ಆನ್‌ಲೈನ್ ಅಶ್ಲೀಲತೆ ನಿಗ್ರಹಕ್ಕೆ ಕ್ರಮ: ಕೇಂದ್ರದ ಕರಡು ನಿಯಮಾವಳಿ ಏನು ಹೇಳುತ್ತದೆ?

Date:

ಆನ್‌ಲೈನ್‌ನಲ್ಲಿ ಅಶ್ಲೀಲತೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನಿಯಮಾವಳಿಯನ್ನು ಜಾರಿಗೊಳಿಸಲು ಸಜ್ಜಾಗುತ್ತಿದೆ. ವಯಸ್ಸಿನ ಆಧಾರದಲ್ಲಿ ಹಲವು ವಿಚಾರಗಳನ್ನು ವರ್ಗೀಕರಿಸುವ ಐಟಿ (ಡಿಜಿಟಲ್ ಕೋಡ್) ನಿಯಮಗಳು, 2026 ಕರಡು ನಿಯಮಾವಳಿ ಸಿದ್ಧವಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಯಾವುದೇ ಧರ್ಮ ಅಥವಾ ಸಮುದಾಯಗಳ ಮೇಲಿನ ದಾಳಿಗಳು, ಜನರನ್ನು ಪ್ರಚೋದಿಸುವುದು, ಸುಳ್ಳು ಮಾಹಿತಿ ಮೊದಲಾದವುಗಳನ್ನೂ ಸೇರಿಸಿ ಈ ನಿಯಮಾವಳಿ ಸಿದ್ಧಪಡಿಸಲಾಗಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ‘ಬೀರ್ ಬೈಸೆಪ್ಸ್’ ಎಂದೇ ಹೆಸರುಗಳಿಸಿಕೊಂಡಿರುವ ದೇಶದ ಪಾಡ್‌ ಕಾಸ್ಟರ್ ಮತ್ತು ಯೂಟ್ಯೂಬರ್ ರಣವೀರ್ ಅಲ್ಲಾಬಾದಿಯಾ, ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲೇಟೆಂಟ್’ ಕಾರ್ಯಕ್ರಮದಲ್ಲಿ ಅಭ್ಯರ್ಥಿಯೋರ್ವರಿಗೆ ಕೇಳಿದ ಪ್ರಶ್ನೆಯೊಂದು ದೇಶಾದ್ಯಂತ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹೇಳಿಕೆಗಳ ವಿರುದ್ಧ ಸಾರ್ವಜನಿಕ ಪ್ರತಿಕ್ರಿಯೆಯ ಕಾರಣದಿಂದಾಗಿ ಇದೀಗ ಈ ಕರಡು ನಿಯಮಾವಳಿ ಸಿದ್ಧಪಡಿಸಲಾಗಿದೆ.

ಇದನ್ನು ಓದಿದ್ದೀರಾ? ಮನಸ್ಸಿನಲ್ಲಿರುವ ಕೊಳಕನ್ನು ಯೂಟ್ಯೂಬ್‌ನಲ್ಲಿ ಕಕ್ಕಿದ್ದಾನೆ: ರಣವೀರ್‌ ವಿರುದ್ಧ ಸುಪ್ರೀಂ ಆಕ್ರೋಶ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಐಟಿ (ಡಿಜಿಟಲ್ ಕೋಡ್) ನಿಯಮಗಳು, 2026ರ ಕರಡನ್ನು ಐಟಿ ಕಾಯ್ದೆ, 2000ರ ಸೆಕ್ಷನ್ 87 (1) ರ ಅಡಿಯಲ್ಲಿ ಪ್ರಸ್ತಾಪಿಸಲಾಗಿದೆ. ಕಾಯ್ದೆಯ ಸೆಕ್ಷನ್ 67, 67 ಎ, 67 ಬಿ ಮತ್ತು 66 ಬಿ ಅಡಿಯಲ್ಲಿ ಈ ನಿಯಮಗಳಿವೆ. ಆನ್‌ಲೈನ್ ಅಶ್ಲೀಲತೆ ಪ್ರಕಟಿಸುವವರ ವಿರುದ್ಧ ಜೈಲು ಶಿಕ್ಷೆ, ದಂಡದ ವಿವರವನ್ನು ಇದು ಹೊಂದಿದೆ.

ಕರಡು ನಿಯಮಗಳ ಪ್ರಕಾರ ‘ಡಿಜಿಟಲ್ ಕಂಟೆಂಟ್‌’ನಲ್ಲಿ ಏನಿರಬಾರದು?

  • ಉತ್ತಮ ಅಭಿರುಚಿ ಅಥವಾ ಸಭ್ಯತೆಯ ವಿರುದ್ಧದ ಅಪರಾಧವಿರಬಾರದು
  • ಯಾವುದೇ ಜನಾಂಗ, ಜಾತಿ, ವರ್ಣ, ಧರ್ಮ ಮತ್ತು ರಾಷ್ಟ್ರೀಯತೆಯನ್ನು ಅವಹೇಳನ ಮಾಡಬಾರದು
  • ಧರ್ಮಗಳು ಅಥವಾ ಸಮುದಾಯಗಳ ಮೇಲೆ ದಾಳಿ ಮಾಡುವುದು ಅಥವಾ ಧಾರ್ಮಿಕ ಗುಂಪುಗಳನ್ನು ಅವಹೇಳನ ಮಾಡುವ ಅಥವಾ ಕೋಮು ಮನೋಭಾವಗಳನ್ನು ಉತ್ತೇಜಿಸುವ ದೃಶ್ಯಗಳು ಅಥವಾ ಪದಗಳನ್ನು ಒಳಗೊಂಡಿರಬಾರದು
  • ಯಾವುದೇ ಅಶ್ಲೀಲ, ಮಾನಹಾನಿಕರ, ಉದ್ದೇಶಪೂರ್ವಕ, ಸುಳ್ಳು, ವ್ಯಂಗ್ಯ, ಅರ್ಧ-ಸತ್ಯಗಳನ್ನು ಹೊಂದಿರಬಾರದು
  • ಜನರನ್ನು ಅಪರಾಧಕ್ಕೆ ಪ್ರಚೋದಿಸುವ, ಅವ್ಯವಸ್ಥೆ ಅಥವಾ ಹಿಂಸೆಯನ್ನು ಉಂಟುಮಾಡುವ ಅಥವಾ ಕಾನೂನು ಉಲ್ಲಂಘನೆ ಮಾಡುವ ಅಥವಾ ಯಾವುದೇ ರೀತಿಯಲ್ಲಿ ಹಿಂಸೆ ಅಥವಾ ಅಶ್ಲೀಲತೆಯನ್ನು ವೈಭವೀಕರಿಸಬಾರದು
  • ಹಿಂಸೆ, ಅಶ್ಲೀಲತೆ ಅಥವಾ ಅಪರಾಧವನ್ನು ಅಪೇಕ್ಷಣೀಯವೆಂದು ಪ್ರಸ್ತುತಪಡಿಸುವಂತಿಲ್ಲ
  • ಅಸಭ್ಯ, ಅಸಹ್ಯಕರ ಅಥವಾ ಆಕ್ರಮಣಕಾರಿ ವಿಷಯಗಳನ್ನು ಹೊಂದಿರಬಾರದು
  • ಯಾವುದೇ ವ್ಯಕ್ತಿಯನ್ನು ವೈಯಕ್ತಿಕವಾಗಿ ಅಥವಾ ಕೆಲವು ಗುಂಪುಗಳು, ದೇಶದ ಸಾಮಾಜಿಕ, ಸಾರ್ವಜನಿಕ ಮತ್ತು ನೈತಿಕ ಜೀವನದ ಭಾಗಗಳನ್ನು ಟೀಕಿಸುವುದು, ನಿಂದಿಸುವಂತಿಲ್ಲ
  • ಕೆಲವು ಜನಾಂಗೀಯ, ಭಾಷಾ ಮತ್ತು ಪ್ರಾದೇಶಿಕ ಗುಂಪುಗಳ ಚಿತ್ರಣವನ್ನು ನಿಂದಿಸುವುದು, ವ್ಯಂಗ್ಯ ಮಾಡುವುದು ಮತ್ತು ಅಶ್ಲೀಲ ಮನೋಭಾವವನ್ನು ಪ್ರತಿಬಿಂಬಿಸುವ ದೃಶ್ಯಗಳು ಅಥವಾ ಪದಗಳನ್ನು ಹೊಂದಿರುವುದು
  • ಮಹಿಳೆಯರ ದೇಹದ ಆಕೃತಿ, ಆಕೆಯ ರೂಪ ಅಥವಾ ದೇಹ ಅಥವಾ ಅದರ ಯಾವುದೇ ಭಾಗವನ್ನು ಯಾವುದೇ ರೀತಿಯಲ್ಲಿ ರಚಿಸುವುದು ಅಥವಾ ಹಂಚಿಕೊಳ್ಳುವುದು/ ಪ್ರವೇಶಿಸುವುದು/ ಅಪ್‌ಲೋಡ್ ಮಾಡುವುದು ಅಥವಾ ಚಿತ್ರಿಸಬಾರದು. ಈ ಮೂಲಕ ಅಸಭ್ಯ ಅಥವಾ ಮಹಿಳೆಯರಿಗೆ ಅವಹೇಳನಕಾರಿಯಾಗಿ ಅಥವಾ ಸಾರ್ವಜನಿಕ ನೈತಿಕತೆಯನ್ನು ಕೆಡಿಸಬಾರದು, ಭ್ರಷ್ಟಗೊಳಿಸಬಾರದು ಅಥವಾ ಗಾಯಗೊಳಿಸಬಾರದು
  • ಮಕ್ಕಳನ್ನು ಅವಹೇಳನ ಮಾಡಬಾರದು. ಮಕ್ಕಳನ್ನು ಉದ್ದೇಶಿಸಿ ಯಾವುದೇ ಕೆಟ್ಟ ಭಾಷೆ ಬಳಸುವಂತಿಲ್ಲ, ಹಿಂಸೆಯ ದೃಶ್ಯಗಳನ್ನು ಪ್ರಸಾರ ಮಾಡಬಾರದು
  • ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳನ್ನು ಅವಹೇಳನ ಮಾಡಬಾರದು

ಈ ರೀತಿಯಲ್ಲಿ ‘U’, 7+, 13+, 16+, ವಯಸ್ಕರಿಗೆ ಮಾತ್ರ, ವೈದ್ಯರು ಅಥವಾ ವಿಜ್ಞಾನಿಗಳಂತಹ ವೃತ್ತಿಪರರಿಗೆ ಮಾತ್ರ ಎಂಬ ವರ್ಗೀಕರಣವನ್ನು ಮಾಡಬೇಕು ಎಂದು ಹೇಳುತ್ತದೆ. ಐಟಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021ರ ಎಲ್ಲಾ ನಿಬಂಧನೆಗಳು ಈ ನಿಯಮಗಳಿಗೆ ಸಹ ಅನ್ವಯಿಸುತ್ತವೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...