ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2026-27ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಮಂಡಿಸಿದ್ದು ಪ್ರತಿ ಜಿಲ್ಲೆಯಲ್ಲಿ ಒಂದು ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದಾರೆ.
ದೇಶದಲ್ಲಿ 800ಕ್ಕೂ ಅಧಿಕ ಜಿಲ್ಲೆಗಳಿವೆ. ಆದರೆ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಹಾಸ್ಟೆಲ್‌ಗಳಿಲ್ಲ, ಹಾಸ್ಟೆಲ್‌ಗಳಿದ್ದರೂ ಸರಿಯಾದ ಸೌಲಭ್ಯಗಳಿಲ್ಲ.
ಈ ಸಂದರ್ಭದಲ್ಲೇ ಲಕ್ ಪತಿ ದೀದಿ ಯೋಜನೆಗೆ ಇನ್ನಷ್ಟು ಉತ್ತೇಜನ ನೀಡಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ. ಈ ಯೋಜನೆಯಡಿಯಲ್ಲಿ 2 ಕೋಟಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು 3 ಕೋಟಿ ಮಹಿಳೆಯರಿಗೆ ಏರಿಸಲಾಗುತ್ತದೆ ಎಂದಿದ್ದಾರೆ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ 2026 | ನಿರ್ಮಲಾ ಸೀತಾರಾಮನ್ ಮಂಡಿಸಿದ ಆಯವ್ಯಯದ ಪ್ರಮುಖ ಅಂಶಗಳು
ಇನ್ನು ಸ್ವಸಹಾಯ ಸಂಘಗಳ (SHG) ಮೂಲಕ ಅರ್ಹ ಮಹಿಳೆಯರು ತಮ್ಮ ಉದ್ಯೋಗ ಆರಂಭಿಸಲು ಅಥವಾ ವಿಸ್ತರಿಸಲು ₹1 ಲಕ್ಷದಿಂದ ₹5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಮಹಿಳಾ ನೇತೃತ್ವದ ಉದ್ದಿಮೆಗಳನ್ನು ಉತ್ತೇಜಿಸಲು ಮತ್ತು ಅವರ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಲು ‘SHE’ ಮಾರ್ಕ್ಸ್ ಎಂಬ ಹೊಸ ಲೇಬಲ್ ವ್ಯವಸ್ಥೆಯನ್ನು ಘೋಷಿಸಿದ್ದಾರೆ.





