ವಿಮಾನ ನಿಲ್ದಾಣದಲ್ಲಿ ಅಂಗವೈಕಲ್ಯಕ್ಕೆ ತುತ್ತಾಗಿರುವ ವಿಶೇಷಚೇತನ ಹುಡುಗನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಕಾರಣಕ್ಕೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ನಡೆಯನ್ನು ಖಂಡಿಸಿದ್ದಾರೆ.
ಕೊಹ್ಲಿ ಮತ್ತು ಅನುಷ್ಕಾ ಅವರು ಮುಂಬೈನಲ್ಲಿರುವ ಶರ್ಮಾ ಪ್ರೇಮಾನಂದ್ ಜಿ ಮಹಾರಾಜ್ ಅವರ ಶ್ರೀ ಹಿತ್ ರಾಧಾ ಕೇಲಿ ಕುಂಜ್‌ಗೆ ಭೇಟಿ ನೀಡಿದ್ದರು. ಅವರು ಮುಂಬೈ ವಿಮಾನ ನಿಲ್ದಾಣದಿಂದ ಹೊರ ಬರುವಾಗ, ವಿಶೇಷಚೇತನ ಅಭಿಮಾನಿಯೊಬ್ಬ ಕೊಹ್ಲಿ ಅವರ ಬಳಿ ಸೆಲ್ಫೆ ತೆಗೆದುಕೊಳ್ಳಲು ಹತ್ತಿರ ಹೋಗಿದ್ದಾರೆ. ಆದರೆ, ಆ ಹುಡುಗನಿಗೆ ಪ್ರತಿಕ್ರಿಯಿಸಿದ ಕೊಹ್ಲಿ ತಮ್ಮ ತಲೆಯನ್ನು ನೇರ ಇಟ್ಟುಕೊಂಡು ಕಾರಿನೆಡೆಗೆ ಸಾಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋವನ್ನು ಗಮನಿಸಿದ ನೆಟ್ಟಿಗರು ಮತ್ತು ಅಭಿಮಾನಿಗಳು ಕೊಹ್ಲಿ ನಡೆಯಿಂದ ನಿರಾಶೆಗೊಂಡಿದ್ದಾರೆ. ಕೊಹ್ಲಿ ಮತ್ತು ಅನುಷ್ಕಾ ನಡೆಯನ್ನು ಖಂಡಿಸಿರುವ ನೆಟ್ಟಿಗರು ದಂಪತಿಗಳು ಸಂವೇದನಾಶೀಲತೆ ಇಲ್ಲದವರು, ವಿಶೇಷಚೇತನ ಯುವಕನಿಗೆ ಕನಿಷ್ಠ ಕನಿಕರವನ್ನೂ ತೋರದವರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಶುಭ್‌ಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಫಾರ್ಮ್ ಕಳೆದುಕೊಂಡರೇ?
ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದು, “ಆಧ್ಯಾತ್ಮಿಕ ಪ್ರವಾಸ ಮಾಡಿ. ಆದರೆ, ಅಂಗವಿಕಲ ವ್ಯಕ್ತಿಯೊಂದಿಗೆ ಅಸಭ್ಯವಾಗಿ ನಡೆದುಕೊಳ್ಳಿ”, “ಇದು ಅಸಹ್ಯಕರ ನಡವಳಿಕೆ… ಆಧ್ಯಾತ್ಮಿಕಕ್ಕಿಂತ ವಿನಮ್ರತೆ ಬಹಳ ಮುಖ್ಯ”, “ಇಂತಹ ವರ್ತನೆ ತೋರಿಸಿ, ಪ್ರೇಮಾನಂದ ಜಿ ಅವರನ್ನು ಭೇಟಿ ಮಾಡುವುದರಲ್ಲಿ ಅರ್ಥವೇನು? ಆ ಸ್ಥಳದಿಂದ ಹೊರಬಂದ ನಂತರವೂ ಒಬ್ಬರು ಇಷ್ಟೊಂದು ಅಹಂಕಾರ ಮತ್ತು ಮನೋಭಾವವನ್ನು ಮುಂದುವರಿಸುವುದೇ? ಕೇವಲ ಫೋಟೋ ಕೇಳಿದ ಅಂಗವಿಕಲ ಮಗುವನ್ನು ನಿರ್ಲಕ್ಷಿಸುವುದು ಹೃದಯವಿದ್ರಾವಕ” ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.




