ಸತ್ಯಾನ್ವೇಷಣೆಯ ಹಾದಿಯಲ್ಲಿ ರಾಹುಲ್‌ ಗಾಂಧಿ; ಚುನಾವಣಾ ಅಕ್ರಮದ ಆರೋಪವೂ ನಿಜವಾಗಲಿದೆ

Date:

ದೇಶದ ಪ್ರಧಾನಿ ನರೇಂದ್ರ ಮೋದಿಯವರು ರಾತ್ರೋರಾತ್ರಿ ನೋಟ್ ಬ್ಯಾನ್ ಮಾಡಿದಾಗ ರಾಹುಲ್ ಗಾಂಧಿಯವರು ಇದು ಮೂರ್ಖತನದ ನಿರ್ಧಾರ, ಇದರಿಂದ ದೇಶದ ಆರ್ಥಿಕತೆಗೆ ಪೆಟ್ಟಾಗುತ್ತದೆ, ಸಣ್ಣ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದರು. ನಂತರ ಅದು ಸತ್ಯವಾಯಿತು. ದೇಶದಲ್ಲಿ 125 ಜನ ಅಮಾಯಕರು ಬ್ಯಾಂಕ್ ಮುಂದೆ ನಿಂತು ಅಸುನೀಗಿದರು. ಬಹುತೇಕ ಸಣ್ಣ ವ್ಯಾಪಾರಸ್ಥರು ನಷ್ಟ ಅನುಭವಿಸಿದರು.

ದೇಶದಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವ ಮುಗಿದೇ ಹೋಯಿತು ಎಂದು ಬೊಬ್ಬೆ ಹೊಡೆಯುವವರ ಮಧ್ಯೆ 2024ರ ಲೋಕಸಭಾ ಚುನಾವಣೆಯಲ್ಲಿ ಫಿನಿಕ್ಸ್ ಹಕ್ಕಿಯಂತೆ ಎದ್ದು ಬಂದಿದೆ ಕಾಂಗ್ರೆಸ್‌. ಇದಕ್ಕೆ ಮೂಲ ಕಾರಣ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಪಪ್ಪು, ಶಹಜಾದೇ, ಮಂದಬುದ್ದಿಯವ ಎಂದೇ ಅವಹೇಳನ ಮಾಡಿದ್ದ ಅದೇ ರಾಹುಲ್ ಗಾಂಧಿ ಪಟ್ಟ ಶ್ರಮ. ಪದೇ ಪದೇ ಚುನಾವಣೆ ಸೋತರೂ ಎದೆಗುಂದದೇ, ತಾಳ್ಮೆಯಿಂದ ದೇಶದ ಸಾಮಾಜಿಕ ಜೀವನವನ್ನು ಅಧ್ಯಯನ ಮಾಡಲು “ನಫರತ್ ಕೀ ದುನಿಯಾ ಮೇ, ಮೊಹಬ್ಬತ್ ಕೀ ದುಕಾನ್ ತೆರೆಯುತ್ತೇನೆ” ಎಂದು ನಾಲ್ಕು ಸಾವಿರ ಕಿಲೋಮೀಟರ್ ಪಾದಯಾತ್ರೆ ಮಾಡಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ರಾಹುಲ್ ಗಾಂಧಿ.

ರಾಹುಲ್ ಗಾಂಧಿ 2013ರಲ್ಲಿ ಶಿಕ್ಷೆಗೆ ಗುರಿಯಾದ ಶಾಸಕ, ಸಂಸದರನ್ನು ಅವರ ಸ್ಥಾನದಲ್ಲಿಯೇ ಮುಂದುವರೆಯಬೇಕೆಂದು ಜಾರಿಗೆ ತರಲು ಹೊರಟ ಸುಗ್ರೀವಾಜ್ಞೆಯನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದಾಗ, ರಾಹುಲ್ ಗಾಂಧಿಯನ್ನು ಅಹಂಕಾರದಿಂದ ಆ ರೀತಿ ಮಾಡಿದ್ದಾರೆ ಎಂದು ಪ್ರಚಾರ ಮಾಡಲಾಗಿತ್ತು. ಆದರೆ ಅವರು ಅಂದು ಮಾಡಿದ್ದು ಸರಿಯೇ ಇತ್ತು. ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಗೆ ಗುರಿಯಾದ ಶಾಸಕ, ಸಂಸದರನ್ನು ತಕ್ಷಣದಿಂದ ಜಾರಿ ಬರುವಂತೆ ಅನರ್ಹಗೊಳಿಸುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಅದನ್ನು ವಿರೋಧಿಸಿ ತರಲಾಗುತ್ತಿರುವ ಸುಗ್ರೀವಾಜ್ಞೆಯನ್ನು ರಾಹುಲ್ ಗಾಂಧಿ ವಿರೋಧಿಸಿದ್ದರು. ಶೇ 64ರಷ್ಟು ಕ್ರಿಮಿನಲ್ ಹಿನ್ನಲೆಯ ಶಾಸಕರು, ಸಂಸದರು ಇರುವ ದೇಶದಲ್ಲಿ ಕಾನೂನು ಬಿಗಿಗೊಳಿಸದೇ ಇದ್ದರೆ ಪ್ರಜಾಪ್ರಭುತ್ವ ಅಪಾಯಕ್ಕೆ ತಳ್ಳಲ್ಪಡುತ್ತಿದ್ದರು. ಇಂದು ಬಹುತೇಕ ಜನ ಶಾಸಕರು, ಸಂಸದರು ಶಿಕ್ಷೆಗೆ ಗುರಿಯಾದ ನಂತರ ಸ್ಥಾನ ಕಳೆದುಕೊಂಡರೆ ಅದಕ್ಕೆ ರಾಹುಲ್ ಗಾಂಧಿ ಅವರು ಅಂದು ತಳೆದ ನಿಲುವೇ ಕಾರಣ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
rahulgandhi

ದೇಶದ ಪ್ರಧಾನಿ ನರೇಂದ್ರ ಮೋದಿಯವರು ರಾತ್ರೋ ರಾತ್ರಿ ನೋಟ್ ಬ್ಯಾನ್ ಮಾಡಿದಾಗ ರಾಹುಲ್ ಗಾಂಧಿಯವರು ಇದು ಮೂರ್ಖತನದ ನಿರ್ಧಾರ, ಇದರಿಂದ ದೇಶದ ಆರ್ಥಿಕತೆಗೆ ಪೆಟ್ಟಾಗುತ್ತದೆ, ಶ್ರೀಮಂತರಿಗೆ ಸಹಾಯ ಮಾಡುವ ದುರಾಲೋಚನೆ, ಇದರಿಂದ ಬಡವರಿಗೆ ಕಷ್ಟವಾಗುತ್ತದೆ ಮತ್ತು ಸಣ್ಣ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದರು. ನಂತರ ಅದು ಸತ್ಯವಾಯಿತು. ದೇಶದಲ್ಲಿ 125 ಜನ ಅಮಾಯಕರು ಬ್ಯಾಂಕ್ ಮುಂದೆ ನಿಂತು ಅಸುನೀಗಿದರು. ಬಹುತೇಕ ಸಣ್ಣ ವ್ಯಾಪಾರಸ್ಥರು ನಷ್ಟ ಅನುಭವಿಸಿದರು. ದೇಶದ ಅರ್ಥವ್ಯವಸ್ಥೆ ಹಾಳಾಗಿ ಮುಂದಿನ ಐದು ವರ್ಷಗಳವರೆಗೆ ಜಿಡಿಪಿ ಕನಿಷ್ಠ ದರಕ್ಕೆ ಇಳಿಯಿತು.

ಕೇಂದ್ರ ಸರಕಾರ ರಾತ್ರೋ ರಾತ್ರಿ ಜಿಎಸ್‍ಟಿ ಜಾರಿಗೊಳಿಸಿದಾಗ ರಾಹುಲ್ ಗಾಂಧಿ ಹೇಳಿದ್ದು, “ಇದು ಸಾಮಾನ್ಯ ತೆರಿಗೆಯಲ್ಲ, ಗಬ್ಬರ್ ಸಿಂಗ್ ಟ್ಯಾಕ್. ಇದರಿಂದ ಸಣ್ಣ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚಬೇಕಾಗುತ್ತದೆ. ಬಿಜೆಪಿ ಜಾರಿಗೆ ತಂದ ಜಿಎಸ್‍ಟಿ ತೆರಿಗೆಯು ಕ್ಲಿಷ್ಟಕರವಾಗಿದೆ. ವಿವಿಧ ಸ್ತರಗಳಲ್ಲಿದೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ದಂಡನೀಯವಾಗಿದೆ. ಇದರಿಂದ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಸಣ್ಣ ಉದ್ಯಮಗಳು ಮುಚ್ಚಬೇಕಾಗುತ್ತದೆ ಮತ್ತು ಸಣ್ಣ ವ್ಯಾಪಾರಸ್ಥರು ಭಯದಿಂದ ಬದುಕಬೇಕಾಗುತ್ತದೆ” ಎಂದು ಹೇಳಿದ್ದರು. ಅದೆಲ್ಲವೂ ಮುಂದೆ ಸತ್ಯವಾಗುತ್ತ ಬಂತು. ದೇಶದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮುಚ್ಚಲ್ಪಟ್ಟಿವೆ. ಇವುಗಳಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಸಣ್ಣ ವ್ಯಾಪಾರಸ್ಥರಿಗೆ ನೋಟಿಸ್ ಕೊಟ್ಟು ಭಯ ಹುಟ್ಟಿಸಲಾಗಿದೆ.

ಫ್ರಾನ್ಸ್ ಜೊತೆಗೆ 36 ರಫೇಲ್ ಯುದ್ದ ವಿಮಾನಗಳನ್ನು ಖರೀದಿಸಲು ಕೇಂದ್ರ ಸರಕಾರ ಮಾಡಿಕೊಂಡಿರುವ ಒಪ್ಪಂದವು ಭ್ರಷ್ಟಾಚಾರದಿಂದ ಕೂಡಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದರು. ಇದರಲ್ಲಿ ಚೌಕಿದಾರ ಚೋರ ಹೈ ಎಂದು ಘೋಷಣೆ ಸಹ ಮಾಡಿದ್ದರು. 30 ಸಾವಿರ ಕೋಟಿ ರೂ. ಗಳ ಖರೀದಿಯಲ್ಲಿ ದೇಶದ ಹೆಚ್‌.ಎ.ಎಲ್. ಸಂಸ್ಥೆಯನ್ನು ಬದಿಗಿಟ್ಟು, ಯಾವುದೇ ಅನುಭವ ಇಲ್ಲದ ಅನಿಲ್ ಅಂಬಾನಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದನ್ನು ಪ್ರಶ್ನಿಸಿದ್ದರು. ಕೇಂದ್ರ ಸರಕಾರ ರಫೇಲ್ ಖರೀದಿಯ ಕಡತಗಳು ನಾಪತ್ತೆಯಾಗಿವೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದು ಗಮನಾರ್ಹವಾದದ್ದು, ಅದರಲ್ಲಿ ಭ್ರಷ್ಟಾಚಾರವಾಗಿದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತಿತ್ತು. 2021ರಲ್ಲಿ ಪ್ರಾನ್ಸ್ ಮಾಧ್ಯಮದಲ್ಲಿ ರಫೇಲ್ ಡೀಲ್‍ನಲ್ಲಿ ಮಧ್ಯವರ್ತಿ ಮತ್ತು ಹಣಕಾಸಿನ ಅವ್ಯವಹಾರವಾಗಿದೆ ಎಂದು ವರದಿ ಮಾಡಿದ್ದವು. ಪ್ರಾನ್ಸ್ ಸರಕಾರವು ಸಹ ತನಿಖೆ ಮಾಡುತ್ತಿದೆ. ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ರಫೇಲ್ ಡೀಲ್ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆಯಾಗಲಿ ಎಂದು ಹೇಳಿದ್ದರು.

ದೇಶದಲ್ಲಿ ಕೇಂದ್ರ ಸರಕಾರ 2020 ಮಾರ್ಚ್‌, 25 ರಂದು ಕೋವಿಡ್-19 ಕಾರಣದಿಂದ ಲಾಕ್‍ಡೌನ್ ಘೋಷಣೆ ಮಾಡಿತ್ತು. ಆದರೆ ರಾಹುಲ್ ಗಾಂಧಿ ಅವರು 2020ರ ಫೆಬ್ರವರಿ ಮೊದಲ ವಾರದಲ್ಲಿಯೇ ಇಂತಹ ಸಂದರ್ಭ ಬರುತ್ತದೆ, ಕೇಂದ್ರ ಸರಕಾರ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು, ಇದನ್ನು ಕೇಂದ್ರ ಸರಕಾರ ಅಲ್ಲಗಳೆದು, ಜನರಿಗೆ ತಮ್ಮ ತಮ್ಮ ಸ್ಥಳಕ್ಕೆ ಸೇರಲು ಅವಕಾಶವನ್ನು ನೀಡದೇ ರಾತ್ರೋ ರಾತ್ರಿ ಲಾಕ್‍ಡೌನ್ ಘೋಷಣೆ ಮಾಡಿ, ಲಕ್ಷಾಂತರ ಜನರ ಸಾವಿಗೆ ಕೇಂದ್ರ ಸರಕಾರ ಕಾರಣವಾಯಿತು. ಅದೇ ರೀತಿ ಪಾಕಿಸ್ತಾನದ ಜೊತೆಗೆ ಚೀನಾ ಜೊತೆಗೂಡುತ್ತಿದೆ ಎಂದು 2023ರಲ್ಲಿಯೇ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಹೇಳಿದ್ದರೂ ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಪರಿಣಾಮ ಆಪರೇಶನ್ ಸಿಂಧೂರ ಸಂದರ್ಭದಲ್ಲಿ ಚೀನಾ ಪಾಕಿಸ್ತಾನಕ್ಕೆ ಬೆಂಬಲಿಸಿದ್ದು ಕಾಣುತ್ತೇವೆ. ರಾಹುಲ್ ಗಾಂಧಿ ಅವರು 2018ರಲ್ಲಿಯೇ ಅದೊಂದು ದೊಡ್ಡ ಹಗರಣ ಎಂದು ಹೇಳಿದ್ದರು. ಅಲ್ಲದೇ ಬಿಜೆಪಿ ಕೈಗಾರಿಕೋದ್ಯಮಿಗಳಿಗೆ ಬೆದರಿಸಿ ಹಣ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದ್ದರು. 2024ರಲ್ಲಿ ಸುಪ್ರೀಂ ಕೋರ್ಟ್ ಅದನ್ನು ಖಾತರಿಪಡಿಸಿತ್ತು. ಅಲ್ಲದೇ ಯಾವ ಕಂಪನಿಗಳಿಂದ ಎಷ್ಟು ದುಡ್ಡು ಚುನಾವಣಾ ಬಾಂಡ್ ಹೆಸರಲ್ಲಿ ಬಿಜೆಪಿ ಪಡೆದಿದೆ ಎಂದು ದೇಶಕ್ಕೆ ಗೊತ್ತಾಯಿತು.

ರಾಹುಲ್ ಗಾಂಧಿ ಅವರು ಹಲವು ಗಂಭೀರ ಸಮಸ್ಯೆಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತರಲು ಸತತ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ, ಕೇಂದ್ರ ಸರಕಾರ ಮೊದಲಿಗೆ ರಾಹುಲ್ ಗಾಂಧಿ ಹೇಳಿಕೆಯನ್ನು ನಿರ್ಲಕ್ಷ್ಯ ಮಾಡುತ್ತದೆ. ನಂತರ ಅನಿವಾರ್ಯವಾಗಿ ಒಪ್ಪುತ್ತದೆ. ರಾಹುಲ್ ಗಾಂಧಿ ಅವರು ಮೂರು ರೈತವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಲೇಬೇಕಾಗುತ್ತದೆ ಎಂದು ಹೇಳಿದ್ದರು. ಮೊದಲಿಗೆ ಇದು ಸಾಧ್ಯವಿಲ್ಲ, ರಾಹುಲ್ ಗಾಂಧಿ ಅವರಿಗೆ ಜ್ಞಾನವಿಲ್ಲ, ಒಮ್ಮೆ ಲೋಕಸಭೆಯಲ್ಲಿ ಕಾನೂನು ಆದ ನಂತರ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಹೇಳಿತ್ತು. ನಂತರ ಅನಿವಾರ್ಯವಾಗಿ ಮೂರು ಕಾನೂನುಗಳನ್ನು ವಾಪಸ್ ಪಡೆಯಿತು. ಅದೇ ರೀತಿ ದೇಶದಲ್ಲಿ ಜಾತಿ ಜನಗಣತಿ ಆಗಬೇಕು, ಯಾವ ಜಾತಿಯ ಎಷ್ಟು ಜನ ಸರಕಾರದಲ್ಲಿದ್ದಾರೆ ಎಂದು ಗೊತ್ತಾಗುತ್ತದೆ. “ಜಿಸ್ ಕಿ ಜಿತನಿ ಹಿಸ್ಸೆದಾರಿ, ಉಸ್ ಕಿ ಉತನಿ ಭಾಗಿದಾರಿ” ಎನ್ನುವ ಘೋಷಣೆ ಮಾಡಿದ್ದರು. ಕೇಂದ್ರ ಸರಕಾರ ರಾಹುಲ್ ಗಾಂಧಿಯನ್ನು ಹೀಯಾಳಿಸಿತ್ತು. ಜಾತಿಯ ಮೇಲೆ ರಾಜಕಾರಣ ಮಾಡಲು ಬಯಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೂ ರಾಹುಲ್ ಗಾಂಧಿ ಅವರು ಜಾತಿ ಜನಗಣತಿ ಇದೇ ಲೋಕಸಭೆಯಲ್ಲಿಯೇ ನಾವು ಪಾಸ್ ಮಾಡಿಯೇ ತೀರುತ್ತೇವೆ ಎನ್ನುವ ಘೋಷಣೆ ಮಾಡಿದ್ದರು. ಈಗ ಕೇಂದ್ರ ಸರಕಾರ ಅನಿವಾರ್ಯವಾಗಿ ಜನಗಣತಿ ಜೊತೆಗೆ ಜಾತಿ ಜನಗಣತಿಯೂ ಮಾಡಲು ಮುಂದಾಗಿದೆ.

ರಾಹುಲ್ ಪ್ರತಿಭಟನೆ

ಮಹಾರಾಷ್ಟ್ರ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿದೆ ಎಂದು ರಾಹುಲ್ ಗಾಂಧಿ ಅವರು ಅಂಕಿ ಸಂಖ್ಯೆಯೊಂದಿಗೆ ದೇಶದ ಜನರಿಗೆ ತಿಳಿಸಿದ್ದಾರೆ. ಆದರೆ ಚುನಾವಣಾ ಆಯೋಗ ರಾಹುಲ್ ಗಾಂಧಿ ಅವರ ಜೊತೆಗೆ ಚರ್ಚಿಸದೇ ಸಾರಾಸಗಟವಾಗಿ ಅವರ ನಿಲುವನ್ನು ತಿರಸ್ಕರಿಸುವುದು ಪಾರದರ್ಶಕ ವ್ಯವಸ್ಥೆಗೆ ವಿರುದ್ದವಾದುದು. ಮಹಾರಾಷ್ಟ್ರದಲ್ಲಿ 2019ರ ಚುನಾವಣೆ ಸಂದರ್ಭದಲ್ಲಿ ನೊಂದಾಯಿತ ಮತದಾರರು 8.98 ಕೋಟಿ, 2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ನೊಂದಾಯಿತ ಮತದಾರರು 9.29 ಕೋಟಿ, ಅಂದರೆ ಐದು ವರ್ಷದಲ್ಲಿ ಕೇವಲ 31 ಲಕ್ಷ ಮತದಾರರು ಹೊಸದಾಗಿ ನೊಂದಾಯಿಸಿ ಕೊಂಡಿದ್ದಾರೆ. ಮಹಾರಾಷ್ಟ್ರ ರಾಜ್ಯದಲ್ಲಿ ಇರುವುದು ಒಟ್ಟ 288 ವಿಧಾನಸಭಾ ಕ್ಷೇತ್ರಗಳು, 31 ಲಕ್ಷ ಮತದಾರರನ್ನು 288 ವಿಧಾನಸಭಾ ಕ್ಷೇತ್ರಗಳಿಗೆ ಹಂಚಿದರೆ, ಸುಮಾರು 10 ಸಾವಿರ ಮತದಾರರು ಒಂದೊಂದು ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆಯಾಗುತ್ತದೆ. ಆದರೆ 2024ರ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರ ರಾಜ್ಯದ ಒಟ್ಟು ಮತದಾರರು 9.70 ಕೋಟಿ, ಅಂದರೆ ಜೂನ್ 2024ರಿಂದ ನವೆಂಬರ್ 2024ರವರೆಗೆ ಒಟ್ಟು 41 ಲಕ್ಷ ಮತದಾರರು ಹೊಸದಾಗಿ ನೊಂದಾಯಿಸಿಕೊಂಡಿದ್ದಾರೆ. ಮಹಾರಾಷ್ಟ್ರ ರಾಜ್ಯದಲ್ಲಿ ಇರುವ 18 ವರ್ಷ ಮೇಲ್ಪಟ್ಟವರ ಸಂಖ್ಯೆ 9.54 ಕೋಟಿ, ಅಂದರೆ ವಯಸ್ಕ ಮತದಾರರಕ್ಕಿಂತ ಹೆಚ್ಚು ಮತದಾರರು ಮಹಾರಾಷ್ಟ್ರ ರಾಜ್ಯದಲ್ಲಿ ಇರುವುದು ರಾಹುಲ್ ಗಾಂಧಿ ಅವರ ಪ್ರಶ್ನೆ. ಇಲ್ಲಿ ಐದು ತಿಂಗಳಲ್ಲಿ 41 ಲಕ್ಷ ಮತದಾರರನ್ನು ಅಕ್ರಮವಾಗಿ ಸೇರಿಸಿದ್ದಾರೆ ಎನ್ನುವುದು ಅವರ ಆರೋಪ.

ಅಲ್ಲದೇ ಮಹಾರಾಷ್ಟ್ರದಲ್ಲಿ ಹಿಂದಿನ ಮೂರು ಚುನಾವಣೆಗಳಲ್ಲಿ ಮತದಾನ ಮುಗಿಯುವ ಸಾಯಂಕಾಲ 5.00 ಗಂಟೆಗೆ ಮತ್ತು ಕೊನೆಯ ಮತದಾನ ಪ್ರಮಾಣದಲ್ಲಿ ಶೇ ಒಂದಕ್ಕಿಂತ ಕಡಿಮೆ ಕಂಡು ಬಂದಿದೆ. ಅಂದರೆ 2009ರ ವಿಧಾನಸಭಾ ಚುನಾವಣೆಯಲ್ಲಿ 5.00 ಗಂಟೆಗೆ ಶೇ 60.00 ಇದ್ದು, ಅಂತಿಮ ಪ್ರಮಾಣ ಶೇ 59.50, 2014ರಲ್ಲಿ 5.00 ಗಂಟೆಗೆ ಶೇ 62.00 ಇದ್ದು, ಕೊನೆಯದಾಗಿ ಶೇ 63.08 ರಷ್ಟು ಹೆಚ್ಚಾಗಿದೆ. ಅದೇ ರೀತಿ 2019ರಲ್ಲಿ 5.00 ಗಂಟೆಗೆ ಶೇ 60.46 ರಷ್ಟಿದ್ದು, ಅಂತಿಮ ಮತದಾನ ಪ್ರಮಾಣ ಶೇ 61.10 ರಷ್ಟಾಗಿದೆ. ಆದರೆ, 2024ರ ವಿಧಾನಸಭಾ ಚುನಾವಣೆಯಲ್ಲಿ 5.00 ಗಂಟೆಗೆ ಶೇ 58.22 ರಷ್ಟಿದ್ದ ಮತದಾನ ಪ್ರಮಾಣ ರಾತ್ರೋ ರಾತ್ರಿ ಶೇ 66.05 ಕ್ಕೆ ಏರಿಕೆಯಾಗಿದೆ. ಇದು ಅಸಾಮಾನ್ಯ ಹೆಚ್ಚಳವು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಇದರ ಬಗ್ಗೆ ಚುನಾವಣಾ ಆಯೋಗ ಇಲ್ಲಿಯವರೆಗೆ ಉತ್ತರ ನೀಡಿಲ್ಲ. ಇಂತಹ ಹಲವು ಅನುಮಾನಗಳಿಗೆ ಚುನಾವಣಾ ಆಯೋಗ ಉತ್ತರ ನೀಡಬೇಕಿತ್ತು. ಆದರೆ ಅದು ನುಣುಚಿಕೊಳ್ಳುತ್ತಿದೆ. ಇಲ್ಲಿಯವರೆಗೆ ರಾಹುಲ್ ಗಾಂಧಿ ಕೇಳಿರುವ ಮತಗಟ್ಟೆವಾರು ಮತದಾರರ ಯಾದಿಯ ಸಾಫ್ಟ್ ಕಾಪಿ ನೀಡಲು ಚುನಾವಣಾ ಆಯೋಗ ಹಿಂದೇಟು ಹಾಕುತ್ತಿದೆ.

ಈಗ ಚುನಾವಣಾ ಆಯೋಗ ಬಿಹಾರ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮತದಾರರನ್ನು ವಿಶೇಷ ತೀವ್ರ ಪರಿಷ್ಕರಣೆ ಹೆಸರಿನಲ್ಲಿ 61 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಹಾಕಿದೆ. ಬಿಹಾರ ರಾಜ್ಯದ 243 ವಿಧಾನಸಭಾ ಕ್ಷೇತ್ರಗಳಲ್ಲಿ 61 ಲಕ್ಷ ಮತದಾರರನ್ನು ತೆಗೆದುಹಾಕಿದರೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 25102 ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಹಾಕಿದಂತೆ. ಅಂದರೆ ಇಷ್ಟೊಂದು ಪ್ರಮಾಣದಲ್ಲಿ ನುಸುಳಕೋರರು ಭಾರತದಲ್ಲಿ ಬಂದಿದ್ದರೆ, ಬಿಜೆಪಿ ನೇತೃತ್ವದ ಭಾರತ ಸರಕಾರ ಗಡಿ ರಕ್ಷಣೆಯಲ್ಲಿ ವಿಫಲವಾಗಿದೆ ಎಂದೇ ಅರ್ಥ. ಯಾಕೆಂದರೆ ಕಳೆದ 11 ವರ್ಷಗಳಿಂದ ಬಿಜೆಪಿ ನೇತೃತ್ವದ ಸರಕಾರವೇ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಚುನಾವಣಾ ಆಯೋಗದ ಈ ರೀತಿಯ ನಡವಳಿಕೆ ಪ್ರಶ್ನಾರ್ಹವಾಗಿದೆ.

ಇದನ್ನೂ ಓದಿ ಕೋಮುವಾದ ಹರಡುವ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ: ಪಿಣರಾಯಿ ವಿಜಯನ್ ಆಕ್ರೋಶ

ಈಗ ರಾಹುಲ್ ಗಾಂಧಿ ಅವರು ಕರ್ನಾಟಕ ರಾಜ್ಯದ ಒಂದು ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಆರು ತಿಂಗಳು ಅಧ್ಯಯನ ಮಾಡಿದ್ದು, ಲೋಕಸಭಾ ಚುನಾವಣೆಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ನೂರರಷ್ಟು ಸಾಕ್ಷಿಗಳಿವೆ ಎಂದು ಹೇಳಿರುವುದು ಚುನಾವಣಾ ಆಯೋಗಕ್ಕೆ ನುಂಗಲಾರದಂತಾಗಿದೆ. ಆರು ತಿಂಗಳು ಅಧ್ಯಯನ ಮಾಡುವ ಅವಶ್ಯಕತೆ ಏನಿದೆ ಎಂದು ಕೇಳಬಹುದು. ಚುನಾವಣಾ ಆಯೋಗ ರಾಹುಲ್ ಗಾಂಧಿ ಕೇಳಿರುವ ಮತದಾರರ ಪಟ್ಟಿಯ ಸಾಫ್ಟ್ ಕಾಪಿ ಕೊಡದೇ ಇರುವುದರಿಂದ ಮತದಾರರ ಪಟ್ಟಿಯನ್ನು ತೆಗೆದುಕೊಂಡು ಸಾಪ್ಟ್ ಕಾಫಿ ತಯಾರು ಮಾಡಲು ಅಷ್ಟೊಂದು ಸಮಯ ಬೇಕಿದೆ. ಕರ್ನಾಟಕ ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳ ಅಧ್ಯಯನ ಮಾಡಬೇಕೆಂದರೆ ಚುನಾವಣಾ ಆಯೋಗ ಮತದಾರರ ಪಟ್ಟಿಯ ಸಾಫ್ಟ್ ಕಾಪಿ ನೀಡಬೇಕು. ಆ ಹಿನ್ನಲೆಯಲ್ಲಿ ರಾಹುಲ್ ಗಾಂಧಿಯವರ ಆಗಸ್ಟ್‌ 5, 2025 ರಂದು ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಸಲಿರುವ ಪ್ರತಿಭಟನೆ ಮಹತ್ವ ಪಡೆದುಕೊಂಡಿದೆ. ದೇಶದಲ್ಲಿ ಚುನಾವಣೆಗಳು ಪಾರದರ್ಶಕವಾಗಿಲ್ಲದಿದ್ದರೆ ದೇಶದ ಪ್ರಜಾಪ್ರಭುತ್ವ ಉಳಿಯುವುದು ಕಷ್ಟವಾಗುತ್ತದೆ. ರಾಹುಲ್ ಗಾಂಧಿಯವರನ್ನು ಪಪ್ಪು ಎನ್ನುತ್ತಿದ್ದ ಬಿಜೆಪಿ ನಾಯಕರು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಎದ್ದರೆ ಹೆದರುವ ಪರಿಸ್ಥಿತಿ ಬಂದಿದೆ. ಯಾಕೆಂದರೆ ಬಿಜೆಪಿ ನಾಯಕರ ರೀತಿ ರಾಹುಲ್ ಗಾಂಧಿ ಸುಳ್ಳು ಹೇಳುತ್ತಿಲ್ಲ.

WhatsApp Image 2025 11 17 at 3.55.49 PM
ಡಾ ರಝಾಕ್‌ ಉಸ್ತಾದ್‌
+ posts

ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

ಪೋಸ್ಟ್ ಹಂಚಿಕೊಳ್ಳಿ:

ಡಾ ರಝಾಕ್‌ ಉಸ್ತಾದ್‌
ಡಾ ರಝಾಕ್‌ ಉಸ್ತಾದ್‌
ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪುದುಚೆರಿ ಚುನಾವಣೆ | ‘ಇಂಡಿಯಾ’ ಗೊಂದಲ ನಿವಾರಣೆ: ಕಾಂಗ್ರೆಸ್ 16, ಡಿಎಂಕೆ 14 ಕ್ಷೇತ್ರಗಳಲ್ಲಿ ಸ್ಪರ್ಧೆ

ಪುದುಚೆರಿಯ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳ...

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...