ಶಾರೂಖ್ ಪತ್ನಿ ಗೌರಿ ಮತಾಂತರ ಆಗಿದ್ದಾರೆ ಎಂದು ಚಿತ್ರ ವೈರಲ್; ಬೇರೆಯೇ ಇದೆ ಅಸಲಿಯತ್ತು!

Date:

ಹೊಸ ವರ್ಷದ ದಿನದಂದು ನಟ ಶಾರೂಖ್ ಖಾನ್ ಕುಟುಂಬವು ಮೆಕ್ಕಾಗೆ ತೆರಳಿದೆ. ಶಾರೂಖ್ ಅವರ ಪತ್ನಿ ಗೌರಿ ಅವರು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂದು ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರದಲ್ಲಿ – ಶಾರುಖ್ ಖಾನ್, ಗೌರಿ ಖಾನ್, ಆರ್ಯನ್ ಖಾನ್ ಇದ್ದಾರೆ. ಆದರೆ, ಆ ಚಿತ್ರ ಅಸಲಿಯಲ್ಲ ನಕಲಿ ಎಂದು ತಿಳಿದುಬಂದಿದೆ.

ವೈರಲ್ ಆಗಿರುವ ಚಿತ್ರದಲ್ಲಿ, ನಟ ಶಾರುಖ್ ಖಾನ್, ಅವರ ಪತ್ನಿ, ಇಂಟೀರಿಯರ್ ಡಿಸೈನರ್ ಗೌರಿ ಹಾಗೂ ಮಗ, ಚಲನಚಿತ್ರ ನಿರ್ಮಾಪಕ ಆರ್ಯನ್ ಖಾನ್ ಇದ್ದಾರೆ. ಗೌರಿ ಅವರು ಕಪ್ಪು ಕುರ್ತಿ, ಬೂದು ಬಣ್ಣದ ಹಿಜಾಬ್ ಹಾಗೂ ಬಿಳಿ ಕುರ್ತಾ ಧರಿಸಿದ್ದು, ತಮ್ಮೆದುರು ನಿಂತಿರುವ ಶಾರುಖ್ ಅವರನ್ನು ನೋಡಿ ನಗುತ್ತಿದ್ದಾರೆ. ಆರ್ಯನ್ ಕೂಡ ಗೌರಿ ಅವರ ಹಿಂದೆ ಬಿಳಿ ಕುರ್ತಾ ಧರಿಸಿ ಶಾರುಖ್ ಅವರನ್ನು ನೋಡುತ್ತಿದ್ದಾರೆ. ಚಿತ್ರದ ಹಿನ್ನೆಲೆಯಲ್ಲಿ (ಬ್ಯಾಕ್‌ಗ್ರೌಂಡ್‌) ಮೆಕ್ಕಾದ ಪೂಜನಾ ಸ್ಥಳ ಕಾಣಿಸುತ್ತದೆ.

ಆ ಚಿತ್ರವನ್ನು ನಿಜವೆಂದು ನಂಬಿರುವ ಹಲವರು ಶಾರೂಖ್ ಅವರ ಪತ್ನಿ ಇಸ್ಲಾಂಗೆ ಮತಾಂತರವಾಗಿದ್ದಾರೆ ಎಂದು ಹಂಚಿಕೊಳ್ಳುತ್ತಿದ್ದಾರೆ. ಆದರೆ, ವಾಸ್ತವ ಬೇರೆಯೇ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

 ಆ ಚಿತ್ರ ನಕಲಿಯಾಗಿದ್ದು, ಖಾನ್ ಕುಟುಂಬ ಮೆಕ್ಕಾಗೆ ತೆರಳಿಲ್ಲ ಎಂದು ತಿಳಿದುಬಂದಿದೆ. ಚಿತ್ರವನ್ನು ಡೀಪ್‌ಫೇಕ್ ಅಥವಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ರಚಿಸಲಾಗಿದೆ ಎಂದು ಸ್ಪಷ್ಟವಾಗಿದೆ.

ಧರ್ಮದ ಬಗ್ಗೆ ಗೌರಿ ಹೇಳಿರುವುದೇನು?

2005ರಲ್ಲಿ ‘ಕಾಫಿ ವಿಥ್ ಕರಣ್’ ಸೀಸನ್ 2ರ ಚಾಟ್ ಶೋನಲ್ಲಿ ಮಾತನಾಡಿದ್ದ ಗೌರಿ, “ಶಾರೂಖ್ ಮತ್ತು ತಮ್ಮ ನಡುವೆ ಧಾರ್ಮಿಕವಾಗಿ ಉತ್ತಮ ಹೊಂದಾಣಿಕೆ ಇದೆ. ನಾನು ಶಾರುಖ್ ಅವರ ಧರ್ಮವನ್ನು ಗೌರವಿಸುತ್ತೇನೆ. ಹಾಗೆಂದ ಮಾತ್ರಕ್ಕೆ, ನಾನು ಇಸ್ಲಾಂಗೆ ಮತಾಂತರವಾಗುತ್ತೇನೆ ಎಂದಲ್ಲ. ಮತಾಂತರದಲ್ಲಿ ನನಗೆ ನಂಬಿಕೆ ಇಲ್ಲ. ಪ್ರತಿಯೊಬ್ಬರೂ ವೈಯಕ್ತಿಕವಾಗಿ ಅವರ ಧರ್ಮವನ್ನು ಅನುಸರಿಸುತ್ತಾರೆ. ಸಹಜವಾಗಿ, ಪರಸ್ಪರರ ಧಾರ್ಮಿಕ ನಂಬಿಕೆ ಬಗ್ಗೆ ಗೌರವ ಇರಬೇಕು. ಶಾರುಖ್ ಎಂದಿಗೂ ನನ್ನ ಧರ್ಮಕ್ಕೆ ಅಗೌರವ ತೋರಿಸಿಲ್ಲ. ನಾನು ಕೂಡ ಅವರ ಧರ್ಮಕ್ಕೆ ಅಗೌರವ ತೋರುವುದಿಲ್ಲ” ಎಂದು ಹೇಳಿದ್ದರು.

ಶಾರುಖ್ ಮತ್ತು ಗೌರಿ 1991 ರಲ್ಲಿ ವಿವಾಹವಾದರು. ಅವರಿಗೆ ಮೂವರು ಮಕ್ಕಳಿದ್ದಾರೆ – ಆರ್ಯನ್, ಸುಹಾನಾ ಖಾನ್ ಮತ್ತು ಅಬ್ರಾಮ್ ಖಾನ್.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...