ಹೆಣ್ಣು ಮಗು ಹುಟ್ಟಿದ್ದಕ್ಕೆ ಪತ್ನಿಯನ್ನೇ ಜೀವಂತ ಸುಟ್ಟ ವಿಕೃತ ಪತಿ

Date:

ಲಿಂಗ ತಾರತಮ್ಯದ ವಿರುದ್ಧ ಹೋರಾಟಗಳು, ಕಾನೂನುಗಳು, ಜಾಗೃತಿ ಕಾರ್ಯಕ್ರಮಗಳು ಚಾಲ್ತಿಯಲ್ಲಿದ್ದರೂ ಗಂಡು ಮೇಲು, ಹೆಣ್ಣು ಕೀಳೆಂಬ ಧೋರಣೆ ಇನ್ನೂ ಸಮಾಜದಲ್ಲಿ ಉಳಿದಿದೆ. ಪುರುಷಾಧಿಪತ್ಯ ತುಂಬಿ ತುಳುಕುತ್ತಿರುವ ಸಾಮಾಜದಲ್ಲಿ ಗಂಡು ಮಗು ಬೇಕೆಂಬ ಧೋರಣೆ ಪೋಷಕರಲ್ಲಿ ಹೆಚ್ಚುತ್ತಲೇ ಇದೆ. ಪುರುಷ ಅಹಂಕಾರದ ಸಮಾಜದಲ್ಲಿ ಹೆಣ್ಣು ಮಗುವನ್ನು ಹೆತ್ತಿದ್ದಕ್ಕೆ ಮಹಿಳೆಯೊಬ್ಬರನ್ನು ಜೀವಂತವಾಗಿ ಸುಟ್ಟು ಹಾಕಿ ವಿಕೃತಿ ಮೆರೆದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಗಂಗಾಖೇಡ್ ನಾಕಾ ದುಶ್ಕೃತ್ಯ ನಡೆದಿದೆ. ಕುಂಡ್ಲಿಕ್ ಉತ್ತಮ್ ಕಾಳೆ ಎಂಬಾತ ತನ್ನ ಪತ್ನಿ ಮೈನಾ ಅವರನ್ನು ಜೀವಂತವಾಗಿ ಸುಟ್ಟು ಕೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಳೆ ಮತ್ತು ಮೈನಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಕಾಳೆ ಮತ್ತು ಆತನ ಪೋಷಕರು ಗಂಡು ಮಗು ಆಗಲೇಬೇಕೆಂಬ ಹಠಕ್ಕೆ ಬಿದ್ದಿದ್ದರು. ಇತ್ತೀಚೆಗೆ, ಮೈನಾ ಅವರಿಗೆ 3ನೇ ಹೆರಿಗೆ ಆಗಿದ್ದು, ಹೆಣ್ಣು ಮಗು ಜನಿಸಿತ್ತು. ಹೆಣ್ಣು ಮಗು ಹುಟ್ಟಿದ್ದಕ್ಕಾಗಿ ಮೈನಾ ಜೊತೆ ಕಾಳೆ ಪದೇ-ಪದೇ ಜಗಳವಾಡುತ್ತಿದ್ದ ಎಂದು ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇತ್ತೀಚೆಗೆ, ಮತ್ತೆ ಮಗು ವಿಚಾರಕ್ಕೆ ಜಗಳವಾಗಿದ್ದು, ಮೈನಾ ಅವರ ಮೇಲೆ ಕಾಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಕೂಡಲೇ ನೆರೆಹೊರೆಯವರು ಧಾವಿಸಿ, ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ, ಆಕೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ.

ಘಟನೆಯ ಕುರಿತು ಗಂಗಾಖೇಡ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಕಾಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ನೆನಪಿನಲ್ಲಿಡಿ: ಮಹಿಳೆಯರಲ್ಲಿ ‘X’ ಕ್ರೋಮೋಸೋಮ್‌ ಮಾತ್ರವೇ ಇರುತ್ತದೆ. ಪುರುಷನಲ್ಲಿ ‘X’ ಮತ್ತು ‘Y’ ಕ್ರೋಮೋಸೋಮ್‌ ಎರಡೂ ಇರತ್ತವೆ. ಲೈಂಗಿಕತೆಯ ಸಮಯದಲ್ಲಿ ಮಹಿಳೆಯಿಂದ ‘X’ ಕ್ರೋಮೋಸೋಮ್‌ ಬಿಡುಗಡೆಯಾಗುತ್ತದೆ. ಪುರುಷನಿಂದ ‘X’ ಮತ್ತು ‘Y’ ಕ್ರೋಮೋಸೋಮ್‌ಗಳು ಬಿಡುಗಡೆಯಾಗುತ್ತದೆ. ಈ ವೇಳೆ, ಮಹಿಳೆಯ ‘X’ ಕ್ರೋಮೋಸೋಮ್‌ ಜೊತೆಗೆ, ಪುರುಷನಲ್ಲಿನ ‘X’ ಕ್ರೋಮೋಸೋಮ್‌ ಸೇರಿದರೆ ‘XX’ ಜೀನೋಟೈಪ್‌ನ ರಚನೆಯಾಗಿ ಹೆಣ್ಣು ಮಗು ಜನಿಸುತ್ತದೆ. ಮಹಿಳೆಯ ‘X’ ಕ್ರೋಮೋಸೋಮ್‌ ಜೊತೆಗೆ, ಪುರುಷನಲ್ಲಿನ ‘Y’ ಕ್ರೋಮೋಸೋಮ್‌ ಸೇರಿದರೆ ‘XY’ ಜೀನೋಟೈಪ್‌ ರಚನೆಯಾಗಿ ಗಂಡು ಮಗು ಜನಿಸುತ್ತದೆ. ಹೀಗಾಗಿ, ಹೆಣ್ಣು ಅಥವಾ ಗಂಡು ಮಗು ಹುಟ್ಟುವುದರಲ್ಲಿ ಪುರುಷನ ಪಾತ್ರವಿದೆಯೇ ಹೊರತು, ಮಹಿಳೆಯದ್ದಲ್ಲ. ತಾವು ಇಚ್ಚಿಸಿದ ಮಗು ಜನಿಸದೇ ಇರುವುದಕ್ಕೆ ಪುರುಷನೇ ಕಾರಣ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...