ಬಿಜೆಪಿ ಮಾಜಿ ಶಾಸಕ ಕುಲದೀಪ್ ಸೆಂಗರ್ ಪ್ರಕರಣದ ಅತ್ಯಾಚಾರ ಸಂತ್ರಸ್ತೆ ಊಹಿಸಲಸಾಧ್ಯವಾದ ದುಃಖವನ್ನು ಅನುಭವಿಸುತ್ತಿದ್ದಾರೆ. ತಮ್ಮ ದುಃಖದ ನಡುವೆ, ಭಾರತದ ಸುಪ್ರೀಂ ಕೋರ್ಟ್‌ಗೆ ತೀಕ್ಷ್ಣವಾದ ಸಲಹೆ ನೀಡಿದ್ದಾರೆ. ಅದು: ‘ಭಾರತದ ಬೀದಿಗಳಿಂದ ತೊಡೆದುಹಾಕಬೇಕಿರುವುದು ಬೀದಿ ನಾಯಿಗಳನ್ನಲ್ಲ, ಅತ್ಯಾಚಾರಿಗಳನ್ನ. ಬೀದಿನಾಯಿಗಳು ಮಹಿಳೆಯ ಆತ್ಮೀಯ ಸ್ನೇಹಿತನಂತಿರುತ್ತೆವ. ಆದರೆ, ಬೀದಿ ಕಾಮುಕರಲ್ಲ’.
ಸಂತ್ರಸ್ತೆ ಹೇಳುವುದು ಅಕ್ಷರಶಃ ಸತ್ಯ. ದೆಹಲಿ ಸೇರಿದಂತೆ ದೇಶದ ಎಲ್ಲ ನಗರಗಳಲ್ಲಿ ಬೀದಿ ನಾಯಿಗಳು ತಮ್ಮನ್ನು ಪೋಷಿಸುವ ಮತ್ತು ನೋಡಿಕೊಳ್ಳುವ, ಒಬ್ಬಂಟಿಯಾಗಿ ಕೆಲಸ ಮಾಡುವ ಮಹಿಳೆಯರನ್ನು ಪ್ರೀತಿಯಿಂದ ಕಾಣುತ್ತವೆ. ಅಲ್ಲದೆ, ಅದೇ ಪ್ರದೇಶಗಳ ಕತ್ತಲೆಯ ಹಾದಿಯಲ್ಲಿ ಅಡಗಿರುವ ಕಾಮುಕರ ಬೆದರಿಕೆಯಿಂದ ರಕ್ಷಣೆಯನ್ನೂ ನೀಡುತ್ತವೆ. ಆದರೆ, ಬೀದಿ ಕಾಮುಕರು ಮಹಿಳೆಯರ ಪಾಲಿನ ದೂರ್ತರಾಗಿದ್ದಾರೆ.
ಪರಭಕ್ಷಕ ಸೆಂಗಾರ್‌ನ ನಿರ್ದಯ ಬಿಡುಗಡೆ ಪ್ರಕರಣವು ಈಗ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ನ್ಯಾಯಾಲಯವು ವಿಚಾರಣೆ ನಡೆಸಲಿದೆ. ಆ ಸಂದರ್ಭದಲ್ಲಿ, ನ್ಯಾಯಾಧೀಶರು ವೀರತ್ವದಿಂದ ಹೋರಾಡುತ್ತಿರುವ ಸಂತ್ರಸ್ತೆ ಮಂಡಿಸಿದ ವಾದಕ್ಕೆ ವಿಶ್ವಾಸ ನೀಡುತ್ತಾರೆ. ನ್ಯಾಯ ಒದಗಿಸುತ್ತಾರೆ ಎಂದು ಆಶಿಸಬಹುದು.
ಈ ಲೇಖನ ಓದಿದ್ದೀರಾ?: ಉನ್ನಾಂವ್ ಅತ್ಯಾಚಾರ ಹಗರಣ: ಕುಲದೀಪ್ ಸೆಂಗರ್‌ನ ಹೀನಕೃತ್ಯ; ಬಿಜೆಪಿ ನೈತಿಕ ದಿವಾಳಿತನ
ಇದೇ ಸಂದರ್ಭದಲ್ಲಿ, ‘ಸನಾತನ ಪುರೋಹಿತಶಾಹಿ ಸಂಸ್ಥೆ’ಯೂ ಒಂದು ಹೇಳಿಕೆ ನೀಡಬಹುದು: ಮಹಿಳೆಯರ ಮೇಲಿನ ಘೋರ ಲೈಂಗಿಕ ಅಪರಾಧಗಳಲ್ಲಿ ಅಥವಾ ಲಿಂಗಾಧಾರಿತ ದಬ್ಬಾಳಿಕೆಯಲ್ಲಿ ತಪ್ಪಿತಸ್ಥರೆಂದು ಪರಿಗಣಿಸಲ್ಪಟ್ಟ ಎಲ್ಲ ಹಿಂದುಗಳನ್ನು ಅವರ ಮನೆಗಳಲ್ಲಿ ಅಥವಾ ದೇವಾಲಯಗಳಲ್ಲಿ ಹಿಂದು ದೇವತೆಗಳ ದೇವತಾಗಣವನ್ನು ಪೂಜಿಸುವುದರಿಂದ ನಿಷೇಧಿಸಬೇಕು. ಅಥವಾ ಹಿಂದು ಆಚರಣೆಗಳಿಂದ ಬಹಿಷ್ಕರಿಸಬೇಕು.
ತನ್ನ ಅಧ್ಯಾತ್ಮಶಾಸ್ತ್ರದಲ್ಲಿ, ಹಿಂದು ಧರ್ಮವು ಮಹಿಳೆಯರನ್ನು ದೇವತೆಗಳಾಗಿ ಪೂಜಿಸುತ್ತದೆ. ಆದರೆ, ಹಿಂದು ನಂಬಿಕೆಯಲ್ಲಿ ನೀವು ದೇವತೆಗಳಿಗೆ ನಮಸ್ಕರಿಸಬಹುದು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಎಸಗಬಹುದು ಎಂದು ಹೇಳುವ ಯಾವುದೇ ಪಠ್ಯವಿಲ್ಲ.
ಮಹಾಭಾರತದಲ್ಲಿ, ದುರ್ಯೋಧನನು ತನ್ನ ಮೂರ್ಖತನಕ್ಕೆ ಬೆಲೆ ತೆತ್ತಿದ್ದಾರೆ. ಆದರೆ, ಧಾರ್ಮಿಕ ಸಂಸ್ಥೆಗಳನ್ನು ಪೋಷಿಸುವ ಎಲ್ಲ ಸೆಂಗರ್‌ಗಳು, ರಕ್ಷಣೆಯಿಲ್ಲದ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗುತ್ತಿದ್ದಾರೆ. ಆದರೂ, ಅವರು ಅಧಿಕಾರಕ್ಕೆ ಏರುತ್ತಾರೆ. ಸೀತೆಯನ್ನು ಅಪಹರಿಸಿದ್ದಕ್ಕಾಗಿ ರಾವಣನ (ಆಕೆಯನ್ನು ರಾವಣ ಒಮ್ಮೆಯೂ ಮುಟ್ಟಿರಲಿಲ್ಲ) ಪ್ರತಿಮೆಗೆ ಬಾಣ ಪ್ರಯೋಗಿಸುವ, ಬೆಂಕಿ ಹಚ್ಚುವ ಸಮಾಜವು ತಮ್ಮದೇ ಆದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯೊಳಗೆ ಜೀವಂತ ರಾವಣರನ್ನು ರಕ್ಷಿಸುವುದು ಆಘಾತಕಾರಿ.
ಈ ಸೆಂಗರ್‌ಗಳು ಎಂದಿಗೂ ತಮ್ಮ ಸ್ವಂತ ಹೆಂಡತಿ, ತಾಯಂದಿರು ಹಾಗೂ ಹೆಣ್ಣುಮಕ್ಕಳ ವಿಚಾರದಲ್ಲಿ ಪಶ್ಚಾತ್ತಾಪ ವ್ಯಕ್ತಪಡಿಸುವುದಿಲ್ಲ – ಏಕೆ? ಆದಾಗ್ಯೂ, ನಮ್ಮ ಸಾಮಾಜಿಕ ವ್ಯವಸ್ಥೆಯ ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ, ಈ ಹೆಂಡತಿ, ತಾಯಂದಿರು, ಹೆಣ್ಣುಮಕ್ಕಳು ತಮ್ಮ ಸೆಂಗರ್‌ಗಳನ್ನು ರಕ್ಷಿಸಬೇಕೆಂದು ಹೆಚ್ಚಾಗಿ ಭಾವಿಸುವುದಿಲ್ಲ.
ಸೆಂಗರ್ ಪ್ರಕರಣದಲ್ಲಿ, ಶಾಸಕಾಂಗ ಸಭೆಯ ಸದಸ್ಯರಂತಹ ಚುನಾಯಿತ ಪ್ರತಿನಿಧಿಗಳು ‘ಸಾರ್ವಜನಿಕ ಸೇವಕರು’ ಎಂದು ಅರ್ಹತೆ ಪಡೆಯುವುದಿಲ್ಲ ಎಂದು ಕಾನೂನು ವ್ಯಾಖ್ಯಾನಿಸುತ್ತದೆ. ಆದರೆ, ಈ ನೆಲದ ಸೆಂಗರ್‌ಗಳು ಪ್ರಚಾರಕ್ಕೆ ಹೋದಾಗ, ಸಾರ್ವಜನಿಕ ಸೇವೆ ಮತ್ತು ಸಾರ್ವಜನಿಕ ಒಳಿತನ್ನು ಮಾಡಲು ತಮ್ಮನ್ನು ತಾವು ನಿಸ್ವಾರ್ಥ ನಾಗರಿಕರು ಎಂದು ಬಣ್ಣಿಸಿಕೊಳ್ಳುತ್ತಾರೆ. ನಾವು ಚುನಾವಣಾ ಸ್ಪರ್ಧಿಗಳು ಇನ್ನು ಮುಂದೆ ತಮ್ಮನ್ನು ಸಾರ್ವಜನಿಕ ಸೇವಕರು ಎಂದು ಕರೆದುಕೊಳ್ಳುವುದನ್ನು ನಿಷೇಧಿಸಬೇಕು.
ಮೂಲ: ದಿ ವೈರ್
ಮೂಲ ಬರಹ: ಬದ್ರಿ ರೈನಾ, ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು.




