ಇನ್ಫೋಸಿಸ್‌ಗೆ ಅಮೆರಿಕ ಪ್ರಾಧಿಕಾರದಿಂದ 225 ಡಾಲರ್ ದಂಡ

Date:

ಭಾರತದ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್‌ ಸಂಸ್ಥೆಗೆ ಅಮೆರಿಕದ ನೆವಡಾ ತೆರಿಗೆ ಇಲಾಖೆ ಎರಡು ತ್ರೈಮಾಸಿಕಗಳಲ್ಲಿ ಮಾರ್ಪಡಿಸಿದ ವ್ಯವಹಾರದ ಸಣ್ಣ ಪಾವತಿ ಉಲ್ಲಂಘನೆಗಾಗಿ 225(18,702 ರೂ.) ಡಾಲರ್‌ ದಂಡ ವಿಧಿಸಿದೆ.

ಆದಾಗ್ಯೂ ದಂಡದ ಸತ್ಯಾಸತ್ಯತೆ ತಿಳಿಯಲು ಇನ್ಫೋಸಿಸ್‌ ಕಂಪನಿಯು ಮುಂದಿನ ಹಂತಗಳಲ್ಲಿ ಈ ಬಗ್ಗೆ ನಿರ್ಧರಿಸಲಿದೆ ಎನ್ನಲಾಗಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಇನ್ಫೋಸಿಸ್‌, ಜನವರಿ 25ರದು ಅಮೆರಿಕದ ನೆವಡಾ ತೆರಿಗೆ ಇಲಾಖೆಯು ದಂಡದ ಮೊತ್ತದ ತೆರಿಗೆಯನ್ನು ಪಾವತಿಸಬೇಕೆಂದು ಮೇಲ್‌ ಕಳಿಸಿದೆ. 2021 ತ್ರೈಮಾಸಿಕ ನಾಲ್ಕರಿಂದ 2022 ತ್ರೈಮಾಸಿಕ ಒಂದರವರೆಗೆ ಮಾರ್ಪಡಿಸಿದ ವ್ಯವಹಾರದ ಸಣ್ಣ ಪಾವತಿ ಉಲ್ಲಂಘನೆ ಮಾಡಿರುವುದಾಗಿ ದಂಡ ವಿಧಿಸಲಾಗಿದೆ” ಎಂದು ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಬೆಳವಣಿಗೆಯಿಂದ ಆರ್ಥಿಕತೆ, ಕಾರ್ಯಾಚರಣೆಗಳು ಅಥವಾ ಕಂಪನಿಯ ಅಭಿವೃದ್ಧಿಯ ಇತರ ಚಟುವಟಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಇನ್ಫೋಸಿಸ್‌ ತಿಳಿಸಿದೆ.

ಮಾರ್ಪಡಿಸಿದ ವ್ಯವಹಾರದ ಸಣ್ಣ ಪಾವತಿ ಉಲ್ಲಂಘನೆಯು ನಿಗದಿಪಡಿಸಿರುವ ಇನ್‌ವಾಯ್ಸ್ ಮೊತ್ತದಲ್ಲಿ ಭಾಗಶಃ ಅಥವಾ ಕಡಿಮೆ ಮೊತ್ತವನ್ನು ಉಲ್ಲೇಖಿಸಿರುವುದನ್ನು ಒಳಗೊಂಡಿರುತ್ತದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಆಯಾ ಕುಮಾರ್, ಗಯಾ ಕುಮಾರ್’- ಅವರೇ ನಿತೀಶ್ ಕುಮಾರ್

ಇನ್ಫೋಸಿಸ್‌ ಮಾರ್ಪಡಿಸಿದ ವ್ಯವಹಾರದ ಸಣ್ಣ ಪಾವತಿ ಉಲ್ಲಂಘಿಸಿರುವುದು ಇದು ಮೊದಲೇನಲ್ಲ. 2023ರ ಆಗಸ್ಟ್‌ನಲ್ಲಿಯೂ ಅಮೆರಿಕಾದ ಫ್ಲೋರಿಡಾ ತೆರಿಗೆ ಇಲಾಖೆ ಕೂಡ ಇನ್ಫೋಸಿಸ್‌ ಕಂಪನಿಗೆ 76.92(6387 ರೂ.) ಡಾಲರ್‌ ದಂಡ ವಿಧಿಸಿತ್ತು.

2023ರ ಅಕ್ಟೋಬರ್‌ನಲ್ಲಿ ಮ್ಯಾಸಚೂಸೆಟ್ಸ್‌ ಆಫ್ ಕಾಮನ್‌ವೆಲ್ತ್‌ ಸಂಸ್ಥೆ ಕೂಡ 91,508 ರೂ.(1101 ಡಾಲರ್) ದಂಡ ವಿಧಿಸಿತ್ತು.

ಇದಲ್ಲದೆ ಭಾರತದ ವಾಣಿಜ್ಯ ತೆರಿಗೆ ಇಲಾಖೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಂಯೋಜಿತ ಸರಕು ಹಾಗೂ ಸೇವಾ ತೆರಿಗೆಯ ಉಲ್ಲಂಘನೆಗಾಗಿ 26.5 ಲಕ್ಷ ರೂ. ದಂಡ ಪಾವತಿಸಬೇಕು ಎಂದು ನೋಟಿಸ್‌ ನೀಡಿತ್ತು.

ಭಾರತದ ಐಟಿ ಕಂಪನಿಗಳಲ್ಲಿ ಒಂದಾಗಿರುವ ಇನ್ಫೋಸಿಸ್‌ 68,4000 ಕೋಟಿ ರೂ. ಮೌಲ್ಯ ಹೊಂದಿದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಗ್ರಾಹಕರನ್ನು ಹೊಂದಿದ್ದು, 56 ದೇಶಗಳಲ್ಲಿ ಕಂಪನಿ ನೆಲೆಯೂರಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...