ಮಣಿಪುರ ಹಿಂಚಾಸಾರ| ನಿರಾಶ್ರಿತ ಕೇಂದ್ರಗಳಲ್ಲಿ 180ಕ್ಕೂ ಹೆಚ್ಚು ಶಿಶುಗಳ ಜನನ

Date:

ಮಣಿಪುರ ಹಿಂಚಾಸಾರದ ಬಳಿಕ ಮನೆ ಕಳೆದುಕೊಂಡವರು ನಿರಾಶ್ರಿತ ಕೇಂದ್ರದಲ್ಲಿದ್ದು ಈ ನಿರಾಶ್ರಿತ ಕೇಂದ್ರದಲ್ಲಿಯೇ ಈವರೆಗೆ 180ಕ್ಕೂ ಹೆಚ್ಚು ಶಿಶುಗಳ ಜನನವಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

11 ತಿಂಗಳ ಘರ್ಷಣೆ, ಹಿಂಸಾಚಾರ ಮತ್ತು ಮುಂದುವರಿದ ಅನಿಶ್ಚಿತತೆಯ ನಡುವೆಯೂ ರಾಜ್ಯದಾದ್ಯಂತ ವಿವಿಧ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಕುಕಿ ಬುಡಕಟ್ಟಿನ ಹಟ್ನ್ಯೂ ಅವರಂತಹ ಸುಮಾರು 200 ಅಧಿಕ ಸ್ಥಳಾಂತರಗೊಂಡ ಮಹಿಳೆಯರು ತಮ್ಮ ನವಜಾತ ಶಿಶುಗಳನ್ನು ಸ್ವಾಗತಿಸಿದ್ದಾರೆ.

“ನಾನು ನನ್ನ ಅವಳಿಗಳನ್ನು ನನ್ನ ತೋಳುಗಳಲ್ಲಿ ಹಿಡಿದಾಗ, ನನ್ನ ಎಲ್ಲಾ ದುಃಖಗಳು ಕರಗಿ ಹೋದವು. ಈಗ ನನ್ನ ಈ ಅವಳಿ ಗಂಡು ಮಕ್ಕಳಿಗೆ ನಾಲ್ಕು ತಿಂಗಳು. ಅವರು ದೊಡ್ಡವರಾದ ಬಳಿಕ ನಾನು ಅವರ ಹುಟ್ಟಿನ ಕಥೆ ಹೇಳುತ್ತೇನೆ” ಎಂದು ಕಾಕ್ಚಿಂಗ್ ಜಿಲ್ಲೆಯ ಪರಿಹಾರ ಶಿಬಿರದಲ್ಲಿ 26 ವರ್ಷದ ಮಹಿಳೆಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?   ಮತದಾನದ ಹಕ್ಕಿಗೂ ಮೊದಲು ಬದುಕುವ ಹಕ್ಕು ಮುಖ್ಯ: ಮಣಿಪುರದ ಜನರ ಧ್ವನಿ

“ಗರ್ಭಧಾರಣೆಯ ಅವಧಿಯಲ್ಲಿ ಅಧಿಕ ಕಾಳಜಿ ವಹಿಸುವುದು ಅಗತ್ಯ. ಯಾವುದೇ ಭಾರವನ್ನು ಎತ್ತಬೇಡಿ, ಒತ್ತಡಕ್ಕೆ ಒಳಗಾಗಬೇಡಿ, ಚೆನ್ನಾಗಿ ತಿನ್ನಿ ಎಂದು ಈ ಅವಧಿಯಲ್ಲಿ ಹೇಳಲಾಗುತ್ತದೆ. ಆದರೆ ನನಗೆ ಈ ಅವಧಿಯು ಬದುಕುಳಿಯುವ ಅವಧಿಯಾಗಿತ್ತು” ಎಂದು ಮಣಿಪುರ ಹಿಂಸಾಚಾರವನ್ನು ನೆನಪಿಸಿಕೊಂಡಿದ್ದಾರೆ.

ಘರ್ಷಣೆ ಆರಂಭವಾದಾಗ ಕುಕಿ-ಜೋ ಮಹಿಳೆ ಲು ಲಾಮ್ವಾ ನ್ಗಾಹ್ಜೆಮ್ಕಿಮ್ ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಈಗ ಚುರಾಚಂದ್‌ಪುರದ ಪರಿಹಾರ ಶಿಬಿರದಲ್ಲಿ ನೆಲೆಸಿದ್ದಾರೆ. ಈಗ ಲು ಲಾಮ್ವಾ ತನ್ನ ಮಗಳು ಕ್ರಿಸ್ಟಿಗೆ ಜನ್ಮ ನೀಡಿದ್ದು ಹಿಂಸಾಚಾರದ ಬಗ್ಗೆ ಪಿಟಿಐ ಜೊತೆ ಮಾತನಾಡಿದ್ದಾರೆ. “ಘರ್ಷಣೆಗಳು ಪ್ರಾರಂಭವಾದಾಗ ನಾವು ಮನೆಯಲ್ಲಿ ಊಟ ಮಾಡುತ್ತಿದ್ದೆವು. ಘರ್ಷಣೆ ಆರಂಭವಾಗುತ್ತಿದ್ದಂತೆ ನಾವು ಹತ್ತಿರದ ಬೆಟ್ಟಗಳಲ್ಲಿ ಅಡಗಿಕೊಂಡೆವು. ರಕ್ಷಣಾ ಪಡೆಗಳು ನಮ್ಮನ್ನು ರಕ್ಷಿಸುವವರೆಗೆ ನಾವು ಹಲವಾರು ಗಂಟೆಗಳ ಕಾಲ ಆ ಬೆಟ್ಟದಲ್ಲೇ ಅಡಗಿದ್ದೆವು. ನಮ್ಮ ಮನೆ ಕೆಲವೇ ನಿಮಿಷಗಳಲ್ಲಿ ಇಲ್ಲವಾಯಿತು” ಎಂದು ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ?   ಮಣಿಪುರ ಹಿಂಸಾಚಾರ| ಸ್ಥಳಾಂತರಗೊಂಡ 24,000 ಕ್ಕೂ ಹೆಚ್ಚು ನಾಗರಿಕರಿಗೆ ಪರಿಹಾರ ಶಿಬಿರದಲ್ಲೇ ಮತದಾನಕ್ಕೆ ಅವಕಾಶ

ಮಣಿಪುರದಲ್ಲಿ ಕಳೆದ ವರ್ಷ (2023) ಮೇ 3 ರಿಂದ ಬಹುಸಂಖ್ಯಾತ ಮೈತಿ ಸಮುದಾಯ ಮತ್ತು ಕುಕಿಗಳ ನಡುವೆ ಹಿಂಸಾಚಾರ ನಡೆಯುತ್ತಿದ್ದು, ಈ ಜನಾಂಗೀಯ ಘರ್ಷಣೆಯಿಂದಾಗಿ ಈವರೆಗೂ 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಮೈತಿ ಸಮುದಾಯದವರು ಇಂಫಾಲ್ ನಗರದಲ್ಲಿ ನೆಲೆಸಿದರೆ, ಕುಕಿಗಳು ಬೆಟ್ಟಗಳಿಗೆ ಸ್ಥಳಾಂತರಗೊಂಡಿದ್ದಾರೆ. 50,000 ಕ್ಕೂ ಹೆಚ್ಚು ಜನರು ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...