ರತನ್ ಟಾಟಾ ಪ್ರೀತಿಗೆ ಮುಳುವಾಗಿದ್ದು ಭಾರತ-ಚೀನಾ ಯುದ್ಧ; ಉದ್ಯಮಿಯ ಪ್ರೇಮಕಥೆಯಿದು

Date:

ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ, ಉದ್ಯಮಿ ರತನ್ ಟಾಟಾ ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಈ ನಡುವೆ ರತನ್ ಟಾಟಾ ಅವರ ಜೀವನದ ಬಗ್ಗೆ, ಅವರು ವಿವಾಹವಾಗದ ಹಿಂದಿರುವ ಕಾರಣದ ಬಗ್ಗೆ, ಅವರ ಪ್ರೇಮ ಕಥೆಯ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಾಗಿದೆ. ನಾಲ್ಕು ಬಾರಿ ವಿವಾಹವಾಗುವ ಬಗ್ಗೆ ಚಿಂತನೆ ನಡೆಸಿದ್ದ ರತನ್ ಟಾಟಾ ಅವರು ಅವಿವಾಹಿತರಾಗಿಯೇ ಉಳಿದರು.

ಪದ್ಮಭೂಷಣ ಮತ್ತು ಪದ್ಮವಿಭೂಷಣ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ರತನ್ ಟಾಟಾ ಅವರು ಸಂದರ್ಶನವೊಂದರಲ್ಲಿ ತಮ್ಮ ಪ್ರೇಮ ಕಥೆಯ ಬಗ್ಗೆ, ತಾನು ವಿವಾಹವಾಗದಿರುವ ಬಗ್ಗೆ ಮಾತನಾಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಉದ್ಯಮಿ ರತನ್ ಟಾಟಾ ಕೊನೆಯ ಪೋಸ್ಟ್ ವೈರಲ್; ಏನಿದೆ ಪೋಸ್ಟ್‌ನಲ್ಲಿ?

ಸಂದರ್ಶನವೊಂದರಲ್ಲಿ ಮಾತನಾಡುತ್ತಾ ರತನ್ ಟಾಟಾ, “ಒಂಟಿಯಾಗಿರುವುದು ಹೇಗಿರುತ್ತದೆ ಎಂದು ನಿಮಗೆ ತಿಳಿದಿಲ್ಲ. ನೀವೊಬ್ಬರೇ ಸಮಯ ಕಳೆಯಬೇಕಾದ ಪರಿಸ್ಥಿತಿ ಬಂದಾಗ ನೀವು ಅದನ್ನು ಅರಿತುಕೊಳ್ಳುವಿರಿ” ಎಂದು ಹೇಳಿದ್ದರು. ಜೊತೆಗೆ ತನ್ನ ಪ್ರೇಮ ಕಥೆಯನ್ನೂ ಹೇಳಿದ್ದರು.

ಮುಳುವಾದ ಭಾರತ-ಚೀನಾ ಯುದ್ಧ

ರತನ್ ಟಾಟಾ ಅವರು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿದ್ದಾಗ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದರು. ಆದರೆ ತನ್ನ ಅಜ್ಜಿಗೆ ಅನಾರೋಗ್ಯ ಕಾಣಿಸಿಕೊಂಡ ಕಾರಣ ರತನ್ ಟಾಟಾ ಅವರು ಭಾರತಕ್ಕೆ ಮರಳಬೇಕಾದ ಅನಿವಾರ್ಯ ಉಂಟಾಯಿತು.

ತನ್ನನ್ನು ಪ್ರೀತಿಸುವ ಯುವತಿಯೂ ಕೂಡಾ ತನ್ನೊಂದಿಗೆ ಭಾರತಕ್ಕೆ ಬರಬಹುದು ಎಂದು ರತನ್ ಟಾಟಾ ಅಂದುಕೊಂಡಿದ್ದರು. ಆದರೆ ಯುವತಿಯನ್ನು ಭಾರತಕ್ಕೆ ಕಳುಹಿಸಲು ಆಕೆಯ ಪರಿವಾರ ಒಪ್ಪಲಿಲ್ಲ. ಭಾರತ-ಚೀನಾ ಯುದ್ಧವೇ ರತನ್ ಟಾಟಾ ಪ್ರೀತಿಗೆ ಮುಳುವಾಯ್ತು.

ಇದನ್ನು ಓದಿದ್ದೀರಾ? ರತನ್ ಟಾಟಾ | ಬಂಡವಾಳಶಾಹಿಗಳ ರತ್ನ – ಸಮಾಜವಾದಿ ಆಶಯಗಳ ದುಸ್ವಪ್ನ?

ಹೌದು, ರತನ್ ಟಾಟಾ ಅವರು ಸಂದರ್ಶನದಲ್ಲಿ ಹೇಳಿದ್ದಂತೆ, “1962ರ ಇಂಡೋ-ಚೀನಾ ಯುದ್ಧದ ಕಾರಣ, ಆಕೆಯ ಪೋಷಕರು ಭಾರತಕ್ಕೆ ಬರಲು, ಆಕೆಯನ್ನು ಭಾರತಕ್ಕೆ ಕಳುಹಿಸಲು ಒಪ್ಪಲಿಲ್ಲ. ಇದರಿಂದಾಗಿ ಸಂಬಂಧವು ಕೊನೆಗೊಂಡಿತು”

ಬಾಲಿವುಡ್ ಸ್ಟಾರ್‌ನೊಂದಿಗೆ ಪ್ರೀತಿ?

ರತನ್ ಟಾಟಾ ಮತ್ತು ಬಾಲಿವುಡ್ ನಟಿ ಸಿಮಿ ಗರೆವಾಲ್ ನಡುವೆಯೂ ಒಮ್ಮೆ ಪ್ರೇಮಾಂಕುರ ಅರಳಿತ್ತು. ವರದಿಗಳ ಪ್ರಕಾರ ರತನ್ ಟಾಟಾ ಸಿಮಿ ಗರೆವಾಲ್ ಅವರನ್ನು ವಿವಾಹವಾಗುವ ನಿರ್ಧಾರವನ್ನು ಮಾಡಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಅವರ ಸಂಬಂಧವೇ ಮುರಿದುಬಿತ್ತು.

ಇನ್ನು ಸಂದರ್ಶನವೊಂದರಲ್ಲಿ “ನನಗೆ ನಾಲ್ಕು ಬಾರಿ ವಿವಾಹವಾಗಬೇಕು ಎಂದು ಅನಿಸಿತ್ತು. ಆದರೆ ವಿವಾಹವಾಗಲಿಲ್ಲ” ಎಂದು ಹೇಳಿಕೊಂಡಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...