ನೀನಾರಿಗಾದೆಯೋ ಎಲೈ ಮಹಾ ಮಾನವ? ಮೋದಿ‌ ವಿರುದ್ಧ ನಟ ಕಿಶೋರ್‌ ಕಿಡಿ

Date:

ಪ್ರಧನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ‌ ಸರ್ಕಾರದ 11 ವರ್ಷಗಳ ಆಡಳಿತವನ್ನು ನಟ ಕಿಶೋರ್ ವಿಮರ್ಶಿಸಿದ್ದಾರೆ. ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಅವರ ಹೆಸರು ಹೇಳದೆ, ಅವರನ್ನು ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರಯವ ಕಿಶೋರ್, ‘ನಿನಾರಿಗಾದೆಯೋ ಎಲೆ ಮಾನವ’ ಎಂದು ಪ್ರಶ್ನಿಸಿದ್ದಾರೆ.

ಕಿಶೋರ್ ಅವರ ಪೋಸ್ಟ್ ಹೀಗಿದೆ;
ದೆಹಲಿ ಉಸಿರುಗಟ್ಟುತ್ತಿದ್ದರೂ ಲಡಾಖಿನಂತೆ, ಹಿಮಾಚಲದಂತೆ ಅರಾವಳಿಯನ್ನೂ ನಿನ್ನ ಗಣಿಧಣಿಗಳಿಗೆ ಮಾರುವ ದಲ್ಲಾಳಿಯಾದೆ. ಮೌಸಮ್ ಕಾ ಮಜಾ ತಗೋಳಿ ಎಂದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಿರುದ್ಯೋಗಿ ಯುವಕರು ಬೊಬ್ಬೆಯಿಟ್ಟರೂ ಕೇಳದೇ ಅಗ್ನಿವೀರರನ್ನಾಗಿಸಿದೆ
ರೈತರು ಸತ್ತರೂ ಪರವಾಗಿಲ್ಲೆಂದು ಕೃಷಿ ಕಾನೂನು ತಂದೆ
ಹಳ್ಳಿಗಳು ಹಾಳಾದರೆ ನನಗೇನೆಂದು ಗಾಂಧಿ ಹೆಸರ ಕಿತ್ತು ಜೀ ರಾಮ್ ಜೀ ತಂದೆ

ವಿದ್ವಾಂಸರ ವಿಜ್ಞಾನಿಗಳ ಜೈಲಿಗೆ ತಳ್ಳಿ ಬುದ್ಧಿಜೀವಿಗಳೆಂದು ಗೇಲಿ ಮಾಡಿದೆ
ಮಹಿಳೆಯರು ಸತ್ತರೆ ನನಗೇನೆಂದು ಅತ್ಯಚಾರಿಗಳ ಗಲಭೆಕೋರರ ಬೀದಿ ಬೀದಿ ತಿರುಗ, ಬಡವರ ಮೇಲೆ ಬುಲ್ಡೋಜರ್ ಬಿಟ್ಟೆ, ಜನರ ಗೂಢಚಾರಿಕೆ ಮಾಡಲು ಸಂಚಾರ ಭಾರತಿ ತಂದೆ, ಉತ್ತರ ಯಾಕೆ ಕೊಡಬೇಕೆಂದು RTI ಮುಗಿಸಿದೆ.

ಜನ ಕ್ಯೂನಲ್ಲಿ ಸತ್ತರೇನೆಂದು ನಗದು ಅಮಾನ್ಯ ಮಾಡಿ ಜಿಎಸ್ಟಿ ತಂದು ಕೊಳ್ಳೆ ಹೊಡೆದೆ,
ರೂಪಾಯಿ ಬಿದ್ದರೂ ಡೀಸಲ್ ಕದ್ದರೂ ಬ್ರಿಡ್ಜು ಬಿದ್ದರೂ ರೈಲು ಮಗುಚಿದರೂ ವಿಮಾನಗಳುರುಳಿದರೂ ಬಡತನ ಆಗಸಕ್ಕೇರಿದರೂ ಹೊಗಳು ಭಟ್ಟ ಮಾಧ್ಯಮಗಳ ಹೊಗಳಲು ಛೂ ಬಿಟ್ಟೆ,
ದೇಶದ ಸಂಪತ್ತನ್ನೆಲ್ಲ ನಿನ್ನ ಧಣಿಗಳಿಗೆ ಮಾರಿ ಬಂದ ಕಾಸಲ್ಲಿ ವಾರ್ ರುಕ್ವಾದೀ ಪಾಪಾ ಎಂದೆ,

ಜನ ಕೊರೋನಾದಿಂದ ಸಾಯುತ್ತಿದ್ದಾಗ ಜನರ ದುಡ್ಡಲ್ಲಿ ನಿನಗೆ ನೀನೇ ಥ್ಯಾಂಕ್ಸ್ ಹೇಳಿ ನೀನೇ ಪೋಸ್ಟರ್ ಹಾಕಿಕೊಂಡೆ,
ಬಾಂಗ್ಲಾದೇಶದಲ್ಲಿ (ಹಿಂದೂ) ಅಲ್ಪಸಂಖ್ಯಾತರನ್ನು ಕೊಲ್ಲುತಿದ್ದಾಗ ಹಸೀನಾಳನ್ನು ತಂದು ಬಾಯಿಮುಚ್ಚಿ ಕೂತೆ,

ನಿನ್ನ ಕರ್ಮ ಕಾಂಡ ಮುಚ್ಚಲು ನೆಹರೂ ಅಂದೆ, ರಾಮ ಮಂದಿರ ಎಂದೆ, ಹಿಂದೂ ಮುಸ್ಲಿಂ ಎಂದೆ, 370 ಎಂದೆ, ದುನಿಯ ಮೆ ಡಂಕಾ ಅಂತ ತಟ್ಟೆ ಬಡಿದು ಕುಣಿದೆ… ಮಹಾಮಾನವನೆಂದೆ..
ಕೊನೆಗೆ ನೀನಾರಿಗಾದೆಯೋ ಎಲೆ ಮಹಾಮಾನವ??

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪುದುಚೆರಿ ಚುನಾವಣೆ | ‘ಇಂಡಿಯಾ’ ಗೊಂದಲ ನಿವಾರಣೆ: ಕಾಂಗ್ರೆಸ್ 16, ಡಿಎಂಕೆ 14 ಕ್ಷೇತ್ರಗಳಲ್ಲಿ ಸ್ಪರ್ಧೆ

ಪುದುಚೆರಿಯ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳ...

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...