BREAKING NEWS| ಸತತ ಮೂರನೇ ಬಾರಿಗೆ ರೆಪೋ ದರ ಇಳಿಸಿದ ಆರ್‌ಬಿಐ

Date:

ಇಂದು(ಮೇ 6) ನಡೆದ ಹಣಕಾಸು ನೀತಿ ಸಮಿತಿ(MPC) ಸಭೆಯ ಬಳಿಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ರೆಪೋ ದರವನ್ನು ಪರಿಷ್ಕರಿಸಿದೆ. ರೆಪೋ ದರವನ್ನು ಸತತ ಮೂರನೇ ಬಾರಿಗೆ ಇಳಿಸಿ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಘೋಷಣೆ ಮಾಡಿದ್ದಾರೆ. 50 ಬಿಪಿಎಸ್ ದರ ಕಡಿತಗೊಳಿಸಲಾಗಿದ್ದು, ರೆಪೋ ಶೇಕಡ 5.5ಕ್ಕೆ ತಲುಪಿದೆ.

ಆರ್‌ಬಿಐ 2023ರ ಫೆಬ್ರವರಿ ರೆಪೋ ದರವನ್ನು ಏರಿಕೆ ಮಾಡಿದ್ದು ದರ ಶೇಕಡ 6.5ಕ್ಕೆ ತಲುಪಿತ್ತು. ಅದಾದ ಬಳಿಕ ಒಂದು ವರ್ಷಕ್ಕೂ ಅಧಿಕ ಕಾಲ ಯಥಾಸ್ಥಿತಿ ಕಾಯ್ದುಕೊಂಡಿದೆ. 2025ರ ಫೆಬ್ರವರಿಯಲ್ಲಿ ಬ್ಯಾಂಕ್‌ ಬಡ್ಡಿದರದ ಮೇಲೆ ಪ್ರಭಾವ ಬೀರುವ ಈ ರೆಪೋ ದರವನ್ನು 25 ಮೂಲಾಂಕ(ಶೇ.6.25) ಇಳಿಸಿದೆ.

ಇದನ್ನು ಓದಿದ್ದೀರಾ? ಎರಡನೇ ಬಾರಿಗೆ ರೆಪೋ ದರ ಇಳಿಸಿದ ಆರ್‌ಬಿಐ: ಯಾರಿಗೆ ಲಾಭ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಳಿಕ ಏಪ್ರಿಲ್‌ನಲ್ಲಿ ನಡೆದ ಸಭೆಯ ಬಳಿಕ ಮತ್ತೆ 25 ಬಿಪಿಎಸ್(ಶೇ.6) ದರ ಕಡಿತಗೊಳಿಸಲಾಗಿದೆ. ಇದೀಗ ಜೂನ್ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಮಾತನಾಡಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ 50 ಬಿಪಿಸಿ ದರ ಕಡಿತಗೊಳಿಸಿ ನೂತನ ರೆಪೋ ದರ ಘೋಷಿಸಿದ್ದಾರೆ.

ರೆಪೋ ದರ ಇಳಿಕೆಯಿಂದ ಯಾರಿಗೆ ಲಾಭ, ಯಾರಿಗೆ ನಷ್ಟ?

ಬ್ಯಾಂಕ್‌ಗಳಿಗೆ ಆರ್‌ಬಿಐ ಸಾಲ ನೀಡುವ ಬಡ್ಡಿದರವೇ ರೆಪೋ ದರ. ಇದರ ಆಧಾರದಲ್ಲಿಯೇ ನಮ್ಮ ಹೂಡಿಕೆ, ಸಾಲದ ಬಡ್ಡಿದರ ನಿರ್ಧಾರವಾಗುತ್ತದೆ. ರೆಪೋ ದರ ಇಳಿಕೆಯು ಗೃಹ ಸಾಲ ಸೇರಿದಂತೆ ಇತರೆ ಸಾಲಗಾರರಿಗೆ ಲಾಭವನ್ನುಂಟು ಮಾಡಿದರೆ, ಹೂಡಿಕೆದಾರರಿಗೆ ನಷ್ಟ ಉಂಟಾಗಲಿದೆ. ಆದರೆ ಇವೆಲ್ಲವೂ ನಮ್ಮ ಹೂಡಿಕೆ ಅಥವಾ ಸಾಲದ ಬಡ್ಡಿದರದ ಮೇಲೆ ಅವಲಂಬಿತ.

ನಾವು ಸ್ಥಿರ ಬಡ್ಡಿದರದ ಆಧಾರದ ಮೇಲೆ ಸಾಲ ಪಡೆದಿದ್ದರೆ, ರೆಪೋ ದರ ಬದಲಾವಣೆಯು ನಮ್ಮ ಸಾಲದ ಬಡ್ಡಿದರದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಸ್ಥಿರ ಬಡ್ಡಿದರವಲ್ಲದಿದ್ದರೆ,(ಸಾಮಾನ್ಯವಾಗಿ ಗೃಹ ಸಾಲ) ನೇರ ಪ್ರಭಾವ ಬೀರಬಹುದು. ಎಫ್‌ಡಿ ಮೊದಲಾದ ಹೂಡಿಕೆಯೂ ಇದೇ ನಿಯಮ ಅನ್ವಯ.

“ಸಾಮಾನ್ಯವಾಗಿ ರೆಪೋ ದರ ಏರಿಕೆಯಾದಂತೆ ಬ್ಯಾಂಕುಗಳೂ ಒಂದರ ಮೇಲೊಂದರಂತೆ ಸಾಲದ ಬಡ್ಡಿದರ ಏರಿಸುತ್ತವೆ. ಆದರೆ ದರ ಇಳಿಕೆಯಾದರೆ ಸಾಲದ ಬಡ್ಡಿದರ ಇಳಿಸಲು ಹಿಂದೆ ಮುಂದೆ ನೋಡುತ್ತದೆ” ಎಂಬ ಆರೋಪ ಆರ್ಥಿಕ ತಜ್ಞರದ್ದು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಗ್ರಾಹಕರಿಗೆ ಬಂಪರ್‌ ಆಫರ್! ಗ್ರಾಂ ಚಿನ್ನಕ್ಕೆ ₹8-10 ಸಾವಿರ?

ದಿನೇ ದಿನೇ ಏರುತ್ತಲೇ ಇದ್ದ ಚಿನ್ನದ ದರ ಕಳೆದ ಒಂದು ವಾರದಿಂದ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...