ಜೆಟ್ ‘100%’ ಸುರಕ್ಷಿತ ಎಂದ ಸಂಸ್ಥೆ: ಪವಾರ್ ಸಾವಿನ ಹಿಂದೆ ಪಿತೂರಿ – ಮಮತಾ ಶಂಕೆ

Date:

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ವಿಮಾನ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಲಿಯರ್ ಜೆಟ್ 45 (Learjet 45) ವಿಮಾನ ನಿರ್ವಾಹಕ ಸಂಸ್ಥೆಯು “ಈ ವಿಮಾನವು ಶೇ.100ರಷ್ಟು ಸುರಕ್ಷಿತ ಸುರಕ್ಷಿತ” ಎಂದು ಹೇಳಿದೆ. ಈ ಸಂಸ್ಥೆಯ ಈ ಹೇಳಿಕೆಯು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಹಾಗೆಯೇ ಪವಾರ್ ಸಾವಿನ ಹಿಂದೆ ಪಿತೂರಿ ಇರುವ ಶಂಕೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಕ್ತಪಡಿಸಿದ್ದಾರೆ.

ಅಜಿತ್ ಪವಾರ್ ವಿಮಾನ ದುರಂತದಲ್ಲಿ ಮಡಿದ ಬಳಿಕ ವಿಮಾನಯಾನ ಸಂಸ್ಥೆ ವಿಎಸ್‌ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಹೇಳಿಕೆಯನ್ನು ಹೊರಡಿಸಿದೆ. “ಅಜಿತ್ ಪವಾರ್ ಅವರಿದ್ದ ಜೆಟ್ ಶೇ.100ರಷ್ಟು ಸುರಕ್ಷಿತವಾದದ್ದು, ಅದರಲ್ಲಿದ್ದ ಸಿಬ್ಬಂದಿಯೂ ಪರಿಣಿತರು. ಹಾರಾಟಕ್ಕೂ ಮುನ್ನ ಯಾವುದೇ ತಾಂತ್ರಿಕ ಸಮಸ್ಯೆಗಳಿರಲಿಲ್ಲ” ಎಂದು ಹೇಳಿದೆ.

ಇದನ್ನು ಓದಿದ್ದೀರಾ? ಬಿಜೆಪಿ ಆಳ್ವಿಕೆಯಲ್ಲಿ ಭಾರತ ನಿಜವಾಗಿಯೂ ಸ್ವತಂತ್ರವಾಗಿಲ್ಲ: ಮಮತಾ ಬ್ಯಾನರ್ಜಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿಮಾನಯಾನ ಸಂಸ್ಥೆ ತಾಂತ್ರಿಕ ವೈಫಲ್ಯ ತಳ್ಳಿಹಾಕಿದ್ದರೂ, ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಘಟನೆಯ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಿದೆ. ತನಿಖಾಧಿಕಾರಿಗಳು ವಿಮಾನದ ಮಾಹಿತಿ, ವಿಮಾನ ನಿರ್ವಹಣಾ ದಾಖಲೆಗಳು, ಹವಾಮಾನ ಪರಿಸ್ಥಿತಿ ಇತರ ಮಾಹಿತಿಗಳನ್ನು ವಿಶ್ಲೇಷಿಸುತ್ತಿದೆ.

ವಿಎಸ್‌ಆರ್ ಸಂಸ್ಥೆ ಮಾತ್ರ , “ಲ್ಯಾಂಡಿಂಗ್ ಸಮಯದಲ್ಲಿ ಇದ್ದ ಕಡಿಮೆ ಗೋಚರತೆಯು ಮತ್ತು ಹವಾಮಾನ ವೈಪರೀತ್ಯವು ಅಪಘಾತಕ್ಕೆ ಕಾರಣವಾಗಿರಬಹುದು” ಎಂದು ಸಂಸ್ಥೆ ಶಂಕಿಸಿದೆ. ಹಾಗೆಯೇ ಅಪಘಾತದ ನಿಖರ ಕಾರಣವನ್ನು ತಿಳಿಯಲು ಡಿಜಿಸಿಎ (DGCA) ನಡೆಸುವ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ವಿಎಸ್‌ಆರ್ ತಿಳಿಸಿದೆ.

ಈ ನಡುವೆ ಅಜಿತ್ ಪವಾರ್ ನಿಧನದ ಬಗ್ಗೆ ಮಮತಾ ಬ್ಯಾನರ್ಜಿ ಅನುಮಾನ ವ್ಯಕ್ತಪಡಿಸಿದ್ದಾರೆ. ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಬ್ಯಾನರ್ಜಿ, “ಈ ಘಟನೆಯ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು” ಎಂದು ಒತ್ತಾಯಿಸಿದ್ದಾರೆ. ತನಿಖಾ ಸಂಸ್ಥೆಗಳ ಮೇಲೆ ವಿಶ್ವಾಸವಿಲ್ಲ ಎಂದಿರುವ ಮಮತಾ, “ನಮಗೆ ಕೇವಲ ಸುಪ್ರೀಂ ಕೋರ್ಟ್ ಮೇಲೆ ಮಾತ್ರ ನಂಬಿಕೆ ಇದೆ” ಎಂದು ಹೇಳಿದ್ದಾರೆ. “ಅಜಿತ್ ಪವಾರ್ ಅವರ ಸಾವಿನ ಹಿಂದೆ ಪಿತೂರಿ ಇರುವ ಸಾಧ್ಯತೆಯಿದೆ” ಎಂದೂ ಅನುಮಾನ ವ್ಯಕ್ತಪಡಿಸಿದ್ದಾರೆ.

ಲಿಯರ್ ಜೆಟ್ 45 ಬಗ್ಗೆ ಮಾಹಿತಿ ತಿಳಿಯಿರಿ

ಲಿಯರ್ ಜೆಟ್ 45 (Learjet 45) ಒಂದು ಪ್ರಸಿದ್ಧ ಮಧ್ಯಮ ಗಾತ್ರದ ಜೆಟ್ ವಿಮಾನವಾಗಿದ್ದು, ಇದನ್ನು ಕೆನಡಾದ ಬಾಂಬಾರ್ಡಿಯರ್ ಏರೋಸ್ಪೇಸ್ (Bombardier Aerospace) ಸಂಸ್ಥೆಯು ತಯಾರಿಸಿದೆ. ಸಾಮಾನ್ಯವಾಗಿ 8 ರಿಂದ 9 ಮಂದಿ ಇದರಲ್ಲಿ ಪ್ರಯಾಣಿಸಬಹುದು. ಇದನ್ನು ಹಾರಾಟಕ್ಕೆ ಅತ್ಯಂತ ಸುರಕ್ಷಿತ ವಿಮಾನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದಲೇ ಇದನ್ನು ಹೆಚ್ಚಾಗಿ ಉದ್ಯಮಿಗಳ ಪ್ರಯಾಣ, ವಿಐಪಿಗಳ ಸಂಚಾರ ಮತ್ತು ಏರ್ ಆಂಬ್ಯುಲೆನ್ಸ್ (ವೈದ್ಯಕೀಯ ತುರ್ತು ಸೇವೆ) ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಒಂದು ಬಾರಿ ಇಂಧನ ತುಂಬಿಸಿದರೆ ಸುಮಾರು 3,167 ಕಿ.ಮೀ ನಿಂದ 3,900 ಕಿ.ಮೀ.ವರೆಗೆ ಹಾರಬಲ್ಲ ವಿಮಾನ ಇದಾಗಿದೆ. ಗರಿಷ್ಠ 51,000 ಅಡಿ ಎತ್ತರದವರೆಗೆ ಹಾರುವ ಸಾಮರ್ಥ್ಯ ಹೊಂದಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...