ರಾಷ್ಟ್ರೀಯ ಪರೀಕ್ಷಾ ಮಂಡಳಿ(ಎನ್‌ಟಿಎ) ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ(ಪಿಜಿ) ಪ್ರವೇಶಕ್ಕೆ ನಡೆಸಲಾಗುವ ನೀಟ್-ಪಿಜಿ ಪರೀಕ್ಷೆಯ ದಿನಾಂಕವನ್ನು ಘೋಷಿಸಿದೆ. ಆಗಸ್ಟ್ 11 ರಂದು ಪ್ರಾರಂಭಗೊಳ್ಳುವ ಪರೀಕ್ಷೆ ಎರಡು ಪಾಳಿಗಳಲ್ಲಿ ನಡೆಯಲಿದೆ.
ಈ ಮೊದಲು ಜೂನ್ 23ರಂದು ಪ್ರಕಟಿಸಲಾಗಿದ್ದ ದಿನಾಂಕವನ್ನು ನೀಟ್ ಯುಜಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹಲವು ಅಕ್ರಮಗಳು ನಡೆದ ಹಿನ್ನೆಲೆಯಲ್ಲಿ ಪಿಜಿ ಪರೀಕ್ಷೆಯನ್ನು ಮುಂದೂಡಲಾಗಿತ್ತು.
ಎನ್‌ಟಿಎದ ನೂತನ ಮುಖ್ಯಸ್ಥರಾದ ಮಾಜಿ ಇಸ್ರೋ ಅಧ್ಯಕ್ಷ ಕೆ ರಾಧಾಕೃಷ್ಣನ್ ಅವರ ನಾಯಕತ್ವದಲ್ಲಿ ಪರೀಕ್ಷೆ ಪ್ರಕ್ರಿಯೆ ಸುಧಾರಣೆ ಸೇರಿದಂತೆ ಹಲವು ಬದಲಾವಣೆಗಳನ್ನು ತರಲಾಗಿರುವ ಕಾರಣ ಪರೀಕ್ಷೆಯ ದಿನಾಂಕ ತಡವಾಗಿದೆ.
ಈ ಸುದ್ದಿ ಓದಿದ್ದೀರಾ? ಷೇರು ಮಾರುಕಟ್ಟೆ ಎಂದರೇನು? ಇದನ್ನು ಅರ್ಥ ಮಾಡಿಕೊಳ್ಳುವ ಬಗೆ ಹೇಗೆ?
ನೂತನ ಪ್ರಕ್ರಿಯೆಯ ಅನುಸಾರ ಸುರಕ್ಷತಾ ಹಿತದೃಷ್ಟಿಯಿಂದ ಪಿಜಿ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷೆಗೆ ಕೆಲವು ಗಂಟೆಗಳು ಬಾಕಿಯಿರುವಂತೆ ತಯಾರಿಸಲಾಗುತ್ತದೆ.
ವಿವಿಧ ವೈದ್ಯಕೀಯ ಪಿಜಿ ಕೋರ್ಸ್‌ಗಳಾದ ಎಂಡಿ/ಎಂಎಸ್ ಹಾಗೂ ಪಿಜಿ ಡಿಪ್ಲೊಮೊಗೆ ಪ್ರವೇಶ ಪರೀಕ್ಷೆ ನಡೆಸಲು ನೀಟ್ ಪಿಜಿ ಪರೀಕ್ಷೆ ಹಮ್ಮಿಕೊಳ್ಳಲಾಗುತ್ತದೆ.
ಪರೀಕ್ಷೆಯ ದಿನಾಂಕಗಳ ಮಾಹಿತಿಗಾಗಿ natboard.edu.in ವೆಬ್‌ಸೈಟ್ ಪರಿಶೀಲಿಸಬಹುದು.





