪ್ಯಾಲೇಸ್ತೀನ್‌ ಕುರಿತು ಮಾತನಾಡುತ್ತಾರೆ. ಆದರೆ ಇದೇ ಕಾಳಜಿಯನ್ನು ಮಣಿಪುರದ ಬಗ್ಗೆ ಈವರೆಗೂ ಪ್ರದರ್ಶಿಸಿಲ್ಲ. ಈಗಲೂ ಇಂಟರ್‌ನೆಟ್ ಬ್ಯಾನ್ ಮುಂದುವರಿದಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಮೊದಲಿಗೆ ಹೋಲಿಸಿದರೆ ಪರಿಸ್ಥಿತಿ ಸದ್ಯ ತಿಳಿಯಾಗಿದೆ. ಮುಖಂಡರುಗಳನ್ನು ಬಂಧಿಸುವುದು ನಡೆಯುತ್ತಿದೆ. ಕುಕಿ- ಮೈತೇಯಿ ಗಡಿ ಭಾಗಗಳಲ್ಲಿ ಬಫರ್‌ ಜೋನ್ ಈಗಲೂ ಇವೆ. ಕುಕಿ ಪ್ರದೇಶಗಳಿಗೆ ಮೈತೇಯಿಗಳು, ಮೈತೇಯಿ ಪ್ರದೇಶಗಳಿಗೆ ಕುಕಿಗಳು ಪ್ರವೇಶಿಸಲು ಸಾಧ್ಯವೇ ಇಲ್ಲ” ಎಂದು ತಿಳಿಸಿದರು.

ಇದನ್ನೂ ಓದಿರಿ: ಮಣಿಪುರ | ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ; ಪ್ರಮುಖ ಆರೋಪಿಗಳ ಬಂಧನ

ಇಂಫಾಲ ಮೂಲದ ಮೈತೇಯಿ ಪತ್ರಕರ್ತ ಚೌಬಾ ಮಾತನಾಡಿ, “ಇಲ್ಲಿನ ಜನರ ಮನದ ಮಾತನ್ನು ಅವರು ಕೇಳುತ್ತಿಲ್ಲ. ಮಣಿಪುರದ ಬಗ್ಗೆ ಮೋದಿಯವರು ತಲೆ ಕೆಡಿಸಿಕೊಂಡೇ ಇಲ್ಲ. ನಮ್ಮ ಬಗ್ಗೆ ಗಂಭೀರವಾಗಿ ಯೋಚಿಸಿದ್ದರೆ ಮಣಿಪುರದ ಬಗ್ಗೆ ಮಾತನಾಡುತ್ತಿದ್ದರಲ್ಲವೇ? ಅಮಿತ್ ಷಾ ಅವರು ಪಾಕಿಸ್ತಾನ- ಇಂಡಿಯಾ ಕ್ರಿಕೆಟ್ ಮ್ಯಾಚ್‌ ನೋಡಲು ಹೋಗ್ತಾರೆ. ಮಣಿಪುರದಲ್ಲಿ ಎರಡು ಸಮುದಾಯಗಳ ನಡುವಿನ ಬಿಕ್ಕಟ್ಟು ಅವರಿಗೆ ಮುಖ್ಯವೇ ಅಲ್ಲ” ಎಂದು ಟೀಕಿಸಿದರು.

’ಈದಿನ.ಕಾಂ’ನೊಂದಿಗೆ ಮಾತನಾಡಿದ ಕುಕಿ ವಿದ್ಯಾರ್ಥಿ ಸಂಘಟನೆಯ ಜೆರ್‍ರಿ, “ಎನ್‌ಐಎ, ಸಿಬಿಐ ತಂಡಗಳು ಕುಕಿ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಕೆಲವು ಮುಖಂಡರನ್ನು ತನಿಖೆಗೆ ಒಳಪಡಿಸುತ್ತಿವೆ. ಸುಮಾರು 40,000 ಜನರು ಈಗಲೂ ಚೂರಾಚಾದ್ಪುರದ (ಲಮ್ಕಾ) ನಿರಾಶ್ರಿತ ಶಿಬಿರಗಳಲ್ಲಿ ನೆಲೆಸಿದ್ದಾರೆ. ಸೂಕ್ತ ಪರಿಹಾರ ದೊರಕುತ್ತಿಲ್ಲ” ಎಂದರು.

ಅಂದಹಾಗೆ, ಗರ್ಬಾ ಎಂಬುದು ಗುಜರಾತ್ ಮತ್ತು ಇತರ ಕೆಲವು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ನೃತ್ಯ ರೂಪವಾಗಿದೆ. ನವರಾತ್ರಿ ಉತ್ಸವದ ವೇಳೆ ದುರ್ಗೆಯನ್ನು ಈ ಮೂಲಕ ಪೂಜಿಸಲಾಗುತ್ತದೆ. ಗರ್ಬಾ ನೃತ್ಯದ ವೇಳೆ ಹಲವು ಘರ್ಷಣೆಗಳು ನಡೆದ ಉದಾಹರಣೆಗಳಿವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...