ಪುದುಚೆರಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಟಿವಿಕೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದೆ. ಪುದುಚೆರಿಯ 30 ವಿಧಾನಸಭಾ ಕ್ಷೇತ್ರಗಳಲ್ಲೂ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಟಿವಿಕೆ ಸ್ಪಷ್ಟಪಡಿಸಿದೆ.
ಪುದುಚೆರಿ ಕೇಂದ್ರಾಡಳಿತ ಪ್ರದೇಶದ ಮಂಗಳಂ ಮತ್ತು ಕದಿರ್ಕಾಮಮ್ ವಿಧಾನಸಭಾ ಕ್ಷೇತ್ರದಿಂದ ಟಿವಿಕೆ ಇಬ್ಬರು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಔಸುಡು ಮೀಸಲು ಕ್ಷೇತ್ರದಿಂದ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎ ಕೆ ಸಾಯಿ ಜೆ ಸರವಣನ್ ಕುಮಾರ್ ಅವರು ಬಿಜೆಪಿಯಲ್ಲಿ ಟಿಕೆಟ್ ದೊರಕದ ಹಿನ್ನೆಲೆಯಲ್ಲಿ ಕಳೆದ ಶನಿವಾರ ಟಿವಿಕೆ ಪಕ್ಷವನ್ನು ಸೇರ್ಪಡೆಗೊಂಡಿದ್ದರು. ಈಗ ತಿರುಭುವನೈ ಮೀಸಲು ಕ್ಷೇತ್ರದಿಂದ ಅವರನ್ನು ಟಿವಿಕೆ ಕಣಕ್ಕಿಳಿಸಿದೆ.
ಮಾಜಿ ಎಐಎಡಿಎಂಕೆ ಶಾಸಕರಾದ ಕೆ ಎ ಯು ಅಸನಾ ಮತ್ತು ಎಲ್ ಪೆರಿಯಸಾಮಿ ಕ್ರಮವಾಗಿ ಕಾರೈಕಲ್ (ದಕ್ಷಿಣ) ಮತ್ತು ನೆಟ್ಟಪಕ್ಕಂ (ಮೀಸಲು) ಕ್ಷೇತ್ರಗಳಿಂದ ಸ್ಪರ್ಧಿಸಲು ಟಿವಿಕೆ ಟಿಕೆಟ್ ನೀಡಿದೆ.
ಬಿಜೆಪಿಯ ಪುದುಚೆರಿ ಘಟಕದ ಮಾಜಿ ಅಧ್ಯಕ್ಷ ವಿ ಸಾಮಿನಾಥನ್ ಅವರನ್ನು ಲಾಸ್ಪೆಟ್ ಕ್ಷೇತ್ರಕ್ಕೆ ಟಿಕೆಟ್ ನೀಡಿದ್ದಲ್ಲದೆ, ಪುದುಚೆರಿಯ ಮಾಜಿ ಪೊಲೀಸ್ ಮಹಾನಿರ್ದೇಶಕ ವಿ ಜೆ ಚಂದ್ರನ್ ಮತ್ತು ಮಾಜಿ ಕಾಂಗ್ರೆಸ್ ಶಾಸಕ ಎನ್ ಧನವೇಲೌ ಅವರಿಗೂ ಟಿವಿಕೆ ಟಿಕೆಟ್ ಘೋಷಣೆ ಮಾಡಿದೆ.
ಇದನ್ನೂ ಓದಿ :ಲಿಂಗತ್ವ ಅಲ್ಪಸಂಖ್ಯಾತರ ಅಸ್ಮಿತೆಯನ್ನೇ ಅಳಿಸುವ ಮಸೂದೆ: ಆತ್ಮಗೌರವಕ್ಕೆ ಕೊಡಲಿಪೆಟ್ಟು





