ಚಿಲ್ಲರೆ ಹಣದುಬ್ಬರ 8 ವರ್ಷಗಳಲ್ಲೇ ಭಾರೀ ಕುಸಿತ: ಜಿಎಸ್‌ಟಿ ಕಡಿತ ಕಾರಣವೇ?

Date:

ಈ ವರ್ಷದ (2025) ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರವು ಕಳೆದ 8 ವರ್ಷಗಳಲ್ಲೇ ದಾಖಲೆಯ ಕುಸಿತ ಕಂಡಿದೆ. ಕನಿಷ್ಠ ಮಟ್ಟವಾದ 1.54%ಗೆ ಇಳಿದಿದೆ. ಮುಖ್ಯವಾಗಿ ತರಕಾರಿಗಳು, ಹಣ್ಣುಗಳು ಹಾಗೂ ಬೇಳೆಕಾಳುಗಳ ಬೆಲೆಗಳು ಕಡಿಮೆಯಾಗಿರುವುದರಿಂದ ರಿಸರ್ವ್ ಬ್ಯಾಂಕ್‌ ಗೊತ್ತುಪಡಿಸಿರುವ ‘ಕಂಫರ್ಟ್‌ ಝೋನ್‌’ಗಿಂತ ಕೆಳಮಟ್ಟಕ್ಕೆ ಕುಸಿದಿದೆ ಎಂದು ಸರ್ಕಾರಿ ಅಂಕಿಅಂಶಗಳು ಹೇಳಿವೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿ ಸರ್ಕಾರವು ಸೋಮವಾರ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. “ಹಣದುಬ್ಬರವು ಕಳದ ವರ್ಷ (2024) ಸೆಪ್ಟೆಂಬರ್‌ನಲ್ಲಿ 5.49% ಇತ್ತು, ಈ ವರ್ಷದ ಆಗಸ್ಟ್‌ನಲ್ಲಿ 2.07%ಗೆ ಇಳಿದಿತ್ತು. ಸೆಪ್ಟೆಂಬರ್‌ ವೇಳೆಗೆ ಅಂದರೆ, ಒಂದೇ ತಿಂಗಳಲ್ಲಿ 1.54%ಗೆ ಇಳಿದಿದೆ” ಎಂದು ವಿವರಿಸಿದೆ. ಆದಾಗ್ಯೂ, 8 ವರ್ಷಗಳ ಹಿಂದೆ, 2017ರಲ್ಲಿ ಚಿಲ್ಲರೆ ಹಣದುಬ್ಬರವು ಸಾರ್ವಕಾಲಿಕವಾಗಿ 1.46%ಗೆ ಇಳಿಕೆಯಾಗಿತ್ತು.

“2025ರ ಆಗಸ್ಟ್‌ಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಮುಖ್ಯ ಹಣದುಬ್ಬರವು 53 ಬೇಸಿಸ್ ಪಾಯಿಂಟ್‌ಗಳಷ್ಟು ಇಳಿಕೆ ಕಂಡಿದೆ. 2027ರ ಜೂನ್ ನಂತರದ ಅತ್ಯಂತ ಕಡಿಮೆ ಹಣದುಬ್ಬರ ಇದಾಗಿದೆ” ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಮುಖ್ಯ ಹಣದುಬ್ಬರ ಮತ್ತು ಆಹಾರ ಹಣದುಬ್ಬರದಲ್ಲಿನ ಇಳಿಕೆಗೆ ಮುಖ್ಯವಾಗಿ ತರಕಾರಿಗಳು, ಎಣ್ಣೆ, ಕೊಬ್ಬು ಪದಾರ್ಥಗಳು, ಹಣ್ಣುಗಳು, ದ್ವಿದಳ ಧಾನ್ಯಗಳು ಮತ್ತು ಉತ್ಪನ್ನಗಳು, ಮೊಟ್ಟೆ, ಇಂಧನ ಹಾಗೂ ಇತರೆ ವಸ್ತುಗಳ ಬೆಲೆ ಇಳಿಕೆಯು ಹಣದುಬ್ಬರದಲ್ಲಿನ ಇಳಿಕೆಗೆ ಕಾರಣವಾಗಿದೆ” ಎಂದು NSO ಹೇಳಿದೆ.

NSO ದತ್ತಾಂಶದ ಪ್ರಕಾರ, ಗ್ರಾಮೀಣ ಭಾರತದಲ್ಲಿ ಹಣದುಬ್ಬರವು 1.07% ಮತ್ತು ನಗರ ಭಾಗಗಳಲ್ಲಿ 2.04% ರಷ್ಟಿದೆ.

ಚಿಲ್ಲರೆ ಹಣದುಬ್ಬರ ಕುಸಿತದಿಂದ ಗ್ರಾಹಕರ ಕೊಳ್ಳುವ ಶಕ್ತಿ ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಆದರೆ, ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕವೂ ಇದೆ.

ಹಣಕಾಸು ವರ್ಷದ ದ್ವಿತೀಯಾರ್ಧದ ಹಣದುಬ್ಬರ ಇಳಿಕೆಗೆ ನೈಋತ್ಯ ಮಾನ್ಸೂನ್‌ನಲ್ಲಿ ಉತ್ತಮ ಮಳೆ, ಹೆಚ್ಚಿನ ಖಾರಿಫ್ ಬಿತ್ತನೆ, ಜಲಾಶಯಗಳು ಭರ್ತಿಯಾಗಿರುವುದು ಹಾಗೂ ಆಹಾರ ಧಾನ್ಯಗಳ ಇಳುವರಿ ಮತ್ತು ಸ್ಟಾಕ್‌ ಹೆಚ್ಛಳದಿಂದ ಬೆಲೆಗಳ ಇಳಿಕೆಯು ಮುಖ್ಯ ಕಾರಣವೆಂದು ಆರ್‌ಬಿಐ ಹೇಳಿದೆ.

ಈ ಲೇಖನ ಓದಿದ್ದೀರಾ?: ಮಚಾಡೊಗೆ ನೊಬೆಲ್ ಶಾಂತಿ ಪ್ರಶಸ್ತಿ; ತನ್ನ ಅರ್ಥವನ್ನೇ ಕಳೆದುಕೊಂಡ ‘ಶಾಂತಿ’

ಜೊತೆಗೆ, ಇತ್ತೀಚೆಗೆ ಜಾರಿಗೆ ತಂದ ಜಿಎಸ್‌ಟಿ ಪರಿಷ್ಕೃತ ದರಗಳು ಹಲವಾರು ವಸ್ತುಗಳ ಬೆಲೆಗಳಲ್ಲಿ ಇಳಿಕೆಗೆ ಕಾರಣವಾಗಿವೆ. ಒಟ್ಟಾರೆಯಾಗಿ, ಜಿಎಸ್‌ಟಿ ದರ ಕಡಿತ ಮತ್ತು ಆಹಾರ ಬೆಲೆಗಳ ಇಳಿಕೆಯು ಎಂಪಿಸಿ ನಿರ್ಣಯದಲ್ಲಿ ಹಣದುಬ್ಬರದ ಕುರಿತು ನಿರೀಕ್ಷೆಗಿಂತ ಕುಸಿತ ಕಂಡಿದೆ ಎಂದು ಆರ್‌ಬಿಐ ಅಂದಾಜಿಸಿದೆ.

ಎನ್‌ಎಸ್‌ಒ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯ್ದ 1,181 ಹಳ್ಳಿಗಳು ಮತ್ತು 1,114 ನಗರ ಮಾರುಕಟ್ಟೆಗಳಿಂದ ಬೆಲೆ ಡೇಟಾವನ್ನು ಸಂಗ್ರಹಿಸಿ, ವಿಶ್ಲೇಷಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಗ್ರಾಹಕರಿಗೆ ಬಂಪರ್‌ ಆಫರ್! ಗ್ರಾಂ ಚಿನ್ನಕ್ಕೆ ₹8-10 ಸಾವಿರ?

ದಿನೇ ದಿನೇ ಏರುತ್ತಲೇ ಇದ್ದ ಚಿನ್ನದ ದರ ಕಳೆದ ಒಂದು ವಾರದಿಂದ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...