ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿ ವಿವಾದದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
“ನೀಟ್ ವಿಷಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿ ಈ ಪತ್ರ ಬರೆಯುತ್ತಿದ್ದೇನೆ. ನಿಮಗೆ ತಿಳಿದಿರುವಂತೆ ನೀಟ್ ವಿಷಯದ ಬಗ್ಗೆ ವಿಪಕ್ಷಗಳ ಮನವಿಯನ್ನು ಜೂನ್ 28ರಂದು ಸಂಸತ್ತಿನ ಎರಡೂ ಸದನಗಳಲ್ಲಿ ನಿರಾಕರಿಸಲಾಯಿತು. ನಿನ್ನೆ ಇದೇ ವಿಷಯವಾಗಿ ಚರ್ಚಿಸಲು ವಿಪಕ್ಷ ಮನವಿ ಮಾಡಿತ್ತು. ಲೋಕಸಭೆಯ ಗೌರನಾನ್ವಿತ ಸ್ಪೀಕರ್ ಅವರು ಸರ್ಕಾರದೊಂದಿಗೆ ಚರ್ಚಿಸುವುದಾಗಿ ವಿಪಕ್ಷಕ್ಕೆ ಮಾತು ಕೊಟ್ಟಿದ್ದರು” ಎಂದು ರಾಹುಲ್ ವಿವರಿಸಿದ್ದಾರೆ.
“ನಮ್ಮ ಉದ್ದೇಶ ರಚನಾತ್ಮಕವಾಗಿ ಮುಂದಿನ ದಾರಿಯನ್ನು ಕಂಡುಕೊಳ್ಳುವುದಾಗಿದೆ. ಈ ಸಂದರ್ಭದಲ್ಲಿ ನಮ್ಮ ಒಂದೇ ಕಾಳಜಿ ಭಾರತದಾದ್ಯಂತ ಸುಮಾರು 24 ಲಕ್ಷ ನೀಟ್ ಆಕಾಂಕ್ಷಿಗಳ ಅಬ್ಯುದಯವಾಗಿದೆ. ಲಕ್ಷಾಂತರ ಕುಟುಂಬಗಳು ತಮ್ಮ ಮಕ್ಕಳಿಗಾಗಿ ವೈಯುಕ್ತಿಕವಾಗಿ ಅದ್ಭುತ ತ್ಯಾಗ ಮಾಡಿದ್ದಾರೆ. ಇವರಲ್ಲಿ ಬಹುತೇಕರಿಗೆ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಜೀವಮಾನದ ಕನಸಿಗೆ ದ್ರೋಹವಾಗಿದೆ” ಎಂದು ರಾಹುಲ್ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೊದಲ ಭಾಷಣದಲ್ಲೇ ಬಿಜೆಪಿಗರ ಬೆವರಿಳಿಸಿದ ರಾಹುಲ್ ಮತ್ತು ಮಹುವಾ
“ಇಂದು ಈ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳು ನಮ್ಮ ಕಡೆ ಮುಖ ಮಾಡಿದ್ದಾರೆ.ಅವರ ಸಾರ್ವಜನಿಕ ಪ್ರತಿನಿಧಿಗಳಾಗಿ ಸಮಸ್ಯೆಯನ್ನು ಪರಿಹರಿಸಲು ದಿಟ್ಟ ಹಾಗೂ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ನೀಟ್ ಪರೀಕ್ಷೆ ಅಕ್ರಮಗಳಿಂದಾಗಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹೊಲಸುಗೊಂಡಿರುವುದರಿಂದ ತಕ್ಷಣ ಗಮನಹರಿಸಬೇಕಿದೆ. ಕಳೆದ 7 ವರ್ಷಗಳಲ್ಲಿ 70 ಪ್ರಶ್ನೆ ಪರೀಕ್ಷೆ ಸೋರಿಕೆಗಳನ್ನು ನೋಡಿದ್ದೇವೆ” ಎಂದು ರಾಹುಲ್ ತಿಳಿಸಿದ್ದಾರೆ.
“ಸರ್ಕಾರವು ಪರೀಕ್ಷೆಗಳನ್ನು ಮುಂದೂಡಿದ್ದು, ಶಿಕ್ಷಣ ವ್ಯವಸ್ಥೆಯ ಅತ್ಯಂತ ಆಳವಾಗಿರುವ ಅಸಮರ್ಪಕ ವ್ಯವಸ್ಥೆಯನ್ನು ಮರೆಮಾಚಲು ಎನ್‌ಟಿಎದ ಮುಖ್ಯಸ್ಥರನ್ನು ಬದಲಿಸಿದೆ. ನಮ್ಮ ವಿದ್ಯಾರ್ಥಿಗಳು ಉತ್ತರಗಳಿಗೆ ಅರ್ಹರಾಗಿದ್ದರು. ಸಂಸತ್ತಿನ ಚರ್ಚೆಯು ವಿದ್ಯಾರ್ಥಿಗಳಲ್ಲಿ ತಮ್ಮ ಗುರಿಯನ್ನು ಮರಳಿ ಪಡೆಯುವುದರತ್ತ ದಾರಿ ಮಾಡಿಕೊಡಬಹುದು.ಈ ವಿಷಯವನ್ನು ತುರ್ತಾಗಿ ಪರಿಗಣಿಸಬೇಕಾಗಿದೆ. ಹಾಗಾಗಿ ನಾನು ಸರ್ಕಾರವು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ನೀವು ಈ ಚರ್ಚೆಯನ್ನು ಮುನ್ನೆಡೆಸಿದರೆ ಸೂಕ್ತವಾಗಿರುತ್ತದೆ ಎಂದು ನಾನು ನಂಬಿದ್ದೇನೆ” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
Dear Prime Minister,
I am writing to request for a debate in Parliament on NEET tomorrow.
Our aim is to engage constructively in the interest of 24 lakh NEET aspirants who deserve answers.
I believe that it would be fitting if you were to lead this debate. pic.twitter.com/PXqV8LnYVO
— Rahul Gandhi (@RahulGandhi) July 2, 2024





