ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ತಲೆಮರೆಸಿಕೊಂಡಿದ್ದ ಪೊಲೀಸ್ ಪೇದೆಯನ್ನು ಪೊಲೀಸರು ಬಂಧಿಸಿದ್ದಾರೆ. ಆತ ಬುರ್ಖಾ ಧರಿಸಿ, ಮಹಿಳೆಯಂತೆ ನಟಿಸುತ್ತ, ತಪ್ಪಿಸಿಕೊಳ್ಳುತ್ತಿದ್ದ ಆತನನ್ನು ಬಂಧಿಸುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.
ರಾಜಸ್ಥಾನದ ಧೋಲ್ಪುರದಲ್ಲಿ ಅಪ್ರಾಪ್ತೆ ಮೇಲೆ ಪೊಲೀಸ್ ಕಾನ್ಸ್‌ಟೇಬಲ್ ರಾಜೇಂದ್ರ ಸಿಸೋಡಿಯಾ ಎಂಬಾತ ಅತ್ಯಾಚಾರ ಎಸಗಿದ್ದರು. ಕೃತ್ಯ ಎಸಗಿ ಪರಾರಿಯಾಗಿದ್ದರು. ಅವರನ್ನು ಉತ್ತರ ಪ್ರದೇಶದ ವೃಂದಾವನದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ರಾಜೇಂದ್ರ ಸಿಸೋಡಿಯಾ ಬಾಲಕು ಮತ್ತು ಆತನ ಸಹೋದರನಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿ, ಮನೆಗೆ ಕರೆಸಿಕೊಂಡಿದ್ದರು. ಸಹೋದರನನ್ನು ಮಾರುಕಟ್ಟೆಗೆ ಕಳಿಸಿ, ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಾಲಕಿ ಕಿರುಚಿಕೊಂಡಾಗ ಸ್ಥಳೀಯರು ಆತನ ಮನೆಗೆ ಧಾವಿಸಿದ್ದಾರೆ. ಆದರೂ, ಆರೋಪಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರು” ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸಂಗ್ವಾನ್ ತಿಳಿಸಿದ್ದಾರೆ.
“ಆತ ಪದೇ ಪದೇ ವೇಷ ಮತ್ತು ಸ್ಥಳವನ್ನು ಬದಲಿಸುತ್ತಿದ್ದರು. ಆತನಿಗಾಗಿ ಆಗ್ರಾ, ಲಕ್ನೋ ಮತ್ತು ಗ್ವಾಲಿಯರ್‌ಯಲ್ಲಿ ಶೋಧ ನಡೆಸಿದ ಪೊಲೀಸರು, ಬೃಂದಾವನದಲ್ಲಿ ಆತನನ್ನು ಬಂಧಿಸಿದ್ದಾರೆ” ಎಂದು ವಿವರಿಸಿದ್ದಾರೆ.
ಆತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಹಿಂದೆಯೂ ಆತನ ವಿರುದ್ಧ ನಾನಾ ಆರೋಪಗಳಿದ್ದವು ಎಂದು ವರದಿಯಾಗಿದೆ.




