ಯುಪಿ ಚುನಾವಣೆ ಹೊಸ್ತಿಲಲ್ಲಿ ಕಾಂಶೀರಾಮ್ ಭಜನೆಗೆ ತೊಡಗಿದ ಪಕ್ಷಗಳು!

Date:

ಮುಂದಿನ ವರ್ಷ ಉತ್ತರಪ್ರದೇಶದ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ. ಮಾಯಾವತಿ ರಾಜಕೀಯವಾಗಿ ದುರ್ಬಲರಾಗಿ ಕಾಣಿಸಿರುವ ಈ ಹಂತದಲ್ಲಿ ಕಾಂಶೀರಾಮ್ ಅವರ ಪರಂಪರೆಗೆ ದಾವೇದಾರಿಕೆಗೆ ಬಿ.ಎಸ್.ಪಿ. ಹೊರಗೆ ಪೈಪೋಟಿ ನಡೆದಿದೆ. ಮಾಯಾವತಿ ಅವರು ರಾಜಕೀಯವಾಗಿ ಇಳಿಜಾರಿನ ಹಾದಿ ಹಿಡಿದು ಬಹುಕಾಲವಾಗಿದೆ. ಮಾಯಾವತಿ ಅವರು ತಮ್ಮ ನಡೆ-ನುಡಿಯ ಸೂತ್ರವನ್ನು ಮೋಶಾ ಯುಗದ ಬಿಜೆಪಿಯ ಕೈಗೆ ಒಪ್ಪಿಸಿದ್ದಾರೆ ಎನ್ನುವ ಗ್ರಹಿಕೆ ವರ್ಷದಿಂದ ವರ್ಷಕ್ಕೆ ಗಟ್ಟಿಯಾಗುತ್ತ ನಡೆದಿದೆ.

ಜವಾಹರಲಾಲ್ ನೆಹರೂ ಬದುಕಿದ್ದಿದ್ದರೆ, ಕಾಂಶೀರಾಮ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಮಾಡುತ್ತಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀ ಹೇಳಿದ್ದಾರೆ.

ಕಾಂಶೀರಾಮ್ ಅವರ ಹುಟ್ಟಿದ ದಿನದ ಆಚರಣೆಯ ಸಲುವಾಗಿ ಲಖ್ನೋದಲ್ಲಿ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ಸಂವಿಧಾನ ಸಮ್ಮೇಳನದಲ್ಲಿ ಭಾಗವಹಿಸಿ ಈ ಮಾತುಗಳನ್ನು ರಾಹುಲ್ ಆಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗತಕಾಲದಲ್ಲಿ ಸಾಮಾಜಿಕ-ರಾಜಕೀಯ ವಲಯದ ಕಾಂಗ್ರೆಸ್ ಪಕ್ಷ ಮಾಡಿದ ತಪ್ಪು ನಡೆಗಳೇ ಕಾಂಶೀರಾಮ್ ಅವರ ರಾಜಕೀಯ ಯಶಸ್ಸಿಗೆ ದಾರಿ ಮಾಡಿಕೊಟ್ಟಿತು ಎಂದು ಅವರು ತಮ್ಮ ಪಕ್ಷವನ್ನು ಆತ್ಮಚಿಂತನೆಗೆ ಹಚ್ಚಿದ್ದಾರೆ.

ಜಾತಿಜನಗಣತಿಗೆ ತಮ್ಮ ಪ್ರತಿಬದ್ಧತೆಯನ್ನು ಪುನರುಚ್ಚರಿಸಿದ ರಾಹುಲ್, ತಮ್ಮ ಕಡೆಯ ಉಸಿರಿನ ತನಕ ದೇಶದ ಸಂವಿಧಾನವನ್ನು ರಕ್ಷಿಸುವುದಾಗಿ ಸಾರಿದ್ದಾರೆ.

ನೆಹರೂ 1964ರಲ್ಲಿ ತೀರಿ ಹೋದರು. ಕಾಂಶೀರಾಮ್ ಅವರು ‘ಬಾಮ್ಸೆಫ್’ ಸಂಘಟನೆಯಿಂದ ರಾಜಕೀಯ ಆಗಸದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡದ್ದು 1978ರಲ್ಲಿ. ನಂತರ ಬಹುಜನ ಪಾರ್ಟಿಯನ್ನು ಸ್ಥಾಪಿಸಿದ್ದು 1984ರಲ್ಲಿ. 2006ರಲ್ಲಿ ತೀರಿ ಹೋದಾಗ ಕಾಂಶೀರಾಮ್ ವಯಸ್ಸು 72. ಅನಾರೋಗ್ಯ ಅವರನ್ನು ಅತೀವವಾಗಿ ಬಳಲಿಸಿ ಹಣ್ಣು ಮಾಡಿತ್ತು. ಪಕ್ಷವನ್ನು ಕಟ್ಟುವುದರಲ್ಲೇ ಬದುಕು ಸವೆಸಿದ ಕಾಂಶೀರಾಮ್, ಮುಖ್ಯಮಂತ್ರಿಯಂತಹ ಪದವಿಗಳನ್ನು ಮಾಯಾವತಿ ಅವರಿಗೇ ಬಿಟ್ಟುಕೊಟ್ಟಿದ್ದವರು.  ಹಲವು ಸಲ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕುಮಾರಿ ಮಾಯಾವತಿ ಕಾಂಶೀರಾಮ್ ಬೆಳೆಸಿ ರೂಪಿಸಿದ ರಾಜಕಾರಣಿ. ಕಾಂಗ್ರೆಸ್ ಜೊತೆ ಬಿ.ಎಸ್.ಪಿ. ಸಂಬಂಧ ಯಾವ ಹಂತದಲ್ಲೂ ಗಟ್ಟಿಯಾಗಿರಲಿಲ್ಲ. ನಂಬಿಕೆ ವಿಶ್ವಾಸದ ಕಂದಕ ದೊಡ್ಡದಿತ್ತು.

ಮಾಯಾವತಿ ಅವರು ರಾಜಕೀಯವಾಗಿ ಇಳಿಜಾರಿನ ಹಾದಿ ಹಿಡಿದು ಬಹುಕಾಲವಾಗಿದೆ. ಮಾಯಾವತಿ ಅವರು ತಮ್ಮ ನಡೆ-ನುಡಿಯ ಸೂತ್ರವನ್ನು ಮೋಶಾ ಯುಗದ ಬಿಜೆಪಿಯ ಕೈಗೆ ಒಪ್ಪಿಸಿದ್ದಾರೆ ಎನ್ನುವ ಗ್ರಹಿಕೆ ವರ್ಷದಿಂದ ವರ್ಷಕ್ಕೆ ಗಟ್ಟಿಯಾಗುತ್ತ ನಡೆದಿದೆ.

ಮುಂದಿನ ವರ್ಷ ಉತ್ತರಪ್ರದೇಶದ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ. ಮಾಯಾವತಿ ರಾಜಕೀಯವಾಗಿ ದುರ್ಬಲರಾಗಿ ಕಾಣಿಸಿರುವ ಈ ಹಂತದಲ್ಲಿ ಕಾಂಶೀರಾಮ್ ಅವರ ಪರಂಪರೆಗೆ ದಾವೇದಾರಿಕೆಗೆ ಬಿ.ಎಸ್.ಪಿ. ಹೊರಗೆ ಪೈಪೋಟಿ ನಡೆದಿದೆ.

ತಾವು ನಂಬಿದ ತತ್ವಸಿದ್ಧಾಂತಗಳೊಂದಿಗೆ ಕಾಂಶೀರಾಮ್ ಎಂದೆಂದಿಗೂ ರಾಜೀ ಮಾಡಿಕೊಳ್ಳಲಿಲ್ಲ ಎಂದಿರುವ ರಾಹುಲ್ ಗಾಂಧೀ, ಈ ಮಹಾನ್ ದಲಿತ ನಾಯಕನನ್ನು ಗಾಂಧೀ ಮತ್ತು ಅಂಬೇಡ್ಕರ್ ಜೊತೆ ಹೋಲಿಸಿದ್ದಾರೆ. ನಾರಾಯಣಗುರು, ಬಸವಣ್ಣ, ಅಂಬೇಡ್ಕರ್ ಹಾಗೂ ಗೌತಮ ಬುದ್ಧನಂತಹ ಮಹಾನ್ ಮಾನವತಾವಾದಿಗಳು ಸಾರಿದ ಮೌಲ್ಯಗಳನ್ನು ಸಂವಿಧಾನದಲ್ಲಿ ಅಡಕಗೊಳಿಸಲಾಗಿದೆ. ಸಂವಿಧಾನದ ಈ ಸಿದ್ಧಾಂತಗಳನ್ನು ಮೋದಿ ಎಂದಿಗೂ ನಂಬಿಲ್ಲ ಎಂದಿದ್ದಾರೆ.

ಕಾಂಶೀರಾಮ್ ಪುಣ್ಯತಿಥಿಯ ಸಂದರ್ಭದಲ್ಲಿ ಅವರ ರಾಜಕೀಯ ಹೋರಾಟದ ಪರಂಪರೆಗೆ ದಾವೆ ಹೂಡಿರುವ ಮತ್ತೊಬ್ಬ ರಾಜಕಾರಣಿ ಸಂಸದ ಚಂದ್ರಶೇಖರ ಆಝಾದ್ ರಾವಣ. ಅವರ ಪಕ್ಷದ ಹೆಸರು ಆಜಾದ್ ಸಮಾಜ ಪಾರ್ಟಿ (ಕಾಂಶೀರಾಮ್). 2020ರಲ್ಲೇ ಸ್ಥಾಪಿಸಲಾಗಿತ್ತು.

ಅವನತಿಯ ಹಾದಿ ಹಿಡಿದಿರುವ ಮಾಯಾವತಿಯವರ ಬಿ.ಎಸ್.ಪಿ. 2009ರಲ್ಲಿ ಶೇ.27ರಷ್ಟು ಮತ ಗಳಿಸಿತ್ತು. 2024ರ ಹೊತ್ತಿಗೆ ಈ ಪ್ರಮಾಣ ಶೇ.10ಕ್ಕೆ ಕುಸಿಯಿತು. 2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಶೇ.13ರಷ್ಟು ಮತ ಗಳಿಸಿ ನಾಲ್ಕನೆಯ ಸ್ಥಾನಕ್ಕೆ ಜಾರಿತು. 2024ರ ಲೋಕಸಭಾ ಚುನಾವಣೆಗಳಲ್ಲಿ ಪ್ರತಿಪಕ್ಷಗಳ ಕೂಟ ‘ಇಂಡಿಯಾ’  ಬಣ ಮತ್ತು ಆಡಳಿತ ಪಕ್ಷಗಳ ಬಣ ಎನ್.ಡಿ.ಎ. ಎರಡರಿಂದಲೂ ದೂರ ಕಾಯ್ದುಕೊಳ್ಳುವುದಾಗಿ ಸಾರಿದ್ದರು. ಒಂದು ಸೀಟನ್ನೂ ಗೆಲ್ಲದೆ ಹೋದರು. ಅವರ ಮತಗಳ ತಳಹದಿ ಎನಿಸಿದ್ದ ಜಾಟವೇತರ ದಲಿತರು ಸಮಾಜವಾದಿ-ಕಾಂಗ್ರೆಸ್ ಮೈತ್ರಿಕೂಟದತ್ತ ಗುಳೆ ಹೋಗಿದ್ದೇ ಈ ಐತಿಹಾಸಿಕ ಕುಸಿತಕ್ಕೆ ಕಾರಣ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ.

ಜಾಟವೇತರ ದಲಿತರನ್ನು ದೂರ ಮಾಡಿಕೊಂಡು ಮಾಯಾವತಿ ಖಾಲಿ ಮಾಡಿರುವ ಜಾಗವನ್ನು ಭರ್ತಿ ಮಾಡಲು ಹಲವು ಪಕ್ಷಗಳು ತವಕಿಸಿವೆ. ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಮಾಯಾವತಿಯವರು ಮೀಸಲಾತಿ ವಿರೋಧಿ ಪಕ್ಷಗಳೆಂದೂ, ಅವುಗಳ ಸಹವಾಸ ಮಾಡಬಾರದೆಂದೂ ಖಾರವಾಗಿ ಪ್ರತಿಕ್ರಿಯಿಸಿದ್ದರು ಮಾಯಾವತಿ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...