ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ(ನೀಟ್) ಅಂತಿಮ ಉತ್ತರಗಳನ್ನು(answer keys) ಶನಿವಾರ ಬಿಡುಗಡೆಗೊಳಿಸಲಾಗಿದೆ ಎಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್‌ಟಿಎ) ತಿಳಿಸಿದೆ.
ಮೇ 4ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆದಿದೆ. 20.87 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ದೇಶದಲ್ಲಿ 4,750 ಸೆಂಟರ್‌ಗಳಲ್ಲಿ, ವಿದೇಶದಲ್ಲಿ 14 ಸೆಂಟರ್‌ಗಳಲ್ಲಿ ಪರೀಕ್ಷೆ ನಡೆದಿದೆ.
ಇದನ್ನು ಓದಿದ್ದೀರಾ? ನೀಟ್-ಯುಜಿ 2024 | ವಿವಾದ ನಡುವೆಯೇ ಆಗಸ್ಟ್ 14ರಿಂದ ಕೌನ್ಸೆಲಿಂಗ್
ಶನಿವಾರ ಉತ್ತರವನ್ನು ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳು neet.nta.nic.in. ವೆಬ್‌ಸೈಟ್ ಮೂಲಕ ಉತ್ತರವನ್ನು ಪರಿಶೀಲಿಸಬಹುದು ಎಂದು ಎನ್‌ಟಿಎ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಈ ಹಿಂದೆ ಜೂನ್ 3ರಂದು ಉತ್ತರ ಬಿಡುಗಡೆಗೊಳಿಸಲಾಗಿದ್ದು ಆಕ್ಷೇಪ ವ್ಯಕ್ತಪಡಿಸಲು ಅವಕಾಶ ನೀಡಲಾಗಿತ್ತು. ಜೂನ್ 5ರವರೆಗೂ ಆಕ್ಷೇಪಕ್ಕೆ ಅವಕಾಶ ನೀಡಲಾಗಿತ್ತು. 180 ಪ್ರಶ್ನೆಗಳನ್ನು ಒಳಗೊಂಡ ಪ್ರಶ್ನಾ ಪತ್ರಿಕೆಯು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಹೊಂದಿತ್ತು.





