ಒಂದೇ ಕುಟುಂಬ – ಎರಡು ಧ್ವಜ: ಭಾರತ-ಪಾಕ್ ಯುದ್ಧದಲ್ಲಿ ವಿರುದ್ಧ ಸೇನೆಗಳಲ್ಲಿ ಹೋರಾಡಿದ್ದ ಸಹೋದರರ ಕಥೆ

Date:

1948ರ ವೇಳೆಗೆ ಕಾಶ್ಮೀರದ ಪರ್ವತಗಳು ಹಲವಾರು ಇತಿಹಾಸವನ್ನು ಕಂಡಿದ್ದವು. 1947ರಲ್ಲಿ ಮತ್ತೊಂದು ಇತಿಹಾಸ – ಭಾರತ ಮತ್ತು ಪಾಕ್‌ ವಿಭಜನೆಯನ್ನೂ ಆ ಪರ್ವತಗಳು ನೋಡಿದವು. ಆ ವರ್ಷದ ಆಗಸ್ಟ್‌ನಲ್ಲಿ ಫಿರಂಗಿ ಗುಂಡಿನ ದಾಳಿಗಳು ಮತ್ತು ಕದನ ವಿರಾಮದ ಮಾತುಕತೆಗಳೊಂದಿಗೆ ಎರಡು ಹೊಸ ರಾಷ್ಟ್ರಗಳ ನಡುವೆ ಮೊದಲ ಯುದ್ಧವೂ ನಡೆಯುತ್ತಿತ್ತು.

ಆ ಸಂಘರ್ಷದಲ್ಲಿ, ಭಾರತೀಯ ಸೇನೆಯ ಒಂದು ತಂಡದ ನೇತೃತ್ವವನ್ನು ಮೇಜರ್ ಯೂನಸ್ ಖಾನ್ ನಿರ್ವಹಿಸುತ್ತಿದ್ದರು. ಅದೇ ರೀತಿ, ಪಾಕಿಸ್ತಾನ ಸೇನೆಯ ಒಂದು ತಂಡವನ್ನು ಮೇಜರ್ ಸಾಹಿಬ್ಜಾದಾ ಯಾಕೂಬ್ ಖಾನ್ ಮುನ್ನಡೆಸುತ್ತಿದ್ದರು.

ಗಮನಾರ್ಹವೆಂದರೆ, ಇವರಿಬ್ಬರೂ, ಈಗ ಭಾರತದ ಭಾಗವೇ ಆಗಿರುವ ರಾಂಪುರದಲ್ಲಿ ಒಂದೇ ಮನೆಯಲ್ಲಿ ಹುಟ್ಟಿ-ಬೆಳೆದ ಸಹೋದರರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಭಾರತ-ಪಾಕ್ ಗಡಿಯ ಮೊದಲು

ಈ ಸಹೋದರರು ರಾಂಪುರ ರಾಜ ಮನೆತನವಾದ ಸರ್ ಅಬ್ದುಸ್ ಸಮದ್ ಖಾನ್ ಅವರ ಮಕ್ಕಳು. ಆ ಕಾಲದ ಅನೇಕ ಗಣ್ಯ ಕುಟುಂಬಗಳಂತೆ, ಖಾನ್ ಸಹೋದರರು ಬ್ರಿಟಿಷ್ ಭಾರತೀಯ ಸೈನ್ಯವನ್ನು ಸೇರಿದ್ದರು.

ಯೂನಸ್ ಅವರನ್ನು ಗರ್ವಾಲ್ ರೈಫಲ್ಸ್‌ಗೆ ನಿಯೋಜಿಸಲಾಗಿತ್ತು. ಅಂತಯೇ, ಯಾಕೂಬ್ ಕೂಡ 1940ರಲ್ಲಿ 18ನೇ ರಾಜ ಎಡ್ವರ್ಡ್‌ನ ಅಶ್ವದಳವನ್ನು ಸೇರಿದ್ದರು.

2ನೇ ಮಹಾಯುದ್ಧದ ಸಮಯದಲ್ಲಿ, ಇಬ್ಬರೂ ಬ್ರಿಟಿಷ್ ಸೇನೆಯ ಅಡಿಯಲ್ಲಿ ಯುದ್ಧದಲ್ಲಿ ಭಾಗಿಯಾಗಿದ್ದರು. ಉತ್ತರ ಆಫ್ರಿಕಾದಲ್ಲಿನ ಯುದ್ಧದಲ್ಲಿ ಭಾಗಿಯಾಗಿದ್ದ ಯಾಕೂಬ್, 1942ರಲ್ಲಿ ಯುದ್ಧ ಕೈದಿಯಾಗಿ ಟೋಬ್ರೂಕ್ ಬಳಿ ಸೆರೆಹಿಡಿಯಲ್ಪಟ್ಟರು. 1945ರಲ್ಲಿ ಬಿಡುಗಡೆಯಾದರು. ಸೆರೆವಾಸದ ಅನುಭವವು ಅವರಲ್ಲಿ ಸೇನಾ ಮತ್ತು ರಾಜತಾಂತ್ರಿಕತೆ ಬೌದ್ಧಿಕತೆಯನ್ನು ಬೆಳೆಸಿತು.

1947: ಸೈನ್ಯ ವಿಭಜನೆ

1947ರಲ್ಲಿ ಸ್ವಾತಂತ್ರ್ಯದೊಂದಿಗೆ ಭಾರತ-ಪಾಕಿಸ್ತಾನ ವಿಭಜನೆಯಾಯಿತು. ಈ ವಿಭಜನೆಯು ಕೇವಲ ಪ್ರಾದೇಶಿಕವಾಗಿರಲಿಲ್ಲ. ಅದು ಸಾಂಸ್ಥಿಕವಾಗಿತ್ತು.

ಡೊಮಿನಿಕ್ ಲ್ಯಾಪಿಯರ್ ಮತ್ತು ಲ್ಯಾರಿ ಕಾಲಿನ್ಸ್ ಅವರು ಮಧ್ಯರಾತ್ರಿಯಲ್ಲಿ ಸ್ವಾತಂತ್ರ್ಯ ಘೋಷಿಸಿದ ನಂತರ, ಭಾರತ-ಪಾಕ್‌ ನಡುವೆ ರಾಜಕೀಯ ಮಾತುಕತೆಗಳು ನಡೆಯಲಾರಂಭಿಸಿದವು. ಈ ಪ್ರಕ್ರಿಯೆಯಲ್ಲಿ ಆಗಾಧವಾದ ನೋವಿನ ಸಂಗತಿಗಳು ಘಟಿಸಿದವು. ವಲಸೆ, ದಾಳಿ, ಹಿಂಸಾಚಾರಗಳು ನಡೆಯುತ್ತಿದ್ದವು. ಲಕ್ಷಾಂತರ ಜನರು ಸ್ಥಳಾಂತರಗೊಂಡರು, ಲಕ್ಷಾಂತರ ಜನರು ಸತ್ತರು. ಇದೇ ಸಮಯದಲ್ಲಿ, ಬ್ರಿಟಿಷರು ಭಾರತೀಯ ಸೈನ್ಯವನ್ನು ಭಾರತ ಮತ್ತು ಪಾಕಿಸ್ತಾನದ ನಡುವೆ ವಿಭಜಿಸಿದರು.

ಸೇನೆಯ ವಿಭಜನೆಯಲ್ಲಿ ರೆಜಿಮೆಂಟ್‌ಗಳು, ಸಲಕರಣೆಗಳ ಹಂಚಿಕೆಗಳು ನಡೆದವು. ಆಗ, ಯೂನಸ್ ಭಾರತದ ಸೇನೆಯಲ್ಲಿಯೂ, ಯಾಕೂಬ್ ಪಾಕಿಸ್ತಾನದ ಸೇನೆಯಲ್ಲಿಯೂ ಸೇರಿದರು.

ಮನೆ ಬಾಗಿಲಿನಲ್ಲಿ ಯುದ್ಧ

1947ರ ಅಕ್ಟೋಬರ್‌ನಲ್ಲಿ, ಜಮ್ಮು ಮತ್ತು ಕಾಶ್ಮೀರದ ವಿಚಾರವಾಗಿ ಹೋರಾಟ ಪ್ರಾರಂಭವಾಯಿತು.  ಜಮ್ಮು ಮತ್ತು ಕಾಶ್ಮೀರವನ್ನು ಉಭಯ ರಾಷ್ಟ್ರಗಳ ತಮ್ಮೊಂದಿಗೆ ಸೇರಿಸಿಕೊಳ್ಳಲು ಸಂಘರ್ಷಕ್ಕಿಳಿದವು. ಪರಿಣಾಮ, 1947 ಮತ್ತು 1948ರಲ್ಲಿ ಪರ್ವತ ಪ್ರದೇಶದಲ್ಲಿ ಮೊದಲ ಇಂಡೋ-ಪಾಕಿಸ್ತಾನಿ ಯುದ್ಧ ನಡೆಯಿತು.

ಆ ಹೊತ್ತಿಗೆ, ಇಬ್ಬರೂ ಸಹೋದರರು ಉಭಯ ರಾಷ್ಟ್ರಗಳ ಸೈನ್ಯದಲ್ಲಿ ಮೇಜರ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದರು.

ಅಂದಿನ ಯುದ್ಧದಲ್ಲಿ, ಮೇಜರ್ ಯೂನಸ್ ಖಾನ್ ಭಾರತೀಯ ಸೈನ್ಯವನ್ನು ಪಾಕಿಸ್ತಾನಿ ಸೇನೆಯ ವಿರುದ್ಧ ಮುನ್ನಡೆಸಿದರು. ಆ ಸಂಘರ್ಷದಲ್ಲಿ, ಒಬ್ಬ ಪಾಕಿಸ್ತಾನಿ ಅಧಿಕಾರಿಗೆ ಗಾಯಗಳಾದವು. ಆ ಗಾಯಗೊಂಡ ವ್ಯಕ್ತಿ ಯೂನಸ್‌ ಅವರ ಕಿರಿಯ ಸಹೋದರ ಮೇಜರ್ ಯಾಕೂಬ್ ಖಾನ್ ಎಂದು ನಂತರ ಅರಿವಾಯಿತು.

ಆದಾಗ್ಯೂ, ಯೂನಸ್ ಮತ್ತು ಯಾಕೂಬ್ ತಮ್ಮ ಸೇನೆಗಳಿಗಾಗಿ ಕರ್ತವ್ಯವನ್ನು ಪೂರೈಸಿದರು. 1949ರ ಜನವರಿಯಲ್ಲಿ ಘೋಷಿಸಲಾದ, ಕದನ ವಿರಾಮವು ಸಂಘರ್ಷವನ್ನು ಸ್ಥಗಿತಗೊಳಿಸಿತು.

1948ರ ನಂತರ

1949ರ ಕದನ ವಿರಾಮದ ನಂತರ, ಯಾಕೂಬ್ ಖಾನ್ ಅವರ ವೃತ್ತಿಜೀವನವು ಪಾಕಿಸ್ತಾನದಲ್ಲಿ ಸ್ಥಿರವಾಗಿ ಏರಿತು. ಅವರು ಅಂತಿಮವಾಗಿ ಲೆಫ್ಟಿನೆಂಟ್ ಜನರಲ್ ಹುದ್ದೆಗೇರಿದರು. ನಂತರ ರಾಜತಾಂತ್ರಿಕತೆಗೆ ಸಂಬಂಧಿಸಿದ ಹುದ್ದೆಗಳನ್ನು ನಿಭಾಯಿಸಿದರು. ಅವರು ನಾನಾ ರಾಷ್ಟ್ರಗಳಿಗೆ ಪಾಕಿಸ್ತಾನದ ರಾಯಭಾರಿಯಾಗಿ ನಿಯೋಜನೆಗೊಂಡರು. ಜೊತೆಗೆ, ಪಾಕಿಸ್ತಾನ ವಿದೇಶಾಂಗ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಬೌದ್ಧಿಕತೆ ತಿಳುವಳಿಕೆ ಮತ್ತು ಶಾಂತತೆಯಿಂದಾಗಿ ಅವರು ಪಾಕಿಸ್ತಾನದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು.

ಯೂನಸ್ ಖಾನ್ ಭಾರತೀಯ ಸೇನೆಯಲ್ಲಿ ತಮ್ಮ ಸೇವೆಯನ್ನು ಮುಂದುವರೆಸಿದರು. ಸೇನೆಯಲ್ಲಿನ ನಿರಂತರ ಸೇವೆಯ ಬಳಿಕ ಅವರು ಗೌರವದಿಂದ ನಿವೃತ್ತರಾದರು. ಸಾರ್ವಜನಿಕ ಪ್ರದರ್ಶನಗಳಿಂದ ದೂರ ಉಳಿದರು.

ಈ ಲೇಖನ ಓದಿದ್ದೀರಾ?: ಭಾರತದಲ್ಲಿ ಮಾವೋವಾದ ಅಳಿಯಿತೇ; ಕಮ್ಯೂನಿಸ್ಟ್ ವಿಚಾರಧಾರೆಗೆ ಸಂಘಪರಿವಾರ ಭಯಪಡುವುದೇಕೆ?

ಈ ನಡುವೆ, ಖಾನ್ ಸಹೋದರರು ದೆಹಲಿಯಲ್ಲಿ ಮತ್ತೆ ಭೇಟಿಯಾದರು. ಅವರು ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡರು. ಆದರೆ, ಯುದ್ಧಕಾಲದ ಪ್ರಸಂಗವನ್ನು ಅವರು ಚರ್ಚಿಸಲಿಲ್ಲ ಎಂದು ವರದಿಯಾಗಿದೆ.

ಇತಿಹಾಸದ ಪುಟಗಳು

ಆಂಚಲ್ ಮಲ್ಹೋತ್ರಾ ಬರೆದ “ರ’ಮ್ನೆಂಟ್ಸ್ ಆಫ್ ಎ ಸೆಪರೇಷನ್’ ಪುಸ್ತಕದಲ್ಲಿ, 1947ರ ವಿಭಜನೆಯಿಂದ ಛಿದ್ರಗೊಂಡ ಕುಟುಂಬಗಳ ವೈಯಕ್ತಿಕ ಖಾತೆಗಳನ್ನು ಎಚ್ಚರಿಕೆಯಿಂದ ದಾಖಲಿಸಲಾಗಿದೆ. ಮೌಖಿಕ ಇತಿಹಾಸಗಳು ಮತ್ತು ಸಂರಕ್ಷಿತ ಚರಾಸ್ತಿಗಳ ಮೂಲಕ, ಒಡಹುಟ್ಟಿದವರು, ಪೋಷಕರು ಹಾಗೂ ಇಡೀ ಕುಟುಂಬಗಳು ಕೂಡ ರಾಷ್ಟ್ರಗಳ ವಿಭಜನೆಯೊಂದಿಗೆ ವಿಭಜನೆಗೊಂಡು ಉಭಯ ರಾಷ್ಟ್ರಗಳನ್ನು ಸೇರಿದ್ದನ್ನು ಪುಸ್ತಕವನ್ನು ವಿವರಿಸಿದೆ.

ಪುಸ್ತಕದಲ್ಲಿ ವಿವರಿಸಿ-ನಿರೂಪಿಸಲಾದ ನೈಜ ಕತೆಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ಸೈನ್ಯಗಳಲ್ಲಿ ಸೇವೆ ಸಲ್ಲಿಸಲು ಹೋದ ಸಹೋದರರಾದ ಯೂನಸ್ ಖಾನ್ ಮತ್ತು ಯಾಕೂಬ್ ಖಾನ್ ಅವರಂತಹ ಘಟನಾವಳಿಗಳೂ ಇವೆ. ಮಲ್ಹೋತ್ರಾ ಅವರ ಕೃತಿಯು ವಿಭಜನೆಯು ಭೂಮಿಯನ್ನು ಮಾತ್ರವಲ್ಲದೆ ವೃತ್ತಿ, ನಿಷ್ಠೆ ಹಾಗೂ ಕುಟುಂಬ ಬಂಧಗಳನ್ನು ಹೇಗೆ ವಿಭಜಿಸಿತು ಎಂಬುದನ್ನು ಅರ್ಥಗರ್ಭಿವಾಗಿ ವಿವರಿಸಿದೆ. ಆ ಅರ್ಥದಲ್ಲಿ, ಖಾನ್ ಸಹೋದರರ ಕಥೆಯು ವಿಶಾಲವಾದ ಮಾದರಿಯನ್ನು ಒಳಗೊಂಡಿದೆ.

ಯೂನಸ್ ಮತ್ತು ಯಾಕೂಬ್ ಖಾನ್ ಅವರು ಹುಟ್ಟಿದಾಗ ಸಂಕೇತಗಳಾಗಿರಲಿಲ್ಲ. ಅವರು ತರಬೇತಿ ಪಡೆದಾಗ ವಿರೋಧಿಗಳಾಗಿರಲಿಲ್ಲ. ಆದರೆ, ರಾಷ್ಟ್ರ ವಿಭಜನೆಯು ಈ ಸಹೋದರರನ್ನೂ ವಿಭಜಿಸಿತು.  1947 ರಲ್ಲಿ, ಅವರು ವಿಭಿನ್ನ ರಾಷ್ಟ್ರಗಳನ್ನು ಆಯ್ಕೆ ಮಾಡಿಕೊಂಡರು. 1948ರ ಯುದ್ಧದಲ್ಲಿ ಅವರು ಪರಸ್ಪರ ಎದುರಾಳಿಗಾಗಿ ಹೋರಾಡಿದರು. ಸೇವೆ ಮತ್ತು ನಿಷ್ಠೆಗೆ ಸ್ಪೂರ್ತಿ-ಪ್ರತೀಕಗಳಾಗಿ ಬೆಳೆದರು.

ಕೃಪೆ: ಇಂಡಿಯಾ ಟುಡೆ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...