ಅತ್ಯಾಚಾರ ಸಂತ್ರಸ್ತೆಯ ಮಗು ಒಂಟಿ ತಾಯಿಯ ಜಾತಿ, ಉಪನಾಮ ಪಡೆಯಲು ಅರ್ಹ, ತಂದೆಯದ್ದು ಬೇಕಾಗಿಲ್ಲ: ಬಾಂಬೆ ಹೈಕೋರ್ಟ್

Date:

ತಾಯಿ ಮಾತ್ರ ಬೆಳೆಸಿದ ಮಗುವಿಗೆ ತಂದೆಯ ಹೆಸರು, ಉಪನಾಮ ಮತ್ತು ಜಾತಿಯನ್ನು ನಮೂದಿಸಲು ಒತ್ತಾಯಿಸಬಾರದು. ಮಗು ತನ್ನ ತಾಯಿಯ ಜಾತಿ, ಉಪನಾಮ ಬಳಸಲು ಅರ್ಹ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ಅತ್ಯಾಚಾರ ಸಂತ್ರಸ್ತೆಯ 12 ವರ್ಷದ ಮಗಳು ಶಾಲಾ ದಾಖಲೆಗಳಲ್ಲಿ ತನ್ನ ಹೆಸರನ್ನು ತಿದ್ದುಪಡಿ ಮಾಡಲು ಮತ್ತು ‘ಮರಾಠ’ ದಿಂದ ‘ಪರಿಶಿಷ್ಟ ಜಾತಿ’ ಗೆ ಜಾತಿಗೆ ಬದಲಾಯಿಸಲು ಅವಕಾಶ ನೀಡಬೇಕು ಮನವಿ ಮಾಡಿದ್ದಳು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ಹಿತೇನ್ ಎಸ್. ವೆನೆಗಾಂವ್ಕರ್ ಅವರಿದ್ದ ಔರಂಗಾಬಾದ್ ಪೀಠವು, “ಒಬ್ಬಂಟಿ ತಾಯಿಯನ್ನು ‘ಸಂಪೂರ್ಣ ಪೋಷಕಿ’ (Complete Parent) ಎಂದು ಗುರುತಿಸುವುದು ದಾನ ಅಥವಾ ಭಿಕ್ಷೆಯಲ್ಲ. ಬದಲಿಗೆ ಅದು ಸಂವಿಧಾನಕ್ಕೆ ತೋರುವ ಗೌರವ” ಎಂದಿದೆ.

ಇದನ್ನು ಓದಿದ್ದೀರಾ? ಕರ್ನಾಟಕದಲ್ಲಿ ಎಷ್ಟು ಮಾತೃಭಾಷೆಗಳಿವೆ ಗೊತ್ತೇ? ; ರಾಜ್ಯ ಒಂದು, ನುಡಿ ಹಲವು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕೇವಲ ಹಳೆಯ ನಿಯಮ ಅಥವಾ ಫಾರ್ಮ್ಯಾಟ್‌ಗಳಿಗಾಗಿ ತಂದೆಯ ಹೆಸರನ್ನು ಕಡ್ಡಾಯಗೊಳಿಸುವುದು ಸರಿಯಲ್ಲ. ಇದು ಪಿತೃಪ್ರಧಾನ ಪದ್ಧತಿಯನ್ನು ಬಿಂಬಿಸುತ್ತದೆ. ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿಕೊಳ್ಳುವ ಸಮಾಜವು ಮಗುವಿನ ಸಾರ್ವಜನಿಕ ಗುರುತನ್ನು ಮಗುವಿನ ಬದುಕಿನಲ್ಲಿ ಯಾವುದೇ ಹೊರೆಯನ್ನು ಹೊತ್ತಿಕೊಳ್ಳದ ತಂದೆಗೆ ಆಧಾರವಾಗಿರಿಸಬೇಕೆಂದು ಒತ್ತಾಯಿಸಲು ಸಾಧ್ಯವಿಲ್ಲ. ಪಾಲನೆಯ ಸಂಪೂರ್ಣ ಹೊರೆಯನ್ನು ಹೊತ್ತ ತಾಯಿ ಆಡಳಿತಾತ್ಮಕವಾಗಿ ದ್ವಿತೀಯ ಸ್ಥಾನದಲ್ಲಿರಬೇಕು ಎಂದು ಹೇಳಲು ಸಾಧ್ಯವಿಲ್ಲ” ಎಂದು ತಿಳಿಸಿದೆ.

ಕಳೆದ ವರ್ಷ ಶಾಲಾ ಅಧಿಕಾರಿಗಳು ಮಾಧ್ಯಮಿಕ ಶಾಲಾ ಸಂಹಿತೆಯನ್ನು ಉಲ್ಲೇಖಿಸಿ ಅಂತಹ ತಿದ್ದುಪಡಿಯನ್ನು ಮಾಡಲಾಗದು ಎಂದು ಹೇಳಿತ್ತು. ನಂತರ ಬಾಲಕಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ಬಾಲಕಿಗೆ ಶಾಲಾ ದಾಖಲೆಗಳಲ್ಲಿ ತನ್ನ ಹೆಸರು ಮತ್ತು ಜಾತಿಯನ್ನು ಬದಲಾಯಿಸಲು ಅವಕಾಶ ಮಾಡಿಕೊಟ್ಟಿದೆ. ಅತ್ಯಾಚಾರ ಸಂತ್ರಸ್ತೆಯ ಮಗಳಿಗೆ ತಂದೆಯ ಜಾತಿಗೆ ಬದಲಾಗಿ ತಾಯಿಯ ಜಾತಿಯನ್ನು (ಪರಿಶಿಷ್ಟ ಜಾತಿ) ದಾಖಲಿಸಲು ನ್ಯಾಯಾಲಯ ಅನುಮತಿ ನೀಡಿದೆ.

ಸದ್ಯ ಬಾಂಬೆ ಹೈಕೋರ್ಟ್‌ನ ಆದೇಶ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆಗೆ ಒಳಗಾಗಿದೆ.ಈ ಆದೇಶ ಕೇವಲ ತಂದೆಯ ಹೆಸರಿನಿಂದಲೇ ಮಗುವಿನ ಗುರುತು ನಿರ್ಧಾರವಾಗಬೇಕು ಎಂಬ ಹಳೆಯ ಪದ್ಧತಿಯನ್ನು ಪ್ರಶ್ನಿಸಿ, ತಾಯಿಗೂ ಸಮಾನ ಹಕ್ಕಿದೆ ಎಂದು ಸಾಬೀತುಪಡಿಸಿದೆ. ತಾಂತ್ರಿಕ ನಿಯಮಗಳಿಗಿಂತ ಮನುಷ್ಯನ ಗೌರವ ಮತ್ತು ಸಂವಿಧಾನದ ಆಶಯಗಳು ಮುಖ್ಯ ಎಂಬುವುದನ್ನು ಈ ಮೂಲಕ ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದೆ. ಹಾಗೆಯೇ ಒಬ್ಬಂಟಿ ತಾಯಂದಿರೊಂದಿಗೆ ಬೆಳೆದ ಮಕ್ಕಳಿಗೆ ಸಮಾಜದಲ್ಲಿ ಸಮಾನ ಗೌರವ ಪಡೆಯಲು ಈ ತೀರ್ಪುಗಳು ದಾರಿದೀಪವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...